ವಿಷಯದ ವಿವರಗಳಿಗೆ ದಾಟಿರಿ

Archive for

27
ಜನ

ಅಸಹಾಯಕತೆಯೇ ಹೊರತು ಸಾಮಾಜಿಕ ಕಳಕಳಿಯೇನಲ್ಲ..

freedomofspeech– ಡಾ. ಪ್ರವೀಣ್ ಟಿ. ಎಲ್

ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳ ಬಳಕೆಯ ಕುರಿತು ಇತ್ತೀಚೆಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯ ಸಹ ಈ ನಿಟ್ಟಿನಲ್ಲಿ ಹೊಸ ತೀರ್ಪುಗಳನ್ನು ನೀಡುತ್ತಿದೆ. ಇತ್ತೀಚೆಗೆ ನಿಲುಮೆ ಎಂಬ ಫೇಸ್‌ಬುಕ್ ಗುಂಪಿನ ವಿರುದ್ಧ ದಿನೇಶ್ ಅಮಿನ್ ಮಟ್ಟು ಅವರು ದೂರು ದಾಖಲಿಸಿದ್ದರು. ಆ ದೂರು ನೀಡುವ ಹಿಂದೆ ದೊಡ್ಡ ಸಾಮಾಜಿಕ ಕಳಕಳಿ ಇದೆ ಎಂದು ಅವರು ಹಲವು ಕಡೆ ಹೇಳಿಕೊಂಡಿದ್ದಾರೆ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಹರಿಸಿದರೆ ಸಾಕು ಅವರ ಸಾಮಾಜಿಕ ಕಳಕಳಿಯ ಪೊರೆ ಕಳಚಿ, ಅವರ ಅಸಹಾಯಕತೆಯ ಅನಾವರಣ ಆಗುತ್ತದೆ. ಮೊದಲೇ ಸ್ಪಷ್ಟ ಪಡಿಸಬೇಕಿರುವ ಅಂಶವೆಂದರೆ, ಅಸಭ್ಯ ಭಾಷೆ ಬಳಕೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಈ ಲೇಖನದ್ದಲ್ಲ. ಬದಲಾಗಿ ಅದರ ನೆಪದಲ್ಲಿ, ಸಮಾಜ ವಿರೋಧಿ ಕ್ರಿಯೆ ನಡೆಯುತ್ತಿದೆ ಎಂಬುದನ್ನು ಸೂಚಿಸುವುದು.

ಈ ದೂರು ಸಾಮಾಜಿಕ ಕಾಳಜಿಯ ಭಾಗವೇ ಆಗಿದ್ದರೆ, ಅವಾಚ್ಯ ಶಬ್ಧಗಳನ್ನು ಬಳಸಿದವರ ವಿರುದ್ಧ ದೂರು ನೀಡುತ್ತಿದ್ದರು. 19000ದಷ್ಟು ಅಧಿಕ ಓದುಗ ಬಳಗದ ಎಲ್ಲಾ ಕಾಮೆಂಟುಗಳಿಗೂ ನಿರ್ವಾಹಕರೇ ಕಾರಣರಾಗುತ್ತಾರೆ ಎನ್ನುವುದಾದರೆ, ರಾಜ್ಯದಲ್ಲಾಗುವ ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಮುಖ್ಯಮಂತ್ರಿಗಳೇ ಹೊಣೆಗಾರರಾಗುತ್ತಾರೆಯೇ? ಅವರ ವಿರುದ್ಧ ಕೇಸು ದಾಖಲಿಸಲು ಸಾಧ್ಯವೇ? ಇಲ್ಲ ಎಂಬುದು ಎಲ್ಲರ ತರ್ಕ. ಅದಿರಲಿ ಸ್ವತಃ ಅಮೀನ್ ಮಟ್ಟು ಅವರೇ ಮಧ್ಯಮ ವರ್ಗದ ಮತದಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಹಾಗೆ ನಿಂದಿಸಿರುವುದನ್ನು ಸುವರ್ಣ ವಾಹಿನಿಯ ಲೈವ್ ಚರ್ಚೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಕೂಡ! ಅಲ್ಲದೇ ಬೇರೆಯವರನ್ನು/ಎದುರಾಳಿ ಚಿಂತಕರನ್ನು ವಾಚಾಮಗೋಚರವಾಗಿ ನಿಂದಿಸಿದ ಹಲವು ಲೇಖನಗಳನ್ನು ಸಾಮಾಜಿಕ ಜಾಲತಾಣದ ಅವರ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ. ಹಾಗೆಂದು ಯಾರೋ ಬರೆದ ಲೇಖನವನ್ನು ಹಂಚಿಕೊಂಡ ಕಾರಣಕ್ಕೆ ಇವರ ವಿರುದ್ಧ ಕೇಸು ದಾಖಲಿಸಲಾಗುತ್ತದೆಯೇ? ಈ ಸಂದರ್ಭದಲ್ಲೆಲ್ಲಾ ಮಾಯವಾಗಿದ್ದ ಸಾಮಾಜಿಕ ಹೊಣೆಗಾರಿಕೆ ಈಗ ದಿಢೀರನೇ ಬರಲು ಕಾರಣ ಏನು? ಯಾರೋ ಓರ್ವ ಸದಸ್ಯನ ಪ್ರತಿಕ್ರಿಯೆಗೆ ‘ನಿಲುಮೆ’ ಎಂಬ ಬೃಹತ್ ಓದುಗ ಗುಂಪನ್ನೇ ಮುಚ್ಚಿಸಬೇಕೆಂಬ ತರ್ಕ ಯಾಕೆ ಮುಖ್ಯವೆನಿಸಿತು? ಮತ್ತಷ್ಟು ಓದು »