ವಿಷಯದ ವಿವರಗಳಿಗೆ ದಾಟಿರಿ

Archive for

10
ಏಪ್ರಿಲ್

ಶಂಕರ ಬಟ್ಟರದ್ದು “ಎಲ್ಲರ ಕನ್ನಡ”ವೇ?

– ಡಾ.ಮಾಧವ ಪೆರಾಜೆ

images

ಡಾ. ಆರ್. ಚಲಪತಿಯವರು ‘ತಂತಿ ಮೇಲಿನ ನಡಿಗೆ’ ಎನ್ನುವ ಪುಸ್ತಕವನ್ನು ಇದೀಗ ತಾನೇ ಪ್ರಕಟಿಸಿದ್ದಾರೆ. ‘ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತು ಕತೆ’ ಎನ್ನುವ ಉಪಶೀರ್ಷಿಕೆಯೂ ಇದಕ್ಕಿದೆ. ಸಖಿ ಪ್ರಕಾಶನ ಹೊಸಪೇಟೆ ಇವರು ಇದನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆಯ ಕುರಿತು ಒಟ್ಟಾರೆಯಾಗಿ ನಾನು ಮುಂದೆ ಚರ್ಚಿಸಲಿರುವುದರಿಂದ ಆರಂಭದಲ್ಲಿಯೇ ಒಂದು ಮಾತನ್ನು ವಿಶೇಷವಾಗಿ ಪ್ರಸ್ತಾಪಮಾಡಿ ಮುಂದುವರಿಯುತ್ತೇನೆ.ಈ ಪುಸ್ತಕದ ಮುಖಪುಟದ ಮೇಲಿನಿಂದ ಅದು ಸ್ವತಂತ್ರ ಪುಸ್ತಕದ ಹಾಗೆ ಕಾಣುತ್ತದೆ. ಆದರೆ ತೆರೆತೆರದಂತೆ ಅದು ಸಂಪಾದನೆ ಎನ್ನುವುದು ಸ್ಪಷ್ಟವಾಗುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವವರೊಂದಿಗೆ ಲೇಖಕರು ಮಾಡಿದ ಸಂದರ್ಶನಗಳಿರುವ ಪುಸ್ತಕವಿದು. ಹಾಗಿರುವಾಗ ಇಂತಹ ಪುಸ್ತಕವನ್ನು ಸಂಪಾದನೆ ಎಂದು ಸ್ಪಷ್ಟವಾಗಿ ಗುರುತಿಸಬೇಕು.ಅದುವೇ ಸರಿಯಾದ ವಿಧಾನ.

ಈ ಪುಸ್ತಕದಲ್ಲಿ ಪ್ರಯೋಗವಾಗಿರುವ ಭಾಷೆಯ ಕುರಿತು ಒಂದು ಉದಾಹರಣೆಯನ್ನು ನೀಡುತ್ತೇನೆ.

ಉದಾ: ೧:

“ಪದವಿ ತರಗತಿಗಳಲ್ಲಿ ಏನನ್ನು ಕಲಿಯುವುದು/ ಕಲಿಸುವುದಾಗಿರಬೇಕು?”

ಎಂ.ಜಿ.ಸಿ. ಯಾವುದೇ ಒಂದು ಮಾತ್ರುಬಾಶೆಯನ್ನು ತರಗತಿಯಲ್ಲಿ ಕಲಿಯುವ ವಿದ್ಯಾರ್‍ತಿಗೆ ಆ ಭಾಶೆಯಲ್ಲಿ ವ್ಯವಹರಿಸುವ ಸಾಮಾನ್ಯ ಜ್ನಾನವಿರುತ್ತದೆ. ತರಗತಿಗಳಲ್ಲಿ ಹೊಸ ಪಾರಿಬಾಶಿಕ ಪದಗಳು ಪರಿಚಯವಾಗುತ್ತವೆ. ಹಾಗೂ ಒಂದು ರೀತಿಯ ಆಲೋಚನಾ ಕ್ರಮಕ್ಕೆ ಆಡುಬಾಶೆಯಿಂದ ಶಿಶ್ಟಬಾಶೆಯ ಕಡೆಗೆ ಅವನ/ಳ ಗಮನ ಹರಿಯುತ್ತದೆ.

ಒಂದು ರೀತಿಯಲ್ಲಿ ಕಲಿಸುವವರು ಮತ್ತು ಕಲಿಯುವವರು ಅಸಹಾಯಕರು. ಪಟ್ಯಕ್ರಮ ಮತ್ತು ಪಟ್ಯವನ್ನು ಸಿದ್ದಪಡಿಸುವವರೇ ಬೇರೆಯವರಾಗಿರುತ್ತಾರೆ. ಈಗ ಪರಿಸ್ತಿತಿ ಸುದಾರಿಸುತ್ತಿದೆ ಎನಿಸಿದರೂ ವಿವಿಗಳ ಒಟ್ಟು ರಚನಾ ವಿನ್ಯಾಸವೇ ಪ್ಯೂಡಲ್ ಮಾದರಿಯದು- ವಸಾಹತು ಕಲ್ಪನೆಯದು. ಅವು ಇಂದಿಗೂ ಡೆಮಕ್ರೆಟಿಕ್ ಆಗಿಯೇ ಇಲ್ಲ.(ಪು.೧೨) Read more »