ಹಣ್ಣಾದ ಬದುಕು; ಸಾಂಸ್ಕೃತಿಕ ರಾಜಕಾರಣದ ಬೆಳಕು
– ಸಂತೋಷ್ ತಮ್ಮಯ್ಯ
ನಾಡಿನ ಖ್ಯಾತ ತತ್ವಶಾಸ್ತ್ರಜ್ಞರೊಬ್ಬರು ಕಲಾವಿಮರ್ಶಕ ಅನಂದ ಕೆಂಟಿಶ್ ಕುಮಾರಸ್ವಾಮಿಯವರನ್ನು ವಿವರಿಸುವುದು ಹೀಗೆ ; ಅಯೋಧ್ಯೆ ಕ್ಷೋಭೆಗೊಂಡಿತ್ತು. ಕೈಕೆಯಿಯ ಕೋಪ ಅರಮನೆಯ ಶಾಂತಿಯನ್ನು ತಿಂದು, ಪಟ್ಟಾಭಿಷೇಕದ ಹರ್ಷ ಕ್ಷಣಮಾತ್ರದಲ್ಲಿ ನೀರುಪಾಲಾಗಿ, ದಶರಥನಿಗೆ ಸಂದಿಗ್ದತೆ ಉಂಟಾಗಿ. ರಾಮನಿಗೆ ಕಾಡಿಗೆ ತೆರಳಲು ಸೂಚಿಸಿ ಆತ ಕುಸಿದು ಬಿದ್ದಿದ್ದ. ರಾಮ ಪಿತೃವಾಕ್ಯಪರಿಪಾಲನೆಗಾಗಿ ಕಾಡಿಗೆ ತೆರಳಿದ. ಇತ್ತ ಕುಸಿದಿದ್ದ ದಶರಥ ಅದೇ ಕೊರಗಿನಿಂದ ಕೊನೆಯುಸಿರೆಳದಿದ್ದ. ಅದೇ ಹೊತ್ತಿಗೆ ಕೈಕೆಯ ಮಗ ಭರತ ಸೋದರ ಶತ್ರುಘ್ನನೊಡನೆ ಕೇಕೆಯ ದೇಶಕ್ಕೆ ಹೋಗಿದ್ದನಲ್ಲ. ಅವರಿಗೆ ತುರ್ತು ಕರೆ ಹೋಯಿತು. ರಾಜಧಾನಿಗೆ ಕೂಡಲೇ ಮರಳಬೇಕೆಂಬ ಕರೆಗೆ ಸೋದರರಿಬ್ಬರೂ ಕುದುರೆಯೇರಿ ಅಯೋಧ್ಯೆಗೆ ದೌಢಾಯಿಸಿ ಬರುತ್ತಿದ್ದರು. ಇನ್ನೇನು ಕತ್ತಲಾಗುತ್ತಿದೆ ಎಂಬಷ್ಟರಲ್ಲಿ ಅವರು ಅಯೋಧ್ಯೆ ಹೊರವಲಯಕ್ಕೆ ಬಂದು ಮುಟ್ಟಿದ್ದರು. ಹೊರವಲಯದಲ್ಲೊಂದು ಭವನ. ಆ ಭವನಕ್ಕೊಬ್ಬ ಕಾವಲುಗಾರ. ಭವನದಲ್ಲಿ ಇದುವರೆಗೆ ಆಗಿಹೋದ ಇಕ್ಷ್ವಾಕು ವಂಶದ ಸಾಮ್ರಾಟರ ಪ್ರತಿಮೆಗಳ ಸಾಲುಗಳು. ಭರತನಿಗೆ ಏನನ್ನಿಸಿತೋ ಏನೊ ಶತ್ರುಘ್ನ ಬಂದದ್ದೇ ಇದೆ ಪೂರ್ವಿಕರಿಗೊಮ್ಮೆ ನಮಸ್ಕರಿಸಿ ಹೊರಡೋಣ ಎಂದ. ಕಾವಲುಗಾರ ದೊಂದಿ ತಂದ. ಸೋದರರು ಭವನ ಹೊಕ್ಕರು. ಉದ್ದಕ್ಕೆ ನಿಂತ ಇತಿಹಾಸಪುರುಷರು. ಅಣ್ಣತಮ್ಮರು ಕೊನೆಯಿಂದ ಅಜ್ಜಂದಿರನ್ನು ನೋಡುತ್ತಾ ಬಂದರು. ಪ್ರತಿಮೆಗಳನ್ನು ನೋಡುತ್ತಾ ಶತ್ರುಘ್ನ ಮೆಲುದನಿಯಲ್ಲಿ ಹೆಸರೆಣಿಸತೊಡಗಿದ, ಅಜ, ರಘು, ದಿಲೀಪ… ಅಷ್ಟರಲ್ಲಿ ಭರತ, ಅಲ್ಲಲ್ಲ ತಪ್ಪುಎಂದು ಮತ್ತೆ ಎಣಿಸಿ ನೋಡಿದ ಆತನೂ ತಪ್ಪಿದ. ದಶರಥನೂ ಕಾಲವಾಗಿ ಪ್ರತಿಮೆಯಾಗಿ ನಿಂತುಬಿಟ್ಟಿದ್ದಾನೆ ಎಂದು ಎಂದು ತಿಳಿಯದ ರಾಜಕುಮಾರರು ಮತ್ತೆ ಮತ್ತೆ ಲೆಕ್ಕ ತಪ್ಪಿದರು. ದೊಂದಿಯೂ ಇತ್ತು, ಬೆಳಕೂ ಇತ್ತು, ಆ ಭವನವನ್ನು ಅವರು ಎಷ್ಟೋ ಭಾರಿ ನೋಡಿದ್ದರು ಕೂಡಾ. ಆದರೂ ಲೆಕ್ಕ ತಪ್ಪಿದರು!
ಈ ಜಿಜ್ಞಾಸೆಯನ್ನು ಬಿಚ್ಚಿಟ್ಟವರು ಆನಂದ ಕೆಂಟಿಶ್ ಕುಮಾರಸ್ವಾಮಿಯವರು ಎಂದರು ಆ ಭಾಷಣಕಾರರು. ಅಂದರೆ ಸನಾತನ ಪರಂಪರೆಯಲ್ಲಿ ಮಾನವ ತದ್ರೂಪನ್ನು ಪ್ರತಿಮೆಯಾಗಿ ಕೆತ್ತುವ ಪರಂಪರೆ ಇರಲಿಲ್ಲ ಎಂಬುದನ್ನು ಆನಂದ ಕುಮಾರಸ್ವಾಮಿಯವರು ಶೋಧಿಸಿದ್ದರು.
ಕಾರ್ಗಿಲ್ ಕಥನವೆಂದರೆ ಅದ್ಯಾವುದೋ ಹಾಲಿವುಡ್, ಬಾಲಿವುಡ್ ಸಿನೆಮಾ ಕಥೆಯಲ್ಲ!
– ಶಿವಾನಂದ ಶಿವಲಿಂಗ ಸೈದಾಪೂರ.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಕಾಮೇಂಟ್ಸ್ ಚಕಮಕಿಗಳನ್ನು ಪ್ರತಿಯೊಬ್ಬರು ನೋಡಿಯೇ ನೋಡುತ್ತೆವೆ. ಸಾಕಷ್ಟು ದುಡ್ಡು ತೆಗೆದುಕೊಂಡು ನಟಿಸುವ ಹೆಸರಿಗೆ ಮಾತ್ರ ಹೀರೊಗಳಾಗಿರುವ ನಟರಿಗೆ ಇಂದು ಪ್ಯಾನ್ಸ್ ಕ್ಲಬ್‍ಗಳು ಬೇಕಾಬಿಟ್ಟಿಯಾಗಿ ಬೆಳೆದಿವೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಮೇಲೆ ಎಗರಾಡುವುದು ಏರಾಡುವುದು ಮಿತಿ ಮಿರಿದೆ. ರೀಲ್ ಕಥೆಯ ನಾಯಕರಿಗೆ ರಿಯಲ್ ಬಿಲ್ಡಪ್ ಅಂತು ಅತಿಯಾಗಿದೆ. ಕಟೌಟ್ ಮೇಲೆ ಬೀಳುವ ಹಾಲಿನ ಕ್ಯಾನ್ ಗಳಿಗೇನು ಕೊರತೆಯಿಲ್ಲ. ಪ್ರತಿಯೊಂದು ಭಾಷೆಯಲ್ಲಿ ವಾರಕ್ಕೆ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಸಿನೇಮಾ ಬಿಡುಗಡೆಯಾದರೂ ಕೂಡ ಸಾಮಾನ್ಯವಾಗಿ ಎಲ್ಲವನ್ನೂ ನೋಡುತ್ತೆವೆ. ಮತ್ತೆ ಮುಂದಿನ ವಾರದ ಹೋಸ ಸಿನೆಮಾ ಬರುವರೆಗೂ ಅದನ್ನು ಮೆಲುಕು ಹಾಕುತ್ತೆವೆ. ಬಿಡುಗಡೆಗೊಂಡ ಸಿನೇಮಾದ ನಾಯಕ, ನಾಯಕಿ, ಕಳನಾಯಕ, ನಿರ್ದೇಶಕ, ನಿರ್ಮಾಪಕನಿಂದ ಹಿಡಿದು ಪೋಷಕ ನಟನವರೆಗೂ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ…! ಮತ್ತಷ್ಟು ಓದು
ಕಾರ್ಗಿಲ್ ಕದನ; ಕಡಲಲ್ಲಿ ಐಎನ್ ಎಸ್ ತಾರಾಗಿರಿ ಕಲರವ
– ಸಂತೋಷ್ ತಮ್ಮಯ್ಯ
ವಿಜಯ ಎಂಬುದೇ ಹಾಗೆ. ಅದಕ್ಕೆ ನಾನಾ ಅರ್ಥಗಳು. ನಾನಾ ಮಜಲುಗಳು. ಅದು ಕಂಡಷ್ಟೇ ಅಲ್ಲ. ವಿಜಯ ಯಾರಿಗೂ ಪುಕ್ಕಟೆಯಾಗಿ ಒಲಿದಿಲ್ಲ. ಜಿದ್ದಿಗೆ ಬೀಳದೆ ಅದು ದಕ್ಕುವುದೂ ಇಲ್ಲ. ಅದರ ಹಿಂದೋಡಿದವರನ್ನು ವಿಜಯ ಪಾತಾಳಕ್ಕೆ ತಳ್ಳಿದ, ಹೇಳಹೆಸರಿಲ್ಲದಂತೆ ಮಾಡಿದ ಉದಾಹರಣೆಗಳಿವೆ. ತಾನೊಲಿಯಲು ನೆಲವನ್ನೂ ಹದಗೊಳಿಸಿ, ಮಾಯಾಮೃಗದಂತೆ ದಿಕ್ಕುತಪ್ಪಿಸಿ ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ತೂಕಕಿಟ್ಟ ನಂತರ ವಿಜಯ ಒಲಿಯುತ್ತದೆ. ಹಾಗಾಗಿ ವಿಜಯಕ್ಕೆ ಮೆಟ್ಟಿಲುಗಳು ಹೆಚ್ಚು. ಎತ್ತರವೂ ಜಾಸ್ತಿ.
ವಿಜಯವೆಂಬುದು ಯಜ್ಞದಂತೆ. ಅದು ಹವಿಸ್ಸನ್ನು ಬೇಡುತ್ತದೆ. ತನ್ನ ಹಾದಿಯಲ್ಲಿ ನೋವನ್ನೂ ಕೊಡುತ್ತದೆ. ಇನ್ನೇನು ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಸಕಾಲವಲ್ಲ ಎಂಬಂತೆ ಮುಂದೋಡುತ್ತದೆ. ವಿಜಯವೆಂಬುದು ಮಾಯೆಯೂ ಹೌದು. ಅದು ರುಚಿ ಹಿಡಿಸುತ್ತದೆ, ಮೋಹಗೊಳಿಸುತ್ತದೆ. ಆದರೆ ಮೋಹದಿಂದಲೇ ವಿಜಯ ಒಲಿಯದು. ಒಲಿದ ವಿಜಯ ಪಡೆದವನನ್ನ್ನೇ ಒರೆಗೆ ಹಚ್ಚುತ್ತದೆ. ಗೆಲುವಿನಿಂದ ಆರ್ಭಟಿಸಿದವನನ್ನು ಕಾಲ ಕೆಳಗೆ ಹೊಸಕಿಹಾಕುತ್ತದೆ. ಆದರೆ ಪ್ರಾಯಾಸದಿಂದ ವಿಜಯಿಯಾದವನನ್ನು, ವಿಜಯದ ತತ್ವವನ್ನು ಕಾಪಿಟ್ಟುಕೊಂಡವನನ್ನು ವಿಜಯವೇ ಆರಾಧಿಸುತ್ತದೆ. ಬಹುಕಾಲ ಆ ವಿಜಯವನ್ನು ಲೋಕ ನೆನಪಿಟ್ಟುಕೊಂಡಿರುತ್ತದೆ.
2004ರಲ್ಲಿ ಆಗಿದ್ದು, 2019ರಲ್ಲಿ ಆಗದಿದ್ದರೆ… ಭಾರತ ತಲೆ ಎತ್ತಿ ನಿಲ್ಲಬಹುದು..!
– ಕೆ ಎಸ್ ರಾಘವೇಂದ್ರ ನಾವಡ,ಹೊರನಾಡು
2004 ನೇ ಇಸವಿ ಕಣ್ಮುಂದೆ ಬರುತ್ತೆ! ಲೋಕಸಭೆಗೆ ಅವಧಿಪೂರ್ವ ಚುನಾವಣೆ ಘೋಷಿಸಿದ ಭಾಜಪಾ ಸರ್ಕಾರ. “ಪ್ರಕಾಶಿಸುತ್ತಿದೆ ಭಾರತ”ಎಂಬ ಭಾಜಪದವರ ಸ್ಲೋಗನ್…
ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ.. ಮತಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ.. ಶತ್ರುಗಳೂ ಒಪ್ಪುವ ಅಟಲ್ ಬಿಹಾರೀ ವಾಜಪೇಯಿಯವರ ಸ್ನೇಹ ಬಂಧನ.ಎಲ್ಲಾ ಮೈತ್ರಿ ಪಕ್ಷಗಳೂ ಮತ್ತೊಮ್ಮೆ ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು.ಎಲ್ಲವೂ ಸರಿಯೇ..!! ವಾಜಪೇಯಿಯವರು ಮತ್ತೊಮ್ಮೆ ಆರಿಸಿಬರಲು ಸಾಕಷ್ಟು ಅಂಶಗಳು ನೆರವಿಗಿದ್ದವು! ಆದರೆ ಬೇಕಾದುದೇ ಇರಲಿಲ್ಲ! ಸ್ವತಃ ವಾಜಪೇಯಿಯವರೇ ಲೋಕಸಭೆಯ ಅವಧಿ ಪೂರ್ವ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದರು.ಆಡಳಿತಾರಂಭದ ದಿನಗಳಲ್ಲಿ ಭಾರತಾದ್ಯಂತ ಇದ್ದ ಕೇಂದ್ರ ಸರ್ಕಾರದ ಪರವಾದ ಅಲೆ ಅಥವಾ “ಆಡಳಿತದ ಪರ ಅಲೆ”ಎಂಬ ಭದ್ರವಾದ ಗೋಡೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಕಾಣತೊಡಗಿದ್ದವು. ಜನ ಬದಲಾವಣೆಯನ್ನು ಬಯಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು! “ಯಾಕೋ ಎಲ್ಲಿಯೋ ಏನೋ ಎಡವಟ್ಟಿದೆ” ಎಂಬುದು ಭಾಜಪಾದ “ಚಿಂತಕರ ಚಾವಡಿ”ಗೆ ಗೊತ್ತಾಗದಿದ್ದರೂ ವಾಜಪೇಯಿಯವರ ಸೂಕ್ಷ್ಮ ಮನಸ್ಸಿಗೆ ಹೊಳೆದು ಬಿಟ್ಟಿತ್ತು.
ನಮ್ಮೂರ ಹಬ್ಬ:- ಕಂಬಳ
ಶ್ರೀಮತಿ. ಶೈನಾ ಶ್ರೀನಿವಾಸ ಶೆಟ್ಟಿ.
ಕುಂದಾಪುರ
ದೂರ ತೀರದ ಕಡಲ ಕಿನಾರೆಯಲ್ಲಿ ಭೋರ್ಗರೆವ ಅಲೆಗಳ ಅಬ್ಬರದಲ್ಲಿ, ತಣ್ಣನೆ ಬೀಸುವ ತಂಗಾಳಿಯಲಿ, ಸುಡುಬಿಸಿಲ ನಡುನಡುವೆ ತಂಪೆರೆವ ಸೋನೆ ಮಳೆ, ಉದ್ದನೆಯ ರಸ್ತೆಯ ಇಕ್ಕೆಲೆಗಳಲಿ ಕಂಗೊಳಿಸುವ ಹಸಿರ ಸಿರಿ, ಹಸಿರು ಸೀರೆ ಉಟ್ಟ ನಾರಿಯಂತೆ ತಳುಕು ಬಳುಕಿನ ವ್ಯಯ್ಯಾರದಲಿ ತನು ಮನಕ್ಕೆ ತಂಪೆರೆವ ನನ್ನೂರು… ಆಹಾ ಹೌದು! ಅದುವೇ ನನ್ನೂರು ಕರಾವಳಿ ಕುಂದಾಪುರ.
ಕಂಬಳವೆಂಬ ನನ್ನೂರ ಹಬ್ಬ :
ನನ್ನೂರು ಹಬ್ಬಗಳ ನಾಡು, ಸಂಪ್ರದಾಯದ ಬೀಡು. ತನ್ನದೇ ಸೊಗಡು ತನ್ನದೇ ಆಚರಣೆಯ ಚೌಕ್ಕಟ್ಟಿನಲ್ಲಿ ನೂರಾರು ಹಬ್ಬ, ಸಾವಿರಾರು ವೈವಿಧ್ಯತೆ, ಲಕ್ಷಾಂತರ ಮನದಲ್ಲಿ ನೆಲೆ ನಿಲ್ಲುವ, ಕೋಟ್ಯಾಂತರ ವರ್ಷದ ಇತಿಹಾಸದ ಈ ಕರಾವಳಿಯನ್ನು “ಪರಶುರಾಮ ಸೃಷ್ಠಿ”ಯೆಂದು ಉಲ್ಲೇಖಿಸಲಾಗಿದೆ. ಮತ್ತಷ್ಟು ಓದು
ನಮ್ಮೂರ ಹಬ್ಬ:- ನಮ್ಮೂರ ತೇರು
– ಸುರೇಖಾ ಭೀಮಗುಳಿ
ಪ್ರತಿ ವರ್ಷ ಮೇ ತಿಂಗಳಲ್ಲಿ ಬೊಮ್ಮಲಾಪುರದಲ್ಲಿ ತ್ರಿಪುರಾಂತಕಿ ಅಮ್ಮನವರ ರಥೋತ್ಸವ! ಅದೊಂದು ಮಧುರ ನೆನಪು… ನೆನಪು ಮಾತ್ರದಿಂದಲೇ ಮನಸ್ಸು ತೇರುಪೇಟೆಯಲ್ಲಿ ಕಳೆದು ಹೋಗುತ್ತದೆ… ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಕಮ್ಮಕ್ಕಿ ನನ್ನ ತವರೂರು. ಸುತ್ತಮುತ್ತಲ ಊರಿಗೆಲ್ಲ ಬೊಮ್ಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಎಂದರೆ ಸಾಮೂಹಿಕ ಹಬ್ಬ. ಊರಿಂದ ಹೊರಬಂದು ಬೆಂಗಳೂರಲ್ಲಿ ನೆಲೆಗೊಂಡ ನಾವು ಮಕ್ಕಳ ಹುಟ್ಟುಹಬ್ಬ ದಿನ ಪೂಜೆಗೆ ಕಿರುಕಾಣಿಕೆ ಸಲ್ಲಿಸಿದ್ದೇವೆ. ನಾವು ಮರೆತರೂ ಆ ದೇವಸ್ಥಾನದಿಂದ ಪ್ರಸಾದ ಬರುತ್ತದೆ. ವರ್ಷದ ರಥೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬರುತ್ತದೆ… ಮತ್ತಷ್ಟು ಓದು
ನಮ್ಮೂರ ಹಬ್ಬ – ಕೆಡ್ಡಸ (ಭೂಮಿ ಋತುಮತಿಯಾಗುವುದು)
– ಭರತೇಶ ಅಲಸಂಡೆಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ
ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು, ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ… ಮತ್ತಷ್ಟು ಓದು
‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”
– ಗೋಪಾಲಕೃಷ್ಣ
‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”
ಮೂರು ವರ್ಷಗಳಲ್ಲಿ ಮೋದಿಯ ಪುಕ್ಸಟ್ಟೆ ಸಾಧನೆಗಳು “ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ..”, “ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ…” , “ದೇಹ ನಿಮ್ಮದು ಚಾಪೇನೂ ನಿಮ್ಮದು, ಯೋಗ ದಿನವೂ ನಿಮ್ಮದು..” , “ಅಕೌಂಟೂ ನಿಮ್ಮದು, ಧನವೂ ನಿಮ್ಮದು..”, “ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ” ಇದಕ್ಕಿಂತಲೂ ತುಟ್ಟಿ/ಬಿಟ್ಟಿ ಯೋಜನೆಗಳಿವೆಯೇ? ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪೋಸ್ಟ್ ಗಳು ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇಶದ ಅಭಿವೃದ್ಧಿಯನ್ನು ಗಮನಿಸುತ್ತಿರುವವರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿರುವುದು ನಿಜ, ಮೋದಿ ಭಕ್ತರಿಗಂತೂ ಮೋದಿ ಹೇಳಿದ್ದು, ಮಾಡಿದ್ದೆಲ್ಲವೂ ಸರಿಯಿರಬಹುದು! ಆದರೆ ಮೋದಿಯನ್ನು ವಿರೋಧಿಸುವವರು ಹಾಗೂ ವಿರೋಧಿಸಲಿಕ್ಕಾಗಿಯೇ ವಿರೋಧಿಸುವವರು ನರೇಂದ್ರ ಮೋದಿಯವರನ್ನು ಪವಾಡ ಪುರುಷನಂತೆ ನೋಡುತ್ತಿರುವುದೇ ಆಶ್ಚರ್ಯ ಉಂಟು ಮಾಡುತ್ತಿದೆ. ಇದಕ್ಕೆ ಮೇಲಿನ ಪೋಸ್ಟ್ ಒಂದು ಚಿಕ್ಕ ನಿದರ್ಶನ ಅಷ್ಟೇ. ಮತ್ತಷ್ಟು ಓದು
ನಮ್ಮೂರ ಹಬ್ಬ- ನುಡಿ ಮತ್ತು ಭೇಟಿ
– ಪ್ರಮೋದ್ ಜತ್ಕರ
ನನ್ನದು ಗುಮ್ಮಟ ನಗರಿ ವಿಜಯಪುರ. ತನ್ನದೇ ಆದ ಕಲಾ ಸ್ವಂತಿಕೆ ಹೊಂದಿರುವಂತಹದ್ದು. ಇಲ್ಲಿ ತಾಲುಕಿಗೊಂದು ಭಾಷೆ, ವಲಯಕ್ಕೊಂದು ಆಚರಣೆ, ಊರಿಗೊಂದು ದೈವ.. ಹೀಗೆ ವೈಶಿಷ್ಟ್ಯವಾದದ್ದು. ಇದು ಕೇವಲ ನಮ್ಮ ಜಿಲ್ಲೆಯ ವೈಶಿಷ್ಟ್ಯವಲ್ಲ ಇಡೀ ಭಾರತದ ವೈಶಿಷ್ಟ್ಯ, ಅದಕ್ಕೆಂದೇ ನಾವು ವಿವಿಧತೆಯನ್ನು ಪ್ರದರ್ಶಿಸುವವರು… (ಏಕತೆ ಎಂದು ಹೇಳಲಾರೆ!).
ನನ್ನೂರು ವಿಜಯಪುರದ ಇಂಡಿ ತಾಲ್ಲೂಕಿನ ಚಡಚಣ ವಲಯದಲ್ಲಿ ಬರುತ್ತದೆ. ನನ್ನೂರು ಒಂದು ಚಿಕ್ಕ ಹಳ್ಳಿ, ನಿವರಗಿ ಅಂತ ಅದರ ಹೆಸರು, ಭೀಮೆಯ ತಂಪಿನಲ್ಲಿ ಬೆಳೆದ ಊರು. ಅವಳೇ ನಮಗೆ ದೈವಗಳ ದೈವ.. ಭೀಮೆ ದಾಟಿದರೆ ಮಹಾರಾಷ್ಟ್ರ. ನಮ್ಮ ಸಂಪ್ರದಾಯಗಳು ಸಾಮಾನ್ಯವಾಗಿ ಮಹಾರಾಷ್ಟ್ರದ ಸಂಪ್ರದಾಯಗಳಿಗೆ ಹೋಲುತ್ತವೆ.
ನಮ್ಮಲ್ಲಿನ ಪ್ರಮುಖ ಸಂಪ್ರದಾಯಗಳಲ್ಲಿ “ನುಡಿ” ಮತ್ತು “ಭೇಟಿ” ಎಂಬ ಎರಡು ಸಂಪ್ರದಾಯಗಳು ಬಹು ಮುಖ್ಯವಾದವು. ಮತ್ತಷ್ಟು ಓದು
ನಮ್ಮೂರ ಹಬ್ಬ – ಋಷ್ಯಶೃಂಗೇಶ್ವರನ ರಥೋತ್ಸವ
– ಅಪರ್ಣ ಜಿ. ಸಿರಿಮನೆ
ಹಬ್ಬಗಳು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಪಾರಂಪರಿಕವಾಗಿ ನಡೆದುಕೊಂಡು ಬರುವ ಊರ ಹಬ್ಬಗಳು ಸಾಮಾಜಿಕ ಒಗ್ಗಟ್ಟನ್ನು ಪ್ರತಿನಿಧಿಸುವುದರಲ್ಲಿ ಎರಡು ಮಾತಿಲ್ಲ. ಮಲೆನಾಡಿನ ದಟ್ಟ ಹಸಿರಿನ ನಡುವೆ ರಮಣೀಯತೆಯನ್ನೇ ಹಾಸಿ ಹೊದ್ದಿರುವ ಒಂದು ಪುಟ್ಟ ಗ್ರಾಮ ‘ಕಿಗ್ಗಾ’ ನಮ್ಮೂರು. ಪ್ರಾಕೃತಿಕ ಸೌಂದರ್ಯದಿಂದಲೇ ಜನರನ್ನು ತನ್ನೆಡೆಗೆ ಸೆಳೆಯುವ ನಮ್ಮೂರು ಮಳೆದೇವರೆಂದೇ ಹೆಸರಾಗಿರುವ ಋಷ್ಯಶೃಂಗೇಶ್ವರ ನೆಲೆಸಿರುವ ಪುಣ್ಯಕ್ಷೇತ್ರ. ಪ್ರತಿವರ್ಷವೂ ನಡೆಯುವ ಋಷ್ಯಶೃಂಗೇಶ್ವರನ ರಥೋತ್ಸವ ನಮ್ಮೂರಿನ ಪ್ರಮುಖ ಹಬ್ಬ. ಮತ್ತಷ್ಟು ಓದು