ವಿಷಯದ ವಿವರಗಳಿಗೆ ದಾಟಿರಿ

Archive for

1
ಆಗಸ್ಟ್

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

-ವಸಂತ್ ಶೆಟ್ಟಿ
ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ನಡೆದಿರೋ ರಾಜಕೀಯ ಬಿಕ್ಕಟ್ಟು ಇನ್ನೇನು ಮುಗಿಬಹುದು ಅನ್ನೋ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ನಡೆದಿರೋ ವಿದ್ಯಮಾನವನ್ನು ಗಮನಿಸಿದರೆ ಕರ್ನಾಟಕದ ರಾಜಕೀಯ ಒಂದು ದೊಡ್ಡ ಬದಲಾವಣೆಯ ಘಟ್ಟದಲ್ಲಿದೆ ಅನ್ನಬಹುದು. ಯಾಕೆ ಹಾಗಂದೆ ಅಂತ ಕೇಳಿದ್ರೆ ನನ್ನ ಅನಿಸಿಕೆ ಇಂತಿದೆ:

ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, “ಅಪ್ಪಣೆ ಮಹಾಪ್ರಭು” ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. “ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು” ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು. Read more »
1
ಆಗಸ್ಟ್

ಕಥೆಯಾದಳು ಹುಡುಗಿ!

– ಚಿತ್ರ ಸಂತೋಷ್

ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲಭಾಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ.

ನನಗೆ ೨೨ ವರ್ಷ. ನಾವು ಐವರು ಹೆಣ್ಣುಮಕ್ಳು. ಮನೆಯಲ್ಲಿ ಬಡತನ. ನಮ್ಮ ಮದುವೆ ಕುರಿತು ಯೋಚನೆ ಮಾಡಿ ಮಾಡಿ ಅಪ್ಪಹಾಸಿಗೆ ಡಿದಿದ್ದ. ನಾನೇ ದೊಡ್ಡವಳು. ನನ್ನ ಕೊನೆಯ ತಂಗಿಯ ಹುಟ್ಟುವಾಗಲೇ ಹೆರಿಗೆಯಲ್ಲಿ ತೊಂದರೆಯಾಗಿ ಅಮ್ಮ ಸಾವನ್ನಪ್ಪಿದ್ದಳು.  ನಾನು ದೊಡ್ಡವಳಾಗಿದ್ದರಿಂದ ನನಗೆ ಸಣ್ಣ ವಯಸ್ಸಿನಲ್ಲೇ ಒಬ್ಬ ಮುದುಕನ ಜೊತೆ ಅಪ್ಪ ಮದುವೆ ಮಾಡಿದ್ದ. ಆದರೆ, ಅವನಿಗೆ ಆಗಲೇ ಮೂರು ಮಂದಿ ಪತ್ನಿಯರಿದ್ದರು. ಮರಳಿ ಮನೆಗೆ ಬಂದೆ. ಕೆಲಸ ಹುಡುಕುವುದು ಅನಿವಾರ್ಯವಾಯಿತು. ನಮ್ಮೂರಿನ ಅಂಕಲ್ ಒಬ್ರು ಕೆಲಸ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅಪ್ಪನಿಗೂ ಹೇಳದೆ ಅವನನ್ನು ನಂಬಿ ಮುಂಬೈಗೆ ತೆರಳಿದೆ.

Read more »