ವಿಷಯದ ವಿವರಗಳಿಗೆ ದಾಟಿರಿ

ಜುಲೈ 2, 2017

2

ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಾಭಿಮಾನ ಬರಲೇ ಇಲ್ಲ…

‍ನಿಲುಮೆ ಮೂಲಕ

ಶಿವಾನಂದ ಶಿವಲಿಂಗ ಸೈದಾಪೂರ. ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

“ಇದುವರೆಗೂ ಎಡಬಿಡಂಗಿಗಳು ಬರೆದದ್ದೇ ಇತಿಹಾಸ, ಹೇಳಿದ್ದೇ ಸತ್ಯಾಂಶ ಆಗಿ ಬಿಟ್ಟಿದೆ. ವಿಶ್ವವಿದ್ಯಾಲಯ, ಕಾಲೇಜು ಕ್ಯಾಂಪಸ್‍ಗಳಲ್ಲಿನ ಬೌದ್ಧಿಕ ಸ್ವಚ್ಚತೆಗೂ ಕೂಡ ಇಂದು ‘ಸ್ವಚ್ಛ ಭಾರತ ಅಭಿಯಾನ’ ನಡೆಯಬೇಕಿದೆ”.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಭಿಮಾನ ಬರಲೇ ಇಲ್ಲ. ಮುಖ್ಯವಾಗಿ ಮೂರು ಸಲ ನೇರವಾಗಿ ಸೋತು, ಲೆಕ್ಕವಿಲ್ಲದಷ್ಟು ಸಾರಿ ಹಿಂದಿನಿಂದ ಚುರಿ ಹಾಕಲು ಬಂದು ಚಿಂದಿ ಚಿಂದಿಯಾದ ಪಾಕಿಸ್ತಾನದ ಬಗ್ಗೆ ಆಗಾಗ ಒಲವು ತೋರಿಸುತ್ತಿರುವ ಬುದ್ಧಿಜೀವಿಗಳ ಮನಸ್ಥಿತಿ ಈ ಜನ್ಮದಲ್ಲಿ ಸರಿ ಹೋಗುವುದಿಲ್ಲ ಎಂಬುವುದಕ್ಕೆ ಮತ್ತೆ ಅರುಂಧತಿ ರಾಯ್ ಸಾಬೀತು ಮಾಡಿದ್ದಾಳೆ. ಈ ಹಿಂದೆ ಒಮ್ಮೆ ಕಾಶ್ಮೀರದ ಬಗ್ಗೆ ಮಾತನಾಡುತ್ತ “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಆಗಿರಲಿಲ್ಲ” ಎಂದು ತನ್ನ ಮಾನಸಿಕ ಅಸ್ವಸ್ತತೆಯನ್ನು ಪ್ರದರ್ಶಿಸಿದಳೇ ಹೊರತು, ಪಾಕಿಸ್ತಾನ ಯಾವುದರ ಅವಿಭಾಜ್ಯ ಅಂಗವೆಂದು ಹೇಳಲಿಲ್ಲ. ಈಗ ಏಳು ಲಕ್ಷ ಸೈನಿಕರ ಬದಲು ಎಪ್ಪತ್ತು ಲಕ್ಷ ನೇಮಿಸಿದರೂ ಪ್ರತ್ಯೇಕವಾದಿಗಳನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ದಿನಗಳೆದಂತೆ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೊರಟು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ನಗೆಪಾಟಲಿಗೆ ಒಳಗಾಗುತ್ತಿದ್ದಾಳೆ. ಪದೆ ಪದೇ ಪಾಕಿಸ್ತಾನಿಯರನ್ನು ಸಮರ್ಥಿಸುವ ಈಕೆಗೆ ಸಾವಿರಾರು ವರ್ಷದ ಹಿಂದೆ ಈ ಹಿಂದೂ ದೇಶ (ಭಾರತ)ವು ಎಷ್ಟು ವಿಸ್ತೀರ್ಣಗೊಂಡಿತ್ತೆಂಬ ಸಾಮಾನ್ಯ ಜ್ಞಾನವು ಈಕೆಗೆ ಇದ್ದಂತಿಲ್ಲ. ಪಾಕಿಸ್ತಾನದ ಬಗ್ಗೆ ಮಾತನಾಡುವ ಈಕೆಗೆ ಪಾಕಿಸ್ತಾನ, ಅಪಘಾನಿಸ್ತಾನಗಳ ಮೂಲ ನಿವಾಸಿಗಳು ಯಾರು ಎಂಬುದನ್ನು ಒಮ್ಮೆಯೂ ಹೇಳಿಲ್ಲ. ನಿರಂತರವಾಗಿ ಈಕೆ ಪಾಕಿಸ್ತಾನದ ಪ್ರಜೆಯಂತೆ ವರ್ತಿಸುತ್ತ ಬಂದಿದ್ದಾಳೆ.

ಈ ಅರುಂಧತಿ ರಾಯ್ ಒಂದು ವೇಳೆ ಪಾಕಿಸ್ಥಾನದಲ್ಲಿ ಇದ್ದುಕೊಂಡು ಪಾಕೀಸ್ತಾನದ ಸೈನ್ಯದ ಬಗ್ಗೆ ಹೀಗೆ ಮಾತನಾಡಿದರೆ ಪಾಕೀಸ್ತಾನಿಗಳೇನು ಸುಮ್ಮನಿರುತ್ತಿದ್ದರೆ? ಬಹುಶಃ ಹೇಳಿದ್ದರೆ! ಯಾವಾಗಲೋ ಹೆಣವಾಗಿ ಹೋಗಿರುತ್ತಿದ್ದಳು. ದೇಶದ ಅನ್ನ ತಿಂದು ದೇಶಕ್ಕೆ ಬೈದರೆ ಭಾರತಕ್ಕೆ ಹೊರತುಪಡಿಸಿ ಜಗತ್ತಿನ ಬೇರೆ ಯಾವ ರಾಷ್ಟ್ರವು ಸುಮ್ಮನೇ ಇರಲಾರವು. ಭಾರತದ ಮೇಲೆ ಆಕ್ರಮಣವಾದಾಗ ನಮ್ಮ ಸೈನಿಕ ಶಕ್ತಿ ಸುಮ್ಮನೆ ಕುಳಿತಿದ್ದರೆ ಭಾರತದ ಭೂಪಟ ಬೇರೆಯೇ ಇರುತ್ತಿತ್ತು. ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್‍ಗುರುನನ್ನು ಬಿಟ್ಟಿದ್ದರೆ ದೆಹಲಿಯಲ್ಲಿಯೂ ಕೂಡ ಪಾಕ್ ಧ್ವಜ ಹಾರಾಡುತ್ತಿತ್ತು. ಇಂತಹ ಮಾತುಗಳನ್ನು ಪಾಕೀಸ್ತಾನದಲ್ಲೋ, ಬಾಂಗ್ಲದಲ್ಲೋ ಅಥವಾ ಅರಬ್ ರಾಷ್ಟ್ರಗಳಲ್ಲಿಯೋ ಹೇಳಿದರೆ ಸುಮ್ಮನಿರಬಹುದಾಗಿತ್ತೆ?. ತಮ್ಮ ಸಂಕಟವನ್ನು ಜಗತ್ತಿನ ಯಾವ ರಾಷ್ಟ್ರದ ಜನರೂ ಎಲ್ಲಿಯೂ ಹೊರಹಾಕುವುದಿಲ್ಲ. ಆದರೆ ಭಾರತದ ವಿಚಾರಕ್ಕೆ ಬಂದಾಗ ಇಂತಹ ಕೆಲ ಪರ ರಾಷ್ಟ್ರ ಹಿತೈಷಿಗಳಾದ ಕೆಲವರು ಸ್ವರ್ಗ ಇದ್ದದನ್ನು ನರಕ ಅಂತಲೂ ಕರೆದು, ನರಕ ಇದ್ದ ಪಾಕಿಸ್ತಾನವನ್ನು ಸ್ವರ್ಗ ಅಂತಲೂ ಕರೆದು ಕೊಂಡಾಡುತ್ತಾರೆ. ಇದೇ ಅವರ ರಾಷ್ಟೀಯತೆ ಮತ್ತು ರಾಷ್ಟ್ರನಿಷ್ಟೆ.

ಸಮಾಜದ ಒಳಿತಿಗಾಗಿ ಇರಬೇಕಾದ ಈ ವಿಚಾರವಾದಿಗಳು, ಬುದ್ದಿಜೀವಿಗಳು ಸಮಾಜದ ಅಹಿತಕರ ಘಟನೆಗಳಿಗೆ ಇಂಬು ಕೊಡುತ್ತಾ ಬಂದಿದ್ದಾರೆ. ವಿದೇಶಗಳ ಎಂಜಲು ಕಾಸಿಗೆ ಜೊಲ್ಲು ಸುರಿಸುತ್ತಾ ತಮ್ಮತನವನ್ನೇ ಮಾರಿಕೊಳ್ಳುತ್ತ ಸಾಗಿದ್ದಾರೆ. ಸಮಾಜದ ಏಳಿಗೆಗಾಗಿ ಶ್ರಮಿಸಬೇಕಾಗಿದ್ದ ಇವರು ಸಮಾಜದ ನಾಶಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟಲ್ಲಕ್ಕೂ ಅರುಂಧತಿ ರಾಯ್ ಒಬ್ಬಳೇ ಕಾರಣವಲ್ಲ. ಅವಳಂತಹ ಹಲವಾರು ಜನ ಇದ್ದಾರೆ. ಸ್ವತಂತ್ರ್ಯ ಬಂದ ದಿನಗಳಲ್ಲಿ ಒಳ್ಳೆಯ ಆಯಕಟ್ಟಿನ ಜಾಗಗಳಲ್ಲಿ, ಎಲ್ಲಾ ವಿಧಗಳಲ್ಲಿ ತಮ್ಮ ಕೈ ತುರುಕಿಕೊಂಡಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿ ಹಿಡಿದು ಅಧ್ಯಾಪಕ ವೃಂದದಲ್ಲಿ, ಸಾಹಿತ್ಯದಲ್ಲಿ ವರ್ಗದಲ್ಲಿ, ಸಮಾಜದಲ್ಲಿ ಎಲ್ಲೆಂದರಲ್ಲಿ ಅಲ್ಲೆಲ್ಲ ಕಡೆ ಸೇರಿಕೊಂಡಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯುತ್ತಿರುವ ಇಂತವರ ಕೈಯಲ್ಲಿ ಕಲಿತವರು ಸಮಾಜವನ್ನು ಅದೆಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟೆಲ್ಲವನ್ನೂ ಮಾಡುತ್ತಿದ್ದಾರೆ. ಮಾತು ಎತ್ತಿದರೂ ಕಾಶ್ಮೀರ ಸ್ವಾತಂತ್ರ್ಯ ಇರಬೇಕು ಎನ್ನುವ ಇವರಿಂದ ಈ ದೇಶದಲ್ಲಿ ಶಾಂತಿ ನೆಲೆಸುವುದಾದರೂ ಯಾವಾಗ? ಇಂತಹ ಬುದ್ಧಿಜೀವಿಗಳು ಜೆಎನ್‍ಯುನಂತಹ ಕೇಂದ್ರಿಯ ವಿಶ್ವವಿದ್ಯಾಲಯ ಹಿಡಿದು ಇಡೀ ದೇಶದ ಎಲ್ಲಾ ವಿಶ್ವವಿದ್ಯಾಲಯ, ಕಾಲೇಜ್ ಕ್ಯಾಂಪಸ್‍ಗಳಲ್ಲಿ ತುಂಬಿಕೊಂಡಿದ್ದಾರೆ. ಈ ದೇಶದ ಬಡವರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿಗಳಲ್ಲಿ ಸಂಬಳ ತೆಗೆದುಕೊಳ್ಳುವ ಇವರು ತಮ್ಮ ಪ್ರಭಾವವನ್ನು ಎಲ್ಲರ ಮೇಲೆ ಗಾಢವಾಗಿ ಬೀರಬೇಕೆಂಬುವ ಉದ್ಧೇಶದಿಂದ ಕಮ್ಯೂನಿಸ್ಟ್ ವಾಮ ಪಂಥಿಯ ವಿಚಾರಗಳನ್ನು, ವಿದ್ಯಾಭ್ಯಾಸ ಮಾಡುತ್ತಿರುವ ಮುಗ್ಧ ಮನಸ್ಸಿನ ಯುವಕರಲ್ಲಿ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಒಂದೇ ತಟ್ಟೆಯಲ್ಲಿ ಊಟ ಮಾಡುವ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ, ಮೇಲು, ಕೀಳೆಂಬ ಮಾದಕ ಬೋಧನೆಯನ್ನು ಮಾಡುತ್ತಾ ಸಂಪೂರ್ಣವಾಗಿ ದೇಶ ವಿರೋಧಿ ಕೃತ್ಯಗಳತ್ತ ಭಾಗಿಯಾಗುವಂತೆ ಮಾಡುತ್ತಿದ್ದಾರೆ. ಇವತ್ತು ಮೇಲ್ಜಾತಿಯವರು ಕೆಳಜಾತಿಯವರನ್ನು ಸಾಮರಸ್ಯದಿಂದ ಇದ್ದರೆ ತಮ್ಮ ಆಟ ನಡೆಯುವುದಿಲ್ಲವೆಂದು ಅರಿತಿರುವ ಇವರು ಹೊಂದಾಣಿಕೆಯಿಂದ ಇರಬಾರದೆಂಬುವ ಉದ್ದೇಶದಿಂದ ಯುವ ಸಮೂಹದ ದಾರಿಯನ್ನು ತಪ್ಪಿಸುತ್ತಿದ್ದಾರೆ. ಮೇಲ್ವರ್ಗದವರು ಶತಶತಮಾನಗಳಿಂದ ತುಳಿಯುತ್ತಿದ್ದಾರೆಂದು ಬೌದ್ಧಿಕವಾಗಿ ಪ್ರಚೋದಿಸುತ್ತಾ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಇಂತಹವರಿಂದಾಗಿಯೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ದೇಶ ವಿರೋಧೀ ಚಟುವಟಿಕೆಗಳು ಕಂಡು ಬರುತ್ತಿದೆ. ದೇಶ ರಕ್ಷಣೆ ಮಾಡುತ್ತಿರುವ ಯೋದರನ್ನು ವಿಲನ್‍ಗಳನ್ನಾಗಿಸಿ; ಭಯೋತ್ಪಾದಕರನ್ನು, ದೇಶ ದ್ರೋಹಿಗಳನ್ನು ಹೀರೋಗಳನ್ನಾಗಿಸಿ ಕ್ಯಾಂಡಲ್ ಬೆಳಗಿಸಿ ಜೈಯಕಾರ ಹಾಕುತ್ತ ಸಂಭ್ರಮ ಪಡುತ್ತಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣಕ್ಕೆ ಬಂದವರು ಹೋಗುವಾಗ ಇಂತವರಿಂದ ಜಾತಿವಾದಿಗಳಾಗಿ, ಸಮಾಜದ ವಿದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದಾರೆ. ಇವರು ತಮ್ಮ ಸ್ವಾರ್ಥ ಸಾಧನೆಗಾಗಿ ಯುವ ಸಮೂಹವನ್ನು ನಕ್ಸಲ್‍ಗಳಾಗುವಂತೆ ಪ್ರೇರೇಪಿಸುವುದರಲ್ಲಿ ಯಾವ ಅನುಮಾನಗಳು ಉಳಿದಿಲ್ಲ.

ಈ ದೇಶದ ಸೈನಿಕರ ಮೇಲೆ ಜನರಿಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವವರು ಈ ವಿಕೃತ ಮನಸ್ಸಿನ ವಿಚಾರವಾದಿಗಳೇ ಆಗಿದ್ದಾರೆ. ಅಮ್ನೆಸ್ಟಿಯ ಘಟನೆಯನ್ನೇ ತೆಗೆದುಕೊಳ್ಳಿ ಮುರಿದ ಮನೆಯೆಂಬ ಕಾರ್ಯಕ್ರಮದಡಿಯಲ್ಲಿ ಯಾವ ರೀತಿಯಾದ ನಾಟಕ ಆಡಿದರು. ಜಗತ್ತಿನ ಎಲ್ಲ ಸೈನಿಕ ಶಕ್ತಿಗಳಲ್ಲಿ ಭಾರತೀಯ ಸೈನಿಕ ಶಕ್ತಿಯು ಯಾವ ರೀತಿ ತಾಕತ್ತ್ ಹೊಂದಿದೆ ಎಂಬುದು ಅಮೆರಿಕಾದಂತಹ ದೊಡ್ಡಣ್ಣನಿಗೂ ಗೊತ್ತು. ಅಂತಹ ಸೈನಿಕ ಶಕ್ತಿಯನ್ನು ಆಂತರಿಕವಾಗಿ ಹತ್ತಿಕ್ಕಲು ಈ ವಾಮಪಂಥಿಯರು, ನಡುರಸ್ತೆಯಲ್ಲಿ ಮೈಕ್ ಹಿಡಿದು ಕಪಟ ಭಾಷಣ ಮಾಡುವ ಕನ್ನಯ್ಯ ಕುಮಾರನಂತವರು ಸೇರಿ ದಿನಕ್ಕೊಂದು ಸೋಗು ಹಾಕುತ್ತಿದ್ದಾರೆ.

ವಸಾಹತುಶಾಹಿ ಕಾಲಘಟ್ಟದಲ್ಲಿ ಭಾರತೀಯರನ್ನು ಭೌದ್ಧಿಕ ಗುಲಾಮರನ್ನಾಗಿ ಸೃಷ್ಠಿಸಲೆಂದೇ ಆರಂಭವಾದ ಈ ಶೈಕ್ಷಣಿಕ ಪದ್ಧತಿಯನ್ನು ಸ್ವಾತಂತ್ರ್ಯ ಗಳಿಸಿಕೊಂಡ ನಂತರವು ಅದನ್ನೆ ಬುದ್ಧಿಜೀವಿ ಪಡೆ ಮುಂದುವರೆಸಿಕೊಂಡು ಬಂದಿದೆ. ಅತಿ ಬುದ್ಧಿವಂತರೆನಿಸಿಕೊಂಡ ಕೆಲವು ಗಂಜಿಗೀರಾಕಿಗಳು ಅದನ್ನೆ ತಮ್ಮ ಬಂಡವಾಳ ಮಾಡಿಕೊಂಡಿದಲ್ಲದೆ ಶುದ್ಧ ಇತಿಹಾಸ ತಿರುಚಿ ಹೊಟ್ಟೆ ತುಂಬಿಸಿಕೊಳ್ಳುತ್ತ ಪ್ರಜ್ಞಾವಂತರ ದಾರಿ ತಪ್ಪಿಸುತ್ತಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಟಿಸಿ ಬೇರೆಯವರಿಂದ ದುಡ್ಡು ಹೊಂದಿಸಿ ಉಚಿತ ವಿತರಣೆ ಮಾಡಿ ಬೌದ್ಧಿಕ ದಾಳಿ ಮಾಡುತ್ತಿರುವುದಲ್ಲದೆ, ಅಹಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ನಮ್ಮ ವರ್ತಮಾನದ ಯುವಕರು ಇಂದು ಮಾನಸಿಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಸ್ವಂತಿಕೆಯನ್ನು ಬಿಟ್ಟು ಮಾರಕ ಸಿದ್ಧಾಂತಗಳ ಗುಲಾಮರಾಗುತ್ತಿದ್ದಾರೆ.

ಕಾಶ್ಮೀರಕ್ಕಾಗಿ ಭಾರತ ಏನೆಲ್ಲ ಮಾಡುತ್ತಿದೆ! ಆದರೆ ಈ ಬುದ್ಧಿಗೇಡಿಗಳೇನು ಭಾರತಕ್ಕೆ ಮಾಡುತ್ತಿದ್ದಾರೆ? ಕಾಶ್ಮೀರಿಗಳಿಗೆ ಇತರರಷ್ಟು ತೆರಿಗೆ ಇಲ್ಲ. ಕಾಶ್ಮೀರಿ ಗೂಂಡಾಗಳ ಜೊತೆ ಸೇರಿ ಬುದ್ಧಿಗೇಡಿಗಳು ಎಷ್ಟೊಂದು ವಿರೋಧಿ ಮಾಡಿದರೂ ಸಹ ವರ್ಷದ ಹನ್ನೆರಡು ತಿಂಗಳು ಭಾರತೀಯ ಸೇನೆ ಅವರ ರಕ್ಷಣೆಗಾಗಿಯೇ ಶ್ರಮಿಸುತ್ತಿದೆ. ಆರ್ಮಿ ಕ್ಯಾಂಪ್ ಗಳಿಂದ ಸಾವಿರಾರು ಯುವಕರಿಗೆ ಶಿಕ್ಷಣ ನೀಡಲಾಗುತ್ತದೆ. ಅಲ್ಲಿನ ಸರ್ಕಾರ ನೀಡದೆ ಇರುವ ಶೈಕ್ಷಣಿಕತೆಯನ್ನು ಸ್ವತಹಃ ಆರ್ಮಿಯವರೆ ಸ್ಕೂಲುಗಳನ್ನು ನಡೆಸಿ ನೀಡುತಿದ್ದಾರೆ. ಅವರ ಆರೋಗ್ಯ ಸಮಸ್ಯೆಗೆ ಆರ್ಮಿಯವರೇ ಹಾಸ್ಪಿಟಲ್‍ಗಳ ವ್ಯವಸ್ಥೆ ಮಾಡಿದ್ದಾರೆ. ಮಹಿಳೆಯರ ನಿರುದ್ಯೋಗ ಸಮಸ್ಯೆ ನಿವಾರಿಸಲು ಕರಕುಶಲ ತರಬೇತಿ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಯಾವುದಕ್ಕೂ ಕೊರತೆ ಇಲ್ಲದಂತೆ ಕಾಶ್ಮೀರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಅರುಂಧತಿ ರಾಯ್‍ರಂತಹ ಬುದ್ಧಿಗೇಡಿಗಳು ಕಾಶ್ಮೀರಕ್ಕಾಗಿ ಏನು ಮಾಡುತ್ತಿದ್ದಾರೆ? ಅವರ ಮೇಲೆ ಎಲ್ಲಿಲ್ಲದ ಅಪವಾದಗಳನ್ನು ಹೊರಿಸುತ್ತಿದ್ದಾರೆ. ಭಾರತೀಯ ಸೈನಿಕರು ಇಂದು ಜೀವದ ಹಂಗು ತೊರೆದು ಕಾಶ್ಮೀರಿಗಳ ಕಲ್ಲು ಹೊಡೆತ ಸಹಿಸಿಕೊಂಡು ಸುಮ್ಮನೆ ಇದ್ದಾರೆಂದರೆ ಅದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ. ಕಾಶ್ಮೀರದಲ್ಲಿ ಇವರ ಸದ್ದಡಿಗಿಸಲು ಹೆಚ್ಚಿನ ಸಮಯವೇನು ಬೇಕಿಲ್ಲ. ಪಾಕಿಸ್ತಾನಕ್ಕೆ ಋಣಿಯಾಗಿದ್ದವರ ತಲೆ ಉರುಳಿಸಲು ಕ್ಷಣ ಮಾತ್ರ ಸಾಕು.

ದೇಶದ ಅನ್ನ ತಿಂದು ಈ ದೇಶದ ನೀರು ಕುಡಿದು ಈ ದೇಶದ ಗಾಳಿ ಸವಿದು ಬದುಕುತ್ತಿರುವ ಬೌದ್ಧಿಕ ಭಯೋತ್ಪಾದಕರು ಈ ದೇಶದ ಸ್ವಾಸ್ತ್ಯವನ್ನು ಹಾಳು ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅವಶ್ಯಕ್ಕಿಂತ ಅಧಿಕ ಸಂಬಳ ಪಡೆದು ಸರಕಾರದ ಸವಲತ್ತುಗಳನ್ನು ನಾಚಿಕೆ ಇಲ್ಲದೇ ಅನುಭವಿಸುತ್ತ ವಿದ್ಯಾರ್ಥಿಗಳಲ್ಲಿ ವಿಷವೀಜಗಳನ್ನು ಬಿತ್ತಿ ದೇಶದ್ರೋಹಿ ಕೃತ್ಯಗಳಲ್ಲಿ ತಲೆ ಹಾಕುವಂತೆ ಮಾಡಿ ದೂರದಿಂದ ನೋಡಿ ವಿಕೃತ ಮಜ ತೆಗೆದುಕೊಳ್ಳುತ್ತ, ವೈಚಾರಿಕ ಸೈದ್ಧಾಂತಿಕ ಎಂದು ತಮ್ಮಲ್ಲಿರುವ ಕೊಳಕನ್ನು ಎಗ್ಗಿಲ್ಲದೇ ವಿಶ್ವವಿದ್ಯಾಲಗಳಲ್ಲಿ ವಿದ್ಯಾರ್ಥಿಗಳನ್ನು ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ದೇಶ ಕಾಯುವ ಯೋಧರು ಹುತಾತ್ಮರಾದರೆ ಸುಮ್ಮನಿದ್ದು; ಎದುರಾಳಿಗಳನ್ನು ಹೊಡೆದುರುಳಿಸಿದಾಗ ಶತೃಗಳಿಗೂ ಇಲ್ಲದ ಸಂಕಟ ಯಾತನೆಗಳನ್ನು ಇವರೇ ಅನುಭವಿಸುತ್ತಿದ್ದಾರೆ. ಬುದ್ಧಿಜೀವಿಗಳನಿಸಿಕೊಂಡವರು ಕಾಶ್ಮೀರದಲ್ಲಿ ಶಾಲಾ ಕಾಲೇಜುಗಳಿಗೆ ಬೆಂಕಿ ಹಚ್ಚಿಸಿ ಅಲ್ಲಿನ ಯುವಕರನ್ನು ದಾರಿ ತಪ್ಪಿಸಿ ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಹೊರಗಿನಿಂದ ಬರುವ ಖೋಟಾ ನೋಟನ್ನು ಹಂಚಿ ಧರ್ಮದ ಅಫೀಮು ತಲೆಗೆರಿಸಿ ಭಯೋತ್ಪಾದಕರನ್ನಾಗಿಯೂ ಮಾರ್ಪಡಿಸುತ್ತಿದ್ದಾರೆ. ಹೇಳಿಕೊಳ್ಳುವುದಕ್ಕೆ ಪ್ರಗತಿಪರರ ಹೆಸರಿನ ಸೋಗು ಹಾಕುವ ಈ ಎಡಬಿಡಂಗಿಗಳು ಇದುವರೆಗೂ ಬರೆದದ್ದೇ ಇತಿಹಾಸ, ಹೇಳಿದ್ದೇ ಸತ್ಯಾಂಶ ಆಗಿಬಿಟ್ಟಿದೆ. ಇವರು ಮಾಡುತ್ತಿರುವ ನಾಟಕಗಳನ್ನು ನೋಡಿದರೆ ಇವರಿಗೆ ಪಾಕಿಸ್ತಾನದಿಂದ ಚೀನಾದಿಂದ ಪ್ರೋತ್ಸಾಹ ಧನ ಹರಿದು ಬರುವುದರಲ್ಲಿ ಯಾವ ಅನುಮಾನಗಳು ಉಳಿದಿಲ್ಲ. ಅದಕ್ಕಾಗಿ ಇಂದು ಸ್ವಚ್ಛ ಭಾರತ ಅಭಿಯಾನ ದೇಶದ ಸ್ವಚ್ಚತೆಗಾಗಿ ಮಾತ್ರವಲ್ಲ; ವಿಶ್ವವಿದ್ಯಾಲಯ, ಕಾಲೇಜು ಕ್ಯಾಂಪಸ್‍ಗಳಲ್ಲಿನ ಬೌದ್ಧಿಕ ಸ್ವಚ್ಚತೆಗೂ ನಡೆಯಬೇಕಿದೆ.

2 ಟಿಪ್ಪಣಿಗಳು Post a comment
 1. ಜುಲೈ 5 2017

  ಸಂಶೋಧನೆ [ನಾಮ ಪದ; ಕ್ರಿಯಾಪದ] = ಬಯ್ಯುವುದು; ಹೇಳಲಿಕ್ಕೆ ಏನೂ ಇಲ್ಲದಾಗ, ಮನತುಂಬಿ ಬಯ್ಯುವುದು; ಮೈ ಪರಚಿಕೊಳ್ಳುವುದು.

  ಪದಕ್ಕೆ ಹೊಸ ಅರ್ಥ

  ಉತ್ತರ
  • ನಾ-ಗ-ಶೆ-ಟ್ಟಿ
   ಜುಲೈ 9 2017

   ಬ್ರಹ್ಮಜ್ಞಾನಿ ಬಾಲಗಂಗಾಧರ ಅವರ ವೃತ್ತಿಯೂ ಸಂಶೋಧನೆಯೇ ಆಗಿದೆ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments