ವಿಷಯದ ವಿವರಗಳಿಗೆ ದಾಟಿರಿ

Archive for

25
ಜನ

ಶಿಕ್ಷಕನ ಕಾಳಜಿಯೋ? ಬೌದ್ದಿಕ ಸಂವಾದಗಳ ಹನನವೋ?

­freedomofspeech-ಡಾ.ಎ. ಷಣ್ಮುಖ, ಕುವೆಂಪು ವಿಶ್ವವಿದ್ಯಾನಿಲಯ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ‘ದಿನೇಶ್ ಅಮೀನ್ ಮಟ್ಟು’ ರವರು ಫೇಸ್ ಬುಕ್ ನಲ್ಲಿ ಅವರ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಕೆಲುವ ಹುಡುಗರು ಬಳಸಿದ ಪದಪುಂಜಗಳಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಹುಡುಗರು ಬಳಸಿದ ಪದಪುಂಜಗಳು ಸಭ್ಯತೆಯ ಎಲ್ಲೆ ಮೀರಿತ್ತು. ಓರ್ವ ಬರಹಗಾರನ ಘನತೆಗೆ ಚ್ಯುತಿ ತರುವಂತಹ ಭಾಷೆಯಲ್ಲಿತ್ತು ಕೂಡ. ಈ ರೀತಿಯ ಪರಿಸ್ಥಿತಿ ಇದೊಂದೇ ಪ್ರಸಂಗಕ್ಕೆ ಸಂಬಂದಿಸಿದ್ದಲ್ಲ! ಸಾಮಾಜಿಕ ತಾಣಗಳನ್ನು ಒಮ್ಮೆ ಕಣ್ಣಾಡಿಸಿದರೆ ಅಲ್ಲಿ ಎಗ್ಗಿಲ್ಲದೆ ಹೀನಾಮಾನವಾಗಿ ಬೈಗುಳದ ಪದಗಳನ್ನೇ ಸಾಮಾನ್ಯವೆಂಬಂತೆ ಬಳಸುತ್ತಾ ಸಭ್ಯ ಮತ್ತು ಗೌರವಾನ್ವಿತ ಬರಹಗಾರರು ಅಸಹ್ಯಪಡುವಂತ ಭಾಷೆಗಳೇ ತುಂಬಿರುವುದನ್ನು ಸರ್ವೇ ಸಾಮಾನ್ಯವೆಂಬಂತೆ ಕಾಣಬಹುದು. ಈ ಕುರಿತು ಹಲವು ಬರಹಗಾರರು ಅದೇ ಸಾಮಾಜಿಕ ತಾಣಗಳಲ್ಲಿ ಆತಂಕ ವ್ಯಕ್ತಪಡಿಸುತ್ತಿರುವಂತದ್ದನ್ನೂ ಕಾಣಬಹುದು. ಇಂತಹ ಸನ್ನಿವೇಶದಲ್ಲಿ ದಿನೇಶ್ ಅಮೀನ್ ಮಟ್ಟುರವರ ಈ ನಡೆ ಇದಕ್ಕೆಲ್ಲಾ ಕಡಿವಾಣ ಹಾಕುವ ಒಂದು ದಿಟ್ಟ ಹೆಜ್ಜೆ ಎಂದು ಯೋಚಿಸುವುದು ಸಕಾರಣವಾಗಿಯೇ ಇದೆ. ಒಂದೊಮ್ಮೆ ದಿನೇಶ್ ಅಮೀನ್ ಮಟ್ಟುರವರ ಈ ಕ್ರಮದ ಹಿಂದೆ ಇದೇ ಕಾಳಜಿಯೇ ಇದ್ದಂತ ಪಕ್ಷದಲ್ಲಿ ಆರೋಗ್ಯಪೂರ್ಣ ಬೌದ್ದಿಕ ಚರ್ಚೆಯ ವಾತಾವರಣವನ್ನು ಬಯಸುವ ಯಾರೇ ಆದರೂ ಈ ನಡೆಯನ್ನು ಮುಕ್ತಮನಸ್ಸಿನಿಂದ ಬೆಂಬಲಿಸಲಿಕ್ಕೇಬೇಕು.

ಆದರೆ ವಾಸ್ತವ ಇದಕ್ಕೆ ವಿರುದ್ದವಾಗಿದೆ. ಅಂದರೆ ದಿನೇಶ್ ಅಮೀನ್ ಮಟ್ಟುರವರ ಈ ನಡೆಗೆ ದೊಡ್ಡಸಂಖ್ಯೆಯಲ್ಲಿ ಬೆಂಬಲ ನಿರೀಕ್ಷಿಸಬೇಕಾದ ಈ ಪ್ರಸಂಗದಲ್ಲಿ ಅವರ ಈ ನಡೆಯ ವಿರುದ್ದ ಚಳುವಳಿಯೋಪಾದಿಯಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗದ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದವರಾದರೂ ದಿನೇಶರನ್ನು ಬೆಂಬಲಿಸ ಬೇಕಿತ್ತು! ಆದರೆ ಅವರಲ್ಲೂ ಕೆಲವರು ಇವರ ನಡೆಯನ್ನು ವಿರೋಧಿಸುತ್ತಿದ್ದಾರೆ ಮತ್ತು ಹಲವರು ಮೌನಕ್ಕೆ ಶರಣಾಗಿದ್ದಾರೆ ಇದು ಸೋಜಿಗದ ಸಂಗತಿ. ಹಾಗಿದ್ದರೆ ಇವರ ನಡೆಯನ್ನು ವಿರೋದಿಸುತ್ತಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗಗಳನ್ನು ಬೆಂಬಲಿಸುತ್ತಿದ್ದಾರೆಯೇ? ಎಂದೂ ಸಹ ಯೋಚಿಸಬೇಕಾದ ಸಂಗತಿಯಾಗುತ್ತದೆ. ಈ ಸೂಜಿಗದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಮೀನ್ ಮಟ್ಟುರವರ ಈ ನಡೆಗೆ ಕಾರಣವಾದ ಇಡೀ ಘಟನೆಯನ್ನು ಒಮ್ಮೆ ಅವಲೋಕಿಸಬೇಕು. ಮತ್ತಷ್ಟು ಓದು »