ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.
ಅದೆಷ್ಟು ಸುಂದರ ಹಾಸ್ಟೆಲ್ ಜೀವನ
– ತುಳಜಪ್ಪ ಬುಧೇರ
ಹಾಸ್ಟೆಲ್ ಹುಡಗ್ರೆಲ್ಲಾ ಕೆಟ್ಟವರು, ಟಪೋರಿಗಳು ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುತ್ತಿರುತ್ತಾರೆ. ಅವರಲ್ಲಿ ಜೀವನ ಸುಧಾರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿರಿಯಸ್‍ನೆಸ್ಸೇ ಇರಲ್ಲಾ, ಅನ್ನೋ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ತಂದೆ ತಾಯಂದಿರಂತೂ ತಮ್ಮ ಮಕ್ಕಳಿಗೆ ಹಾಸ್ಟೆಲ್ ಹುಡುಗರ ಸಹವಾಸ ಮಾಡಬೇಡ ಎಂಬ ಸ್ಟ್ರಿಕ್ಟ್ ಆದೇಶ ಮಾಡಿರುವುದನ್ನು ನೋಡಿರುತ್ತೇವೆ. ಇದೇ ಪಾಠವನ್ನು ಚಿಕ್ಕವನಿದ್ದಾಗ ನನ್ನ ಗೆಳೆಯ ಮಾಡಿದ್ದ. ಅವನಿಗೆ ಯಾರು ಹೇಳಿದ್ದರೋ ಅವನೇ ಬಲ್ಲ.
ಪಕ್ಕದೂರಾದ ಮನ್ನಳ್ಳಿಯಲ್ಲಿ ಹೈಸ್ಕೂಲ್ ಇದ್ದಿದ್ದರಿಂದ ಪ್ರೌಢ ಶಿಕ್ಷಣ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಮುಗಿಯಿತು. ಮುಂದೆ ಕಾಲೇಜ್‍ಗೆ ಸೇರಲೇಬೇಕಲ್ಲವೆ, ಬೀದರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದಾಯಿತು. ದಿನಾಲು ಹೋಗಿ ಬರಬೇಕೆಂದರೆ ನಮ್ಮೂರಿಗೆ ಸರಿಯಾಗಿ ಬಸ್ಸುಗಳೇ ಇಲ್ಲ. ಇದ್ದರೂ ಅಮಾಸೆಗೋ ಹುಣ್ಣಿಮೆಗೋ ಎಂಬಂತೆ ಅಪರೂಪ. ಸಮಯದ ಪಾಲನೆಯಂತು ಅವರಪ್ಪನಾಣೆಗೂ ಇಲ್ಲವೇ ಇಲ್ಲ. ಹೀಗಾಗಿ ಕಾಲೇಗೆ ಹೋಗಿ ಬರೋದೆ ಒಂದ್ ದೊಡ್ಡ ಸಮಸ್ಯೆಯಾಯಿತು. ಆಗ ಅಪ್ಪನ ತಲೆಯಲ್ಲಿ ಬಂದ ಐಡಿಯಾನೆ ಹಾಸ್ಟೆಲ್. ಈ ಶಬ್ದ ಕಿವಿಗೆ ಬಿದ್ದೊಡನೆ ಕಾಲಿನಿಂದ ತಲೆಯವರೆಗೂ ಜುಮ್ ಎಂದು ರಕ್ತ ಸಂಚಾರವೇ ನಿಂತಂತಾಗಿ ನಿಸ್ತೇಜನಾಗಿ ನಿಂತಲ್ಲೇ ಕುಸಿದು ಬಿಟ್ಟೆ. ಆದರೆ ಅನ್ಯ ಮಾರ್ಗವೇ ಇರಲಿಲ್ಲ. ಅಲ್ಲಿಗೆ ಹೋಗಲೇಬೇಕಾಯಿತು.
ವಿಡಂಬನೆ:ಪೊರೆ ಪೊರೆ ಪೊರಕೆ..!
– ತುರುವೇಕೆರೆ ಪ್ರಸಾದ್
ದೆಹಲಿಲಿ ಆಮ್ ಆದ್ಮಿ ಪಕ್ಷ ‘ಹಾಥ್ ಕಾ ಸಫಾಯಾ’ ಮಾಡಾದ ಮೇಲೆ ದೇಶದ ಎಲ್ಲಾ ಪಕ್ಷಗಳನ್ನೂ ಗುಡಿಸಿ ಗುಂಡಾಂತರ ಮಾಡುತ್ತೆ ಅನ್ನೋ ಹಸಿ ಬಿಸಿ ಸುದ್ದಿ ಹಿನ್ನಲೆಯಲ್ಲಿ ಧೂಮಕೇತು ಸಂಪಾದಕ ಪರ್ಮೇಶಿ ಕನ್ನಡ ನಾಡಿನ ಖ್ಯಾತ ನಾಮರು ಹಾಗೂ ಆಮ್ ಆದ್ಮಿಗಳಿಗೆ ಕೇಜ್ರಿವಾಲ್, ಅವರ ಪೊರಕೆ ಗೊತ್ತಾ? ಪೊರಕೆ ಎಫೆಕ್ಟ್ ಸಿಕ್ಕಾಪಟ್ಟೆ ಡ್ಯಾಮೇಜ್ ಮಾಡಿದೆ ಅಲ್ವಾ? ಕರ್ನಾಟಕದಲ್ಲೂ ಜನ ಪೊರಕೆ ಹಿಡ್ಕಂಡ್ರೆ ಏನ್ಮಾಡ್ತೀರ? ಇತ್ಯಾದಿ ಪ್ರಶ್ನೆಹಾಕಿ ಮಾಡಿದ ಸಂದರ್ಶನದ ಗಿಳಿಪಾಠ ಇಲ್ಲಿದೆ.
ಮುದ್ದುರಾಮಯ್ಯ: ಕ್ರೇಜಿ ಪೊರಕೆಗೆ ನೋ ಛಾನ್ಸ್! ನಮ್ಮನೆ ಕಸ ನಾವೇ ಗುಡಿಸ್ಕಂಡ್ರೆ ಬೇರೆಯವರು ಪರಕೆ ಹಿಡ್ಕಂಡು ಅಲ್ಲಾಡಿಸೋ ಛಾನ್ಸೇ ಇರಲ್ಲ..ನಾನು ಮೊದ್ಲೇ ಎಲ್ಲ ಕಾಂಗ್ರೆಸ್ ಕಳೆ ಬೆಳೀದಂಗೆ ಔಷ್ಧಿ ಹೊಡ್ದಿದ್ದೆ. ಎಲ್ಲೋ ಒಂದು ಸೇರ್ಕಂಡು ಬಿಟ್ಟಿತ್ತು.ಅದ್ನೂ ಗುಡಿಸಿ ಕ್ಲೀನ್ ಮಾಡಿದೀನಿ. ಮೊನ್ನೆ ಮೊನ್ನೆ ಇನ್ನೂ ಅಲ್ಲಾಡ್ತಿದ್ ಕೂಳೆನೂ ಕಿತ್ ಎಸ್ದಿದೀನಿ..! ದೊಡ್ ಮಠದೋರಿಗೆ ಎಲ್ಲಾ ಗುಡಿಸಿ ಹಾಕೋ ಕಾಂಟ್ರಾಕ್ಟ್ ಕೊಟ್ಟಿದೀನಿ. ಇಷ್ಟಕ್ಕೂ ನಮ್ದು ಹೈಟೆಕ್ ರಾಜ್ಯ..! ಪೊರಕೆ, ಗಿರಕೆ ಎಲ್ಲಾ ನಮ್ ಹತ್ರ ನಡೆಯಲ್ಲ..ನಮ್ದೇನಿದ್ರೂ ವಾಕ್ಯೂಮ್ ಕ್ಲೀನರ್ ಸಂಸ್ಕೃತಿ..! ಹಾಗೂ ಬೇಕು ಅಂದ್ರೆ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದೀ ಭಾಗ್ಯದ ತರ ಪೊರಕೆ ಭಾಗ್ಯ ಅಂತ ಮನೆ ಮನೆಗೆ ಇಂಪೋರ್ಟೆಡ್ ಪೊರಕೆ ಸಪ್ಲೈ ಮಾಡ್ತೀವಿ..ನಾವು ಪೊರಕೆ ಹಿಡಿಯೋ ಹೆಣ್ ಮಗಳು ಹೇಳ್ದಂಗೆ ಕೇಳ್ಕಂಡಿರೋ ಮಂದಿ..ಏನೋ ಆ ಶೀಲಮ್ಮ, ಸ್ವಲ್ಪ ಏಮಾರುದ್ರು ಅಂದ್ರೆ ನಾವೂ ಏಮಾರ್ತೀವಾ ?’ಕೈಯ್ಯೇ’ಇಲ್ಲದೆ ಪೊರಕೆ ಹಿಡಿಯೋದು ಹೆಂಗೆ? ಇವತ್ತಲ್ಲ ನಾಳೆ ಆ ಪೊರಕೆನ ನಾವು ಹಿಡ್ಕೊತೀವಿ ಅನ್ನೋ ನಂಬಿಕೆ ನನಗಿದೆ..
ಭಗವದ್ಗೀತೆಯ ನೈತಿಕ ಜಿಜ್ಞಾಸೆ
– ರಮಾನಂದ ಐನಕೈ
ಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.
ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೩
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨
ಭಾಗ ೧ ಮತ್ತು ೨ ರಲ್ಲಿ ‘370ನೇ ವಿಧಿಯ ಸಾಂವಿಧಾನಿಕ ಸಿಂಧುತ್ವ’ ಮತ್ತು ‘370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ’ಯ ಬಗ್ಗೆ ಮಾತನಾಡಿದೆವು. ಭಾಗ ೩ ರಲ್ಲಿ ಮುಂದಿನ ಹಾದಿಯ ಬಗ್ಗೆ ಚಿಂತಿಸೋಣ
ಮುಂದಿನ ಹಾದಿ
ಮೇಲೆ ನೀಡಿದ ಎಲ್ಲ ಉದಾಹರಣೆಗಳು ಸಾಬೀತುಪಡಿಸುವುದಿಷ್ಟೇ, ಸಂವಿಧಾನದ 370ನೇ ವಿಧಿ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ನಾಗರಿಕತೆ, ಮಾನವ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಕಾನೂನುಗಳ ಕಲ್ಪನೆಗಳ ಮೇಲೆ ನಡೆಯತ್ತಿರುವ ಅತಿಯಾದ ಅಣಕ. ಇದು ಭಾರತದ ಜನಸಂಖ್ಯೆ ಗಣನೀಯ ಪ್ರಮಾಣದ ಭಾಗವೊಂದನ್ನು ದ್ವತೀಯ ದರ್ಜೆಯ ಮತ್ತು ನಾಗರಿಕರೇ ಅಲ್ಲದ ಸ್ಥಿತಿಗೆ ಇಳಿಸುತ್ತದೆ. ವಿಪುಲ್ ಕೌಲನ ಪ್ರಕರಣವನ್ನು ಮತ್ತೆ ನೋಡುವುದಾದರೆ, ಅಂದಿನ ಮುಖ್ಯಮಂತ್ರಿ ಗುಲಾಮ್ ನಬೀ ಆಜಾದ್ರ ಕಾರ್ಯದರ್ಶಿ ನೀಡಿದ “ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯ ಅಡಿಯಲ್ಲಿ ಭಾರತ ಸರ್ಕಾರದ ಗೃಹ ಇಲಾಖೆ ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರ ಬಾಧ್ಯವಲ್ಲ. ಆದ್ದರಿಂದ ನಿಮ್ಮ ಮಗುವಿನ ವೈದ್ಯಕೀಯ ವೆಚ್ಚವನ್ನು ಪಾವತಿಸಲು ಸಾಧ್ಯವಿಲ್ಲ” ಎನ್ನುವ ನಿರ್ದಯ ಉತ್ತರ ಕೌಲ್ ಕುಟುಂಬದಲ್ಲಿ ಅಣುಮಾತ್ರವಷ್ಟಾದರೂ ಜೀವಂತವಾಗಿದ್ದ ಭರವಸೆಯನ್ನು ತುಂಡರಿಸಿ ಅಡಗಿಸಿತು. ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ ಹದಿಮೂರು ವರ್ಷದ ಅದೃಷ್ಟಹೀನ ಬಾಲಕನ ಬವಿಷ್ಯವನ್ನು ಅಂಧಕಾರಕ್ಕೆ ನೂಕಿತು.
ಸಲಿಂಗ ಕಾಮ ಕಾನೂನು ಬಾಹಿರ ಯಾಕೆ?
-ಬಾಲಚಂದ್ರ ಭಟ್
ಸಲಿಂಗ ಕಾಮದ ಬಗ್ಗೆ ಸುಪ್ರೀಮ್ ಕೋರ್ಟ್ ಕೊಟ್ಟ ಬಹಳ ಕಾರಣಗಳಿಗಾಗಿ ಹುಬ್ಬೇರಿಸುವಂತೆ ಮಾಡಿದೆ. ಬಹಳಷ್ಟು ಜನರು ತೀರ್ಪಿನ ಬೆಂಬಲಕ್ಕಿದ್ದರೆ, ಇನ್ನು ಕೆಲವರು ಇದು ಸಲಿಂಗಿಗಳ ಹಕ್ಕು ಚ್ಯುತಿ ಎಂದು ತರ್ಕಿಸುತ್ತಿದ್ದಾರೆ. ಮೂಲತಹ ಸಲಿಂಗ ಕಾಮವೆಂಬುದು ಪೌರಾತ್ಯ, ಹಾಗೂ ಅರಬ್ ದೇಶಗಳಲ್ಲಿ ನಿಷೇಧಕ್ಕೊಳಗಾಗಲು ಮುಖ್ಯ ಕಾರಣ ಅಲ್ಲಿನ ರಿಲಿಜಿಯನ್ ಸಂಸ್ಕೃತಿ. ಮುಸ್ಲೀಮ್ ಕ್ರಿಶ್ಚಿಯನ್ ಮತ್ತಿತರ ಅಬ್ರಾಹಮಿಕ್ ಧರ್ಮಗ್ರಂಥಗಳು ಸಲಿಂಗ ಕಾಮವನ್ನು ಧರ್ಮವಿರೋಧಿ ಎಂದು ಬೋಧಿಸುತ್ತವೆಯಾದ್ದರಿಂದ ಅದನ್ನು ಅಪರಾಧ ಎಂದು ಸ್ವೀಕರಿಸಲಾಗಿತ್ತು. ವೈಜ್ನಾನಿಕ ಎಂದು ಹೇಳಲ್ಪಡುವ ನಾಸ್ತಿಕರ ರಾಜಕೀಯ ಪಕ್ಷ ಕಮ್ಯುನಿಸ್ಮ್ ಕೂಡ ಸಲಿಂಗ ಕಾಮದ ಬಗೆಗೆ ಬೇರೆಯದೆ ನಿರ್ಧಾರವನ್ನು ಹೊಂದಿರಲಿಲ್ಲ. ಬದಲಾಗಿ ರಿಲಿಜಿಯನ್ ಗಳು ಕೊಟ್ಟ ತೀರ್ಪನ್ನೆ ಸಲಿಂಗಿಗಳ ಮೇಲೆ ಹೇರಿತು. ಆದರೆ ಕಾರಣದ ವ್ಯಾಖ್ಯಾನವನ್ನಷ್ಟೆ ಬದಲು ಮಾಡಿತು. ಇದು ‘ಅನಾಗರಿಕ’ ಎಂಬ ಕಾರಣಕ್ಕೆ ಸ್ಟಾಲಿನ್ ನ ರಾಜಕಾರಣದಲ್ಲಿ ಅಪರಾಧವೆಂದು ಪರಿಗಣಿಸಲಾಗಿತ್ತು. (ಅನಾಗರಿಕ ಎಂದು ತೀರ್ಮಾನಿಸುವಲ್ಲಿ ವೈಜ್ನಾನಿಕ ಧೋರಣೆಯೇ ಇಲ್ಲದಿದ್ದದ್ದು ಕಮ್ಯುನಿಸ್ಮ್ ನ ವೈಜ್ನಾನಿಕ ನಿಲುವನ್ನು ಅನುಮಾನಪಡುವಂತಾಗಿದೆ).
ಬೆಂಗಳೂರು ಸುಂದರವಾಗಬೇಕೇ – ಹಾಗಿದ್ದರೆ, ಒಂದು ಸಣ್ಣ SMS ಕಳುಹಿಸಿ!
- ನಿಮಗೆ ಬೆಂಗಳೂರಿನ ಕಿತ್ತು ಹೋಗಿರುವ ರಸ್ತೆಗಳನ್ನು ನೋಡಿ ಬೇಸರವಾಗಿದೆಯೇ?
- ನಿಮಗೆ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಚೆಲ್ಲಿರುವ ಕಸವನ್ನು ಕಂಡು ರೋಸಿ ಹೋಗಿದೆಯೇ?
- ಬೆಂಗಳೂರಿನಲ್ಲಿ BBMP ಕೆಲಸ ಮಾಡುತ್ತಿದೆಯೋ ಇಲ್ಲವೋ ಎನಿಸುತ್ತಿದೆಯೇ?
ಇದನ್ನೆಲ್ಲಾ ಸರಿಪಡಿಸಲು ನಾವು ಏನೂ ಮಾಡುವುದು ಬೇಡವೇ? ಎಲ್ಲಾ ಜವಾಬ್ದಾರಿಯನ್ನು BBMP ಮೇಲೆ ಹೊರಿಸಿ, ನಾವು ಮನೆಯಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ದೆ ಹೋದರೆ, ಎಲ್ಲವೂ ಸರಿ ಹೋಗುತ್ತದೆಯೇ? ಕನಿಷ್ಠ ಪಕ್ಷ ನಮ್ಮ ದೂರುಗಳನ್ನಾದರೂ BBMPಗೆ ತಲುಪಿಸುವುದನ್ನು ಮಾಡಿದ್ದೇವೆಯೇ? ಮನೆಯಲ್ಲೇ ಕುಳಿತು ಗೊಣಗಿದರೆ, ಗೋಳಾಡಿದರೆ, ಏನು ಪ್ರಯೋಜನ? ಅದನ್ನಾದರೂ ರಸ್ತೆಯಲ್ಲಿ ಮಾಡಿದರೆ ಸುದ್ದಿಯಾಗುತ್ತದೆ.
ನಮ್ಮೆಲ್ಲಾ ತೊಂದರೆಗಳನ್ನೂ ನಮ್ಮ ಮೇಯರ್ ಅವರಿಗೆ ತಿಳಿಸೋಣ. ಒಂದು ಸಣ್ಣ SMS ಕಳುಹಿಸಿದರೂ ಸಾಕು. ಅವರು, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಜನರು ತಮ್ಮ ತೊಂದರೆಗಳನ್ನು ತಮಗೇ ನೇರವಾಗಿ ತಿಳಿಸಬಹುದೆಂದು ಹೇಳಿದ್ದಾರೆ.ಅವರು ಹೇಗೆ ಎಲ್ಲವನ್ನು ಸರಿಪಡಿಸುತ್ತಾರೋ ಗೊತ್ತಿಲ್ಲ. ಕನಿಷ್ಠಪಕ್ಷ ನಮ್ಮ ದೂರನ್ನಾದರೂ ಅವರಿಗೆ ತಿಳಿಸೋಣ.
ಸೆಕ್ಯುಲರ್ ಮೀಡಿಯಾದ ನವಕಣ್ಮಣಿ ’ಕೇಜ್ರಿವಾಲ್’
– ಪ್ರಹ್ಲಾದ್ ಜೋಷಿ
ಇನ್ನು 6 ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ಬರಲಿದೆ ಬಹುತೇಕ ಎಲ್ಲ ಪಕ್ಷಗಳು ಇದಕ್ಕೆ ತಯಾರಿ ನಡೆಸಿವೆ, ದೇಶದ ೨ ಪಕ್ಷಗಳಾದ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿವೆ. ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗಳು ಅಧಿಕಾರ ಹಿಡಿಯಲು ಮುಳುವಾಗಿದೆ, ಇನ್ನು ಬಿಜೆಪಿ ಮೋದಿಯನ್ನು ಅಖಾಡಕ್ಕೆ ಇಳಿಸುತ್ತಿದೆ ಇನ್ನು ಮೊನ್ನೆ ನಡೆದ ಚುನಾವಣಾ ಫಲಿತಾಂಶ ನೋಡಿದರೆ ಮೋದಿಯ ಕಾರ್ಯತಂತ್ರ ಫಲ ಕೊಟ್ಟಿದೆ, ಇದು ಇನ್ನು ಕಾಂಗ್ರೆಸ್ಸಗೆ ಚಿಂತೆಗಿಡುಮಾಡಿದೆ.ಮೋದಿಯ ಜನಪ್ರಿಯತೆ ಕಾಂಗ್ರೆಸ್ಸಿಗೆ ಚಿಂತೆ ಉಂಟು ಮಾಡಿದೆ, ಇಂತಹ ಸ್ಥಿತಿಯನ್ನು ಕಾಂಗ್ರೆಸ್ ಮೊದಲೇ ಊಹೆ ಮಾಡಿತ್ತು.
ಮೋದಿ ಮಾಡಿದ ಅಭಿವೃದ್ಧಿ ಯಾವಾಗ ಜನರ ತಲುಪಿತೋ ಯಾವಾಗ ಮೋದಿಯನ್ನು ಮುಸ್ಲಿಮರು ಬೆಂಬಲಿಸಿದರೋ ಕಾಂಗ್ರೆಸ್ ನಾಯಕರು ಸಣ್ಣದಾಗಿ ಬೆವರತೊಡಗಿದರು, ಮೋದಿಯ ಸಮನಾದ ನಾಯಕರನ್ನು ಹುಡುಕತೊಡಗಿದರು, ರಾಹುಲನಿಂದ ಉತ್ತರ ಪ್ರದೇಶ ಅದಾಗಲೇ ಸೋತಾಗಿತ್ತು, ಮೋದಿಯ ಮುಂದೆ ರಾಹುಲ್ ನಿಲ್ಲುವುದಿಲ್ಲ ಎಂಬುದು ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತಿತ್ತು, ಕಾಂಗ್ರೆಸ್ಸಿನ ಹಗರಣಗಳು ಜನರನ್ನು ಕಾಂಗ್ರೆಸ್ಸಿನಿಂದ ದೂರಮಾಡುತ್ತಿದ್ದವು, ಕಾಂಗ್ರೆಸ್ ಒಬ್ಬ ಸಮರ್ಥ ನಾಯಕನಿಗೆ ಹುಡುಕುತ್ತಿತ್ತು ಆಗ ಕಂಡವರೇ ಅರವಿಂದ ಕೇಜ್ರಿವಾಲ್.
ಸೆಮಿಫೈನಲ್ ಮತ್ತು ಫೈನಲ್
-ನವೀನ್ ನಾಯಕ್
ಭಾರತದ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆ ಹಲವು ಹೊಸ ವಿಚಾರಗಳನ್ನು ತೆರೆದಿಟ್ಟಿದೆ.
1) ನೋಟ ( none of the above ) ಬಳಸಲು ಮೊದಲು ಶುರು ಮಾಡಿದ್ದು.
2) ಜನಲೋಕಪಾಲ್ ಹೋರಾಟದಿಂದ ಬಂದ ರಾಜಕೀಯ ಪಕ್ಷ ಆಪ್
3) ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಪೂರ್ವ ತಯಾರಿಗೆ ಜನರ ನಾಡಿ ಮಿಡಿತ ತಿಳಿಯಲು ಸಿಕ್ಕ ಒಂದು ಅವಕಾಶ.
4) ಮೋದಿ ಮತ್ತು ಕಾಂಗ್ರೆಸ್ ಹಣಾಹಣಿ.
ಇಡೀ ದೇಶದ ಪ್ರಜೆಗಳನ್ನು ಡಿಸೆಂಬರ್ 8 ಕ್ಕೆ ಗಮನೀಯವಾಗುವಂತೆ ಮಾಡಿದ್ದು ಈ ನಾಲ್ಕು ಕಾರಣಗಳಿಗಾಗಿ. ಪ್ರಸಕ್ತ ರಾಜಕಾರಣದ ವೈಫಲ್ಯದಿಂದಾಗಿ ಹೈರಾಣಾಗಿರುವ ಜನರು ರಾಜಕೀಯಕ್ಕೆ ಯಾವ ಪಾಠ ಕಲಿಸಬಹುದೆಂದು ಎಲ್ಲರೂ ತಿಳಿಯಲು ಬಯಸುತಿದ್ದರು. ಮತದಾರ ಪ್ರಭು ಇಲ್ಲಿ ಯಾವ ಅಂಶ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬಹುದು, ಆತನ ಸಧ್ಯದ ಮನಸ್ಥಿತಿ ಏನು. ಇದು ಆಯಾ ರಾಜ್ಯಕ್ಕೆ ಸಂಬಂದಪಟ್ಟರೂ ದೇಶಕ್ಕೆ ಖಂಡಿತಾ ಮೇಲಿನ ನಾಲ್ಕು ಕಾರಣಗಳಿಗಾಗಿ ಮಾರ್ಗದರ್ಶಿಯಾಗಿದೆ.
1) ನೋಟ- ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸುಪ್ರೀಂ ತೀರ್ಪಿನ ಅನ್ವಯ ವೋಟಿಂಗ್ ಮೆಷೀನಲ್ಲಿ ಬಳಸಲಾಯಿತು. ಇದೊಂದು ಕ್ರಾಂತಿಕಾರಕ ಬದಲಾವಣೆಯಾದರೂ ಅಭ್ಯರ್ಥಿಗಳ ಮೇಲೆ ಇದರ ಪ್ರಭಾವ ಬೀರದಂತಿದೆ. ಚುನಾವಣ ಆಯೋಗ ಇದನ್ನು ಬೆಲೆ ಇಲ್ಲದ ಮತಗಳು ಎಂದು ಪರಿಗಣಿಸಿವೆ. ಏಕೆಂದರೆ ನೋಟದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಗಳನ್ನು ಆಯೋಗ ಕಂಡುಕೊಂಡಿಲ್ಲ. ಅದೇನೆ ಇರಲಿ, ಇದರಿಂದ ನಿಂತಿರುವವರೆಲ್ಲ ಕಳ್ಳರೇ ನಂಗೆ ಯಾರೂ ಇಷ್ಟವಿಲ್ಲದ ಕಾರಣ ಮತದಾನ ಮಾಡುತ್ತಿಲ್ಲ ಎಂದು ನೆಪವೊಡ್ಡಿ ನಿರ್ಲಕ್ಷ್ಯವಹಿಸುತಿದ್ದ ಸುಶಿಕ್ಷಿತರ ಪ್ರತಿಕ್ರಿಯೆ ತಿಳಿಯಬಹುದಿತ್ತು. ನಾಲ್ಕು ರಾಜ್ಯದಲ್ಲಿ 11.53 ಕೋಟಿ ಮತ ಚಲಾವಣೆಯಾಗಿದೆ ಅದರಲ್ಲಿ 1.31 ಶೇಕಡಾ ಮತದಾರರು ಈ ವ್ಯವಸ್ತೆಯನ್ನು ಬಳಸಿದ್ದಾರೆ.







