ವಿಷಯದ ವಿವರಗಳಿಗೆ ದಾಟಿರಿ

Archive for

5
ಆಗಸ್ಟ್

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಡಾ. ರಾಜಾರಾಮ ಹೆಗಡೆ

ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ  ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು  ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ  ಅದೊಂದು ಅಪಾಯಕಾರಿ ಗ್ರಂಥವಾಗಿದೆ.  ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ. Read more »

5
ಆಗಸ್ಟ್

ಸಂಸ್ಕೃತಿ ಸಂಕಥನ – ೪

– ರಮಾನಂದ ಐನಕೈ

ಧರ್ಮದ ಮೈಮೇಲೆ – ರಿಲಿಜನ್ನಿನ ಅಂಗಿ 

 ವಿಪರ್ಯಾಸ ನೋಡಿ. ಒಂದು ಕಡೆ ‘ಹಿಂದೂ ಧರ್ಮ’ ಅನ್ನುತ್ತೇವೆ. ಇನ್ನೊಂದು ಕಡೆ ಅದನ್ನೇ ‘ಹಿಂದೂ ರಿಲಿಜನ್’ ಅನ್ನುತ್ತೇವೆ. ಯಾವುದೇ ಭಾರತೀಯರನ್ನು ಕೇಳಿದರೆ ಇವೆರಡರ ನಡುವೆ ವ್ಯತ್ಯಾಸವೇ ಇಲ್ಲ ಎಂದು ಆತ್ಮವಿಶ್ವಾಸದಿಂದ ಪ್ರತಿಪಾದಿಸುತ್ತಾರೆ. ಇವೆರಡರ ವ್ಯತ್ಯಾಸ ತಿಳಿಯದಿದ್ದದ್ದೇ ಭಾರತೀಯರ ಮುಖ್ಯ ಮಾನಸಿಕ ತೊಂದರೆ. ಹಾಗಾಗೇ ನಿತ್ಯ ಗೊಂದಲದಲ್ಲಿ ಒದ್ದಾಡುತ್ತೇವೆ.

‘ರಾಜಕೀಯದಲ್ಲಿ ಧರ್ಮ ಇರಬಾರದು’, ‘ಸಾಹಿತ್ಯದಲ್ಲಿ ಧರ್ಮ ಬರಬಾರದು’, ‘ಕೋಮು ಗಲಭೆಗೆ ಧರ್ಮ ಕಾರಣ’ – ಇತ್ಯಾದಿ ಹೇಳಿಕೆ ಕೇಳಿದಾಗ ನಮಗೆ ಪುನಃ ಗೊಂದಲ. ಏಕೆಂದರೆ ಈ ಹೇಳಿಕೆಯನ್ನು ತೇಲಿ ಬಿಡುವವರು ಬುದ್ಧಿಜೀವಿಗಳು. ಅವರು ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ ಪ್ರಜ್ಞಾಪೂರ್ವಕವಾಗಿ ವಾದಿಸುತ್ತಾರೆ. ಆದರೆ ನಾವು ಸಾಮಾನ್ಯ ನಾಗರಿಕರು ಧರ್ಮ ಎಂಬ ಅರ್ಥದ ನೆಲೆಯಲ್ಲಿ ಅದನ್ನು ಗ್ರಹಿಸುತ್ತೇವೆ. ಹಾಗಾಗಿ ಎಲ್ಲವೂ ನಮ್ಮ ಮನಸ್ಸಿಗೆ ಅರ್ಧಸತ್ಯ ಅನಿಸುತ್ತದೆ. ಧರ್ಮ ಬೇಡ ಅಂದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಕರ್ತವ್ಯ ಬೇಡವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ ಧರ್ಮ ಹಾಗೂ ರಿಲಿಜನ್ ಮಧ್ಯೆ ವ್ಯತ್ಯಾಸ ಇರಲೇಬೇಕೆಂಬುದು ನಮ್ಮ ಗೃಹಿಕೆಗೆ ಸೂಚಿಸುತ್ತದೆ. ಎರಡೂ ಒಂದೇ ಆಗಿದ್ದರೆ ಈ ರೀತಿ ಗೊಂದಲ ಏಕೆ ಸೃಷ್ಟಿಯಾಗುತ್ತದೆ? ಇದೇ ಅರ್ಥವಾಗದ ಒಗಟು.

Read more »