ವಿಷಯದ ವಿವರಗಳಿಗೆ ದಾಟಿರಿ

Archive for

17
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)

– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು. ಮತ್ತಷ್ಟು ಓದು »

14
ನವೆಂ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

– ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾಧಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ. ಮತ್ತಷ್ಟು ಓದು »

13
ನವೆಂ

ಎಚ್ಚರ..! ನಿಮ್ಮ ಸುತ್ತಲೂ ಇರುವರಿವರು…

– ಸುಜಿತ್ ಕುಮಾರ್

ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂದಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್  ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು ಹೀರೋಗಿರಿಗೆ ಸೊಂಪು!  ಅಚ್ಚುಕಟ್ಟಾಗಿ ಓದಿ ಸ್ವಂತ ಕಾಲಮೇಲೆ ನಿಲ್ಲುವ ಕನಸ್ಸನ್ನು ಕಟ್ಟಿ ಹೆಗಲೇರಿಸಿ ಕಳುಹಿಸುವ ಪೋಷಕರ ವಾರಕ್ಕೋ ತಿಂಗಳಿಗೋ ತಳ್ಳುವ ಒಂದಿಷ್ಟು ಹಣವನ್ನು ‘ಇಂದು ಇಂದಿಗೆ.. ನಾಳೆ ನಾಳೆಗೆ’ ಎಂಬಂತೆ ಭಕ್ಷಿಸಿ, ತಿಂಗಳಾಂತ್ಯದ ವೇಳೆಗೆ ಅತಂತ್ರದ ಸ್ಥಿತಿಯ ಮುಸಿಯನಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ ಪಕ್ಕದ ಗೂಡಂಗಡಿಯ ಟೀ ಬನ್ನುಗಳನ್ನೇ ಎರಡೊತ್ತಿನ ಆಹಾರವನ್ನಾಗಿ ಮಾಡಿಕೊಂಡು ‘ಏನಾದ್ರು ಬಿಸಿನೆಸ್ ಮಾಡ್ಬೇಕು ಮಗಾ’ ಎನ್ನುತ ಕ್ಷಣಮಾತ್ರದಲ್ಲಿ ಅಂಬಾನಿಗಳಾಗಲು ಹವಣಿಸುತ್ತಾ ದಿನಕಳೆಯುವ ಯುವಕರೇ ಈ ಮಹಾ ಷಡ್ಯಂತ್ರದ ಸುಲಭದ ಬಲಿಪಶುಗಳು! ಮತ್ತಷ್ಟು ಓದು »

12
ನವೆಂ

ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨

ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ                                              

ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ

ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1

ಉದಾರವಾದಿಗಳು ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುವ/ ಪ್ರಚಾರಕರ (ಇವಾನ್ಜಲಿಸ್ಟ್‌ಗಳ) ನಡುವೆ ಹೊಂದಾಣಿಕೆ:

ಬ್ರಿಟಿಷ್ ಸಂಸತ್ತಿನಲ್ಲಿ ಎಡ್ವಿನ್ ಬೆರ್ಕ್ ಸ್ಪಷ್ಟವಾಗಿ ಹೇಳಿದ್ದಿದೆ- ’ಓಕ್ ಮರಗಳನ್ನು ಥೇಮ್ಸ್ ನದಿಯ ದಂಡೆಯಿಂದ ತೆಗೆದುಕೊಂಡು ಹೋಗಿ ಗಂಗಾನದಿಯ ದಂಡೆಯುದ್ದಕ್ಕೂ ನೆಡಲಾಗದು’ ಎಂದು. ಭಾರತೀಯ ಸಂಸ್ಥಾನಗಳು ಭಾರತೀಯರ ಅಗತ್ಯಗಳನ್ನು ಪೂರೈಸುತ್ತಿದ್ದವು. ಆ ಸಂಸ್ಥೆಗಳಲ್ಲಿ ಪುನರುಜ್ಜೀವನದ ಅಗತ್ಯವಿತ್ತೇ ವಿನಃ ಅವುಗಳನ್ನು ಬದಲಿಸುವ ಅಗತ್ಯವಿರಲಿಲ್ಲ. ಆಂಗ್ಲರಲ್ಲಿ, ಸಂಸತ್ತಿನಲ್ಲಿ ಹಾಗೂ ಭಾರತದ ಆಂಗ್ಲ ಅಧಿಕಾರಿಗಳಲ್ಲಿ ಒಂದು ಬಲವಾದ ಗುಂಪಿದ್ದು ಅವರು ಭಾರತೀಯ ಸಂಸ್ಥಾನಗಳನ್ನು ಮರುನಿರ್ಮಾಣ ಮಾಡಲಿಚ್ಛಿಸಿದ್ದರು. ನಮ್ಮ ಕುತೂಹಲಕ್ಕೆ ’ಸಂಪ್ರದಾಯವಾದಿಗಳು’ (ಕನ್ಸರ್ವೇಟಿವ್‌ಗಳು) ಗಂಭೀರತೆಯಿಂದ ಭಾರತೀಯ ಸಂಸ್ಥಾನಗಳನ್ನು ಹೇಗಿದ್ದವೋ ಹಾಗೆಯೇ ಬಿಡಬೇಕೆನ್ನುತ್ತಿದ್ದರು. ’ಆಂಗ್ಲ ಉದಾರವಾದಿಗಳು’ ಭಾರತದ ಸಂಸ್ಥಾನಗಳನ್ನು ಗೊಂದಲಮಯವಾಗಿಸಲು/ ಅವ್ಯವಸ್ಥಿತಗೊಳಿಸಲು ಇಚ್ಛಿಸಿದ್ದರು. ಮತ್ತಷ್ಟು ಓದು »

11
ನವೆಂ

ರಕ್ತ ಸಿಕ್ತ ಕಮ್ಯುನಿಷ್ಟ ಕುಡುಗೋಲಿಗೆ ಇನ್ನೆಷ್ಟು ಬಲಿ? ಅದನ್ನು ತಡೆಯಲು ಕೇರಳ ಚಲೋ!

ಶಿವಾನಂದ ಶಿವಲಿಂಗ ಸೈದಾಪೂರ
ವಿಭಾಗ ಸಂಚಾಲಕ,
ಎಬಿವಿಪಿ ಬೆಳಗಾವಿ.

ಬರ್ಬರವಾಗಿ ಹತ್ಯೆ ಮಾಡುವ ಜನರಿಂದ ಶಾಂತಿ ಸೌಹಾರ್ದತೆಯನ್ನು ಬಯಸುವುದು ಬಿಡಿ, ಅದರ ಬಗ್ಗೆ ಕನಸಿನಲ್ಲಿಯೂ ಸಹ ನೆನಪಾದರೆ ಬೆಚ್ಚಿ ಬೀಳುವುದು ಸಹಜ. ಜೀವಂತವಾಗಿರುವ ಮನುಷ್ಯನನ್ನು ಎರ್ರಾಬೀರಿ ಇರಿದು ಕೊಲೆ ಮಾಡಿ ಸೌಮ್ಯವಾದದ ಕತೆ ಹೇಳಲು ಬಂದರೆ ಕೇಳಲು ನಿಲ್ಲುವವರಾದರೂ ಯಾರು? ಈ ದೇಶದಲ್ಲಿ ಎಲ್ಲಲ್ಲಿ ಕಮ್ಯುನಿಷ್ಠ ಪಕ್ಷ ಆಡಳಿತದಲ್ಲಿದೆಯೋ ಅಲ್ಲಲ್ಲಿ ಶಾಂತಿ, ಸೌಹಾರ್ದತೆ ರಾತ್ರಿ ಕನಸಿನಲ್ಲಯೂ ಕಾಣುವಂತಿಲ್ಲ. ಸರ್ವರೂ ಸಮಾನರು ಎನ್ನುವ ಕಮ್ಯುನಿಸಂನ ನೀತಿ ಅಧಿಕಾರ ವಹಿಸಿಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುವವರಿಗೆ ಮಾತ್ರವೇ ಎಂಬುದನ್ನು ಕೇರಳ ನೋಡಿದರೆ ಗೊತ್ತಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಕಮ್ಯುನಿಷ್ಠ ಆಡಳಿತದಿಂದ ದೇವರ ನಾಡು ನರಹಂತಕರ ನಾಡಾಗಿದೆ. ಮತ್ತಷ್ಟು ಓದು »

10
ನವೆಂ

ಬುದ್ದಿಜೀವಿ ಮತ್ತು ದೇವರು ಎದುರುಬದುರು

– ಶ್ಯಾಮ್ ಭೀಮಗುಳಿ

ಹಿಂದೊಮ್ಮೆ ಬೆಂಗಳೂರು ಎಂಬ ಮಾಯಾ ನಗರಿಯಲ್ಲಿ ಒಬ್ಬ ‘ಬುದ್ದಿಜೀವಿ’ ಎಂದು ಕರೆಸಿಕೊಳ್ಳುವವ ಇದ್ದನಂತೆ. ಈತ ಬುದ್ದಿಜೀವಿಯಾದ ಕಾರಣ ಚಿಂತಕ, ಪ್ರಗತಿವಾದಿ ಇತ್ಯಾದಿ ವಿಶೇಷಣಗಳು ಜೊತೆಗೆ ಅಂಟಿಕೊಂಡುಬಿಟ್ಟಿತ್ತು. ಈತ ಸಹಜವಾಗಿ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಬರೆಯುತ್ತಿದ್ದ. ಈ ತಳಸ್ಪರ್ಶಿ ಸಾಹಿತ್ಯದಲ್ಲಿ ಎಷ್ಟು ಸತ್ವ ಇದೆ ಎಂದು ಅವನ ಜೊತೆಯವರು ನೋಡುತ್ತಿರಲಿಲ್ಲ, ಹಾಗೇ ಯಾವ ಸತ್ವ ಇದೆ ಎಂದೂ ವಿರೋಧಿಗಳು ಹುಡುಕುತ್ತ ಇದ್ದರು. ಆದರೂ ಪ್ರಸಿದ್ಧ ಆದ. ಎಲ್ಲರೂ ಅವನನ್ನು ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಕರೆಸುತ್ತಿದ್ದರು. ಸಿಕ್ಕಿದ್ದೇ ಅವಕಾಶ ಎಂದುಕೊಂಡು ದೇವರು, ಧರ್ಮ ,ಆಚಾರ ವಿಚಾರ, ಪರಿಸರ, ಸಾಹಿತ್ಯ , ರಾಜಕೀಯ ಇತ್ಯಾದಿಗಳ ಬಗ್ಗೆ ಅದ್ಭುತವಾಗಿ ಮಾತಾಡುತ್ತಿದ್ದ. ಅದಕ್ಕೆ ತಲೆ ತೂಗುವವರು ಹಲವರು. ಒಟ್ಟಾರೆ ನ್ಯೂಟನ್ ನಿಂದ ನಕ್ಸಲ್ ವರೆಗೆ ಆತನ ಪಾಂಡಿತ್ಯ ಹರಡಿತ್ತು. ಕೆಲವೊಂದು ಸುದ್ದಿವಾಹಿನಿಗಳಿಗೆ ಆತ ನಿಲಯದ ಕಲಾವಿದ ಎನ್ನುವಂತೆ ಆಪ್ತನಾಗಿದ್ದ. ಮತ್ತಷ್ಟು ಓದು »

9
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)

ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರ ಮನುಷ್ಯನಿಗೆ ಪಂಥಾಹ್ವಾನವನ್ನು ನೀಡುವಂತದ್ದು. ಪರಿಸರಕ್ಕೆ ಶರಣಾಗಿಯೇ ಪರಿಸರದ ಹಲವು ಘಟಕಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ, ಮುಕ್ತ ಮನಸ್ಸಿನಿಂದ ಇದು ಸಾಧ್ಯವಾದರೆ ಬದುಕಿನ ಹಲವು ವಿಸಂಗತಿ-ವಿಕೃತಿಗಳನ್ನು ಸಂಯಮದಿಂದ ಸಹಿಸುವ ಶಕ್ತಿಯನ್ನು, ನಿರ್ವಿಕಾರಚಿತ್ತದಿಂದ ಬದುಕುವ ಸ್ಥೈರ್ಯವನ್ನು ಪಡೆಯುವುದನ್ನು ಕಾಣುತ್ತೇವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರವನ್ನು ಗ್ರಹಿಸುವುದಕ್ಕಿಂತ ವ್ಯತಿರಿಕ್ತವಾಗಿ ಕಾಣುವುದು ಶನೀಶ್ವರನ ನೆರಳಿನಲ್ಲಿ ಕಾದಂಬರಿಯಲ್ಲಿ. ಇಲ್ಲಿನ ಕೆಲವು ಪಾತ್ರಗಳು, ಮುಖ್ಯವಾಗಿ ಕೃಷ್ಣ ಜೋಯಿಸರು, ಪ್ರಕೃತಿ ತಮ್ಮ ಬಯಕೆಯ ನೇರಕ್ಕೆ ಇರಬೇಕೆಂದು ಬಯಸುವವರು. ಭೂಸವೆತ, ಕಳೆ ಮುಂತಾದವುಗಳ ಬಗ್ಗೆ ಅವರ ಜತೆ ಮಾತನಾಡಿದ ನಿರೂಪಕ “ನಮ್ಮ ಯೋಚನೆಯಂತೆ ಲೋಕ ನಡೆಯಬೇಕಾದರೆ ಲೋಕವೆಲ್ಲ ನಮ್ಮ ಅಂಕೆಯಲ್ಲಿ ಇರಬೇಕು ಎಂದ ಹಾಗಾಯ್ತಲ್ಲವೇ?” ಎಂದು ಕೇಳುತ್ತಾನೆ. ಮತ್ತಷ್ಟು ಓದು »

8
ನವೆಂ

ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು

ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.

[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.] ಮತ್ತಷ್ಟು ಓದು »

8
ನವೆಂ

ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1

ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ                                              

ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ

ಈ ಚರ್ಚೆಯಲ್ಲಿ ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಶ್ರೀಮತಿ ಮೀನಾಕ್ಷಿ ಜೈನ್‌ರೊಂದಿಗೆ ಅವರ ಕೃತಿಗಳ ಬಗ್ಗೆ ವಿಚಾರಮಾಡಲಿದ್ದೇನೆ. ನಾನು ಶ್ರೀಮತಿ. ಮೀನಾಕ್ಷಿ ಜೈನ್‌ರನ್ನು ಸುಮಾರು ಎರಡು ದಶಕಗಳಿಂದ ಬಲ್ಲೆ. ಹಾಗೂ ಅವರನ್ನು ಇಂದಿನ ಭಾರತದಲ್ಲಿ ಒಬ್ಬ ಇತಿಹಾಸ ಮತ್ತು ರಾಜಕೀಯ ವಿಷಯಗಳ ಉತ್ತಮ ವಿದ್ವಾಂಸರೆಂದು ಗೌರವಿಸುತ್ತೇನೆ. ಅವರು ದೆಹಲಿಯಲ್ಲಿ ಶಲ್ಡನ್ ಪೊಲ್ಲಾಕ್‌ನ್ನು ಕುರಿತು ನಡೆದ ೨ನೇ ಸ್ವದೇಶೀ ಇಂಡಾಲಜಿ ಸಮ್ಮೇಳನದಲ್ಲಿ ಭಾಗವಹಿಸಿ, ಒಂದು ಅದ್ಭುತ ಲೇಖನವನ್ನು ಪ್ರಸ್ತುತಪಡಿಸಿದ್ದರು. ಅವರು ಮತ್ತು ನನ್ನಲ್ಲಿ ಇರುವ ಒಂದು ಸಾಮಾನ್ಯ ಅಂಶವೆಂದರೆ ಇಬ್ಬರೂ ನಮ್ಮೊಡನೆ ವಾದ ಮಾಡುವ, ನಮ್ಮನ್ನು ಉಪೇಕ್ಷೆ ಮಾಡುವ ಅಥವಾ ನಮ್ಮ ಹೆಸರೆತ್ತಿ ದೂಷಿಸುವ ಭಾರತೀಯ ಎಡಪಂಥದವರನ್ನು ಟೀಕಿಸಿದ್ದೇವೆ. ಕಳೆದ ಅನೇಕ ವರ್ಷಗಳ ಕಾಲ ಅವರ ಸಂಪರ್ಕವಿರಲಿಲ್ಲ, ಹಾಗಾಗಿ ಈ ಅವಕಾಶವು ನಮಗೆ ಬಹಳ ದಿನಗಳ ವಿಚಾರ ವಿನಿಮಯಕ್ಕೆ ಒದಗಿಬಂದಿದೆ ಎಂದು ತಿಳಿದಿದ್ದೇನೆ. ನಾವು ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ, ಅಯೋಧ್ಯೆ-ಬಾಬರಿ ಮಸೀದಿಯ ವಿವಾದ, ’ಸತಿ’ ಪದ್ಧತಿಯ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು, ಮೂರ್ತಿಭಂಜನೆ ಮತ್ತು ಸ್ವದೇಶೀ ಇಂಡಾಲಜಿಯ ಸಂಶೋಧನಾ ವಲಯ ಇತ್ಯಾದಿ ಹಲವಾರು ವಿಚಾರಗಳನ್ನು ಚರ್ಚಿಸಿದೆವು.

ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ:

ಭಾರತೀಯ ಶಿಕ್ಷಣವಲಯದಲ್ಲಿ ಬುದ್ಧಿವಂತರಿಗೆ ನೀಡುವ ಪ್ರೋತ್ಸಾಹಧನದ ವಿಚಾರವಾಗಿ ಚರ್ಚಿಸುವಾಗ ಎಡಪಂಥದ ಪ್ರಬಲ ವಿದ್ವಾಂಸರಾದ ಇರ್ಫಾನ್ ಹಬೀಬ್ ಮತ್ತು ರೋಮಿಲಾ ಥಾಪರ್‌ರ ಅಡಿಯಲ್ಲಿ ಶಿಕ್ಷಣವಲಯದಲ್ಲಿ ಉಸಿರುಕಟ್ಟಿಸುವ ವಾತಾವರಣವು ಇತ್ತು ಎಂದು ಅವರು ಅಭಿಪ್ರಾಯಪಟ್ಟರು. ಅವರು ಶಿಕ್ಷಣವಲಯದಲ್ಲಿ ಸಹಾಯಧನವನ್ನು ನೀಡುವ ಎಲ್ಲ ಸಂಸ್ಥೆಗಳ ಮೇಲೆಯೂ ಮತ್ತು ಸಂಶೋಧನೆ ಮಾಡಲು ಬರುವ ಎಲ್ಲ ವಿದ್ಯಾರ್ಥಿಗಳೂ ಇವರ ಅಡಿಯಲ್ಲಿ, ಇವರ ದೃಷ್ಟಿಕೋನದ ಪ್ರಕಾರವೇ ಕೆಲಸ ಮಾಡುವಂತೆ ತಮ್ಮ ಸಂಪೂರ್ಣ ನಿಯಂತ್ರಣವನ್ನು ಚಲಾಯಿಸಿಕೊಂಡಿದ್ದರು. ಹೀಗಾಗಿ ಇವರ ವಿಚಾರಗಳನ್ನು ಬೆಂಬಲಿಸದವರಿಗೆ ಅಥವಾ ಬೇರೆ ಆಲೋಚನೆಯ ಧಾಟಿ ಹೊಂದಿದವರಿಗೆ ಯಾವ ಇತಿಹಾಸಕಾರನಾಗಿ ಅಥವಾ ವಿದ್ವತ್ತಿನಲ್ಲಿಯೂ ತಮ್ಮ ಗುರುತನ್ನು ಉಳಿಸಲು ದುಸ್ತರವಾಗುತ್ತಿತ್ತು. ಯಾರಾದರೂ ವಿಭಿನ್ನವಾದ ಅಥವಾ ವೈರುಧ್ಯದ ದೃಷ್ಟಿಕೋನವನ್ನು ಹೊಂದಿದ್ದರೆ ಅವರು ತಮ್ಮದೇ ಆದ ಮಾರ್ಗವನ್ನು ರೂಪಿಸಿಕೊಳ್ಳ ಬೇಕಾಗಿತ್ತು. ಆ ಮಾರ್ಗವು ಏಕಾಂಗಿಯಾಗಿದ್ದು ಅವರು ತಮ್ಮಷ್ಟಕ್ಕೆ ತಾವೇ ನಡೆಯಬೇಕಾಗಿತ್ತು.

ಮತ್ತಷ್ಟು ಓದು »

7
ನವೆಂ

ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ

– ಸಂತೋಷ್ ತಮ್ಮಯ್ಯ

ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ. ಮತ್ತಷ್ಟು ಓದು »