ವಿಷಯದ ವಿವರಗಳಿಗೆ ದಾಟಿರಿ

Archive for

6
ಏಪ್ರಿಲ್

ಇನ್ನೂ ಬೇಕೆ ಇಂಥ ರಾಜಕೀಯ ಮೀಸಲಾತಿ?

-ಸಾತ್ವಿಕ್ ಎನ್.ವಿ.

ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತು ಬೆಂಬಲಿಸುತ್ತಾರೆ. ಅದುವೇ ಚುನಾವಣೆಯಲ್ಲಿ ನೀಡಲಾಗಿರುವ ರಾಜಕೀಯ ಮೀಸಲಾತಿಯ ನವೀಕರಣ. ಇದು ಪ್ರತಿ ಹತ್ತು ವರ್ಷಕ್ಕೊಮ್ಮೆ ನವೀಕರಣಕ್ಕೆ ಬರುತ್ತದೆ. ಆಗ ಸಂಸತ್ತು ಈ ಪದ್ಧತಿಯನ್ನು ನಿರಾಕರಿಸಬಹುದು ಇಲ್ಲವೇ ಮುಂದಿನ ಹತ್ತು ವರ್ಷಕ್ಕೆ ನವೀಕರಿಸಬಹುದು. ಆದರೆ ಸಂಸತ್ತು ಯಾವುದೇ ಚರ್ಚೆಯಿಲ್ಲದೇ ನವಿಕರಿಸುತ್ತಲೇ ಬಂದಿದೆ. ಸರ್ಕಾರ ಯಾ ರಾಜಕೀಯಪಕ್ಷಗಳಿಗೆ ದಲಿತ/ಹಿಂದುಳಿದ ವರ್ಗಗಳ ಬಗ್ಗೆ ಇಷ್ಟೊಂದು ಪ್ರೀತಿ ಎಲ್ಲಿಂದ ಉಕ್ಕಿತೆಂದು ಆಶ್ಚರ್ಯವಾಗಬಹುದು. ಆದರೆ ಇದರ ಹಿಂದಿನ ತಂತ್ರ ಬೇರೆಯದೇ ಇದೆ.

ಯಾಕೆಂದರೆ ಸಂವಿಧಾನದಲ್ಲಿ ದಲಿತ ಜನವರ್ಗದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ನೀಡಲಾದ ಈ ಮೀಸಲಾತಿಯು ರಾಜಕೀಯ ಪಕ್ಷಗಳ ಕೈಯಲ್ಲಿ ಸಿಕ್ಕಿ ತನ್ನ ಮೂಲ ಉದ್ದೇಶವನ್ನು ಎಂದೋ ಮರೆತಿದೆ. ಮೀಸಲು ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತವೆ. ಗೆದ್ದ ಸ್ಪರ್ಧಿಯು ತನ್ನ ಸಮುದಾಯದ ಪ್ರತಿನಿಧಿಯಾಗಿರುತ್ತಾನೆ. ತನ್ನ ಸಮುದಾಯದ ಅಭಿವೃದ್ಧಿಯ ಸಲುವಾಗಿ ಸದನದಲ್ಲಿ ಧ್ವನಿ ಎತ್ತುವುದು ಆತನ ಕರ್ತವ್ಯವಾಗಿರುತ್ತದೆ. ಆದರೆ ಪಕ್ಷವೊಂದರ ಹಂಗಿನಲ್ಲಿರುವ ವ್ಯಕ್ತಿಯಿಂದ ಇಂಥ ದೃಢ ಮತ್ತು ನಿಷ್ಠುರ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯವೇ? ಆತ ದಲಿತವರ್ಗದಿಂದ ಬಂದಿದ್ದರೂ ತನ್ನ ಪಕ್ಷಕ್ಕಾಗಿಯೇ ತಯಾರಾದವನು. ಆತ ತನ್ನ ಪಕ್ಷದ ಸಿದ್ಧಾಂತದಿಂದ ಎಷ್ಟು ಹೊರಗೆ ನಿಂತು ಕೆಲಸ ಮಾಡಲು ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿವೆ? ಹೆಚ್ಚಿನ ಸಂದರ್ಭದಲ್ಲಿ ಆಯ್ಕೆಯಾದ ವ್ಯಕ್ತಿಯು ಪಕ್ಷವೊಂದರಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸುವ ಇಲ್ಲವೇ ಹೌದಪ್ಪನಾಗಿ ಬಳಕೆಯಾಗುವ ಸಂದರ್ಭವೇ ಹೆಚ್ಚು. ಇಂಥ ಸಂದರ್ಭದಲ್ಲಿ ದಲಿತ ಸದಸ್ಯನೊಬ್ಬನಿಗೆ ಇತರೆ ವರ್ಗದ ರಾಜಕೀಯ ನೇತಾರನಿಗಿಂತ ಹೆಚ್ಚಿನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇರಬೇಕಾಗುತ್ತದೆ. Read more »