ವಿಷಯದ ವಿವರಗಳಿಗೆ ದಾಟಿರಿ

Archive for

29
ಡಿಸೆ

ಸಂವಿಧಾನ ತಿದ್ದಿದ್ದ ಇಂದಿರಾ ಅಂಬೇಡ್ಕರರಿಗಿಂತ ಶ್ರೇಷ್ಠರಾಗಿದ್ದರೇ?

– ಸಂತೋಷ್ ತಮ್ಮಯ್ಯ 
ದೇಶ ಕಂಡ ಶ್ರೇಷ್ಠ ಕಾನೂನು ಪರಿಣಿತ ಮತ್ತು ಸಂವಿಧಾನ ತಜ್ಞ ಕೆ.ವಿ ಕೃಷ್ಣ ಅಯ್ಯರ್ ಒಮ್ಮೆ ಸಂಸದರೇ ಸೇರಿದ್ದ ಸಭೆಯೊಂದರಲ್ಲಿ “ಎಲ್ಲಕ್ಕೂ ಒಂದು ಕೊನೆ ಎಂಬುದಿರುತ್ತದೆ. ಸಂವಿಧಾನದ ಕೆಲವು ವಿಧಿಗಳು ಇಂದು ಕಾಲಬಾಹಿರವಾಗಿವೆ. ಅವು ಬದಲಾಗಲೇ ಬೇಕು. ಸಂವಿಧಾನ ಬದಲಾಗಲೇ ಬಾರದು ಎನ್ನುವಷ್ಟು ಪವಿತ್ರ ವಸ್ತುವೇನಲ್ಲ. ಅವು ಸಮಾಜದಲ್ಲಿ ಒಂದು ಪರಿಕರವೇ ಹೊರತು, ಸಮಾಜವನ್ನು ನಿರ್ಧರಿಸುವ ಸಾಧನಗಳಲ್ಲ” ಎಂದಿದ್ದರು . ಆಂದು ಆಯ್ಯರ್ ಮಾತಿಗೆ ನೆರದಿದ್ದ  ಸಂಸದರೆಲ್ಲಾ ಕುತ್ತಿಗೆ ನೋಯುವಷ್ಟು  ತಲೆದೂಗಿದ್ದರು. ಅವರಿಗೆಲ್ಲಾ ಅಯ್ಯರ್ ಮಾತು ಅರ್ಥವಾಗಿತ್ತೋ ಅಥವಾ ಬಾಯಿಬಿಟ್ಟರೆ ಬಣ್ಣಗೇಡು ಎಂದು ಸುಮ್ಮನಾಗಿದ್ದರೋ ಗೊತ್ತಿಲ್ಲ. ಅಂತೂ ಆ ಮಾತು ಹೆಚ್ಚು ಚರ್ಚೆಯಾಗಲಿಲ್ಲ.
ಇಂದಿರಾ ಕಾಲದ ರಾಜಕಾರಣಿ, ಮುತ್ಸದ್ಧಿ ಚಿದಂಬರಂ ಸುಬ್ರಮಣಿಯಮ್ ಕೂಡಾ “ಸಂವಿಧಾನ ಪರಂಪರೆಯ ಬೆಳಕಿನಲ್ಲಿ ರೂಪುಗೊಳ್ಳಬೇಕಿತ್ತು. ಅದು ಪರಿಷ್ಕರಣೆಗೆ ಒಳಪಡಲೇಬೇಕು. ಈಗಿನ ಸಂವಿಧಾನ ಬುದ್ಧಿವಂತರೆಲ್ಲರನ್ನೂ ರಾಜಕಾರಣಿಗಳಾಗಿ ಮತ್ತು ರಾಜಕಾರಣಿಗಳ ಗುಲಾಮರನ್ನಾಗಿಸಲು ಮಾತ್ರ ಶಕ್ತವಾಗಿದೆ” ಎಂದು ಕಟುವಾಗಿ ಹೇಳಿದ್ದರು. ಆಗಲೂ ಅದು ಚರ್ಚೆಯಾಗಲಿಲ್ಲ. ಏಕೆಂದರೆ ಅಂದು ಅವರ ಮಾತಿನ ಅರ್ಥವನ್ನು ಗ್ರಹಿಸುವವರ ಸಂಖ್ಯೆ ಅತ್ಯಂತ ಕಡಿಮೆಯಿತ್ತು. ಮತ್ತು ಅರ್ಥವಾದ ಬುದ್ಧಿವಂತರೆಲ್ಲರೂ ರಾಜಕಾರಣಿಗಳ ಅಂಬಾಸೆಡರ್ ಕಾರಿನ ಡೋರು ತೆಗೆಯುವುದರಲ್ಲಿ ಧನ್ಯತೆ ಕಾಣುತ್ತಿದ್ದರು.
ಅದಕ್ಕೂ ಬಹಳ ಹಿಂದೆ ಥಿಯೋಡರ್ ಷೇ ಎಂಬ ಜರ್ಮನ್ ಚಿಂತಕ ತನ್ನ ಲೆಗಸಿ ಆಫ್ ಲೋಕಮಾನ್ಯ ಎಂಬ ಪುಸ್ತಕದಲ್ಲಿ  “ಭಾರತೀಯ ಸಂವಿಧಾನದಲ್ಲಿ ಭಾರತೀಯತೆಯೆಂಬುದೇ ಇಲ್ಲ. ಅದು ಅನ್ಯಾನ್ಯ ದೇಶಗಳ ಸಂವಿಧಾನಗಳ ಚೂರುಪಾರುಗಳನ್ನು ಜೋಡಿಸಿ ಹೊಲಿದ ಒಂದು ಕಲಾಕೃತಿ” ಎಂದು ಬರೆದಿದ್ದ. ವಿಚಿತ್ರವೆಂದರೆ ಆಗಲೂ ವಿದೇಶಿಯನ ಮಾತಿಗೆ ದೇಶದಲ್ಲಿ ಎದುರಾಡಿದವರಿರಲಿಲ್ಲ.
ಆದರೆ ಮೊನ್ನೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ, ಬದಲಿಸಲೆಂದೇ ನಾವಿದ್ದೇವೆ ಎಂದಾಗ ನಾಮುಂದು ತಾಮುಂದೆಂಬಂತೆ ಟೀಕೆಗಳ ಮಹಾಪೂರ ಹರಿಯತೊಡಗಿತು. ಎಲ್ಲರೂ ಸಂವಿಧಾನ ಪರಿಷ್ಕರಣೆಯ ಮಾತಾಡುವುದು ನೇರ ಅಂಬೇಡ್ಕರರಿಗೇ ಮಾಡಿದ ಅವಮಾನ, ಫ್ಯಾಸಿಸ್ ಶಕ್ತಿ ಮತ್ತು ಮನುವಾದಿ ಮನಸ್ಸುಗಳ ಹುನ್ನಾರ, ಆರೆಸ್ಸೆಸ್ಸಿನ ಅಜೆಂಡಾ ಎಂದು ಅರಚಲಾರಂಭಿಸಿದರು. ಹಾಗಾದರೆ ಸಂವಿಧಾನ ಚರ್ಚೆಗೆ ಅತೀತವೇ? ಅದರ ಬಗ್ಗೆ ಮಾತಾಡಲೇಬಾರದೇ? ಅದೇನು ಕುರಾನೇ? ಅದರ ಕರ್ತೃ ಪ್ರವಾದಿಯೇ? ತಮಾಷೆಯೆಂದರೆ ಅಂಬೇಡ್ಕರರೇ ಸಂವಿಧಾನವನ್ನು ಸ್ವೀಕರಿಸುತ್ತಾ “ಇದುವರೆಗೆ ನಮ್ಮ ಕುಂದುಕೊರತೆ, ಲೋಪದೋಷಗಳಿಗೆ ಬ್ರಿಟಿಷರನ್ನು ದೂರಬಹುದಿತ್ತು. ಆದರೆ ಇನ್ನು ನಮಗೆ ನಾವೇ ಹೊಣೆಗಾರರು. ಸಂವಿಧಾನ ಕೂಡಾ ಪುನರವಲೋಕಿಸಬಲ್ಲ ಸಂಗತಿ” ಎಂದಿದ್ದರು. ಅಂದರೆ ಸಾಕ್ಷಾತ್ ಅಂಬೇಡ್ಕರರೇ ಸಂವಿಧಾನವನ್ನು ದೇವಲೋಕದ ಸರಕೆಂದೂ ತಾನೊಬ್ಬ ಪ್ರವಾದಿಯೆಂದೂ  ಅಂದುಕೊಂಡಿರಲಿಲ್ಲ. ಆದರೆ ಅದನ್ನೇ ಅನಂತ್‌ಕುಮಾರ್ ಹೆಗಡೆ ಹೇಳಿದರೆ ವಿವಾದ!
ಅಷ್ಟಕ್ಕೂ ಅವರ ಮಾತಲ್ಲಿ ತಪ್ಪೇನಿತ್ತು? ಅನಂತ ಕುಮಾರ್ ಹೆಗಡೆ ಮೇಲೆ ಕೀಳು ಭಾಷೆ ಉಪಯೋಗಿಸಿದವರ ಜೊತೆಗೆ ಹೆಗಡೆ ಮಾತಿಗೆ ಅಂತರ ಕಾಯ್ದುಕೊಂಡವರು ಸಂವಿಧಾನವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಎನ್ನುವ ಸಂಶಯ ಬರುತ್ತಿದೆ.  ಸಂವಿಧಾನವನ್ನು ನಾವು ಸ್ವೀಕರಿಸಿದಾಗ ಅದರಲ್ಲಿ 395 ವಿಧಿಗಳಿದ್ದವು. ಅವುಗಳಲ್ಲಿ ಸುಮಾರು 250 ವಿಧಿಗಳು 1935 ರ ಭಾರತ ಸಂವಿಧಾನ ಅಧಿನಿಯಮದಿಂದ ನೇರವಾಗಿ ತೆಗೆದುಕೊಂಡವುಗಳು. ಮೂರನೆ ಅಧ್ಯಾಯದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕಾ ಸಂವಿಧಾನದಿಂದ ನೇರವಾಗಿ ಭಟ್ಟಿ ಇಳಿಸಲಾಗಿತ್ತು. ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ  ನಿಯಮಗಳನ್ನು ಬ್ರಿಟಿಷ್ ವೆಸ್ಟ್ ಮಿನಿಸ್ಟರ್ ನಿಂದ ನೇರವಾಗಿ ಎಗರಿಸಲಾಗಿತ್ತು. ನಾಲ್ಕನೆ ಅಧ್ಯಾಯದ ರಾಜ್ಯನೀತಿ ತತ್ವಗಳು ಐರಿಷ್ ಸಂವಿಧಾನದ ಕಾರ್ಬನ್ ಕಾಪಿಗಳು. ಅಂದರೆ ಭಾರತೀಯ ಸಂವಿಧಾನದಲ್ಲಿರುವ ಬಹುತೇಕ ನಿಯಮಗಳು ಇಲ್ಲಿಗೆ ಒಗ್ಗದ ಸರಕುಗಳು. ಅಂದಿನ ತುರ್ತು ಸಂವಿಧಾನ ನಿರ್ಮಾತೃರಿಂದ ಆ ಕೆಲಸ ಮಾಡಿಸಿತ್ತು. ಸ್ವತಃ ಅಂಬೇಡ್ಕರರಿಗೂ ಈ ನಿಯಮಗಳು ಸುಧೀರ್ಘಾವಧಿಗೆ ಸಲ್ಲುವ ಸಂಗತಿಗಳಲ್ಲ ಎಂದೂ ತಿಳಿದಿತ್ತು. ಏಕೆಂದರೆ ಅಂಬೇಡ್ಕರರೇನೂ ಕಾಂಗ್ರೆಸಿಗರಂತೆ ದಡ್ಡಶಿಖಾಮಣಿಗಳಾಗಿರಲಿಲ್ಲ. ಪರಕೀಯ ವಿಧಿಗಳನ್ನು ಅಳವಡಿಸುವ ಹೊತ್ತಲ್ಲಿ ಅಂಬೇಡ್ಕರರು ಸಾಧ್ಯವಾದಷ್ಟೂ ಪರಂಪರೆಯ ಪಾಕ, ವಾಸ್ತವ ಪ್ರಜ್ಞೆ ಮತ್ತು ದೂರದೃಷ್ಟಿತ್ವದಿಂದ ಸಂವಿಧಾನಕ್ಕೆ ಅಂತಿಮ ರೂಪವನ್ನು ಕೊಟ್ಟಿದ್ದರು. ಹಾಗಾಗಿ ಸಂವಿಧಾನ ರಚನೆಗೆ ಮೀಸಲಿಟ್ಟ ಸಮಯಕ್ಕಿಂತಲೂ ಅದರ ಚರ್ಚೆಯೇ ಹೆಚ್ಚಿನ  ಸಮಯ ತೆಗೆದುಕೊಂಡಿತು. ಕರಡು ಪ್ರತಿಯ ಮೇಲಿನ ಆ ಚರ್ಚೆ ಅದೆಷ್ಟು ದೀರ್ಘಕಾಲದವರೆಗೆ ನಡೆಯಿತೆಂದರೆ ಸ್ವತಃ ಅಂಬೇಡ್ಕರರೇ ಅದನ್ನು ವಿಳಂಭ ನೀತಿ ಎಂದು ಬೇಸರಿಸಿ ಸಮಿತಿಯಿಂದ ಹೊರನಡೆದುಬಿಟ್ಟಿದ್ದರು.

ಮತ್ತಷ್ಟು ಓದು »

25
ಡಿಸೆ

ಪ್ರಶ್ನೆ ರಾಹುಲ್ ಪಟ್ಟಾಭಿಷೇಕದ್ದಲ್ಲ; ಕಾಂಗ್ರೆಸ್ಸಿನ ನಿಗೂಢ ನಡೆಗಳದ್ದು

– ರಾಕೇಶ್ ಶೆಟ್ಟಿ

ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿಸುವಾಗ,ವಯೋವೃದ್ಧ ಕೇಸರಿಯವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎನ್ನುವುದು ಈಗ ಇತಿಹಾಸ. ಆದರೆ ಕೇಸರಿಯವರ ರಾಜಕೀಯ ಅಧ್ಯಾಯ ತೀರಾ,ಇಂದಿರಾ ಗಾಂಧಿಯವರ ಕಾಲದಲ್ಲಿ ದಲಿತ ನಾಯಕ ಜಗಜೀವನ್ ರಾಮ್ ಅವರ ರಾಜಕೀಯ ಜೀವನವನ್ನು ಮುಗಿಸಿದಷ್ಟು ಕ್ರೂರವಾಗಿರಲಿಲ್ಲವೆಂಬುದೇ ಸಮಾಧಾನ!

ದೇವೇಗೌಡರ ನೇತೃತ್ವದ ಸರ್ಕಾರವನ್ನು ವಿನಾಕಾರಣ ಬೀಳಿಸಿದ್ದ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆ ಗೆಲ್ಲಲು ನಾಯಕರೇ ಇರಲಿಲ್ಲವೆಂಬ ನೆಪವೊಡ್ಡಿ ಸೋನಿಯಾ ಅವರನ್ನು ಮುನ್ನೆಲೆಗೆ ತರಲಾಯಿತು. ರಾಜೀವ್ ಗಾಂಧಿಯವರ ಕೊಲೆಯ ನಂತರ ದೇಶವನ್ನು,ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿದ್ದ ಪಿವಿ ನರಸಿಂಹರಾವ್ ಕಾಂಗ್ರೆಸ್ಸಿನಲ್ಲಿ ಯಾರಿಗೂ ಆಗ ಬೇಡವಾಗಿದ್ದರು. ಕಾರಣ ಸ್ಪಷ್ಟ, ನೆಹರೂ ಕುಟುಂಬದ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ, ನಕಲಿ ಗಾಂಧಿ ಕುಟುಂಬದ ಮುಖ ಸ್ತುತಿ ಮಾಡುವ ಗುಲಾಮರು ಇಷ್ಟವಾಗುತ್ತಾರೆಯೇ ಹೊರತು ಸ್ವಂತ ಬುದ್ಧಿಶಕ್ತಿ,ಚಿಂತನೆಯುಳ್ಳ ನಾಯಕರಲ್ಲ. ಇಂದಿರಾ ಕಾಲದಲ್ಲಿ ಜಗಜೀವನ್ ರಾಮ್,ಮೊರಾರ್ಜಿ ದೇಸಾಯಿಯಂತವರನ್ನು ಹಣಿಯಲಾಗಿತ್ತು. ಸೋನಿಯಾ ಕಾಲಕ್ಕೆ ನರಸಿಂಹರಾವ್,ಕೇಸರಿಯವರು ನೆಹರೂ ಕುಟುಂಬದ ರಾಜಕೀಯ ಬೇಟೆಗೆ ಬಲಿಯಾದರು.ಕೇಸರಿಯವರನ್ನು ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷ  ಹುದ್ದೆಯಿಂದ ಇಳಿಸಿ, ಸೋನಿಯಾ ಅವರಿಗೆ ಪಟ್ಟ ಕಟ್ಟಲು,ಸೋನಿಯಾರ ಟೀಮು ಸೇರಿಕೊಂಡಿದ್ದ ಪ್ರಣಬ್ ಮುಖರ್ಜಿ,ಶರದ್ ಪವಾರ್ ಅವರಂತವರಿಗೂ ಮುಂದೊಂದು ದಿನ ಕೇಸರಿಯವರಿಗೆ ಸಿಕ್ಕ ಅದೇ ರುಚಿಯ ಸ್ವಾದವೂ ಸಿಕ್ಕಿತು. ಶರದ್ ಪವಾರ್, ಸಂಗ್ಮಾ, ತಾರೀಖ್ ಅನ್ವರ್ ಅವರನ್ನು ಪಕ್ಷದಿಂದ ಹೊರಹಾಕಿದರು. ಮುಂದೊಂದು ದಿನ ಅಡ್ಡಿಯಾಗಬಹುದಾಗಿದ್ದ ರಾಜೇಶ್ ಪೈಲಟ್,ಮಾಧರಾವ್ ಸಿಂಧಿಯಾ ರಸ್ತೆ ಮತ್ತು ವಿಮಾನಾಪಘಾತಗಳಲ್ಲಿ ಸತ್ತರು.ಈ ರೀತಿ ವಿಮಾನಾಪಘಾತ/ರಸ್ತೆ ಅಪಘಾತಗಳಲ್ಲಿ ಸಾಯುವವರ ಪಟ್ಟಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಲ್ಲಿ ಸಿಗುತ್ತದೆ.ಆದರೆ ಹಾಗೆ ಸಿಗುವ ಪಟ್ಟಿ ಇದೇ ನೆಹರು ಕುಟುಂಬದ ಆಸುಪಾಸಿನಲ್ಲಿ ಸುತ್ತುತ್ತದೆ. ನಿಗೂಢತೆ ಮತ್ತು ನೆಹರೂ ಕುಟುಂಬಕ್ಕೂ ಅದೇನೋ ಒಂದು ನಂಟು.

ಮತ್ತಷ್ಟು ಓದು »

13
ಡಿಸೆ

ಲೈಂಗಿಕ ದೌರ್ಜನ್ಯ,ಬುದ್ಧಿಜೀವಿಗಳು ಮತ್ತು ಐಡಿಯಾಲಜಿ

– ಅಶ್ವಿನಿ ಬಿ ದೇಸಾಯಿ ಮತ್ತು ಚೈತ್ರ ಎಂ.ಎಸ್

ಆರೋಹಿ ಸಂಶೋಧನಾ ಸಂಸ್ಥೆ, ಜಯನಗರ, ಬೆಂಗಳೂರು

ಹಾಲಿವುಡ್‍ನ ನಿರ್ದೇಶಕ ಹಾರ್ವೆ ವೇನ್‍ಸ್ಟೀನ್‍ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಈ ಕಾರಣಕ್ಕಾಗಿ ‘MeToo’ Hasgtag ಅಡಿಯಲ್ಲಿ ಹೊರಬರುತ್ತಿರುವ ದೌರ್ಜನ್ಯಗಳ ಕಥೆಗಳು ಈಗ ಜಾಗತಿಕ ಸುದ್ದಿಯಾಗಿದೆ. ಈ ಪ್ರತಿಕ್ರಿಯೆಗಳು ಒಳ್ಳೆಯ ಬೆಳವಣಿಗೆಯೆಂದು ಭಾರತದ ಸ್ತ್ರೀವಾದಿ ಮತ್ತು ಪ್ರಗತಿಪರರ ಅಭಿಪ್ರಾಯವಾಗಿದೆ. ಈ ನಡುವೆ, ‘MeToo’ ಚಳವಳಿಯ ಭಾಗವಾಗಿ  ರಾಯಾ ಸರ್ಕಾರ್ ಎಂಬ ವಿದ್ಯಾರ್ಥಿನಿಯೊಬ್ಬಳು ಕೆಲವು ಭಾರತೀಯ ಪ್ರಾಧ್ಯಾಪಕರನ್ನು ಲೈಂಗಿಕ ಕಿರುಕುಳದಂಥ ಕೃತ್ಯಗಳಲ್ಲಿ ಆರೋಪಿಗಳೆಂದು ಗುರುತಿಸಿದ್ದಾಳೆ. ಈ ಪಟ್ಟಿಯಲ್ಲಿ ಜೆಎನ್‍ಯು, ಜಾಧವಪುರ ವಿಶ್ವವಿದ್ಯಾನಿಲಯಗಳಂಥ ಸಂಸ್ಥೆಗಳಿಂದ ಹಿಡಿದು, ಚಿಂತಕರಾದ ಕೌಶಿಕ್ ಬಸು, ಸದಾನಂದ ಮೆನನ್, ದೀಪೇಶ್ ಚಕ್ರವರ್ತಿಯವರಿಂದ ಪಾರ್ಥ ಚಟರ್ಜಿಯವರೆಗೆ ಅನೇಕರ ಹೆಸರುಗಳಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಆರೋಪಿಗಳು ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು, ಆದ್ದರಿಂದ ಲೈಂಗಿಕ ದೌರ್ಜನ್ಯದ ಸಮಸ್ಯೆಯೇ ಜಾತಿವ್ಯವಸ್ಥೆಯ ಇನ್ನೊಂದು ರೂಪವೆಂದು ವಾದಿಸಿದ್ದಾರೆ. ಮರುಕ್ಷಣ ಮಾಲತಿ ಕುಮಾರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವ ದಲಿತ-ಬಹುಜನ ಅಧ್ಯಾಪಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಕಾಂಚ ಇಳಯ್ಯರಿಂದ ಹಿಡಿದು ಅನೇಕ ದಲಿತ ಚಿಂತಕರ ಹೆಸರು ಸೇರಿಕೊಂಡಿದೆ. ಚಿಂತಕರನೇಕರು ಈ ಪಟ್ಟಿಯನ್ನು ಇದು ಮೇಲ್ಜಾತಿಯ ಹುನ್ನಾರವೆಂದು ಚರ್ಚಿಸಿದ್ದೂ ಆಗಿದೆ.

ಮತ್ತಷ್ಟು ಓದು »

13
ಡಿಸೆ

ಬುದ್ಧಿಜೀವಿಗಳು ಹಾಗೂ ಪೌರಾಣಿಕ ವ್ಯಕ್ತಿಗಳು

– ವಿನಾಯಕ ವಿಶ್ವನಾಥ ಹಂಪಿಹೊಳಿ

ಈ ಲೇಖನವು ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಹರಿದು ಬಂದಿರುವ ಪೌರಾಣಿಕ ಕಥೆಗಳಲ್ಲಿ ಕಂಡು ಬರುವ ವ್ಯಕ್ತಿಗಳ ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವದನ್ನು ಸಮಂಜಸವಾಗಿ ವಿವರಿಸುವ ಒಂದು ಚಿಕ್ಕ ಪ್ರಯತ್ನವಾಗಿದೆ. ಬೇರೆ ಬೇರೆ ಪೌರಾಣಿಕ ವ್ಯಕ್ತಿಗಳ ಕುರಿತು ಬುದ್ಧಿಜೀವಿಗಳು ಏಕೆ ಬೇರೆ ಬೇರೆ ನಿಲುವುಗಳನ್ನು ತಾಳುತ್ತಾರೆ ಹಾಗೂ ಒಂದೇ ಪೌರಾಣಿಕ ವ್ಯಕ್ತಿಯ ಕುರಿತು ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಂತೆ ಕಾಣುವ ಹೇಳಿಕೆಗಳನ್ನು ಏಕೆ ಕೊಡುತ್ತಾರೆ ಎನ್ನುವದನ್ನು ಇಲ್ಲಿ ವಿವರಿಸಲು ಯತ್ನಿಸಲಾಗಿದೆ. ಮತ್ತಷ್ಟು ಓದು »

11
ಡಿಸೆ

ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ!

– ಸುಜಿತ್ ಕುಮಾರ್

ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರಬಿದ್ದು ಮುಂದೆ ಇನ್ನೇನೂ ಸಾಧ್ಯವಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚೆವಿಂಗ್-ಗಮ್ ಗಳನ್ನು ಮಾರುತ್ತಿದ್ದ ಈ ಪೋರ ‘ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು’ ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು! ಮತ್ತಷ್ಟು ಓದು »

6
ಡಿಸೆ

ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!

– ಸುಜಿತ್ ಕುಮಾರ್

ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾದ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ತಿಂಗಳು ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ  ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ ಹಾಕುವ ಒಂತಿನಿತು ಕಾನೂನು ನಿಮಗೆ ಬೇಡವೆನಿಸುವುದೇ? ವೈದ್ಯ ಹೇಳಿದ್ದೆ ರೋಗ, ನೀಡಿದ್ದೆ ಮದ್ದು ಎಂಬಂತಾಗಿರುವ ಸಂದರ್ಭದಲ್ಲಿ, ರೋಗಿಗಳ/ಜನತೆಯ ಹಿತದೃಷ್ಟಿಯಿಂದ ತರಲೆತ್ನಿಸುತ್ತಿರುವ ಕಾಯಿದೆಯ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರದವರೇ ಒಬ್ಬರು ತಕ್ಷಣಕ್ಕೆ ಯಾವುದಾದರೊಂದು ಪ್ರೈವೇಟ್ ಆಸ್ಪ್ರತ್ರೆಗೆ ಸೇರಿ ನಂತರ ಹಣ ಸಾಲುತ್ತಿಲ್ಲವೆನ್ನುತ್ತ ಜಿಲ್ಲೆಯ ಅಥವಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದು ಪಡುವ ವಿಪರ್ಯಾಸವನ್ನು ಕಣ್ಣು ಮುಚ್ಚಿಕೊಂಡು ನೀವು ಸಹಿಸುತ್ತೀರಾ? ಅದೇ ಪ್ರೈವೇಟ್ ಆಸ್ಪತ್ರೆಯಲ್ಲಿ ಸತ್ತ ಒಂದು ಬಡ ಹೆಣವನ್ನು ಹಿಂದಿರುಗಿಸಲೂ ಹಣದ ಬಿಲ್ಲನ್ನೇ ಮುಂದಿಟ್ಟು ಸತಾಯಿಸುವ ಕಟು ಹೃದಯಿಗಳನ್ನು ನೀವು ಹೊತ್ತು ಮೆರವಣಿಗೆ ಮಾಡುತ್ತೀರಾ? ಯಾರೋ ಪುಡಾರಿ ರಾಜಕಾರಣಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಅಂತಹ ಸಂಸ್ಥೆಗಳನ್ನು ವಿರೋಧಿಸಲಾರ ಎಂಬುದಾದರೆ ನೀವುಗಳು ಸಹ ‘ಕುರಿಗಳು ಸಾರ್ ಕುರಿಗಳು’ ಎಂಬಂತೆ ಆತನನ್ನೇ ಹಿಂಬಾಲಿಸುತ್ತೀರಾ? ಹೇಳಿ. ಇಂದು ಒಂದು ಸಾಧಾರಣ ಜ್ವರಕ್ಕೆ ಪ್ಯಾರಾ-ಅಸಿಟಮೋಲ್  ಮಾತ್ರೆಯನ್ನು ಕೊಡಲೇ ಸಾವಿರ ಸಾವಿರ ರೂಪಾಯಿಗಳನ್ನು ಪೀಕುವ ಆಸ್ಪತ್ರೆಗಳು ದಿನಕ್ಕೆ ಇನ್ನೂರು ರೂಪಾಯಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಅಂತಹ ಆಸ್ಪತ್ರೆಗಳ ಹತ್ತಿರವೂ ಸುಳಿಯದಂತೆ ಮಾಡುತ್ತಿರುವುದು ಎಷ್ಟು ಮಟ್ಟಿನ ನ್ಯಾಯ? ಇವರಿಗೆ ಜಾಗ, ಓದು, ಕಟ್ಟಡ ಎಲ್ಲವೂ ಬಡ ಜನರ ದುಡ್ಡಿನಲ್ಲಿ ನಡೆಯುವ ರಾಜ್ಯಸರ್ಕಾರದ್ದೇ ಬೇಕು ವಿನಃ ಅಂತಹ ಬಡ ಜನರ ಶೂಶ್ರುಷೆಯಲ್ಲ. ದಿನಪೂರ್ತಿ ಇಂಗ್ಲಿಷಿನ ಪೋಷಾಕುಗಳನ್ನೇ ತೋರುತ್ತ 1 ನಿಮಿಷ ತೋರ್ಪಡಿಕೆಗೆ ಏನೋ ಎಂಬಂತೆ ಕನ್ನಡ ಕನ್ನಡ ಎಂದು ಬೊಬ್ಬೆಯೊಡೆಯುವ ಹಲವರು ಇದೇ ಕನ್ನಡ ನಾಡಿನಲ್ಲಿ ಅವೇ ಇಂಗ್ಲಿಷ್ ಔಷಧಗಳು ತಮ್ಮ ರಣಬೆಲೆಯ ಬಲದಲ್ಲಿ ನಮ್ಮವರನ್ನು ಕಬ್ಬಿನ ಜಲ್ಲೆಯಂತೆ ಅರೆಯುತ್ತಿರುವುದು ನಿಮಗೆ ತಪ್ಪು ಎನಿಸುವುದಿಲ್ಲವೇ? ಮತ್ತಷ್ಟು ಓದು »

5
ಡಿಸೆ

ಮಾರ್ಕ್ಸ್ ವಾದ ಮತ್ತು ನೆಹರೂವಾದ ಗಾಂಧಿವಾದವನ್ನು ಕೊಂದಿತೇ?

ಡಾ|| ಬಿ.ವಿ ವಸಂತ ಕುಮಾರ್
ಕನ್ನಡ ಪ್ರಾಧ್ಯಾಪಕರು
ಮಹಾರಾಣಿ ಮಹಿಳಾ ಕಾಲೇಜು
ಮೈಸೂರು

ಇಂದು ಕೇರಳ ಹಾಗೂ ಕರ್ನಾಟಕದಲ್ಲಿ ಕ್ರಮವಾಗಿ ಮಾರ್ಕ್ಸ್ ವಾದಿ ಹಾಗೂ ನೆಹರೂವಾದೀ ಪ್ರಭುತ್ವಗಳು ಆಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಸೈದ್ಧಾಂತಿಕವಾದ ಕಾರಣಗಳಿಗಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರೊಟ್ಟಿಗೆ ಕೇರಳ ಹಾಗೂ ಕರ್ನಾಟಕದ ಪಿ.ಎಫ್.ಐ ಸಂಘಟನೆಯು ಮುಸ್ಲಿಂ ಮೂಲಭೂತವಾದಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಸಂಗವಿರುವ ಸಂಘಟನೆಗಳ ಜೊತೆಗೆ ಹೆಸರು ತುಳುಕು ಹಾಕಿಕೊಂಡಿದೆ. ಈ ನಡುವೆ ದಕ್ಷಿಣ ಭಾರತದ ಹೆಸರಾಂತ ನಟ ಕಮಲಹಾಸನ್ ಹಿಂದೂ ಭಯೋತ್ಫಾದನೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಮತ್ತೊಬ್ಬ ಕನ್ನಡದ ನಟ ಪ್ರಕಾಶ ರೈ ಸಮರ್ಥಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಖಂಡಿಸಿ ಹೋರಾಟಕ್ಕಿಳಿದಿದ್ದಾರೆ. ಮತ್ತಷ್ಟು ಓದು »

4
ಡಿಸೆ

ಕಥೆ – ಕವನ ಸ್ಪರ್ಧೆ ( ಪತ್ರಿಕಾ ಪ್ರಕಟಣೆ )

ಸಹಾಯಕ ನಿಲಯ ನಿರ್ದೇಶಕರು ಮತ್ತು ಕಾರ್ಯಕ್ರಮ ಮುಖ್ಯಸ್ಥರು,
ಆಕಾಶವಾಣಿ, ಮಂಗಳೂರು – 575 004.
ದೂರವಾಣಿ: (0824) 2211382

ಮಂಗಳೂರು ಆಕಾಶವಾಣಿ ನಿಲಯವು ಅನಂತಪ್ರಕಾಶ, ಕಿನ್ನಿಗೋಳಿ ಮತ್ತು ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ಕನ್ನಡ ಕತೆ ಮತ್ತು ಕವನ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ವಿಜೇತರಿಗೆ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗುವುದು. ಪ್ರತಿ ವಿಭಾಗದಲ್ಲಿ ಮೂರು, ಅಂದರೆ ಒಟ್ಟು ಆರು ಬಹುಮಾನಗಳು. ಮತ್ತಷ್ಟು ಓದು »

1
ಡಿಸೆ

ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಯಾರು ಗೊತ್ತೇ CM ಸಿದ್ದರಾಮಯ್ಯನವರೇ?

– ರಾಕೇಶ್ ಶೆಟ್ಟಿ

ಒಂದು ಸುಳ್ಳನ್ನು ಸತ್ಯವಾಗಿಸಲು ಏನು ಮಾಡಬೇಕು? ಮತ್ತೊಂದು,ಮಗದೊಂದು ಸುಳ್ಳಿನ ಸೌಧವನ್ನು ಕಟ್ಟುತ್ತಾ ಹೋಗಬೇಕು. ರಾಜ್ಯದ ತುಘಲಕ್ ದರ್ಬಾರಿನಲ್ಲಿ ನಡೆಯುತ್ತಿರೋದು ಅದೇ. ಶಾಂತವಾಗಿದ್ದ ಕರ್ನಾಟಕದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಮೊದಲು ಕೈಹಾಕಿದ್ದು ಟಿಪ್ಪು ಯುನಿವರ್ಸಿಟಿ ನಿರ್ಮಾಣದ ಯೋಜನೆಯ ಮೂಲಕ. ತೀವ್ರ ಪ್ರತಿರೋಧ ಬಂದ ನಂತರ ಅದು ಮೂಲೆ ಸೇರಿತ್ತು. ಸುಲ್ತಾನ್ ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ, ಮತ್ತೆ ಟಿಪ್ಪುವಿನ ಘೋರಿ ತೆಗೆಯಲು ನಿರ್ಧರಿಸಿದರು.ಬದುಕಿದ್ದಾಗಲೇ ಲಕ್ಷಾಂತರ ಜನರ ಮಾರಣಹೋಮ,ಮತಾಂತರ ಮಾಡಿದವನ ಆತ್ಮ ಶತಮಾನಗಳ ನಂತರ ಹೊರ ಬಂದರೆ ಸುಮ್ಮನಿದ್ದೀತೆ? ಮಡಿಕೇರಿಯಲ್ಲಿ ಟಿಪ್ಪು ಆಧುನಿಕ ಸೈನಿಕರಿಗೆ ಕುಟ್ಟಪ್ಪ ಬಲಿಯಾದರು. ಕಳೆದ ಮೂರು ವರ್ಷಗಳಿಂದ ನವೆಂಬರ್ ತಿಂಗಳು ಹತ್ತಿರ ಬಂದರೆ, ಕರ್ನಾಟಕದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಟಿಪ್ಪು ಸುಲ್ತಾನನಿಂದ ಹಿಡಿದು ಸಿದ್ಧರಾಮಯ್ಯನವರವರೆಗೂ ಈ ಭೀತಿಯ ವಾತಾವರಣ ಸೃಷ್ಟಿ ನಿಂತಿಲ್ಲ.ಸಜ್ಜನರ ಜಯಂತಿ ಮಾಡುತ್ತೇವೆಂದರೆ ಈ ನೆಲದ ಜನ ಆತನ ಜಾತಿ,ಧರ್ಮದ ಲೆಕ್ಕವಿಡದೆ ಸಂಭ್ರಮಿಸುತ್ತಾರೆ. ಸಂತ ಶಿಶುನಾಳ ಶರೀಫಜ್ಜ ನಮ್ಮ ಪಾಲಿಗೆ “ಸಂತ’ನಾಗಿಯೇ ಮುಖ್ಯವಾಗುತ್ತಾನೆಯೇ ಹೊರತು, ಷರೀಫ್ ಅನ್ನುವ ಕಾರಣಕ್ಕಲ್ಲ. ಇಂತಹ ಸೌಹಾರ್ದಕ್ಕೆ ಕೊಳ್ಳಿಯಿಟ್ಟವರು ಸಿದ್ಧರಾಮಯ್ಯನವರು. ಟಿಪ್ಪುವೆಂಬ ಮತಾಂಧನನ್ನು, ಸತ್ಯಸಂಧ,ಜನಾನುರಾಗಿ ಅಂತೆಲ್ಲ ಬಿಂಬಿಸಲು ಹೊರಟು ನಿಂತರು. ಉಂಡ ಮನೆಗೆ ದ್ರೋಹ ಬಗೆಯುವ ಬುದ್ಧಿಜೀವಿಗಳ ಸುಳ್ಳು ಇತಿಹಾಸದ ನಡುವೆ ಅವಿತುಕೊಂಡು, ಟಿಪ್ಪು ಸುಲ್ತಾನ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂದು ಖುದ್ಧು ಕರ್ನಾಟಕ ಸರ್ಕಾರವೇ ನಾಚಿಕೆ ಬಿಟ್ಟು ಸುಳ್ಳು ಜಾಹಿರಾತು ನೀಡಿತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅದನ್ನೇ ಟ್ವೀಟು ಮಾಡಿದರು.

ಹೌದೇ? ನಿಜವಾಗಿಯೂ ಟಿಪ್ಪು ಸುಲ್ತಾನ ಮೊದಲ ಸ್ವಾತಂತ್ರ್ಯ ಹೋರಾಟಗಾರನೇ? ಆತನೊಬ್ಬ ರಾಜನಲ್ಲವೇ? ರಾಜನೊಬ್ಬ ಪರಕೀಯರೊಂದಿಗೆ ಹೋರಾಡಿದ್ದನ್ನೇ ಸ್ವಾತಂತ್ರ್ಯ ಸಂಗ್ರಾಮವೆನ್ನುವುದಾದರೇ, ಈ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಂತ ಇದ್ದರೆ ಅದು ಉಳ್ಳಾಲದ ರಾಣಿ ಅಬ್ಬಕ್ಕ ಮಾತ್ರವೇ.ರಾಣಿ ಅಬ್ಬಕ್ಕ ಪೋರ್ಚುಗೀಸರೊಂದಿಗೆ ಯುದ್ಧಕ್ಕಿಳಿದಾಗ, ಟಿಪ್ಪು ಸುಲ್ತಾನ ಬಿಡಿ ಅವರಪ್ಪ ಹೈದರನೇ ಹುಟ್ಟಿರಲಿಲ್ಲ.ಟಿಪ್ಪುವನ್ನು ಹಾಡಿ ಹೊಗಳಿದರೆ ಮುಸ್ಲಿಮರ ವೋಟು ಬುಟ್ಟಿಯಲ್ಲಿ ಬಂದು ಬೀಳುತ್ತದೆ. ರಾಣಿ ಅಬ್ಬಕ್ಕ ಮತ್ತವರ ವೀರ ಮೊಗವೀರ ಪಡೆಯ ಕತೆ ಹೇಳಿದರೆ ಸಿದ್ಧರಾಮಯ್ಯನವರಿಗೇನು ಲಾಭ ಹೇಳಿ? ಹಾಗಾಗಿಯೇ  ಖುದ್ದು ಮುಖ್ಯಮಂತ್ರಿ ಮತ್ತವರ ರಾಜ್ಯ ಸರ್ಕಾರ ಇತಿಹಾಸಕ್ಕೆ ಅಪಚಾರವೆಸಗಿರುವುದು.ಟಿಪ್ಪು ಸುಲ್ತಾನ, ಸುಲ್ತಾನ್ ಸಿದ್ಧರಾಮಯ್ಯನವರ ಬಗ್ಗೆ ಬರೆದು ಸಮಯ ವ್ಯರ್ಥ ಮಾಡುವ ಬದಲು, ಉಳ್ಳಾಲದ ವೀರರಾಣಿ ಅಬ್ಬಕ್ಕನ ಬಗ್ಗೆ ಹೇಳುತ್ತೇನೆ. ಆ ನಂತರ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಪಟ್ಟ ಯಾರಿಗೆ ದಕ್ಕಬೇಕೆನ್ನುವುದನ್ನು ಓದುಗರೇ ನಿರ್ಧರಿಸಲಿ…

ಸ್ವಾತಂತ್ರ್ಯದ ದೀಪ ಹಚ್ಚಿದ ಮೊದಲ ಭಾರತದ ನಾರಿಯ ನೆನೆಯುತ್ತ… ಮತ್ತಷ್ಟು ಓದು »