ವಿಷಯದ ವಿವರಗಳಿಗೆ ದಾಟಿರಿ

Archive for

12
ಜುಲೈ

ನಮ್ಮೂರ ಹಬ್ಬ – ಹೊಸ ಹುರುಪಿನ ಹೊಸ್ತು

– ಸ್ವಾತಿ ಶೆಟ್ಟಿ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ
ಎದ್ದೊಂದುಗಳಿಗೆ ನೆನೆದೇನು…

ಮೋಡ ಮಳೆಗೆ ಮೂಲ, ಮಕ್ಕಳಿಗೆ ತಾಯಿ ಮೂಲ, ಬೆಳಕಿಗೆ ಸೂರ್ಯ ಮೂಲ, ಭೂಮಿತಾಯಿ ಬೆಳೆಗೆ ಮೂಲ. ಹೌದು, ನಮ್ಮದು ಕೃಷಿ ಪ್ರದಾನವಾದ ವ್ಯವಸ್ಥೆ ರೈತರಿಗೆ ಅನ್ನ ನೀಡುವ ಭೂಮಿ ತಾಯಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಭಂದವಿದೆ. ಭೂಮಿಯನ್ನು ಹಾಗೂ ಕೃಷಿಯನ್ನು ಈ ಹಿನ್ನೆಲೆಯಲ್ಲಿ ಪೂಜ್ಯ ಭಾವನೆಯಿಂದ ಆರಾಧಿಸಿಕೊಂಡು ಬಂದಿದ್ದೇವೆ. ನಮ್ಮ ಕರಾವಳಿಯ ಹೆಚ್ಚಿನ ಎಲ್ಲಾ ಆಚರಣೆಗಳು ಕೃಷಿ ಸಂಬಂಧಿತವಾದ ಆಚರಣೆಗಳಾಗಿ ರೂಢಿಯಲ್ಲಿದೆ. ಮತ್ತಷ್ಟು ಓದು »

11
ಜುಲೈ

ನಮ್ಮೂರ ಹಬ್ಬ ( ಮೈಸೂರು )

– ವಿಜಯ ನಂಜುಂಡಯ್ಯ

ಭಾರತೀಯರಿಗೆ ಹಬ್ಬ, ಹರಿದಿನಗಳು ಹೊಸದೇನೂ ಅಲ್ಲ. ಹಬ್ಬಗಳು ಹೆಸರೇ ಸೂಚಿಸುವಂತೆ, ಸಂತೋಷ, ಸಡಗರದ ಸಂಕೇತ ವಾಗಿದೆ. ಈ ಹಬ್ಬ, ಸಂತೋಷವನ್ನುಂಟು ಮಾಡುತ್ತದೆ ಎಂದರೆ ನೀವೇ ನೋಡಿ.

ಕೆಲವು ವಸ್ತುಗಳೂ, ವಿಷಯಗಳೂ ಮನಸ್ಸಿಗೆ ಹತ್ತಿರವಾಗಿ ಖುಷಿ ತಂದರೆ,,ಸೌಂದರ್ಯ, ಶೃಂಗಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಹಾಗೇ ಇಂಪಾದ, ತಂಪಾದ ಪ್ರೀತಿಯ ಮಾತುಗಳು, ಮಧುರವಾದ ಸ್ವರ, ಸಂಗೀತಗಳು ಕಿವಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ರುಚಿ, ರುಚಿಯಾದ ತಿಂಡಿ ತೀರ್ಥಗಳು ಬಾಯಿಗೆ ಹಬ್ಬವನ್ನುಂಟು  ಮಾಡುತ್ತದೆ.. ಮತ್ತಷ್ಟು ಓದು »

10
ಜುಲೈ

ನಿಲುಮೆ ವೈಶಾಖ ಸಂಭ್ರಮ (ಬೇಸಿಗೆ ಶಿಬಿರ)

ಯಾವುದೇ ಐಡಿಯಾಲಜಿಗಳು,ದೊಡ್ಡವರು,ಚಿಕ್ಕವರು,ಹೊಸಬರು ಅಂತೆಲ್ಲಾ ಬೇಧ-ಭಾವವಿಲ್ಲದೇ ಎಲ್ಲಾ ರೀತಿಯ ಬರಹ ಮತ್ತು ಬರಹಗಳಿಗೊಂದು ವೇದಿಕೆಯಾಗುವ ಉದ್ದೇಶದಿಂದ ನಿಲುಮೆ ಆರಂಭಗೊಂಡು ಸರಿ ಸುಮಾರು ಏಳು ವರ್ಷ ಕಳೆದಿವೆ.ಇಂದು ನಿಲುಮೆ ಕೇವಲ ಒಂದು ಸಾಮಾಜಿಕ ಜಾಲತಾಣದ ವೇದಿಕೆಗೆ ಸೀಮಿತವಾಗಿಲ್ಲ.ಈ ನೆಲದ ಸಂಸ್ಕೃತಿಯ ಉಳಿವಿಗಾಗಿ ನಾವು ಬೀದಿಗೂ ಇಳಿದಿದ್ದೇವೆ.ನಮ್ಮ ಶಕ್ತ್ಯಾನುಸಾರ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ.ಈ ರಾಜ್ಯದ ಬುದ್ಧಿಜೀವಿಗಳ ಗುಂಪು ವೈಚಾರಿಕ ದ್ವೇಷದಿಂದ ನಿಲುಮೆಯನ್ನು ಮುಚ್ಛಿಸಲು ಹೊರಟಾಗ ಅವರಿಗೆ ಸೆಡ್ಡು ಹೊಡೆದು, ಈ ನೆಲದ ಸಂಸ್ಕೃತಿಯನ್ನು ನಮ್ಮದೇ ದೃಷ್ಟಿಯಲ್ಲಿ ಅರ್ಥೈಸಿಕೊಳ್ಳುವ ಸಲುವಾಗಿ ಮೂರು ಪುಸ್ತಕಗಳನ್ನು ಹೊರ ತಂದು ಯಶಸ್ವಿಯೂ ಆದೆವು.ಕಾಶ್ಮೀರದ ವಿಷಯದಲ್ಲಿ ದೇಶವನ್ನು ವಿಭಜಿಸಲು ಹೊರಟ ದುಷ್ಟಕೂಟಗಳು ಕರ್ನಾಟಕಕ್ಕೂ ಕಾಲಿಟ್ಟಾಗ ಅವರ ಷಡ್ಯಂತ್ರಕ್ಕೆ ವಿರುದ್ಧವಾಗಿ ರಾಜ್ಯಾದ್ಯಂತ ಪ್ರೊ.ಪ್ರೇಮಶೇಖರ್ ರವರ ನೇತೃತ್ವದಲ್ಲಿ “ಜಮ್ಮು ಕಾಶ್ಮೀರ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು” ಎಂಬ ವಿಚಾರ ಸಂಕಿರಣ ನಡೆಸಿದೆವು. ಈ ಕಾರ್ಯಕ್ರಮವೂ ನಮ್ಮೆಲ್ಲರ ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಯಿತು. ಇದರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಕೂಡ ಮಾಡಲಾಯಿತು. ಮುಂದಿನ ಭಾಗವಾಗಿ ನಮ್ಮ ಸಂಪ್ರದಾಯಗಳ ಕುರಿತು ಅರಿಯಲು “ನಮ್ಮೂರ ಹಬ್ಬ” ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆವು. ಇದಕ್ಕೂ ಕೂಡ ಉತ್ತಮ ಬೆಂಬಲ ವ್ಯಕ್ತವಾಯಿತು.ಈ ಎಲ್ಲಾ ಯಶಸ್ಸಲ್ಲೂ ನಿಲುಮೆಯನ್ನು ಅಪಾರವಾಗಿ ಪ್ರೀತಿಸುವ ನಿಲುಮಿಗರ ಪಾಲು ಬಹಳ ದೊಡ್ಡದು. ಮುಂದೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಸಲ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂಬ ಆಶಯ ಬಲವಾಯಿತು. ಹಾಗಾಗಿ ಮೇ ೫,೬,೭ ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ, ಕುಂಜತ್ತೋಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡದಲ್ಲಿ ನಿಲುಮೆಯ ಹೊಸ ಪ್ರಯತ್ನ “ನಿಲುಮೆ – ವೈಶಾಖ ಸಂಭ್ರಮ” ಕಾರ್ಯಕ್ರಮ ನಡೆಯಿತು. ಅದರ ಕುರಿತ ಚಿತ್ರ ಸಹಿತ ಸಂಕ್ಷಿಪ್ತ ವರದಿ ಸ್ವಲ್ಪ ತಡವಾಗಿ ನಿಮ್ಮ ಮುಂದಿದೆ… – ನಿಲುಮೆ ನಿರ್ವಾಹಕರು

ಮತ್ತಷ್ಟು ಓದು »

10
ಜುಲೈ

ನಮ್ಮೂರ ಹಬ್ಬ.. ( ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ )

ಯೋಗಾನಂದಾರಾಧ್ಯ
ನೇರಲವಾಡಿ, ಮಾಗಡಿ ತಾಲ್ಲೂಕು
ರಾಮನಗರ ಜಿಲ್ಲೆ

ಹಬ್ಬಗಳೆಂದರೆ ಸಾಮಾನ್ಯವಾಗಿ ಸಡಗರ ಸಂಭ್ರಮದಿಂದ ಕೂಡಿದ್ದು, ಬಂಧು ಬಾಂಧವರು, ಗೆಳೆಯರು, ಆಯಾ ಸಮುದಾಯದವರು ಒಟ್ಟಿಗೇ ಸೇರಿ ಆಚರಿಸುವ ಮನಶ್ಶಾಂತಿಯ ಮಹತ್ಕಾರ್ಯ..

ಇಂದು ಪ್ರಪಂಚದ ನಾನಾ ಭಾಗಗಳಲ್ಲಿ ಅವರದೇ ಆದ ಸಂಸ್ಕೃತಿಯ ವೈಶಿಷ್ಟ್ಯಗಳಿಂದ ಕೂಡಿದ ಹಲವಾರು ಹಬ್ಬಗಳನ್ನು ಆಚರಿಸುವುದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವು ಕಂಡಿದ್ದೇವೆ.. ಕೆಲವು ಹಬ್ಬಗಳನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿದರೆ, ಮತ್ತೆ ಕೆಲವು ರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ಕೆಲವು ರಾಜ್ಯಮಟ್ಟದಲ್ಲಿ ಹಾಗೆಯೇ ಸಂಪ್ರದಾಯ, ಸಂಸ್ಕೃತಿಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇ ಸಾಮಾನ್ಯ… ಮತ್ತಷ್ಟು ಓದು »

9
ಜುಲೈ

ಮರಳುಗಾಡಿನಲ್ಲಿ ಹಸಿರನ್ನೊತ್ತಿಸಿದ ದೇಶವೊಂದು ನಡೆದ ಹಾದಿಯಲ್ಲಿ…

– ಸುಜಿತ್ ಕುಮಾರ್

1947….

ಅರಬ್ಬರ ಹಾಗು ಜ್ಯೂವರ (ಯಹೂದಿ) ಕಿತ್ತಾಟವನ್ನು ನೋಡಲಾರದೆ ವಿಶ್ವಸಂಸ್ಥೆ ಅಂದು ಯಹೂದಿಗಳಿಗೊಂದಷ್ಟು ಹಾಗು ಅರಬ್ಬರಿಗೊಂದಿಷ್ಟು ನೆಲವನ್ನು ಪಾಲುಮಾಡಿ ಕೊಟ್ಟಿತ್ತು. ಇಬ್ಬರ ಕಿತ್ತಾಟದ ನಡುವೆ ಮೂರನೆಯವರ ಉಸಾಬರಿಯನ್ನು ಒಪ್ಪದ ಅರಬ್ ಪಡೆ (ಈಜಿಪ್ಟ್, ಸಿರಿಯಾ, ಜೋರ್ಡನ್, ಲೆಬನಾನ್) ತಮ್ಮ ಪಾಲು ಸಣ್ಣದೆಂದು ಕೊರಗಿ ವಿಶ್ವಸಂಸ್ಥೆ ಗೊತ್ತುಮಾಡಿದ್ದ ಯಹೂದಿಯರ ಅಷ್ಟೂ ನೆಲವನ್ನು ನುಂಗಿ ಹಾಕಲು ರಣತಂತ್ರವೊಂದನ್ನು ರೂಪಿಸಿದವು. ಜಾಗತಿಕ ಮಟ್ಟದಲ್ಲಿ ತನ್ನ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಿರುವಷ್ಟರಲ್ಲೇ ವೈರಿ ಸೇನೆ ಯಹೂದಿಯರ ಪ್ರದೇಶವನ್ನು ಮೂರು ದಿಕ್ಕಿನಿಂದಲೂ ಆವರಿಸಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಸಿದು ಹೋರಾಡಿದ ಪಡೆ, ವೈರಿಸೇನೆ ಕನಸ್ಸಿನಲ್ಲಿಯೂ ಊಹಿಸಲಾಗದ ಮಟ್ಟಿಗೆ ಸದೆಬಡಿಯಿತು. ಯುದ್ಧದಲ್ಲಿ ಸೋತು ಓಡತೊಡಗಿದ್ದ ವೈರಿಪಡೆಯ ಒಂದೊಂದೇ ಪ್ರದೇಶಗಳನ್ನು ‘ಗೆದ್ದ’ ಯಹೂದಿಯರು 1948 ರಲ್ಲಿ ಹೊಸ ದೇಶವೊಂದನ್ನು ಹುಟ್ಟುಹಾಕಿ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು. ಇಂದು ಯುದ್ಧ ಸಾಮಗ್ರಿಗಳ ತಯಾರಿ ಹಾಗು ಅವುಗಳ ರಪ್ತಿನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ, ಹಾಗು ಅಭಿವೃದ್ದಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಝಳಪಿಸುವ ಆ ದೇಶದ ಹೆಸರೇ ಇಸ್ರೇಲ್. ಮತ್ತಷ್ಟು ಓದು »

7
ಜುಲೈ

ದೇಶಕ್ಕಾಗಿ ನಿಮ್ಮ ಪ್ರಾಣಾರ್ಪಣ – ಇದೋ ನಿಮಗೆ ನಮ್ಮ ಅಶ್ರು ತರ್ಪಣ

– ಕ್ಯಾ. ನವೀನ್ ನಾಗಪ್ಪ

ರೈಫಲ್ ಮ್ಯಾನ್ ಮೋಹಿ೦ದರ್ ಸಿ೦ಗ್, ರೈಫಲ್ ಮ್ಯಾನ್ ರಾಕೇಶ್ ಕುಮಾರ್, ಲ್ಯಾನ್ಸ್ ನಾಯಕ್ ಹರೀಶ್ ಪಾಲ್, ಮೇಜರ್ ಅಜಯ್ ಸಿ೦ಗ್ ಜಸ್ರೋಟಿಯ, ಹವಲ್ದಾರ್ ಜಗನ್ನಾಥ್, ಲ್ಯಾನ್ಸ್ ನಾಯಕ್ ರಣಬೀರ್ ಸಿ೦ಗ್, ರೈಫಲ್ ಮ್ಯಾನ್ ಪವನ್ ಸಿ೦ಗ್, ರೈಫಲ್ ಮ್ಯಾನ್ ಅಶೋಕ್ ಕುಮಾರ್, ಲ್ಯಾನ್ಸ್ ನಾಯಕ್ ವೀರ್ ಸಿ೦ಗ್, ರೈಫಲ್ ಮ್ಯಾನ್ ಶ್ಯಾಮ್ ಸಿ೦ಗ್, ಹವಲ್ದಾರ್ ಕ್ರಿಷನ್ ಸಿ೦ಗ್, ರೈಫಲ್ ಮ್ಯಾನ್ ಮನೋಹರ್ ಲಾಲ್, ಲ್ಯಾನ್ಸ್ ನಾಯಕ್ ಕ್ರಿಷ್ಣನ್ ಮೋಹನ್, ರೈಫಲ್ ಮ್ಯಾನ್ ದೀಪ್ ಚಂದ್, ರೈಫಲ್ ಮ್ಯಾನ್ ಪ್ರವೀಣ್ ಕುಮಾರ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮ್ಯಾನ್ ಅಬ್ದುಲ್ ನಜ಼ಾರ್.

ಒಂದು ರಾಷ್ಟ್ರ, ಒಂದು ಕಾನೂನು, ಒಂದು ತೆರಿಗೆ ಎಂದು ಕನವರಿಸುತ್ತಿರುವ ದೇಶಕ್ಕೆ ಮೇಲೆ ಕಾಣಿಸುವ ೧೭ ಹೆಸರುಗಳನ್ನು ನೆನಪಿಸಿಕೊಳ್ಳುವ ಧಾವಂತ ಎಲ್ಲಿದೆ? ಸೈನಿಕರನ್ನು ಹೊರತುಪಡಿಸಿ. ಮತ್ತಷ್ಟು ಓದು »

6
ಜುಲೈ

ಪಂಡಿತ್ ದೀನದಯಾಳ ಉಪಾಧ್ಯಾಯ – ಶತಮಾನೋತ್ಸವ ಸ್ಮರಣೆ

– ವಿಘ್ನೇಶ್, ಯಲ್ಲಾಪುರ

ಅವರು ಹುಟ್ಟಿದ್ದು 1916ರ ಸೆಪ್ಪೆಂಬರ್ 25ರಂದು, ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ತರ್ ಆಗಿ ಕೆಲಸ ಮಾಡುತ್ತಿದ್ದ ಅಜ್ಜನ ಮನೆಯಲ್ಲಿ; ಇನ್ನೂ ಎರಡೂವರೆ ವರ್ಷವಾಗುವಷ್ಟರಲ್ಲೇ ತಂದೆ ಪಂ|| ಭಗವತಿಪ್ರಸಾದರ ದೇಹಾಂತ್ಯವಾಯಿತು; ತಾಯಿ ರಾಮಪ್ಯಾರಿ ಪುಟ್ಟ ಮಗು ಶಿವದಯಾಳನನ್ನು ಮಡಿಲಲ್ಲಿಟ್ಟುಕೊಂಡು, ಇವರನ್ನು ಕೈ ಹಿಡಿದು ಕರೆದುಕೊಂಡು ಹೋಗಿದ್ದು ತನ್ನ ತಮ್ಮನ ಮನೆಗೆ.. ಸೋದರಮಾವನ ಮನೆಯಲ್ಲಿ ನಾಲ್ಕೈದು ವರ್ಷ ಕಳೆಯಿತು ಎನ್ನುವಾಗ ತಾಯಿ ರಾಮಪ್ಯಾರಿ ರಾಮನಿಗೆ ಪ್ರಿಯಳಾದಳು, ವೈಕುಂಠಧಾಮ ಸೇರಿದಳು.. ಮುಂದೆ ಹತ್ತು ವರ್ಷ ಕಳೆಯುವಷ್ಟರಲ್ಲಿ ಇವರಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ತಮ್ಮ ಶಿವದಯಾಳ ಗುಣವಾಗದ ಜ್ವರದಿಂದ ಇಹಲೋಕ ತ್ಯಜಿಸಿದ. ಅಲ್ಲಿಗೆ ತಮ್ಮ ಹದಿನೆಂಟರ ಹರೆಯದಲ್ಲೇ ಮೊದಲನೇ ಸುತ್ತಿನ ರಕ್ತಸಂಬಂಧಿಗಳೆಲ್ಲರನ್ನೂ ಕಳೆದುಕೊಂಡು ‘ವಿರಕ್ತ’ ರಾದರೀತ. ಆದರೆ, ಆ ವಿರಕ್ತಿಯಾದರೂ ವ್ಯಕ್ತಿಗತ ‘ಸಂಸಾರ’ವನ್ನು ಕುರಿತುದಾಗಿತ್ತಷ್ಟೆ; ‘ಸಮಷ್ಟಿಸಂಸಾರ’ದ ಸೇವೆಯಲ್ಲಿ ಅವರನ್ನು ಅನುರಕ್ತರನ್ನಾಗಿಸಿತು. ಕಾಲೇಜು ಶಿಕ್ಷಣದ ಸಮಯದಲ್ಲಿ ಬಾಳಾಸಾಹೇಬ ದೇವರಸರ ಸಂಪರ್ಕಕ್ಕೆ ಬಂದಮೇಲೆ ಅವರ ಜೀವನದ ದಾರಿ-ದಿಕ್ಕುಗಳು ಸ್ಪಷ್ಟವಾದುವು. ಅಲ್ಲಿಂದ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೂ ಆದರು. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು; ಸಂಘಟನೆಯ ಅಪೇಕ್ಷೆಯಂತೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು; ಜನಸಂಘದ ಜವಾಬ್ದಾರಿ ಹೊತ್ತರು. ವ್ಯಕ್ತಿಗತ ಜೀವನದಲ್ಲಿ ಪಾರದರ್ಶಕತೆ, ತಾವು ನಂಬಿದ ಸಿದ್ಧಾಂತದ ಅನುಷ್ಠಾನದಲ್ಲಿ-ಬೋಧನೆಯಲ್ಲಲ್ಲ-ಏಕನಿಷ್ಠೆ, ಆಚರಣೆಯ ಮೂಲಕ ಅನುಕರಣೀಯರಾಗುವ ಮೇಲ್ಪಂಕ್ತಿ, ಸಮಾಜದ ಎಲ್ಲ ಸ್ತರದ ಜನರನ್ನೂ ಜೀವನವನ್ನೂ ಕುರಿತು ಕಳಕಳಿ, ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಕುರಿತ ಆತ್ಯಂತಿಕ ಶ್ರದ್ಧೆ – ಇವೆಲ್ಲವುಗಳಿಂದಾಗಿ ಅವರು ಕೇವಲ ಸಂಘದ, ಜನಸಂಘದ ವಲಯದಲ್ಲಷ್ಟೇ ಅಲ್ಲ; ಇಡೀ ದೇಶದಾದ್ಯಂತ ಪರಿಚಿತರಾದರು. ಪಕ್ಷಭೇದವಿಲ್ಲದೆ ಎಲ್ಲರ ಗೌರವಕ್ಕೆ ಪಾತ್ರರಾದರು. ಮತ್ತಷ್ಟು ಓದು »

5
ಜುಲೈ

ಸಿಡಿಲು ಸನ್ಯಾಸಿಯ ಐದು ನಿಮಿಷದ ಮಾತುಗಳು ಇಡೀ ಜಗತ್ತಿಗೆ ಸನಾತನ ಧರ್ಮದ ಶ್ರೇಷ್ಠತೆಯನ್ನು ಬಿತ್ತರಿಸಿದ್ದವು.

ಶಿವಾನಂದ ಶಿವಲಿಂಗ ಸೈದಾಪೂರ
(ಎಂ.ಎ.ವಿದ್ಯಾರ್ಥಿ.)
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.

ಸ್ವಾಮಿ ವಿವೇಕಾನಂದರ 115ನೇ ಪುಣ್ಯಸ್ಮರಣೆಯ  ವಿಶೇಷ ಲೇಖನ.

ಅದೊಂದು ತಮ್ಮ ಧರ್ಮ ಪ್ರಾಬಲ್ಯವನ್ನು ಜಗತ್ತಿನ ಇತರ ದೇಶದ ಮೇಲೆ ಹರಡಲು ನಡೆಸಿದ ಸಮಾರಂಭ. ಅದಕ್ಕೂ ಒಂದು ಇತಿಹಾಸ, ನೂರ ಐವತ್ತು ವರ್ಷಗಳ ಹಿಂದೆ ಕೊಲಂಬಸ್ ಶೋಧಿಸಿದ್ದು, ಅದರ ಸ್ಮರಣೆಯ ಹೆಸರಲ್ಲಿ ಕ್ರೈಸ್ತ ಧರ್ಮವನ್ನು ಜಗತ್ತಾದ್ಯಂತ ಬಿತ್ತಲು ಆಯೋಜನಗೊಂಡಿದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ.. ಅದಕ್ಕೆ ಕಾರಣ ಒಂದು ಉದ್ದೇಶ ಹಲವು. ಅಷ್ಟೊತ್ತಿಗೆ ಕ್ರೈಸ್ತ ಧರ್ಮ ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಂತಹ ಆಕ್ರಮಣಕ್ಕೆ ಒಳಗೊಂಡ ದೇಶಗಳಲ್ಲಿ ಭಾರತವು ಒಂದು. ಮತ ಸುಧಾರಣೆಗಾಗಿ ಬುದ್ಧ, ಬಸವ, ಮಹಾವೀರ, ಶಂಕರ, ಮದ್ವಾಚಾರ್ಯರು…. ಹೀಗೆ ಎಲ್ಲರು ಬಂದು ಹೋದರು. ಯಶಸ್ವಿಯು ಇಲ್ಲ, ವಿಫಲವು ಇಲ್ಲ. ಎಲ್ಲವೂ ಮಧ್ಯಂತರದಲ್ಲಿಯೇ ಸಾಗಿತ್ತೇ ಹೊರತು ಅವರ್ಯಾರು ಸಹ ದೇಶದ ಹೋರ ಹೋಗಿ ಸನಾತನ ಧರ್ಮವನ್ನು ಪ್ರಚಾರ ಮಾಡಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ಆದಾಗಲೆಲ್ಲ ತಕ್ಕ ಉತ್ತರಕ್ಕೆ ಸಿದ್ಧವಾಗಿಯೇ ಇತ್ತು ಭಾರತ. ತುರ್ಕರ ದಾಳಿಗೆ ವಿಜಯನಗರ, ಮರಾಠರಂತಹ ಮನೆಗಳು ಹುಟ್ಟುತ್ತಲೇ ಬಂದವು. ಮತ್ತಷ್ಟು ಓದು »

2
ಜುಲೈ

ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಾಭಿಮಾನ ಬರಲೇ ಇಲ್ಲ…

ಶಿವಾನಂದ ಶಿವಲಿಂಗ ಸೈದಾಪೂರ. ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

“ಇದುವರೆಗೂ ಎಡಬಿಡಂಗಿಗಳು ಬರೆದದ್ದೇ ಇತಿಹಾಸ, ಹೇಳಿದ್ದೇ ಸತ್ಯಾಂಶ ಆಗಿ ಬಿಟ್ಟಿದೆ. ವಿಶ್ವವಿದ್ಯಾಲಯ, ಕಾಲೇಜು ಕ್ಯಾಂಪಸ್‍ಗಳಲ್ಲಿನ ಬೌದ್ಧಿಕ ಸ್ವಚ್ಚತೆಗೂ ಕೂಡ ಇಂದು ‘ಸ್ವಚ್ಛ ಭಾರತ ಅಭಿಯಾನ’ ನಡೆಯಬೇಕಿದೆ”.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಭಿಮಾನ ಬರಲೇ ಇಲ್ಲ. ಮುಖ್ಯವಾಗಿ ಮೂರು ಸಲ ನೇರವಾಗಿ ಸೋತು, ಲೆಕ್ಕವಿಲ್ಲದಷ್ಟು ಸಾರಿ ಹಿಂದಿನಿಂದ ಚುರಿ ಹಾಕಲು ಬಂದು ಚಿಂದಿ ಚಿಂದಿಯಾದ ಪಾಕಿಸ್ತಾನದ ಬಗ್ಗೆ ಆಗಾಗ ಒಲವು ತೋರಿಸುತ್ತಿರುವ ಬುದ್ಧಿಜೀವಿಗಳ ಮನಸ್ಥಿತಿ ಈ ಜನ್ಮದಲ್ಲಿ ಸರಿ ಹೋಗುವುದಿಲ್ಲ ಎಂಬುವುದಕ್ಕೆ ಮತ್ತೆ ಅರುಂಧತಿ ರಾಯ್ ಸಾಬೀತು ಮಾಡಿದ್ದಾಳೆ. ಈ ಹಿಂದೆ ಒಮ್ಮೆ ಕಾಶ್ಮೀರದ ಬಗ್ಗೆ ಮಾತನಾಡುತ್ತ “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಆಗಿರಲಿಲ್ಲ” ಎಂದು ತನ್ನ ಮಾನಸಿಕ ಅಸ್ವಸ್ತತೆಯನ್ನು ಪ್ರದರ್ಶಿಸಿದಳೇ ಹೊರತು, ಪಾಕಿಸ್ತಾನ ಯಾವುದರ ಅವಿಭಾಜ್ಯ ಅಂಗವೆಂದು ಹೇಳಲಿಲ್ಲ. ಈಗ ಏಳು ಲಕ್ಷ ಸೈನಿಕರ ಬದಲು ಎಪ್ಪತ್ತು ಲಕ್ಷ ನೇಮಿಸಿದರೂ ಪ್ರತ್ಯೇಕವಾದಿಗಳನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ದಿನಗಳೆದಂತೆ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೊರಟು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ನಗೆಪಾಟಲಿಗೆ ಒಳಗಾಗುತ್ತಿದ್ದಾಳೆ. ಪದೆ ಪದೇ ಪಾಕಿಸ್ತಾನಿಯರನ್ನು ಸಮರ್ಥಿಸುವ ಈಕೆಗೆ ಸಾವಿರಾರು ವರ್ಷದ ಹಿಂದೆ ಈ ಹಿಂದೂ ದೇಶ (ಭಾರತ)ವು ಎಷ್ಟು ವಿಸ್ತೀರ್ಣಗೊಂಡಿತ್ತೆಂಬ ಸಾಮಾನ್ಯ ಜ್ಞಾನವು ಈಕೆಗೆ ಇದ್ದಂತಿಲ್ಲ. ಪಾಕಿಸ್ತಾನದ ಬಗ್ಗೆ ಮಾತನಾಡುವ ಈಕೆಗೆ ಪಾಕಿಸ್ತಾನ, ಅಪಘಾನಿಸ್ತಾನಗಳ ಮೂಲ ನಿವಾಸಿಗಳು ಯಾರು ಎಂಬುದನ್ನು ಒಮ್ಮೆಯೂ ಹೇಳಿಲ್ಲ. ನಿರಂತರವಾಗಿ ಈಕೆ ಪಾಕಿಸ್ತಾನದ ಪ್ರಜೆಯಂತೆ ವರ್ತಿಸುತ್ತ ಬಂದಿದ್ದಾಳೆ. ಮತ್ತಷ್ಟು ಓದು »

1
ಜುಲೈ

ಮಾನವೀಯತೆಯ ಹೊಸ ಮುಖವಾಡ – #notinmyname

– ಪಲ್ಲವಿ ಭಟ್, ಬೆಂಗಳೂರು

ಕಳೆದೊಂದೆರಡು ದಿನಗಳಿಂದ ಫೇಸ್ಬುಕ್ ವಾಲ್ ಗಳಲ್ಲಿ ಹರಿದಾಡುತ್ತಿರುವ ಒಂದು ಹ್ಯಾಷ್ ಟ್ಯಾಗ್ ಬೇಡ ಬೇಡವೆಂದರೂ ನನ್ನ ಗಮನ ಸೆಳೆಯತೊಡಗಿತು. ಕೇರಳದ ಖ್ಯಾತ ನಟಿಯೊಬ್ಬರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದು ಹೀಗೆ “ಸಾಮೂಹಿಕ ಹಿಂಸಾಚಾರ ಮತ್ತು ನಿಮ್ಮ ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಮೌನವನ್ನು ಮುರಿಯುವ ಸಮಯ ಇದು. #notinmyname”. ಯಾರ ಮೇಲೆಯೇ ಆಗಲಿ ದೌರ್ಜನ್ಯ ಒಂದು ನಡೆದರೆ ಅದನ್ನು ಖಂಡಿಸುವವರು ನಾವು ಭಾರತೀಯರು. ಅದು ನಮ್ಮ ಧರ್ಮ ಎಂಬುವುದು ನಮ್ಮ ನಂಬಿಕೆ. ಆದರೆ ಇದೇನಿದು “ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿ” ?? . ಹಿಂಸಾಚಾರವನ್ನು ಖಂಡಿಸುವ ಒಳ್ಳೆ ಮನಸ್ಸಾಗಿದ್ದರೆ “ಅಲ್ಪಸಂಖ್ಯಾತರು” ಎಂಬ ಈ ಪದದ ಅಗತ್ಯವಿಲ್ಲ. ನಾವು ಹಿಂಸಾಚಾರದ ವಿರುದ್ಧ ಎಂದರಷ್ಟೇ ಸಾಕು. ಅಥವಾ ಹಿಂಸಾಚಾರವು ಬರೀ ಅಲ್ಪಸಂಖ್ಯಾತರ ಮೇಲಷ್ಟೇ ನಡೆಯಲು ಸಾಧ್ಯವೇ? ಹಾಗನಿಸುವಂತಿದೆ ಆ ಹೇಳಿಕೆ. ಮತ್ತಷ್ಟು ಓದು »