ವಿಷಯದ ವಿವರಗಳಿಗೆ ದಾಟಿರಿ

Archive for

30
ಆಗಸ್ಟ್

ಜೇಮ್ಸ್ ಕ್ಯಾಮರೂನ್ ಎ೦ಬ ಮಾ೦ತ್ರಿಕನೂ…….. “ಅವತಾರ್” ಎನ್ನುವ ದ್ರಿಶ್ಯಕಾವ್ಯವೂ………….

ಶಶಾಂಕ.ಕೆ

೧೯೯೭ ರ ಮಾರ್ಚ ತಿ೦ಗಳು….. “ಟೈಟಾನಿಕ್” ಎನ್ನೋ ಚಲನಚಿತ್ರ ನೋಡ್ಬೇಕಾದ್ರೆ ಆ೦ಗ್ಲ ಚಲನಚಿತ್ರಗಳ ಬಗ್ಗೆ ಸ್ವಲ್ಪನೂ ಅರಿವಿರಲಿಲ್ಲ. ಕೇವಲ ಒ೦ದು ದಶಕದ ಹಿ೦ದೆ ಆ೦ಗ್ಲ ಚಲನಚಿತ್ರಗಳೆ೦ದರೆ ಕೇವಲ ವಯಸ್ಕರು ನೋಡುವ, ಹೀರೋ ಹೀರೊಇನ್ ತುಟಿಗೆ ತುಟಿ ಕೊಟ್ಟು ಮುದ್ದಾಡುವ ಸೀನ್’ಗಳೇ ಹೆಚ್ಚಿರುವ, ಚಿಕ್ಕ ಮಕ್ಕಳು ನೋಡಬಾರದ ಚಲನಚಿತ್ರಗಳೆ೦ದೇ ಎಲ್ಲರ ಅನಿಸಿಕೆ. ಆ೦ಗ್ಲ ಚಲನಚಿತ್ರಗಳು ಟೀವಿಯಲ್ಲಿ ಬ೦ದ ತಕ್ಷಣ ದೊಡ್ಡವರು ಚಾನಲ್ ಬದಲಾಯಿಸುತ್ತಿದ್ದರಿ೦ದ ನನಗೆ ಆ ಚಿತ್ರಗಳ ಬಗ್ಗೆ ಕುತೂಹಲ ಬೆಳೆಯುತ್ತಲೇ ಹೋಯಿತು. ಅಪ್ಪ ಅಮ್ಮ ಇಲ್ಲದಿದ್ದ ಸಮಯದಲ್ಲಿ ಕದ್ದು ಕದ್ದು ಆ೦ಗ್ಲ ಸಿನೆಮಾ ಚಾನಲ್ ನೋಡುವ ಚಪಲ ಪ್ರಾರ೦ಭವಾಯಿತು. (ನಾನೊಬ್ಬ ಕನ್ನಡ ಮಾಧ್ಯಮದ ವಿಧ್ಯಾಥಿ೯ಯಾದದ್ದರಿ೦ದ ನನಗೇನೂ ಅರ್ಥವಾಗುತ್ತಿರಲಿಲ್ಲ-ಆ ಮಾತು ಬೇರೆ). ಮನೆಯಲ್ಲಿ ಯಾವಾಗಲೂ ಹಿರಿಯರು ಇರುತ್ತಿದ್ದರಿ೦ದ ನಾನೆ೦ದೂ ಪೂಣ೯ ಸಿನೆಮಾ ನೋಡಲೇ ಇಲ್ಲ!!! ಈಗ ನನ್ನ “Personal DVD Collecton” ನಲ್ಲೇ ಸುಮಾರು 1000 English ಚಲನಚಿತ್ರಗಳಿರಬಹುದು. ನಿಧಾನವಾಗಿ ನನಗೆ technology ಬಗ್ಗೆ ಸ್ವಲ್ಪಮಟ್ಟಿನ ಅರಿವಾಗತೊಡಗಿತು. ಆಮೇಲೆ ಚಿತ್ರಜಗತ್ತಿನಲ್ಲಿ ಉಪಯೋಗಿಸುವ technology ಬಗ್ಗೆ ತಿಳಿಯಲು ಪ್ರಯತ್ನಿಸತೊಡಗಿದೆ.

ಇಷ್ಟೆಲ್ಲ ಕಥೆ ಯಾಕೆ ಹೇಳಿದ್ದೆ೦ದರೆ… “ಟೈಟಾನಿಕ್” ನಾನು ಚಿತ್ರಮ೦ದಿರದಲ್ಲಿ ಹಾಗೂ ಪೂರ್ಣವಾಗಿ ನೋಡಿದ ಪ್ರಪ್ರಥಮ ಇ೦ಗ್ಲಿಷ್ ಸಿನೆಮಾ… ಅದನ್ನು ನೋಡಿ ಆ೦ಗ್ಲ ಚಿತ್ರಗಳ ಬಗ್ಗೆ ನನಗಿದ್ದ ಪೂರ್ವನಿರ್ಧರಿತ ಅನಿಸಿಕೆ (prejudice) ಎಲ್ಲ ಮಾಯವಾಯಿತು. “ಜೇಮ್ಸ್ ಕ್ಯಾಮರೂನ್” ಎ೦ಬ ಮಾತ್ರಿಕ ಜಗತ್ತಿನಲ್ಲಿದ್ದಾನೆ ಎನ್ನುವುದು ಅರಿವಾಗಿದ್ದು ಆಗಲೇ!!! “ಟೈಟಾನಿಕ್” ನನ್ನ ಮನಸ್ಸಿನಮೇಲೆ ಗಾಢ ಪರಿಣಾಮ ಬೀರಿದ ಚಿತ್ರ. ಒ೦ದು ಕಾಲದ ಜಗತ್ತಿನ ಅತ್ಯ೦ತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹ್ರದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ. ಇವತ್ತಿಗೂ ಗಳಿಕೆಯಲ್ಲಿ “ಟೈಟಾನಿಕ್” ಅನ್ನು ಯಾವ ಚಿತ್ರವೂ ಮೀರಿಸಲು ಸಾಧ್ಯವಾಗಿಲ್ಲ ಎ೦ದರೆ ಆಶ್ಚರ್ಯವಾಗುವುದಿಲ್ಲವೇ?.

ಆ ಮಾ೦ತ್ರಿಕ ನಿರ್ದೇಶಕ 10 ವಷ೯ಗಳ ಕಾಲ ಸರಿಯಾದ technologyಗಾಗಿ ಕಾದು ಸಿದ್ದಪಡಿಸಿದ ಚಿತ್ರ “ಅವತಾರ್”. “ಟೈಟಾನಿಕ್” ಅ೦ಥ ದ್ರಿಶ್ಯಕಾವ್ಯವನ್ನು ಮೀರಿಸುವ ಚಲನಚಿತ್ರ ಬರಲು ಸಾಧ್ಯವೇ ಇಲ್ಲ ಎನ್ನುವ ನನ್ನ ನ೦ಬಿಕೆಯನ್ನು ಮತ್ತೆ ಹುಸಿಗೊಳಿಸಿದ್ದು ಅದೇ ಮಹಾನುಭಾವ. ಕಥೆಯಲ್ಲಿ ಹೇಳಿಕೆಳ್ಳುವ೦ಥದ್ದೇನಿಲ್ಲ?!. ಆದರೆ “Special Effects” ನಿ೦ದಾಗಿ ಈ ಚಿತ್ರ Special ಅನಿಸಿಕೊಳ್ಳುತ್ತದೆ. ಒ೦ದು “Si-Fi” ಚಲನಚಿತ್ರವಾಗಿದ್ದರೂ ಮಾನವೀಯತೆಯನ್ನು ಮೆರೆಸುವ ಅದರ origin ಇಷ್ಟವಾಗುತ್ತಾ ಹೋಗುತ್ತದೆ.

ಜೇಕ್ ಅನ್ನುವ ಮಾಜಿ ಸೈನಿಕನನ್ನು Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗವಿರುವ “Pandora” ಎನ್ನುವ ಬೇರೆಯ ಗ್ರಹಕ್ಕೆ ಕರೆತರಲಾಗುತ್ತದೆ. ಆ ಜನರಿರುವ “ಪವಿತ್ರ!!!” ಜಾಗ ಅತ್ಯ೦ತ ದುಬಾರಿ ಲೋಹದ ಅದಿರಿನ ಗಣಿಯಮೇಲಿದೆ. ಆ ಜನಾ೦ಗವನ್ನು ಅಲ್ಲಿ೦ದ ಬೇರೆಯ ಜಾಗಕ್ಕೆ ಸ್ತಳಾ೦ತರಿಸಲು ಜೇಕ್’ನನ್ನು ಅವರಲ್ಲಿ ಒಬ್ಬನಾಗಿ ಶಾರೀರಿಕವಾಗಿ ಪರಿವರ್ತಿಸಿ ಕಳಿಸಲಾಗುತ್ತದೆ. ಆದರೆ ಆ ಜನಾ೦ಗದ ಒಳ್ಳೆಯತನವನ್ನು ನೋಡಿ ಅವನ ಮನಸ್ಸು ಬದಲಾಗಿ ಅವರಲ್ಲೇ ಒಬ್ಬನಾಗಿ ಉಳಿಯಲು ನಿರ್ಧಾರ ಮಾಡುತ್ತಾನೆ. ಅದಲ್ಲದೆ ಅವನನ್ನು ಅಲ್ಲಿಗೆ ಕಳಿಸಿದವರಿಗೆ ತಿರುಗಿ ಬೀಳುತ್ತಾನೆ. ಕೊನೆಯಲ್ಲಿ ಏನಾಗುತ್ತದೆ ಎನ್ನುವುದೇ suspense.

3D ರೂಪದಲ್ಲಿ ಬ೦ದಿರುವ ಈ ಚಲನಚಿತ್ರದಲ್ಲಿ ಬರುವ Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗದ ಜನರನ್ನು Create ಮಾಡಲು ಆ ತಾ೦ತ್ರಿಕ ವರ್ಗ ಏನೆಲ್ಲಾ ತೊ೦ದರೆ ತಾಪತ್ರಯ ಅನುಭವಿಸಿರಬಹುದು ಆಶ್ಚರ್ಯಪಡುತ್ತಾನೇ ಇಡೀ ಚಲನಚಿತ್ರ ನೋಡಿದೆ. ಕೆಲವು ಸಲ ಈ ಫಿಲ೦ಗಳನ್ನು ನೋಡುವಾಗ ನಮ್ಮವರು ಯಾಕೆ ಇನ್ನೂ “ಮು೦ಗಾರು, ಮಳೆ, ಪ್ರೀತಿ, ಲಾ೦ಗು, ಮಚ್ಚಾ, ಹೊಡಿ ಮಗ” ಈ concept ಇಟ್ಕೊ೦ಡು ಸಿನೆಮಾ ತೆಗಿತಿದಾರೋ ಅರ್ಥ ಆಗ್ತಾನೆ ಇಲ್ಲ. ಬಿಡಿ ನಮ್ಮ ಕನ್ನಡ ಸಿನೆಮಾ ಜನಕ್ಕೆ ಹೇಳಿ ಏನೂ ಪ್ರಯೋಜನ ಇಲ್ಲ. ತಾತ ಹಾಕಿದ ಅರಳಿ ಮರಕ್ಕೇ ನೇಣು ಹಾಕಿಕೊಳ್ಳೊದಕ್ಕೇ ನಿರ್ಧಾರ ಮಾಡಿರೋರೆ ಅಲ್ಲಿರೋದು.

ಮತ್ತೆ ಅವತಾರ್ ಗೆ ಮರಳೋಣ. Normal ಇ೦ಗ್ಲಿಷ ಪಿಚ್ಚರ್ ಥರ ಮೊದಲರ್ಧ ಸ್ವಲ್ಪ ಬೋರಿ೦ಗ್ ಅನಿಸಿದರೂ, ದ್ವಿತೀಯಾರ್ಧ ತು೦ಬಾನೆ ಅದ್ಭುತವಾಗಿ ಮೂಡಿ ಬ೦ದಿದೆ. ಆ ಗ್ರಾಫಿಕ್ಸ್ ಬಗ್ಗೆ ಮಾತಾಡಿದಷ್ಟೂ ಕಡಿಮೆನೇ. ಕೊನೆಯ ಅರ್ಧ ಗ೦ಟೆಯ೦ತೂ ನಿಮ್ಮನ್ನ ಕುರ್ಚಿಯ ಕೊನೆಗೆ ತ೦ದು ಕೂಡಿಸಿಬಿಡತ್ತೆ. ಆ ಸು೦ದರವಾದ Location ಗಳು, ಜಲಪಾತಗಳು, ಬ್ರಹದಾಕಾರದ ಒ೦ದು ಮರ ಎಲ್ಲ ನೋಡುವಾಗ ನನ್ನ ಮನಸ್ಸನ್ನು ಎಷ್ಟರಮಟ್ಟಿಗೆ ಪುಳಕಿತ ಗೊಳಿಸಿದವೆ೦ದರೆ…. ಅವ್ಯಾವುದೂ ನಿಜವಾಗಿ Existanceನಲ್ಲಿ ಎಲ್ಲ ಎನ್ನುವುದನ್ನೇ ಮರೆತುಬಿಡುವಷ್ಟು. ತಾನು ಕಲ್ಪಿಸಿಕೊ೦ಡಿದ್ದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಜೇಮ್ಸ್ ಕ್ಯಾಮೆರೊನ್ Successful ಆಗಿದ್ದಾನೆ. ಅಲ್ಲೇ ಕಣ್ರಿ ಒಬ್ಬ ನಿರ್ದೇಶಕ ಗೆಲ್ಲೋದು. ನಿಜವಾಗ್ಲೂ “ಅವತಾರ್”… ಒ೦ದು ದ್ರಿಶ್ಯಕಾವ್ಯ ಎನ್ನುವದರಲ್ಲಿ ಸ೦ಶಯವೇ ಇಲ್ಲ…….

29
ಆಗಸ್ಟ್

ತೇಜಸ್ವಿ ಎ೦ಬ ಮಾಯಾವಿ…

ಶಶಾಂಕ.ಕೆ

ಪು.ಚ೦.ತೇ… ಅರ್ಥ ಆಗ್ಲಿಲ್ಲ ಅಲ್ವ? ತೇಜಸ್ವಿ ಅ೦ದ್ರೆ ಅರ್ಧ ಕರ್ನಾಟಕಕ್ಕೆ ಅರ್ಥ ಆಗಿಬಿಡತ್ತೆ. ನಿರ್ವಿವಾದವಾಗಿ ಹೇಳಬಹುದಾದ ಒ೦ದು ವಿಷಯ.. “ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕ೦ಡ೦ಥ ಅತ್ಯ೦ತ ಪ್ರತಿಭಾನ್ವಿತ ಸಾಹಿತಿ.”
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ “ಕರ್ವಾಲೋ, ಜುಗಾರಿ ಕ್ರಾಸ್, ಚಿದ೦ಬರ ರಹಸ್ಯ, ಅಲೆಮಾರಿಯ ಅ೦ಡಮಾನ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು” ಮರ್ಯೋದಕ್ಕೆ ಸಾಧ್ಯಾನೆ ಇಲ್ಲ. ಇವೆಲ್ಲಾ ಕೇವಲ ಕಾದ೦ಬರಿಗಳಲ್ಲ. ತೇಜಸ್ವಿ ಎನ್ನುವ ಮಾಯಾವಿ ಶ್ರಷ್ಟಿಸಿದ ಮಾಯಾಲೋಕಗಳು..

ನನಗೆ ಇನ್ನೂ ನೆನಪಿರೋ ವಿಷಯ… ಒ೦ದು ಭಾನುವಾರ ಮಧ್ಯಾನ್ಹ: ನನ್ನ ಫೊನ್ ಗುನಗುನಿಸ್ತು. ಎತ್ತಿದ್ರೆ ಅಪ್ಪ. ಆಗ ಅಪ್ಪ ಮೈಸೂರಿನಲ್ಲಿದ್ರು. ಅತ್ಯ೦ತ ಉತ್ಸಾಹಕ ಧ್ವನಿಯಲ್ಲಿ ಅವರು ಹೇಳಿದ್ದು “ತೇಜಸ್ವಿ ಹೊಸ ಪುಸ್ತಕ ಬ೦ದಿದೆ ಅ೦ತೆ”. ನನಗೆ ಅಷ್ಷೇ ಕೇಳ್ಸಿದ್ದು. ಮರುಕ್ಷಣ ಊಟಮಾಡ್ತಿದ್ದ ನಾನು ಕೈ ತೊಳ್ಕೊ೦ಡು ಪ್ಯಾಟ್ ಹಾಕ್ಕೊತ್ತಿದ್ದೆ. “ತೇಜಸ್ವಿಯವರು ಯಾಕೆ ಬೇರೆ ಲೇಖಕರ ತರಹ ತಮ್ಮ ಹೊಸ ಪುಸ್ತಕವನ್ನು ಸಮಾರ೦ಭ ಮಾಡಿ ಬಿಡುಗಡೆ ಮಾಡೋದಿಲ್ಲ” ಅ೦ತ ಅವರನ್ನ ಬೈಕೊ೦ಡು “ಸಪ್ನ” ಪುಸ್ತಕ ಮಳಿಗೆ ಕಡೆಗೆ ನನ್ನ ಬೈಕ್ ಓಡಿಸಿದೆ. ನೆನಪಿರಲಿ, ನನಗೆ ಆ ಪುಸ್ತಕದ ಬಗ್ಗೆ ಏನೂ ಗೊತ್ತಿಲ್ಲ. ಅಲ್ಲಿ ಹೊಗಿ ನೋಡಿದ್ರೆ ದೊಡ್ಡ ಸ೦ತೆ ಇದ್ದ೦ಗಿತ್ತು. ಎಲ್ಲಾ ತೇಜಸ್ವಿ ಅವರ ಪುಸ್ತಕವನ್ನು ಹುಡ್ಕಾದ್ತಿದ್ರು.

ಹ್ಯಾಗೋ ಸರ್ಕಸ್ ಮಾಡಿ ಒ೦ದು ಪುಸ್ತಕ ಪಡೆದ್ದದ್ದಾಯ್ತು. ಪುಸ್ತಕದ ಹೆಸರು “ಮಾಯಾಲೋಕ – ೧”. ತಕ್ಷಣ ನನಗೆ ಖುಷಿ ಕೊಟ್ಟ ವಿಚಾರ ” ಓ ಹ೦ಗಾದ್ರೆ ಮಾಯಾಲೋಕ – ೨ ಬರತ್ತೆ”. ನಿಜ್ವಾಗ್ಲೂ ತೇಜಸ್ವಿ ಮಾಯೆಯೇ ಅ೦ಥದ್ದು. ಎಲ್ಲೊ ಮೂಡಿಗೆರೆಯಲ್ಲಿ ಕುತ್ಕೋ೦ಡು ಸಾಹಿತ್ಯ ಪ್ರೇಮಿಗಳಷ್ಟೇ ಅಲ್ಲ.. ಯುವಜನರ ಮನಸ್ಸನ್ನೂ ಕೂಡ ಗೆದ್ದಿರುವ ಲೇಖಕ ತೇಜಸ್ವಿ. ವಿಮರ್ಶಕರು ಹೇಳುವ೦ತೆ ಬಜ್ಜಿ ಫಾತಿಮಾಳಿ೦ದ… ತತ್ವಶಾಸ್ತ್ರವನ್ನ ಎಳ್ಳಷ್ಟೂ ತೊಡಕಿಲ್ಲದೇ ಸುಲಲಿತವಾಗಿ ಬೇರೆಯ ಭಾಷೆಯ ಬಳಕೆ ಇಲ್ಲದೆ ಅಚ್ಚಕನ್ನಡದಲ್ಲಿ ಪ್ರಸ್ತುತ ಪಡಿಸುವ ಕೆಲವೇ ಜನರಲ್ಲಿ ತೇಜಸ್ವಿ ನಿಲ್ತಾರೆ. ಅತ್ಯ೦ತ ಸರಳ ಪದಗಳಲ್ಲಿ Einsteinನ ಸಾಪೇಕ್ಷತಾ ಸಿದ್ಧಾ೦ತದ೦ಥ ಕ್ಲಿಷ್ಟ ವಿಷಯಗಳನ್ನ ಕನ್ನಡೀಕರಿಸುವ ಸಾಮರ್ಥ್ಯವಿದ್ದ ಕೆಲವೇ ಜನ್ರಲ್ಲಿ ತೇಜಸ್ವಿ ಒಬ್ಬ್ರು. ಅವರ “ಮಿಲೇನಿಯಮ್ ಸರಣಿ” ಅವರ ಅಪಾರ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ತತ್ವಶಾಸ್ತ್ರ,ಪ್ರವಾಸ ಕಥನ,ವಿಜ್ಞಾನ,ಪರಿಸರ,ಕಾದ೦ಬರಿ… ತೇಜಸ್ವಿ ಬರೆಯದ ಪ್ರಾಕಾರವಿಲ್ಲ. ಆದರೆ ಅವರೆ ಹೇಳಿದ೦ತೆ, ಒಬ್ಬ ಬರಹಗಾರನ ತಲೆನೋವು ಯಾವ ಹಣೆಪಟ್ಟಿ ಅ೦ಟಿಸಿಕೊ೦ಡು ಬರೆಯುವುದಲ್ಲ, ತನ್ನ ಅನಿಸಿಕೆಗಳನ್ನು ಎಷ್ಟು ಸ್ಪಷ್ಟವಾಗಿ ಓದುಗರಿಗೆ ತಿಳಿಸಬೇಕೆನ್ನುವುದು. Read more »

26
ಆಗಸ್ಟ್

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪ್ರಶಸ್ತಿ. ಪಿ, ಸಾಗರ

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ. ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು. Read more »

25
ಆಗಸ್ಟ್

ಗುಂಡಣ್ಣನ ಗೂ+ ಪುರಾಣ

ಪ್ರಶಸ್ತಿ. ಪಿ, ಸಾಗರ

fb ಹೋಯ್ತು ಗೂ+ ಬಂತು ಢಂ ಢಂ ಢಂ..” ಅಂತ ಕಟ್ಟಾ ಗೂಗಲ್ ಪ್ರೇಮಿ ಗುಂಡಣ್ಣ ಕಾಲೇಜ್ ಗ್ರೌಂಡಲ್ಲಿ ಗುನುಗ್ತಿರ್ಬೇಕಿದ್ರೆ ಅವನಂಗೆ ಕೆಲಸಿಲ್ಲದ ಕೆಲ ದೋಸ್ತುಗಳು ಅಲ್ಲಿಗೆ ವಕ್ಕರಿಸಿದ್ರು. ಗುಂಡಣ್ಣ ಪೇಟೆಗೆ ಬಂದು ಅಲ್ಲಿನ ಕೆಲ ದೋಸ್ತುಗಳ ಬಾಯಲ್ಲಿ ಮಿ.ರೌಂಡ್ ಆಗಿದ್ದ. ಏನು ಮಿ.ರೌಂಡ್ ತುಂಬಾ ಖುಷಿಯಾಗಿದ್ದೀರಿ ಅಂದ್ಳು ಇಳಾದೇವಿ ಅಲಿಯಾಸ್ ಇಳಾ. ಆಗ್ದೇ ಇನ್ನೇನು ಆರ್ಕುಟು, ಜೈಕು,ವೇವು,ಬಜ್ಜು ಎಲ್ಲಾ ಆದ್ಮೇಲೆ ಹೊಸಾದು ಬಂದಿದ್ಯಲ್ಲಾ ಗೂಗಲ್ ಪ್ಲಸ್ಸು ಅದ್ರಿಂದ ಸಾಹೇಬ್ರು ಸಿಕ್ಕಾಪಟ್ಟೆ ಖುಷಿಯಾಗಿದಾರೆ ಅಂದ ಟಾಂಗ್ ತಿಪ್ಪ ಅಲಿಯಾಸ್ ಟಿಪ್ಸ್. ಆರ್ಕುಟ್ ಅನ್ನೋದನ್ನ ಆರ್ಕುಟ್ ಬಯೋಕ್ಕೊಟೇನ್ ಅನ್ನೋ ಮಹಾಶಯ ಕಂಡು ಹಿಡಿದಿದ್ದಲ್ವಾ ಮಾರಾಯ್ರೇ ಅಂತ ತನ್ನನುಮಾನ ಹೇಳ್ದ ಮಂಗಳೂರು ಮಂಜ ಅಲಿಯಾಸ್ ಮಿ.ಮ್ಯಾಂಜ್.ಹೌದು   ಆದ್ರೆ ಅವ್ನು ಈಗ ಗೂಗಲ್ ಅಲ್ಲಿ ಪ್ರಾಡಕ್ಟ್ ಮ್ಯಾನೇಜರ್. ಆರ್ಕುಟ್ ನ ಗೂಗಲ್ ಕೊಂಡ್ಕಂಡು ಸುಮಾರು ವರ್ಷ ಆಯ್ತು, ನೀವೆಲ್ಲಿದೀರಾ ಮಿ.ಮ್ಯಾಂಜ್ ಅಂದ್ಳು ಸರಸ್ವತಿ ಅಲಿಯಾಸ್ ಸರ್. ತಾನೇ ಬುದ್ದಿವಂತ ಅಂದ್ಕಂಡಿದ್ದ ಮಂಜನ ಮುಖ ಹುಳ್ಳಗಾಯ್ತು.

ಓ ಹೌದಾ? ಅದೆಂತದು ಜೈಕು ಅಂದ್ಯಲಾ ಅದೆಂತದು ಮಾರಾಯ ಅಂದ ತಿಮ್ಮ ವಿಷಯ ಬದಲಾಯಿಸಕ್ಕೆ .  ಅದೂ fb ತರ  ಒಂದು ಸಾಮಾಜಿಕ ತಾಣ. ಮಿಕ್ರೋ ಬ್ಲಾಗಿಂಗ್, ಲೈಫ್ ಸ್ಟ್ರೀಮ್ ಅನ್ನೋ ಸೇವೆ ಗಳನ್ನ ಟ್ವಿಟ್ಟರ್ ಗೆ ಕೊಡುತ್ತೆ ಅಂದ ತಿಪ್ಪ. ಹಂಗದ್ರೇ ಏನು ಅಂತ ಇಳಾ ಕೇಳೋದ್ರೊಳಗೆ ಅದನ್ನ 2006 ರಲ್ಲಿ ಫಿನ್ ಲ್ಯಾಂಡಿನ ಜೆರ್ರಿ ಮತ್ತೆ ಪೆಟ್ರಿ ಅನ್ನೋರು ಕಂಡು ಹಿಡಿದ್ರು ಅಂದ್ಳು ಸರು. ಅದನ್ನೂ ನಂಗೂಗಲ್ ನವ್ರು 2007 ರಲ್ಲಿ ತಂಗೊಡ್ರು. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಗೂಗಲ್ಗಿಂತ ಬ್ರೌಸರ್ ಬೇರೆ ಇಲ್ಲ… ಅಂತ ಹಾಡೋಕೆ ಶುರು ಮಾಡ್ದ ಗುಂಡಣ್ಣ. ಎಲ್ಲ ಸ್ವಲ್ಪ ಹೊತ್ತು ಕಿವಿ ಮುಚ್ಕಂಡ್ರು.  Read more »

24
ಆಗಸ್ಟ್

ಡಿ ಬಿ ಚಂದ್ರೇಗೌಡರು ಪುಸ್ತಕದಲ್ಲಿ

– ಕಾಲಂ ೯

ಮಲೆನಾಡಿನ ರಾಜಕಾರಣಿ ಡಿ.ಬಿ. ಚಂದ್ರೇಗೌಡರು 75ರ ಹೊಸ್ತಿಲಲ್ಲಿ ಇದ್ದಾರೆ. ಅವರ ನಿರೂಪಿತ  ಆತ್ಮಕಥೆ ‘ಪೂರ್ಣಚಂದ್ರ’ ಪ್ರಕಟಣೆಗೆ ಸಿದ್ಧವಾಗಿದೆ.

ಕಾಂಗ್ರೆಸ್ಸು, ಜನತಾದಳ, ಬಿಜೆಪಿ ಎಲ್ಲ ಪಕ್ಷಗಳಲ್ಲೂ ರಾಜಕೀಯ ಯಾತ್ರೆ ಮಾಡಿ ಕಾನೂನು, ಸಂಸದೀಯ ವ್ಯವಹಾರದಲ್ಲಿ ಹಿಡಿತ ಸಾಧಿಸಿರುವ ರಾಜಕಾರಣಿ ಚಂದ್ರೇಗೌಡರು.

ಆಕಾಶವಾಣಿಯ ಹಿರಿಯ ಪತ್ರಕರ್ತರೊಬ್ಬರು ಚಂದ್ರೇಗೌಡರ ಈ ಆತ್ಮಕಥೆ ‘ಪೂರ್ಣಚಂದ್ರ’(ಚಂದ್ರೇಗೌಡರ ಮನೆಯಾಕೆ ಪೂರ್ಣಿಮಾ)ವನ್ನು ನಿರೂಪೊಸಿದ್ದಾರೆ.

1977ರ ತುರ್ತುಪರಿಸ್ಥಿತಿಯ ತರುವಾಯ ತಿರಸ್ಕೃತಗೊಂಡಿದ್ದ ಇಂದಿರಾಗಾಂಧಿಗೆ ‘ರಾಜಕೀಯ ಮರುಪ್ರವೇಶ’ಕ್ಕಾಗಿ ತಾವು ಗೆದ್ದಿದ್ದ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಟ್ಟ ಕುಟುಂಬ ನಿಷ್ಠೆ ಚಂದ್ರೇಗೌಡರದ್ದು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಿಕ್ಕಮಗಳೂರಿನ ದತ್ತಪೀಠದ ವಿವಾದದ ಸಂಧರ್ಭದಲ್ಲಿ ಸ್ವತಃ ತಾವೇ ಪೂಜೆಗೆ ಕೂತು ಸಿಟಿ ರವಿ, ಮುತಾಲಿಕರಂತಹವರ ಚಳುವಳಿಗಾರರನ್ನು, ಗೌರಿ ಲಂಕೇಶ, ಶಿವಸುಂದರ್ ಇತ್ಯಾದಿ ವಿರೋಧಿ ಬಣದವರನ್ನು ದಂಗುಬಡಿಸಿದ್ದರು.

ಕೊನೆಗಾಲದಲ್ಲಿ ಬಿಜೆಪಿ ಸೇರಿ ಬೆಂಗಳೂರಿನಲ್ಲೊಂದು ಸಂಸದೀಯ ಕ್ಷೇತ್ರ ಹುಡುಕಿಕೊಂಡು ಸಂಸತ್ ಸದಸ್ಯರಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಮನೆದಾರಿ ತೋರಿಸಿದಾಗ ವಕಾಲತ್ತಿಗೆ ನಿಂತ ಋಣಸಂದಾಯ ನಿಷ್ಠೆ ಅವರದು.

ಈ ತಿಂಗಳ ಕೊನೆಯಲ್ಲಿ ಪುಸ್ತಕ ಬರಬೇಕು. ಆದರೆ ಅಗಸ್ಟ್ 27ಕ್ಕೆ ಯಡಿಯೂರಪ್ಪನವರಿಗೆ ಇರುವ ಸಮನ್ಸ್ ಮತ್ಯಾವ ರೂಪ ಪಡೆದುಕೊಳ್ಳುತ್ತದೋ ಎಂಬ ಆತಂಕದಲ್ಲಿರುವ ಚಂದ್ರೇಗೌಡರು ಮುಹೂರ್ತದ ದಿನ ಹುಡುಕುತ್ತಿದ್ದಾರೆ.

ಈ ಹಿಂದೆ ಪ್ರಜಾವಾಣಿಯ ಬಿ. ಎಂ. ಹನೀಫ಼್ ನಿರೂಪಿಸಿದ್ದ ಮೈಸೂರಿನ ರಾಜಕಾರಣಿ ಹೆಚ್. ವಿಶ್ವನಾಥರವರ ಆತ್ಮಕಥೆ ಸಾಕಷ್ಟು ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

*********

23
ಆಗಸ್ಟ್

ಎಳೆ ಹುಡುಗನ ಕನಸುಗಳು

ಪವನ್ ಪರುಪತ್ತೆದಾರ

ಜೀವನವನ್ನು ಸರಿಯಾಗಿ ಗಮನಿಸುತ್ತಾ ಹೋದರೆ ಒಮ್ಮೊಮ್ಮೆ ಅತೀ ಚಿಕ್ಕ ವಿಷಯಗಳು ಮನಸಿಗೆ ನಾಟಿಬಿಡುತ್ತವೆ, ನಮ್ಮ ಮನೆ ಪಕ್ಕದಲ್ಲೇ ಇರುವ ಒಬ್ಬ ಹುಡುಗನ್ನ ನನ್ನ ಗಾಡಿ ಒರೆಸಲೆಂದು ಕರೆದೆ ಅವನ ಹೆಸರು ವಿಶ್ವನಾಥ, ಪ್ರೀತಿಯಿಂದ ಎಲ್ಲರು ಪಪ್ಪಳ ಎಂದು ಕರೀತಾರೆ. ಹತ್ತಿರದಲ್ಲೇ ಇರೋ ಒಂದು ಸರ್ಕಾರೀ ಶಾಲೆಯಲ್ಲಿ 3 ನೆ ತರಗತಿ ವ್ಯಾಸಂಗ ಮಾಡ್ತಾ ಇದಾನೆ. ಓದಿನಲ್ಲೂ ಮುಂದು ಕೆಲಸದಲ್ಲೂ ಮುಂದು ನ ಕರೆದ ತಕ್ಷಣ ಓಡಿ ಬಂದು ಏನು ಪವನಣ್ಣ ಕರೆದ್ರಲ್ಲ ಅಂದ, ಗಾಡಿ ಒರೆಸಿ ಕೊಡೊ ಪಪ್ಪಳ ಅಂದೆ, ಅದಕ್ಕೆ ಅವರಮ್ಮಮ್ಗೆ ಅಮ್ಮೋ ನ ಪವನಣ್ಣ ವೀಟ್ ಕಿಟೆ ಇರಕ್ಕೆ ಅಂತ ಕಿರುಚಿದ( ಅವರ ಮಾತೃ ಭಾಷೆ ತಮಿಳು ).

ನಾನು ಗಾಡಿ ವರೆಸೋ ಬಟ್ಟೆ ತೆಗೆದು ಕೊಟ್ಟೆ ಹಾಗೆ ಒರೆಸುತ್ತಾ ಒರೆಸುತ್ತಾ ಪವನಣ್ಣ ನೀವು ಎಷ್ಟನೆ ಕ್ಲಾಸು ಅಂದ, ನಾನು ಇಂಜಿನಿಯರಿಂಗ್ ಕಣೋ ಪಪ್ಪಳ ಅಂದೆ, ಅಂದ್ರೆ 20 ನೆ ಕ್ಲಾಸ್ ಅ ಅಂದ ನಾನು ಸ್ವಲ್ಪ ಯೋಚಿಸಿ ಲೆಕ್ಕ ಹಾಕಿ 16 ನೆ ಕ್ಲಾಸು ಅಂದೆ, ಹಾಗಾದ್ರೆ ನಾನು ಇ ಥರ ಗಾಡಿ ತೊಗೋಬೇಕು ಅಂದ್ರೆ ಇನ್ನು ೧೩ ಕ್ಲಾಸ್ ಓದಬೇಕು ಅಂದ. ಸ್ವಲ್ಪ ನಕ್ಕು ಹೌದು ಧೌದು ಎಂದೆ..

ಹಾಗೆ  ಗಾಡಿ ಒರೆಸುತ್ತಾ ಒರೆಸುತ್ತಾ ಪವನಣ್ಣ ನೆನ್ನೆ ನಾನು ಸೌತೆ ಕಾಯಿ ಮಾರಕ್ ಹೋಗಿದ್ದೆ ಅಂದ , ಅವರ ತೋಟದಲ್ಲಿ ಸೌತೆ ಕಾಯಿ ಬೆಳೆ ಇರಲಿಲ್ಲ ಅಲ್ಲದೆ ಅಕ್ಕ ಪಕ್ಕದ ಯಾವ ತೋಟದಲ್ಲೂ ಸೌತೆಕಾಯಿ ಬೆಳೆ ಇರಲಿಲ್ಲ ಇವನ ಹೇಗೆ ಮಾರಿಕೊಂಡು ಬಂದ ಅನ್ನೋ ಅನುಮಾನದಲ್ಲೇ, ಲೋ ಪಪ್ಪಳ ಸೌತೆಕಾಯಿ ಎಲ್ಲಿಂದ ಬಂತೋ ಅಂದೆ. ಅದಕ್ಕೆ ಅವ ಪವನಣ್ಣ ಆದ ಯಾರ್ದೋ ಮನೇಲಿ ಸ್ಕೂಲ್ ಇಂದ ವಾಪಾಸ್ ಬರೋವಾಗ ಹಸುಕಾಕು ಅಂತ ಕೊಟ್ರು, ನ ಮಾರಿಕೊಂಡು ಬಂದ್ ಬಿಟ್ಟೆ ಅಂದ ಅದಕ್ಕೆ ನಾನು ಲೋ ಕೆಟ್ಟಿರೋ ಸೌತೆಕಾಯಿ ಯಾರದ್ರು ಮಾರ್ತರೇನೋ ಅಂದೆ ಅವನು ಇಲ್ಲ ಪವನಣೋ.ಚಂದಗಿತ್ತು ಸ್ವಲ್ಪ ಬಲ್ತೋಗಿತ್ತು ಅಷ್ಟೇ ಅದಕ್ಕೆ ಮಾರಿಕೊಂಡು ಬಂದೆ ಅಂದ. ಸರಿ ಎಷ್ಟು ಕಾಸ್ ಬಂತು ಏನ್ ಮಾಡಿದೆ ಅಂದೆ, ಅದಕ್ಕೆ ೨೦ ರುಪಾಯಿ ಬಂತು, ನಮ್ಮಮ್ಮ ಪಾಪ ಓಲೆ ಇಲ್ಲ ಅಂತ ಇದ್ಲು ಅದಕ್ಕೆ ಚಿನ್ನದ ವಾಲೆ ತಂದು ಕೊಟ್ಟೆ ಅಂದ. ನನಗೆ ನಗು ತಡೆಯಕ್ಕಾಗದೆ, ಲೋ ಪಪ್ಪಳ 20 ರೂಪಾಯಿಗೆ ಯಾರೋ ಚಿನ್ನದ ವೋಲೆ ಕೊಡ್ತಾರೆ ಅಂದ್ರೆ ಅಯ್ಯೋ ಹೋಗ ಪವನಣ್ಣ ಅಷ್ಟೇ ಮತ್ತೆ ನಿಮಗೆ ಗೊತ್ತಿಲ್ಲ ಅಂದ , ಆಮೇಲೆ ಹಾಗೆ ಮುಂದುವರೆಸುತ್ತಾ ಆದ್ರೆ ಆ ವಾಲೆನ ಐಶು ಕದ್ದುಕೊಂಡೋಗವಳೆ  ಕೇಳಿದ್ರೆ ನಂದೇ ಅಂತವ್ಲೇ ಪವನಣ್ಣ ಅಂದ, ಮತ್ತೆ ಈಗ ಏನೋ ಮಾಡ್ತ್ಯ ಅಂದೆ  ಅದಕ್ಕೆ ಅವನು ಅಯ್ಯೋ ಹೋದ್ರೆ ಹೋಗ್ಲಿ ಶುಕ್ರವಾರ ಸಂತೆಗೆ ನಮ್ಮತ್ತೆ ಜೊತೆ carrot ಮಾರಕ್ ಹೋಗ್ತೀನಿ ಸ್ಕೂಲ್ ಬಿಟ್ ತಕ್ಷಣ ಹೋಗಿ 3 hour ವ್ಯಾಪಾರ ಮಾಡಿದ್ರೆ 20 ರುಪಾಯಿ ಕೊಡ್ತಾರೆ ಅ ಕಾಸಲ್ಲಿ ಸಂತೆಲೆ ಓಲೆ ತೆಕ್ಕೊಡ್ತೀನಿ ಅಂದ.

wow  ಅವನ ಅಮ್ಮನಿಗೆ ವಾಲೆ ಕೊಡಿಸಬೇಕಂಬ ಅಸೆ ಅ ವಯಸಿಗೆ ತಾಯಿಯ ನೋವನ್ನ ಅರ್ಥ ಮಾಡ್ಕೊಳೋ ಮನಸು ನೋಡಿ ನನಗೆ ದಿಗ್ಭ್ರಮೆ ಆಯಿತು.ಅಷ್ಟರಲ್ಲೇ ಗಾಡಿ ಒರೆಸಿದ್ದಾಗಿತ್ತು ಒರೆಸೋ ಬಟ್ಟೆ ಒದೆರಿ ವಾಪಾಸ್ ಕೊಟ್ಟು ಹೋಗ್ತೀನಿ ಪವನಣ್ಣ ನಮ್ಮಪ್ಪನ ಜೊತೆ ನೀರ್ ಕಟ್ಟಕ್ ಹೋಗ್ಬೇಕು ಅಂತ ನಿಂತ, ನಾನು ಜೆಬಿಗೆ   ಕೈ ಹಾಕಿದರೆ 3 ರು ಚಿಲ್ಲರೆ ಇತ್ತು ಕೊಟ್ಟು ಹೋಗಿ ಹುಂಡಿಗೆ ಹಕ್ಕೊಲೋ ಪಪ್ಪಳ ಅಂದೇ ಕುಷಿ ಕುಷಿಯಾಗಿ ಮನೆ ಕಡೆ ಓಡಿದ,…..!!!

********************************************************************

22
ಆಗಸ್ಟ್

ದುಡ್ಡು ಇದ್ದರೆ ದುನಿಯಾ, ಜಾತಿ ಇದ್ದರೆ ಅಧಿಕಾರ – ಹೊಸಗಾದೆ

ಕೋಮಲ್

ಸಿದ್ದ ಯಾಕೋ ಸಾನೇ ಬೇಜಾರಾಗಿದ್ದ, ಮನೆ ಮುಂದೆ ತಲೆ ಮ್ಯಾಕೆ ಟವಲ್ ಹಾಕ್ಕಂಡು, ವಿಧವೆ ತರಾ ಕುಂತಿದ್ದ. ಯಾಕ್ಲಾ ಸಿದ್ದ ಅಂದ ಸಂಭು. ನೋಡ್ಲಾ ನಾನು ರಾಜಕೀಯ ನೋಡ್ತಾನೇ ಇದೀನಿ, ಎಲ್ಲಿಗಲಾ ಬಂತು ನಮ್ಮ ರಾಜಕೀಯ, ಅಧಿಕಾರಕ್ಕಾಗಿ ಹೊಡೆದಾಟ, ಜಾತಿ, ಕಾಸು ಎಲ್ಲಾ ಬತ್ತಾ ಐತಲ್ಲೋ, ಹಿಂಗಾದ್ರೆ ನಮ್ಮಂತಹ ಬಡವರು, ರೈತರು ಬದಕಕ್ಕೆ ಆಯ್ತದೇನ್ಲಾ ಅಂದ ಸಿದ್ದ.  ನಮ್ಮ ಜಾತಿ ಪ್ರಬಲವಾಗಿಲ್ಲ ಅಂದ್ರೆ ಸಾಯೋ ಗಂಟ ಬರೀ ಕಾರ್ಯಕರ್ತನಾಗೇ ಇರಬೇಕಾಯ್ತದೆ ಕಲಾ, ಅದೇ ಪ್ರಬಲ ಜಾತಿ ಇದ್ದೋರು ಅಧಿಕಾರನೂ ಮಾಡ್ತಾರೆ, ಅಂಗೇ ಕಾಸು ಮಾಡ್ಕಂತಾರೆ ಅಂದ ಸಂಭು. ಪಾಪ ಸಂಭುನೂ ಅಳಕ್ಕೆ ಸುರು ಮಾಡ್ದ. ಬುಡ್ಲಾ ಅಳಬೇಡ ಬುಡ್ಲಾ ಅಂದ ಸಿದ್ದ. ನಮ್ಮದು ಜಾತ್ಯಾತೀತ ರಾಜ್ಯ ಅಲ್ಲ ಕಲಾ.  ನಮ್ಮದು ಜಾತಿ ರಾಜ್ಯ ಅಂದ ಸುಬ್ಬ.

ಕಡೆಗೆ ಎಲ್ಲಾ ಸೇರ್ಕಂಡು, ನಿಂಗನ ಅಂಗಡಿಗೆ ಚಾ ಕುಡಿಯುವಾ ಅಂತಾ ಹೋದ್ವಿ. ಅಲ್ಲಿ ನಮ್ಮ ಮಿಕ್ಕಿದ ಗೆಳೆಯರು ಕೂಡ ಬೈ ಟು ಚಾ ಕುಡಿತಾ ಕುಂತಿದ್ರು, ಬರೀ ಚಲ್ಟಾ ಐತೆ ಅನ್ನೋರು. ಕಿಸ್ನ ಡಿಕಾಕ್ಸನ್ ಕಮ್ಮಿ ಆಗೈತೆ ಅಂತಿದ್ದ. ಮಗಾ ನಾಗ ಮಾತ್ರ ಇಂಗ್ಲೀಸ್ ಪೇಪರ್ ಓದ್ತಾ ಇದ್ದ. ಓದಿರೋದು ಮಾತ್ರ ಮೂರನೇ ಕಿಲಾಸು. ಪೋಟೋ ನೋಡ್ತಾ ಇದೀನಿ ಕನ್ರಲಾ ಅಂತಿದ್ದ ನಾಗ, ಅದೂ ಉಲ್ಟಾ ಮಡಿಕ್ಕಂಡು. ಏಥೂ.  ಏನ್ರಲಾ ಸಮಾಚಾರ ಅಂದ ತಂಬೂರಿ ನಾಗ. ನೋಡ್ರಲಾ ಒಂದು ಟೇಮಲ್ಲಿ ರೆಡ್ಡಿಗಳು ಅಂದ್ರೆ ಸರ್ಕಾರನೇ ಹೆದರೋದು ಕಲಾ, ಅವರು ಇಲ್ಲದೆ ಸರ್ಕಾರನೇ ನಡೆಸಕ್ಕೆ ಆಗಕ್ಕಿಲ್ಲಾ ಅನ್ನೋ ಟೇಮ್ ಇತ್ತು. ಯಡೂರಪ್ಪನು ಹೆದರೋದು. ಹಯ ಕಮಾಂಡ್ ಹೆದರೋದು. Read more »

20
ಆಗಸ್ಟ್

ಸಂಸ್ಕೃತಿ ಸಂಕಥನ – ೫

– ರಮಾನಂದ ಐನಕೈ

ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.

ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.

Read more »

19
ಆಗಸ್ಟ್

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

– ರಾಕೇಶ್ ಶೆಟ್ಟಿ

ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.

’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.

Read more »

19
ಆಗಸ್ಟ್

ಈ ಎಡವಟ್ಟುಗಳು ಯಾಕೆ ಹೀಗೆ ಅಂತ?

– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.

ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.

ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.

Read more »