ವಿಷಯದ ವಿವರಗಳಿಗೆ ದಾಟಿರಿ

Archive for

30
ಜನ

ಮರೆತರೆ ಕ್ಷಮಿಸಿದಂತೆ ಆದೀತು,ಎಚ್ಚರ!

– ಭರತ್ ಶಾಸ್ತ್ರೀ

ಈ ವರ್ಷದ ಗಣರಾಜ್ಯೋತ್ಸವಕ್ಕೆ ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಪೋಲಿಸರ ಸರ್ಪಕಾವಲಿನಲ್ಲಿ ಧ್ವಜಾರೋಹಣ ನಡೆಸಲಾಯಿತು, ಜತೆಗೆ ಶ್ರೀನಗರದ ಲಾಲ್ ಚೌಕ್ ದಲ್ಲಿ ಧ್ವಜ ಹಾರಿಸಲಿಲ್ಲ ಎಂಬ ಕಳವಳಕಾರಿ ಸುದ್ದಿಯೂ ಬಂತು. ಈ ಹಿನ್ನೆಲೆಯಲ್ಲಿ ಜನವರಿ 24, 2010 ರ “ದಿ ಪಯೊನೀರ್” ಪತ್ರಿಕೆಯಲ್ಲಿ ಖ್ಯಾತ ಅಂಕಣಕಾರ ಕಾಂಚನ್ ಗುಪ್ತಾ ಅವರ To forget would be to forgive ಎಂಬ ಮನಕಲಕುವ ಲೇಖನದ ಸಾರಾಂಶವನ್ನು ಓದುಗರಿಗೆ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. 60 ವರ್ಷ ತುಂಬಿದ ನಮ್ಮ ಗಣರಾಜ್ಯದಲ್ಲಿ ಇಂತಹ ದೌರ್ಜನ್ಯ ನಮ್ಮ ಮಾಧ್ಯಮಗಳ ಕಣ್ಣಿಗೆ ಏಕೆ ಕಾಣುವುದಿಲ್ಲ ಎಂಬ ನನ್ನ ಹತಾಶೆಯನ್ನು ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಮತ್ತಷ್ಟು ಓದು »

29
ಜನ

ಸೈಮನ್ ಅಯೋಗಕ್ಕೆ ತೊಡೆ ತಟ್ಟಿದ ಪಂಜಾಬಿನ ಕೇಸರಿ.

– ಶಿವಾನಂದ ಶಿವಲಿಂಗ ಸೈದಾಪೂರ

ಪಂಜಾಬ್‍ದ ಕೇಸರಿ ಎಂದೇ ಪ್ರಸಿದ್ದರಾದ ಲಾಲಾ ಲಜಪತ್ ರಾಯರು 1865 ರ ಜನೇವರಿ 28 ರಂದು ಪಂಜಾಬ್‍ ನ ಮುನ್ಷಿ ರಾದಾಕೃಷ್ಣ ಆಜಾದ್ ಮತ್ತು ಗುಲಾಬ್ ದೇವಿಯರ ಮಗನಾಗಿ ಜನಿಸಿದರು. ಸ್ವತಂತ್ರ ಹೋರಾಟದ ದಿಕ್ಕನ್ನೇ ಬದಲಿಸಿದ ಒಂದೇ ಹೆಸರಿನಿಂದ ಮೂವರು ಜನ ಗುರುತಿಸಿಕೊಂಡ “ಲಾಲಬಾಲಪಾಲ್” ರಲ್ಲಿ ಇವರು ಒಬ್ಬರು.

1905 ರ ವರೆಗೂ ಕಾಂಗ್ರೇಸ್‍ನ ನೀತಿಯಿಂದಾಗಿ ಮಂದಗತಿಯಲ್ಲಿಯೇ ಸಾಗುತ್ತಿದ್ದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚನ್ನು ಉದ್ದೀಪನಗೊಳಿಸಿದವರಲ್ಲಿ ಇವರು ಒಬ್ಬರು. ಪ್ರಖರ ವಾಗ್ಮಿಯಾದ ಇವರು ತಮ್ಮ ಭಾಷಣಗಳಲ್ಲಿ “ಜಗತ್ತಿನ ಇತಿಹಾಸ ರೂಪಗೊಂಡಿದ್ದೇ ರಕ್ತದಿಂದ. ನಮ್ಮ ಮಾತೃಭೂಮಿ ನಮ್ಮ ರಕ್ತವನ್ನು ಅಪೇಕ್ಷಿಸುತ್ತಾಳೆ. ರಾಷ್ಟ್ರಕ್ಕಾಗಿ ಅದನ್ನು ನೀಡಿಯೇ ಅಮರರಾಗೋಣ”. ಎಂದು ಸದಾಕಾಲ ಭಾರತೀಯ ಕ್ಷಾತ್ರ ಪರಂಪರೆಯನ್ನು ಎಚ್ಚರಗೊಳಿಸುತಿದ್ದರು. ಮಂದಗತಿಯಲ್ಲಿ ಸಾಗುತಿದ್ದ ಹೋರಾಟಕ್ಕೆ “ನಾವು ಒಂದು ಸಾಮ್ರಾಜ್ಯದ ಪ್ರಜೆಗಳು, ಭಿಕ್ಷುಕರಲ್ಲ. ಹೋರಾಟದ ಈ ಪ್ರಜ್ಞೆ ನಮ್ಮಲ್ಲಿರಬೆಕಾದದ್ದು ಅಗತ್ಯ. ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪ್ರಜೆಗಳು ನಾವಾಗಿರಬೇಕು. ಒಂದು ದೃಢ ನಿಲುವನ್ನು ತಳೆದು ಅದಕ್ಕೆ ಅಂಟಿಕೋಳ್ಳಬೇಕು” ಎಂದು ಹೇಳುತಿದ್ದರು. “ಈ ಭೂಮಿಯ ಮೇಲೆ ಸೊಂಕಿರುವುದು ನಮ್ಮ ಪೂರ್ವಜರ ರಕ್ತ. ನಾವು ಅದರ ಮೇಲೆ ಬದುಕುತಿದ್ದೇವೆ. ಈ ಭೂಮಿ ನಮ್ಮದು ಇಲ್ಲವೇ ದೇವರದ್ದು” ಎಂದು ನಿರಂತರವಾಗಿ ಒತ್ತಿ ಒತ್ತಿ ಹೇಳಿದರು. ಮತ್ತಷ್ಟು ಓದು »

28
ಜನ

ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೇ ಪ್ರಶ್ನಿಸಬಹುದಾದರೆ ಡಾರ್ವಿನ್ ನ ವಿಕಾಸವಾದವನ್ನೇಕಲ್ಲ?

– ಸುಜಿತ್ ಕುಮಾರ್

ವರ್ಷ ಕ್ರಿಸ್ತ ಶಕ 1917. ಸಾಪೇಕ್ಷತಾ ಸಿದ್ಧಾಂತವೆಂಬ (Theory of Relativity) ಮಹಾನ್ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ್ದ ಐನ್ಸ್ಟೀನ್ ಎಂದರೆ ಇಡೀ ವಿಶ್ವವೇ ತಲೆಬಾಗುತಿದ್ದ ಕಾಲ. ಆನೆ ನಡೆದಿದ್ದೆ ದಾರಿ ಎಂಬಂತೆ ಅಂದು ಐನ್ಸ್ಟೀನ್ ಮಂಡಿಸುತಿದ್ದ ಸಿದ್ಧಾಂತಗಳೆಲ್ಲವೂ ಸಂಶೋಧನಾ ವಲಯದಲ್ಲಿ ಅಲ್ಲಿಯವರೆಗೂ ನಂಬಿಕೊಂಡು ಬಂದಿದ್ದ ವೈಜ್ಞಾನಿಕ ಸೂತ್ರಗಳನೆಲ್ಲವನ್ನೂ ತಲೆಕೆಳಗಾಗಿಸುತ್ತಿದ್ದವು. ವಿಜ್ಞಾನವೆಂದರೆ ಹಾಗೆಯೆ ಅಲ್ಲವೇ ಮತ್ತೆ? ಹೀಗೆ ಅಣು, ಪರಮಾಣು, ಭೂಮಿ, ಸೌರಮಂಡಲ, ಜಗತ್ತು ಎಂಬ ಸೂಕ್ಷ್ಮದಿಂದಿಡಿದು ಸಮಗ್ರದವರೆಗೂ ಆತನ ಸಂಶೋಧನೆಗಳು ಜರುಗುತ್ತಿದ್ದವು. ಅಂತಹದೇ ಸಂಶೋಧನೆಗಳಲ್ಲಿ ವಿಶ್ವದ ರಚನೆಯ ಸಂಶೋದನೆಯೂ ಕೂಡ ಒಂದು. ಐನ್ಸ್ಟೀನ್ನ ಪ್ರಕಾರ ಸಕಲ ವಿಶ್ವದ (ಬ್ರಹ್ಮಾಂಡ) ಆಕಾರವು ಜಡ ವಸ್ತುವಿನಂತೆ ಸ್ಥಿರವಾಗಿದ್ದೂ ಗೋಳಾಕಾರದ ರಚನೆಯನ್ನು ಹೊಂದಿದೆ ಎಂಬುದಾಗಿತ್ತು (Static Universe). ಆದರೆ ಅಷ್ಟೊತ್ತಿಗಾಗಲೇ ಕೆಲ ವಿಜ್ಞಾನಿಗಳು ವಿಶ್ವವು ಸ್ಥಿರವಾಗಿರದೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ ಎಂಬ ವಾದವನ್ನು ಮಂಡಿಸಿರುತ್ತಾರೆ. ಅದನ್ನು ಸಾಧಿಸಿ ತೋರಿಸುವ ಸನಿಹದಲ್ಲೂ ಇರುತ್ತಾರೆ. ಆದರೆ ಐನ್ ಸ್ಟೀನಿನ್ನ ಸ್ಥಿರವಾದದ ನಂತರ ಅವರೆಲ್ಲರ ವಾದಗಳು ಕೊಂಚ ಮಂಕಾಗತೊಡಗುತ್ತವೆ. ಅಂದಿನ ವಿಜ್ಞಾನ ವಲಯ ಕ್ರಮೇಣವಾಗಿ ಐನ್ಸ್ಟೀನ್ ನ್ನಿನ Static Universe ವಾದವನ್ನು ಒಪ್ಪಿಕೊಳ್ಳತೊಡಗಿತು. ಅದು ವರ್ಷ 1929. ಅಮೇರಿಕಾದ ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ವಿಶ್ವದ ರಚನೆಯ ಬಗ್ಗೆ ಐನ್ಸ್ಟೀನ್ ನ್ನಿನ ವಾದಕ್ಕೆ ವಿರುದ್ಧವಾಗಿರುವ ಸಿದ್ಧಾಂತವೊಂದನ್ನು ಮಂಡಿಸುತ್ತಾನೆ ಅಲ್ಲದೆ ಅದನ್ನೂ ಸಾಧಿಸಿಯೂ ತೋರುತ್ತಾನೆ. ಆತನ ಪ್ರಕಾರ ಗ್ಯಾಲಕ್ಸಿಗಳ (ತಾರಾಗಣ) ದೂರ ಅವುಗಳ ಸ್ಥಾನಪಲ್ಲಟದೊಟ್ಟಿಗೆ ನೇರ ಸಂಬಂಧವನ್ನು ಹೊಂದಿರುತ್ತವೆ ಎಂಬುದಾಗಿರುತ್ತದೆ. ಅರ್ಥಾತ್ ಪ್ರಸ್ತುತ ಕಾಣಸಿಗುವ ಗ್ಯಾಲಕ್ಸಿಗಳು ದೂರಸರಿಯುತ್ತಿರುವುದು ವಿಶ್ವವು ಹಿಗ್ಗುತ್ತಿದೆ ಎಂಬುದಾಗಿರುತ್ತದೆ. ಹಬಲ್ನ ಸಿದ್ದಾಂತ ನಿಜವಾದ ಸುದ್ದಿಯನ್ನು ಕೇಳಿದ ಕೂಡಲೇ ಐನ್ಸ್ಟೀನ್ ತನ್ನ Static Universe ಸಿದ್ದಾಂತವನ್ನು ಕೈಬಿಡುತ್ತಾನೆ ಅಲ್ಲದೇ ಮುಂದೊಂದು ದಿನ ಆತ ತನ್ನ ಜೀವನದಲ್ಲಿ ಜರುಗಿದ ಅತಿ ದೊಡ್ಡ ಪ್ರಮಾದಗಳಲ್ಲಿ Static Universe ಸಿದ್ಧಾಂತವೂ ಒಂದು ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಮತ್ತೊಮ್ಮೆ ವಿಜ್ಞಾನವೆಂಬುದು ನಿಂತ ನೀರಲ್ಲ ಎಂಬುದು ಸಾಬೀತಾಗುತ್ತದೆ. ಮತ್ತಷ್ಟು ಓದು »

18
ಜನ

ಅನಂತಕುಮಾರ್ ಹೇಳಿದ್ದರಲ್ಲೇನು ತಪ್ಪಿದೆ?

– ಜೆಬಿಆರ್ ರಂಗಸ್ವಾಮಿ

ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದೆ. ಯಾವ context ನಲ್ಲಿ ಯಾಕಾಗಿ ಆ ಮಾತುಗಳನ್ನಾಡಿದ್ದಾರೆ ? ಅದನ್ನೂ ಆಲಿಸಿದೆ. ಅವರು ಉದ್ದೇಶಿಸಿ ಹೇಳಿದ ಮಾತುಗಳಲ್ಲಿ ಅಪರಾಧವೇನಿದೆ ? ಅನ್ನಿಸಿತು‌. ಮತ್ತೊಮ್ಮೆ ಎಲ್ಲ ಛಾನಲ್ಗಳಲ್ಲಿ ಅವರು ಆಡಿದ ಮಾತುಗಳನ್ನು ಗ್ರಹಿಸಲು ಯತ್ನಿಸಿದೆ. ಕಾವ್ಯಾನಂದರ ( ಕುವೆಂಪು ಅಲ್ಲ ) ಮೊದಲು ನೀನು ಮಾನವನಾಗು ಎಂಬುದನ್ನು ಉಲ್ಲೇಖಿಸಿ ಪ್ರಾಸಂಗಿಕವಾಗಿ ಮಾತನಾಡಿದ್ದಾರೆಯೇ ಹೊರತು, ಆ ಮಾತುಗಳನ್ನು ಅವಹೇಳನ ಮಾಡಿದ್ದಾರೆ ಅನ್ನಿಸಲಿಲ್ಲ. ಕಾವ್ಯಾನಂದರನ್ನು ಟೀಕಿಸಲಿಲ್ಲ. ಬುದ್ದಿಜೀವಿಗಳು ಎಂದೊಡನೆ ‘ಪುಸ್ತಕ ಬರೆವ ಎಲ್ಲರೂ’ ಅಂದುಕೊಳ್ಳಬೇಕಿಲ್ಲ. ಆ ಹೆಸರಿನಲ್ಲಿ ವ್ಯಾಪಾರ ಮಾಡುವ ಗೋಸುಂಬೆಗಳು, ದುರ್ಲಾಭ ಪಡೆದುಕೊಳ್ಳುವ ವಂಚಕರು; ಫೋನು, ಫ್ಯಾನು, ಗೂಟದ ಕಾರಿನ ಸವಲತ್ತಿಗಾಗಿ ಹಾತೊರೆವ ಅಪ್ರಾಮಾಣಿಕರ ಗುಂಪನ್ನು ಉದ್ದೇಶಿಸಿ ಹೇಳಿದ ಮಾತುಗಳು ಎಂದು ಯಾರಿಗಾದರೂ ಗೊತ್ತಾಗುತ್ತದೆ. ಬುದ್ದಿಜೀವಿಗಳ ಸೋಗಿನಲ್ಲಿ ಪರಾನ್ನಪುಷ್ಟರಾಗಿರುವ ಗಂಜಿಗಿರಾಕಿಗಳನ್ನು ಎಲ್ಲ ಕಡೆಯೂ ನಾವು ದಿನವೂ ನೋಡುತ್ತಿಲ್ಲವೇ ? ಮತ್ತಷ್ಟು ಓದು »

9
ಜನ

ಕೊಳಕು ಪ್ಯಾಂಟಿನಲ್ಲಿದ್ದ ಹರಿದ ನೋಟು …

– ಸುಜಿತ್ ಕುಮಾರ್

ಅದೊಂದು ದೊಡ್ಡ ವೇದಿಕೆ. ವ್ಯಕ್ತಿಯೊಬ್ಬ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ಕಿವಿತಮಟೆಯೇ ಉದುರುವಂತೆ ಅರಚುತಿದ್ದ. ಏಳಿಗೆ ಎಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಇಂತಹ ಬಿಟ್ಟಿ ಭಾಷಣವನ್ನು ಕೇಳುವುದು ಮಾತ್ರವೆಂದೇ ಅಂದುಕೊಂಡಿದ್ದ ಸಾವಿರಾರು ಜನ ಆತನ ಒಂದೊಂದು ಮಾತಿಗೂ ‘ಓ…’ ಎನ್ನುತ್ತಾ, ಶಿಳ್ಳೆಯೊಡೆಯುತ್ತ, ಬೊಬ್ಬೆಯಾಕುತ್ತಾ ಕುಣಿದಾಡುತಿದ್ದರು. ನೆರೆದಿದ್ದ ಜನಸ್ತೋಮದಲ್ಲಿ ಅಪ್ಪನೂ ಒಬ್ಬನಾಗಿರುವಾಗ ಮನೆಯಲ್ಲಿನ ಮಕ್ಕಳು ಪೋಲಿ ಬೀಳುವ ಮೊದಲ ದಿನಕ್ಕೆ ನಾಂದಿಯನ್ನು ಹಾಡಿದ್ದರು. ತನ್ನ ಗೂಡು ಪೆಟ್ಟಿಗೆಯ ಡಬ್ಬದಿಂದ ಬೀಡಿಯ ಕಟ್ಟು, ಬೆಂಕಿಯಪೊಟ್ಟಣವನ್ನು ಯಾವುದೇ ಭಾವಗಳಿಲ್ಲದೆ ಮಕ್ಕಳಿಗೆ ಕೊಟ್ಟ ಗೂಡಂಗಡಿಯ ತಾತ ಚಡ್ಡಿ ಹಾಕಿರುವ ಅವುಗಳಿಂದ ಪಡೆದ ಹರಿದ ಐವತ್ತು ರೂಪಾಯಿಗಳಿಗೆ ಚಿಲ್ಲರೆಯನ್ನು ಹಿಂದುರಿಗಿಸುವ ಮುನ್ನತಪ್ಪು ಲೆಕ್ಕವನ್ನೇನಾದರೂ ಹೇಳಿ ಒಂದೆರೆಡು ರೂಪಾಯಿ ಲಪಟಾಯಿಸುವುದರ ಬಗ್ಗೆ ಆಲೋಚಿಸುತ್ತಿದ್ದನೇ ವಿನಹ ಎಳೆಯ ವಯಸ್ಸಿಗೆ ಬೀಡಿಯ ಮೋಹಕ್ಕೆ ಬಿದ್ದಿರುವ ಆ ಕುಡಿಗಳಿಗೆ ಗದರಿಸುವ ಗುರುತರ ಕಾರ್ಯವನ್ನು ನಿಭಾಯಿಸಲಿಲ್ಲ. ಬೀಡಿಯ ನಂತರ ಕೊನೆಗೊಂದು ಸಿಗರೇಟಿಗೂ ಬೇಕಿದ್ದ ಹಣವಷ್ಟನ್ನೇ ಅಪ್ಪನ ಪ್ಯಾಂಟಿನ ಜೇಬಿನಿಂದ ಎಗರಿಸಿಕೊಂಡು ಬಂದಿದ್ದ ಮಕ್ಕಳು ಅರ್ವತ್ತು ವಯಸ್ಸಿನ ತಾತಪ್ಪನ ಕುತಂತ್ರವನ್ನು ಸಫಲವಾಗಲು ಬಿಡುತ್ತಾರೆಯೇ?! ಮತ್ತಷ್ಟು ಓದು »

6
ಜನ

ಸಂಘಟನೆಯನ್ನು ನಿಷೇಧಿಸಬಹುದು.ಆದರೆ ಮನಸ್ಥಿತಿಯನ್ನು ಏನು ಮಾಡುವುದು?

– ರಾಕೇಶ್ ಶೆಟ್ಟಿ

ಸಂಘಟನೆಯನ್ನು ನಿಷೇಧಿಸಬಹುದು.ಆದರೆ,ಮನಸ್ಥಿತಿಯನ್ನು ಏನು ಮಾಡುವುದು? ಇಂತಹದ್ದೊಂದು ಪ್ರಶ್ನೆಯನ್ನು ಫೇಸ್ಬುಕ್ಕಿನಲ್ಲಿ ಗೆಳೆಯ ಸಂದೀಪ್ ಕೇಳಿದ್ದರು.ಅವರ ಪ್ರಶ್ನೆಯಿದ್ದಿದ್ದು  Ban PFI ಎಂಬ ಹೋರಾಟದ ಕುರಿತು. ವಾಜಪೇಯಿಯವರ ಕಾಲದಲ್ಲಿ ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ಆಮೇಲೇನಾಯ್ತು? ರಕ್ತಬೀಜಾಸುರರಂತೆ ನಾನಾ ಹೆಸರು,ಸಂಘಟನೆಗಳನ್ನು ಮಾಡಿಕೊಂಡು ಇಸ್ಲಾಮೀಕರಣದ ತಮ್ಮ ಅಜೇಂಡಾವನ್ನು ಇವರು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಸಿಕೊಂಡು ಬಂದರು.ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ದೇಶದಲ್ಲಿ ನಡೆದ ಬಾಂಬ್ ಸ್ಪೋಟದ ಆರೋಪಿಗಳು ಒಂದೋ ನಿಷೇಧಿತ ಸಿಮಿಯ ಕಾರ್ಯಕರ್ತರಾಗಿದ್ದವರು ಅಥವಾ ಹೊಸತೊಂದು ಸಂಘಟನೆಯ ಬ್ಯಾನರಿನಡಿಯಲ್ಲಿ ಸಿಮಿಯ ಕಾರ್ಯವನ್ನೇ ಮುಂದುವರೆಸಿದ್ದವರು.ಅಂದರೆ ಒಂದು ವಿಷಯ ಸ್ಪಷ್ಟವಾಗಿದೆ. ಸಂಘಟನೆ ನಿಷೇಧವಾದರೂ, ಹೆಸರು ಬದಲಾದರೂ ಅವರ “ಉದ್ದೇಶ” ಬದಲಾಗಲಿಲ್. ಏಕೆ? ಈ ಪ್ರಶ್ನೆಗೆ ಉತ್ತರ ಡಾ.ಬಿ.ಆರ್ ಅಂಬೇಡ್ಕರ್ ಅವರ “Pakistan or Partition of India” ಪುಸ್ತಕದಲ್ಲಿ ಸಿಗುತ್ತದೆ. ಆ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಲ್ಲ,ಅವೆರಡರ ಜೊತೆಗೆ ಮುಖ್ಯವಾಗಿ,ಇಸ್ಲಾಮ್ ಹಾಗೂ ಭಾರತೀಯ ಮುಸ್ಲಿಂರ ಮನಸ್ಥಿತಿಯ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ.

ಇಂತಹ ಸಂಘಟನೆಗಳ ಬಹುಮುಖ್ಯ ಉದ್ದೇಶ,ಒಂದು ದೇಶವನ್ನು ದಾರ್-ಉಲ್-ಅರ್ಬ್ ನಿಂದ ದಾರ್-ಉಲ್-ಇಸ್ಲಾಮ್ ಮಾಡುವುದೇ ಆಗಿರುತ್ತದೆ. ಏನಿದು ದಾರ್-ಉಲ್-ಅರ್ಬ್/ದಾರ್-ಉಲ್-ಇಸ್ಲಾಮ್? ಅಂಬೇಡ್ಕರ್ ಅವರ ಮಾತನ್ನೇ ಕೋಟ್ ಮಾಡುತ್ತೇನೆ. “… According to Muslim Canon Law the world is divided into two camps, Dar-ul-lslam (abode of Islam), and Dar-ul-Harb (abode of war). A country is Dar-ul-lslam when it is ruled by Muslims. A country is Dar-ul-Harb when Muslims only reside in it but are not rulers of it. That being the Canon Law of the Muslims, India cannot be the common motherland of the Hindus and the Musalmans. It can be the land of the Musalmans—but it cannot be the land of the ‘Hindus and the Musalmans living as equals…” ಅಂದರೆ, ಯಾವ ದೇಶವು ಸಂಪೂರ್ಣವಾಗಿ ಇಸ್ಲಾಮ್ ಅನ್ನು ಒಪ್ಪಿಕೊಂಡು ಮುಸ್ಲಿಮರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಇಸ್ಲಾಮ್ ಎಂದು ಕರೆಸಿಕೊಳ್ಳುತ್ತದೆ. ಯಾವ ದೇಶವು ಮುಸ್ಲಿಮೇತರರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಅರ್ಬ್ ಆಗಿರುತ್ತದೆ.

ಮತ್ತಷ್ಟು ಓದು »

6
ಜನ

ಕೋರೆಗಾಂವ್ ಸ್ವಾಭಿಮಾನದ ವಿಜಯವಾದರೆ ಕೊಡವರದ್ದೇನು?

– ಸಂತೋಷ್ ತಮ್ಮಯ್ಯ
“ಹೊಸ ಪೇಶ್ವೆಗಳ ವಿರುದ್ಧ ನಾವು ಹೋರಾಟ ಮಾಡಲು ನಮಗೆ ಯಾವ ಚುನಾವಣಾ ರಾಜಕೀಯದಿಂದಲೂ ಸಾಧ್ಯವಿಲ್ಲ. ಅದಕ್ಕೆ ಬೀದಿ ಕಾಳಗವನ್ನೇ ಮಾಡಬೇಕು. ದಲಿತರ ಮೇಲಿನ ದೌರ್ಜನ್ಯಕ್ಕೆ ಬೀದಿ ಕಾಳಗವೊಂದೇ ಪರಿಹಾರ ”
ಜಿಗ್ನೇಸ್ ಮೆವಾನಿ ಎಂಬ ಜನಪ್ರತಿನಿಧಿ ಕೋರೆಗಾಂವ್‌ನಲ್ಲಿ ಒದರಿದ್ದು ಹೀಗೆ. ಈ ಮಾತುಗಳನ್ನು ಕೇಳಿದ ವಲ್ಸದ್ ಕ್ಷೇತ್ರದ ಮತದಾರರಿಗೆ ಶ್ರೀಖಂಡ್ ತಿಂದಂತಾಗಿರಬಹುದು. ಏಕೆಂದರೆ ಕೇವಲ ಹದಿನೈದು ದಿನಗಳ ಹಿಂದೆಯಷ್ಟೆ ಅವರು ತಮ್ಮ ಹಕ್ಕು, ತಮ್ಮ ಉದ್ಧಾರ, ನಮ್ಮ ಪ್ರಜಾಪ್ರಭುತ್ವ, ನಮಗಾಗಿ ಬಂದ ಅವತಾರಿ ಪುರುಷ ಎಂದೆಲ್ಲಾ ಹೊಗಳಿ ಆತನನ್ನು ಆರಿಸಿದ್ದರು. ಆದರೆ ಹದಿನೈದೇ ದಿನದಲ್ಲಿ ಆತ ಪ್ರಜಾಪ್ರಭುತ್ವವೆಂದರೆ ನನ್ನ ಎಕ್ಕಡ ಎನ್ನುವಂಥಾ ಹೇಳಿಕೆಯನ್ನು ನೀಡಿ ಕ್ಷೇತ್ರದ ಜನಕ್ಕೆ ಒಳ್ಳೆಯ ಉಡುಗೋರೆಯನ್ನೇ ಕೊಟ್ಟ! ಗುಜರಾತಿನಲ್ಲಿ ಬಿಜೆಪಿ ಗೆದ್ದಿದ್ದರೂ ಜಿಗ್ನೇಶ್ ಗೆಲುವು ಅಪಾಯಕಾರಿ ಎಂದಿದ್ದವರ ಭವಿಷ್ಯವನ್ನು  ಆತ ಇಷ್ಟು ಬೇಗನೆ ನಿಜ ಮಾಡುತ್ತಾನೆಂದು ದೇಶ ಅಂದುಕೊಂಡಿರಲಿಲ್ಲ. ಆದರೆ ಜಿಗ್ನೇಶ್ ಬುದ್ಧಿಜೀವಿಗಳ ಹಲವರ್ಷಗಳ ಶ್ರಮದ ಫಲ ಎಂಬುದನ್ನು ಆರಂಭದಲ್ಲೇ ಕೆಲವರು ಅರಿತಿದ್ದರು. ನಿಜ, ಆತ ಬುದ್ಧಿಜೀವಿಗಳ ಅಸ್ಪಷ್ಟ ಕನಸ್ಸಿಗೆ ಸ್ಪಷ್ಟ ರೂಪ ಕೊಟ್ಟವನು. ಎಗ್ಗಿಲ್ಲದೆ ಮಾತಾಡುವ, ಮುಗ್ದರನ್ನು ಸುಲಭವಾಗಿ ವಂಚಿಸುವ, ಬಿಸಿ ರಕ್ತದ, ಹುಚ್ಚು ಮಾತಿನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಆದರೆ ಪಕ್ಷೇತರನಾಗಿ ನಿಂತು ಚುನಾವಣೆ ಗೆಲ್ಲಬಲ್ಲ ಸಾಮರ್ಥ್ಯದ, ಪರಂಪರೆಯ ಬಗ್ಗೆ ಕೆಂಡಕಾರಬಲ್ಲ, ಮುಸಲ್ಮಾನನಂತೆ ಯೋಚಿಸಬಲ್ಲ, ಕಮ್ಯುನಿಸ್ಟನಂತೆ ಮಾತಾಡಬಲ್ಲ, ಆದರೆ ಅವರಾರೂ ಆಗಿರದ, ಕಡ್ಡಾಯವಾಗಿ ದಲಿತನೇ ಆಗಿರಬೇಕಾದ ಆಕೃತಿಯೊಂದರ ಹುಡುಕಾಟದಲ್ಲಿದ್ದ ಬುದ್ಧಿಜೀವಿಗಳಿಗೆ ಸಿಕ್ಕವನು ಈ ಜಿಗ್ನೇಶ್ ಮೆವಾನಿ. ಬುದ್ಧಿಜೀವಿಗಳ ಕೈಪಿಡಿಯ ಪ್ರಕಾರ ಕನ್ಹಯ್ಯನೆಂಬವನು ಎಷ್ಟಾದರೂ ಭೂಮಿಹಾರ್ ಬ್ರಾಹ್ಮಣ. ಆತ ಧೀರ್ಘಕಾಲ ಬಾಳಿಕೆಗೆ ಬಾರದವನು! ಹಾಗಾಗಿ ಜಿಗ್ನೇಶ್ ಎಂಬ ಬುದ್ಧಿಜೀವಿಗಳು ಕೆತ್ತಿದ ಆಕಾರ ಹದಿನೈದೇ ದಿನದಲ್ಲಿ ಪ್ರಜಾಪ್ರಭುತ್ವವನ್ನು ಹಂಗಿಸಿ, ಮಹಾರಾಷ್ಟ್ರಕ್ಕೆ ಬೆಂಕಿ ಹಾಕಿ, ಹೆಣ ಬೀಳಿಸಿ ಹೋಗಿದ್ದ. ಇಲ್ಲದಿದ್ದರೆ ಭೀಮಾ-ಕೋರೇಗಾಂವ್ ವಿಜಯದ ೨೦೦ನೇ ವರ್ಷಾಚರಣೆ ಸಂದರ್ಭದಲ್ಲಿ ಏಕಾಏಕಿ ಬೀದಿ ಕಾಳಗ ಯಾಕಾಗಬೇಕಿತ್ತು? ಅಂಥ ಯಾವ ಕಾರಣ ತಾನೇ ಇತ್ತು? ಮೊದಲ ಬಲಿಗಾಗಿ ಜಿಗ್ನೇಶ ಕೋರೆಗಾಂವನ್ನೇ ಏಕೆ ಆರಿಸಿಕೊಂಡ? ಈ ಸಂಗತಿ ಎಷ್ಟು ಆಳದಲ್ಲಿದೆಯೋ ಅಷ್ಟೇ ಸೂಕ್ಷ್ಮವಾಗಿಯೂ ಇದೆ.

ಮತ್ತಷ್ಟು ಓದು »

5
ಜನ

ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ?

– ಪ್ರೊ. ಪ್ರೇಮಶೇಖರ

ಭಾಗ – ೧

ಮೂಲ ಹೀಬ್ರೂ ಬೈಬಲ್‍ನಲ್ಲಿ ದೇವರ ಹೆಸರು “YHWH” ಎಂದಿದೆ. ಇದನ್ನು “ಯೆಹೋವ” ಎಂದು ಉಚ್ಚರಿಸುವುದು ಎಷ್ಟು ಸಮಂಜಸ ಎಂದು ನನಗೆ ತಿಳಿಯದು. ಅದರೂ ಆ ಉಚ್ಚಾರಣೆಯೇ ಸಾರ್ವತ್ರಿಕವಾಗಿರುವುದರಿಂದಾಗಿ ನಾನೂ ಅದನ್ನೇ ಬಳಸುತ್ತೇನೆ.

ಸಾಮಾನ್ಯವಾಗಿ ಎಲ್ಲ ಧರ್ಮಗಳೂ ಹೇಳುವುದು ದೇವರಿಗೆ ಮೂರು ಪ್ರಮುಖ ಲಕ್ಷಣಗಳು ಅಥವಾ ಸಾಮರ್ಥ್ಯಗಳಿವೆ ಎಂದು. ದೇವರು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ. ಆದರೆ ಯೆಹೋವ ದೇವರು ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ ಆಗಿರಲಿಲ್ಲ. ಆತ ಸರ್ವಜ್ಞ ಆಗಿದ್ದನೇ ಅಲ್ಲವೇ ಎನ್ನುವುದಕ್ಕೆ ನಿಖರ ಪುರಾವೆಗಳು ದೊರೆಯುವುದಿಲ್ಲ. ಮತ್ತಷ್ಟು ಓದು »

3
ಜನ

ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ..?

– ಪ್ರೊ. ಪ್ರೇಮಶೇಖರ

ಹಿಂದೂ ಧರ್ಮದ ಅಪಹಾಸ್ಯ, ಅವಹೇಳನ ಇಂದು ನಿನ್ನೆಯದಲ್ಲ. ಅದು ಆರಂಭವಾಗಿ ಶತಮಾನಗಳೇ ಕಳೆದುಹೋಗಿವೆ. ತನ್ನ ಚಿಪ್ಪಿನೊಳಗೇ ಅಡಗಿಕೊಂಡು ಹೊರಪ್ರಪಂಚಕ್ಕೆ ಬಹುತೇಕ ಅಪರಿಚವಾಗಿಯೇ ಇದ್ದ ಹಿಂದೂ ಸಮಾಜ ತನ್ನ ಅಪರಿಚಿತತೆಯಿಂದಲೇ ಮೊದಲಿಗೆ ಅರಬ್ ಮುಸ್ಲಿಮ್ ಧಾಳಿಕಾರರಲ್ಲಿ, ನಂತರ ಕ್ರಿಶ್ಚಿಯನ್ ವರ್ತಕರು ಮತ್ತು ಸೈನಿಕರಲ್ಲಿ ಅಚ್ಚರಿಯನ್ನುಂಟುಮಾಡಿತು. ಅನೇಕ ದೇವದೇವಿಯರುಳ್ಳ, ಒಂದೇ ಒಂದು ನಿರ್ದಿಷ್ಟ ಧರ್ಮಗ್ರಂಥವಿಲ್ಲದ, ಶ್ರೇಣೀಕೃತ ಜಾತಿವ್ಯವಸ್ಥೆಯ ಅನಿಷ್ಟದಲ್ಲಿ ಒಡೆದು ಹಂಚಿಹೋಗಿದ್ದ ಹಿಂದೂ ಸಮಾಜ ಏಕದೈವವನ್ನು, ಏಕಧರ್ಮಗ್ರಂಥವನ್ನೂ ಹೊಂದಿದ್ದ, ಸಮಾನತೆಯ ತಳಹದಿಯ ಮೇಲೆ ರಚಿತವಾಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಗಳಿಗೆ ಸಂಪೂರ್ಣ ವಿರುದ್ಧವಾಗಿದ್ದುದರಿಂದಾಗಿ ಆ ಧರ್ಮಗಳ ಅನುಯಾಯಿಗಳಲ್ಲಿ ಕುತೂಹಲ, ಅಪನಂಬಿಕೆಗಳನ್ನುಂಟುಮಾಡಿದ್ದು ಸಹಜವೇ ಆಗಿತ್ತು. ಆದರೆ ಈ ಭಾವನೆಗಳು ಕ್ಷಿಪ್ರಕಾಲದಲ್ಲೇ ಅವಹೇಳನದ ರೂಪ ಪಡೆದುಕೊಂಡದ್ದು ದುರ್ಭಾಗ್ಯದ ಬೆಳವಣಿಗೆ. ಅದಕ್ಕಿಂತಲೂ ದೌರ್ಭಾಗ್ಯದ ಸಂಗತಿಯೆಂದರೆ ಪರಧರ್ಮೀಯರು ಆರಂಭಿಸಿದ ಹಿಂದೂ ಅವಹೇಳನವನ್ನು ಈಗ ಸ್ವತಃ ಹಿಂದೂಗಳೇ ಮುಂದುವರೆಸಿಕೊಂಡುಹೋಗುತ್ತಿರುವುದು.ಅವರ ಈ ಕೃತ್ಯ ಆರೋಗ್ಯಕರವಾಗಿದ್ದು ಹಿಂದೂಧರ್ಮದ ಕೆಲವೊಂದು ಅನಾಚಾರಗಳನ್ನು ತೊಡೆದುಹಾಕುವಂತಿದ್ದರೆ ಅದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ. ಅವರ ಟೀಕೆಗಳಲ್ಲಿ ಎದ್ದುಕಾಣುತ್ತಿರುವುದು ಹೆಚ್ಚಿನಂಶ ಕಿಡಿಗೇಡಿತನ. ಅಂಥವರಿಗೆ ಚಿಂತಕರೆಂಬ ಹಣೆಪಟ್ಟಿ ದಕ್ಕುತ್ತಿರುವುದು ಸಮಕಾಲೀನ ಸಮಾಜದ ಒಂದು ವರ್ಗದ ಬೌದ್ಧಿಕ ದಾರಿದ್ರ್ಯದ ದ್ಯೋತಕ. ಇವರು ಈಗ ಎತ್ತುತ್ತಿರುವ ಪ್ರಶ್ನೆ ಹಿಂದೂಧರ್ಮದ ಅದಿಯ ಕುರಿತಾಗಿ, ಇತರ ಧರ್ಮಗಳಿಗಿರುವಂತೆ ಹಿಂದೂಧರ್ಮಕ್ಕೆ ಸ್ಥಾಪಕನೊಬ್ಬ ಇಲ್ಲ ಎನ್ನುವ ಕುರಿತಾಗಿ. ಮತ್ತಷ್ಟು ಓದು »