ಹಿಮ್ಮೇಳ – ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ
– ರಾಗು ಕಟ್ಟಿನಕೆರೆ,ಯಕ್ಷಮಿತ್ರ
“ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ” ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು, ನಾವು ದಿನನಿತ್ಯ ಅದನ್ನ ಪಾಲಿಸ್ತಾ ಇದೀವಾ ಅಂತ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಬಹುದು. ಕನ್ನಡದಲ್ಲಿ ಬೋರ್ಡೇ ಹಾಕಲ್ಲ ಅನ್ನೋ ನಾವು, ಹಾಕಿರೋ ಬೋರ್ಡಗಳಲ್ಲಿ ಎಷ್ಟು ಕೆಟ್ಟದಾಗಿ ಕನ್ನಡ ಬರಿತೀವಿ, ಎಷ್ಟು ತಪ್ಪು ತಪ್ಪಾಗಿ ಬರಿತೀವಿ ಅಂತ ನೋಡ್ತೀವಾ, ಪ್ರತಿಭಟಿಸ್ತೀವಾ? ಬೆಂಗಳೂರು ಬಸ್ ನಿಲ್ದಾಣಗಳಲ್ಲೇ ನೋಡಿ: ಅಲ್ಸಸೂರು, ಹೊಯ್ಸಸಳ, ವಟರ್ ಟ್ಯಾಂಕ್ ಇತ್ಯಾದಿ. ನಮ್ಮ ಕನ್ನಡದ ಕಲೆಗಳು ನಮ್ಮ ಸಂಸ್ಕೃತಿಯ ಮೂರ್ತರೂಪಗಳು. ಈ ಕಲೆ ರೂಪದಲ್ಲಾದ್ರು ನಮ್ಮ ಸಂಸ್ಕೃತಿ ಉಳಿಬಹುದು ಅಂದ್ಕೋಬಹುದು. ಆದ್ರೆ ನಮ್ಮದೇ ಆದ ಕಲೆಗಳು ನಾಶ ಆಗ್ತಾ ಇದ್ರೂ ನಾವು ಫಿಲ್ಮ್ ನೋಡ್ಕೊಂಡು ಅರಾಮಿದ್ರೆ ನಮ್ಮ ಸಂಸ್ಕೃತಿ ಉಳಿಯತ್ತಾ? ಉಳಿಯತ್ತೋ ಇಲ್ವೋ ಆದ್ರೆ ಎನ್ ಕಳ್ಕೊಳ್ತಾ ಇದೀವಿ ಎನಾದ್ರು ಮಾಡ್ಲಿಕ್ಕೆ ಸಾದ್ಯನಾ ಅಂತಾದ್ರೂ ನೋಡ್ಬೇಕಲ್ವಾ?
ಕಲೆಗಳು ಅಂದ ತಕ್ಷಣ ನಮ್ಮ ಕನ್ನಡದ ಕಲೆಗಳಲ್ಲಿ ಎದ್ದು ಕಾಣೋದು ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಕೇವಲ ಕಲೆಯಷ್ಟೇ ಅಲ್ಲ ಇದು ನಮ್ಮ ಸಂಸ್ಕೃತಿಯ ಪಳಿಯುಳಿಕೆನೂ ಹೌದು. ಯಕ್ಷಗಾನದಲ್ಲಿ ಮಾತಾಡೋ ತರಾನೇ ಬೇರೆ – ಒಂದು ರೀತಿ ಚಂದ, ಶೃತಿ ಬದ್ಧ. ಇವತ್ತಿಗೂ ಹಳ್ಳಿಕಡೆ ಹೋದ್ರೆ ನಮ್ಮ ಈಡಿಗ ಸಮುದಾಯದವರು, ಹವ್ಯಕರು ಎಲ್ಲರೂ ಒಂತರಾ ಹಾಡಿದಾಗೆ ಶೃತಿಗೆ ಸರಿಯಾಗಿ ಮಾತಾಡ್ತಾರೆ. ಅದು ನಮ್ಮ ಮೂಲ ಕನ್ನಡ ಮಾತಾಡೊ ರೀತಿ ಇದ್ದಿರಬಹುದು. ಅದು ಯಕ್ಷಗಾನದಲ್ಲಿ ಉಳ್ಕೊಂಡಿದೆ ಅಂತ ಅನ್ನಿಸುತ್ತೆ. ಈಗ ತಮಿಳುನಾಡಿನಲ್ಲೇ ಹೆಚ್ಚು ಪ್ರಸಿದ್ಧವಾಗಿ ಇರೋ ನಮ್ಮ ಕರ್ನಾಟಕ ಸಂಗೀತದಲ್ಲಿನ ತಾಳಗಳ ಮೂಲರೂಪ ನಮ್ಮ ಯಕ್ಷಗಾನದಲ್ಲಿ ಇದೆ ಅಂತ ಡಾ.ರಾಘವ ನಂಬಿಯಾರ್ ಅಂತ ಒಬ್ಬ ಯಕ್ಷಗಾನ ಸಂಶೋಧಕರು ಪ್ರತಿಪಾದಿಸಿದಾರೆ. ಎಷ್ಟೋ ತಾಳಗಳು, ಕುಣಿತದ ಶೈಲಿ, ಹಾಡಿನ ಧಾಟಿ ಎಲ್ಲಾ ಕಳದು ಹೋಗಿದೆ ಅಂತೆ. ನಮ್ಮ ಬಾಡಿ ಲಾಂಗ್ವೇಜೇ ಬದಲಾಗಿಲ್ವಾ? ಇವನ್ನೇಲ್ಲಾ ನಂಬಿಯಾರರು ತಮ್ಮ ಪುಸ್ತಕ “ಹಿಮ್ಮೇಳ” ಅನ್ನೋದ್ರಲ್ಲಿ ಬರೆದಿಟ್ಟು ನಮ್ಮ ಯಕ್ಷಾಗನ ಮೂಲರೂಪ ಹಾಳಾಗದಹಾಗೆ ಉಳಿಬೇಕು ಅಂತ ಪ್ರಯತ್ನ ಮಾಡ್ತಾ ಇದಾರೆ.
ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ
-ವಿಷ್ಣು ಪ್ರಿಯ
ಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….
ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!ಮಂಗಳನಲ್ಲಿರುವ ಜೀವಿಗಳು ಇಲ್ಲಿಗೆ ಬರುತ್ತಿವೆ ಎಂದರೆ ಅವು ಹೇಗಿರಬಹುದು ಎಂಬ ಯೋಚನೆ ಹುಟ್ಟಿಕೊಳ್ಳುವುದು ಸಹಜ. ಸಿನೆಮಾಗಳಲ್ಲಿ ನೋಡಿದಂತೆ ಚಿತ್ರ-ವಿಚಿತ್ರ ಆಕಾರದ ಮಾನವರಂಥ ಜೀವಿಗಳು, ತಲೆ ಮೇಲೆ ಕೋಡು ಇರುವಂಥ ಮನುಷ್ಯರು, ಹಾರು ತಟ್ಟೆಗಳಲ್ಲಿ ಹಾರಾಡಿಕೊಂಡು ಬಂದು ಮನುಷ್ಯರ ಮೇಲೆ ಯುದ್ಧ ಮಾಡುವಂಥ ಜೀವಿಗಳು… ಅಲ್ಲ, ಈ ಸಿನೆಮಾಗಳು, ಫಿಕ್ಷನ್ನುಗಳಲ್ಲಿ ಅನ್ಯಗ್ರಹ ಜೀವಿಗಳ ಬಗೆಗಿನ ಕಲ್ಪನೆಯೇ ಅದ್ಭುತ. ಆದರೆ ಮಂಗಳಗ್ರಹದಿಂದ ತರಲಾಗುತ್ತಿರುವ ಜೀವಿಗಳು ಇಂಥವಲ್ಲ.
ವಸಾಹತು ಪ್ರಜ್ಞೆಯ ವಿಶ್ವರೂಪ ೧ : ನಮ್ಮೊಳಗಿನ ಎರಡು ಜಗತ್ತುಗಳು
ಭಾರತೀಯ ವಿದ್ಯಾವಂತರಲ್ಲಿ ಇರಬಹುದಾದ ಎರಡು ಜಗತ್ತುಗಳ ಕುರಿತು ಗಮನ ಹರಿಸೋಣ: ಒಂದು ಜಗತ್ತು ಸಾಂಪ್ರದಾಯಿಕವಾಗಿ ನಾವು ಬೆಳೆದು ಬಂದ ಜಗತ್ತಾಗಿದೆ. ಅಲ್ಲಿ ನಮ್ಮ ಅಪ್ಪ ಅಮ್ಮ, ಬಂಧು-ಬಳಗ, ನೆರೆ-ಹೊರೆಯವರು ನಮಗೆ ಈ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಕಲಿಸಿರುತ್ತಾರೆ. ಅನೇಕ ಆಚರಣೆಗಳನ್ನು, ಆಲೋಚನಾ ಕ್ರಮವನ್ನು ಒಳಗೊಂಡ ಜೀವನ ಶೈಲಿಯನ್ನು ಕಲಿಸಿರುತ್ತಾರೆ.
ನಂತರ ನಾವು ವಿದ್ಯಾವಂತರಾದಂತೆಲ್ಲ ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತೇವೆ. ಇದು ವಿಚಾರಗಳ ಜಗತ್ತು. ಅದು ನಮ್ಮ ಆಧುನಿಕ ಶಿಕ್ಷಣವು ನಮಗೆ ಪರಿಚಯಿಸುವ ಜಗತ್ತು. ನಮ್ಮ ಕುಟುಂಬ, ಜಾತಿ ಮುಂತಾದ ಸಾಂಪ್ರದಾಯಿಕ ಸಮಾಜದಾಚೆಗೆ ಇರಬಹುದಾದ ಸಾರ್ವಜನಿಕ ಜಗತ್ತು ಇಂಥ ವಿಚಾರಗಳ ತಳಹದಿಯ ಮೇಲೆ ನಿರ್ಮಾಣವಾಗಿದೆ. ಹಾಗಾಗಿ ಅದು ನಮಗೆಲ್ಲ ಒಂದು ಆದರ್ಶ ಮಾದರಿ ಎಂದುಕೊಂಡಿರುತ್ತೇವೆ.
“ವಿಶ್ವರೂಪ” ದರ್ಶನವಂತೂ ಆಗುತ್ತಿದೆ….!
– ಚಕ್ರವರ್ತಿ ಸೂಲಿಬೆಲೆ
ಸೆಕ್ಯುಲರ್ ಭಾರತ!
ಇನ್ನಾದರೂ ಹಾಗೆ ಕರೆಯೋಕೆ ನಾಚ್ಕೋಬೇಕು. ಇಸ್ಲಾಮ್ ಭಾರತ ಅಂತಾನೋ ಹಿಂದೂ ವಿರೋಧಿ ಭಾರತ ಅಂತಾನೋ ಕರೆದರೆ ಒಂದಷ್ಟು ಅತೃಪ್ತ ಆತ್ಮಗಳು ತೃಪ್ತಿಗೊಂಡಾವು. ಕಳೆದ ಎಂಟ್ಹತ್ತು ದಿನಗಳ ನಾಟಕ ನೋಡಿದರೆ ಹಾಗನ್ನಿಸುವುದು ಸಹಜವೇ.
‘ವಿಶ್ವರೂಪಮ್’ ಬಿಡುಗಡೆಗೆ ಕಿರಿಕ್ ಅಯ್ತು. ಹತ್ಯೆ ಮಾಡುವ ಮುನ್ನ ಭಯೋತ್ಪಾದಕ ಅಲ್ಲಾಹನಿಗೆ ವಂದಿಸಿ ಹೊರಡುವುದನ್ನು ತೋರಿಸಿರುವುದೇ ಗಲಾಟೆಗೆ ಕಾರಣವಂತೆ. ತಮಿಳುನಾಡು ಸರ್ಕಾರ ಸಿನೆಮಾ ತಡೆಹಿಡಿಯಿತು. ಬೇರೆಬೇರೆ ರಾಜ್ಯಗಳಲ್ಲಿ ಬಿಡುಗಡೆಗೆ ಮುನ್ನ ಮುಸಲ್ಮಾನ ಸಂಘಟನೆಗಳು ಪ್ರತಿಭಟನೆ ಮಾಡಿದವು. ದಾವಣಗೆರೆಯಲ್ಲಿ ಕೋಮು ಗಲಭೆಯೇ ನಡೆಯಿತು. ತಮಿಳುನಾಡಿನ ಸಿನೆಮಾ ಮಂದಿರದಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಯ್ತು. ಅಚ್ಚರಿಯೇನು ಗೊತ್ತೆ? ಜನಾರ್ಧನ ಪೂಜಾರಿಯವರು ಬಾಯಿ ತೆರೆಯಲೇ ಇಲ್ಲ. ಬುದ್ಧಿ ಮಾರಿಕೊಂಡು ಬದುಕುವ ಕೆಲವರು ಬೆಂಗಳೂರಿನಲ್ಲಿ ತಣ್ಣಗೆ ಕುಳಿತುಬಿಟ್ಟಿದ್ದಾರೆ.
ಯಾಕೆ ಸ್ವಾಮಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ವೆ? ಈಗ ನಿಮಗೆ ಧರ್ಮದ ಹೆಸರಲ್ಲಿ ಕ್ರೌರ್ಯ ಕಾಣುವುದೆ ಇಲ್ಲವೆ?






