ವಿಷಯದ ವಿವರಗಳಿಗೆ ದಾಟಿರಿ

Archive for

10
ಆಗಸ್ಟ್

ಮದನಾರಿ ಬೇಕಾ?

– ಸಚಿನ್

 ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ “ಮದನಾರಿ”, ಚಿತ್ರರಂಗದ ಭಾಷೆಯಲ್ಲಿ ಹೇಳಬೇಕಾದರೆ ಇದೊಂದು ಮಸಾಲ ಕಾರ್ಯಕ್ರಮ, ಇದರ ಮುಖ್ಯ ಆಕರ್ಷಣೆ ಎಂದರೆ ಐಟಮ್ ಗರ್ಲ್ ಗಳ ಬಗ್ಗೆ ಸಂಪೂರ್ಣ ವಾದ ವಿವರ ಅವರ ಜೀವನದ ಏಳು ಬೀಳುಗಳ ಬಗ್ಗೆ ವಿವರ, ಅವರಿಗಿರುವ ಬಾಯ್ ಫ್ರೆಂಡ್ ಗಳು ಜತೆಯಲ್ಲಿ ಇರುವವರ ಹಾಗು ಕೈ ಕೊಟ್ಟವರ ಬಗ್ಗೆ ಮಾತು. ಹಾಗು ಚಿತ್ರ ರಂಗಕ್ಕೆ ಪ್ರವೇಶ ಅದರ ಹಿನ್ನೆಲೆ, ಇನ್ನು ಮುಂತಾದ ಚಿತ್ರ ವಿಚಿತ್ರ ಸಂಗತಿ ಗಳಿಂದ ಕಾರ್ಯಕ್ರಮ ವನ್ನು ನಿರೂಪಕಿ ದಿವ್ಯಶ್ರಿ ಅವರಿಂದ ನಿರೂಪಿತ ವಾಗಿತ್ತದೆ. ಪ್ರತಿ ಭಾನುವಾರ ರಾತ್ರಿ ಹಾಗೂ ವಾರದ ದಿನಗಳಲ್ಲಿ ಮತ್ತೆ ಮರುಪ್ರಸಾರ ಮಾಡಲಾಗುತ್ತದೆ.ಆದರೆ ಇಷ್ಟೇ ಆಗಿದ್ದರೆ ಈ ಕಾರ್ಯಕ್ರಮದ ಬಗ್ಗೆ ನಾವು ಇಲ್ಲಿ ಟೀಕೆ ಮಾಡುವ ಪ್ರಮೇಯ ವೇ ಬರುತ್ತಿರಲಿಲ್ಲ. ಈ ಎಲ್ಲ ವಿವರ ಗಳ ಜತೆಗೆ ಅಶ್ಲೀಲ ದೃಶ್ಯ ಗಳನ್ನು ಪ್ರಸಾರ ಮಾಡುತ್ತಾರಲ್ಲ ಅದು ಹೇಸಿಗೆ ಹುಟ್ಟಿಸುತ್ತೆ.

Read more »

10
ಆಗಸ್ಟ್

ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

-ಸುಂದರ ರಾವ್

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ “ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ” ಎಂಬ ಸುದ್ದಿಗಳು ಪ್ರಕಟವಾದವು. “ವಂಶ” ಪತ್ರಿಕೆಯ ಮಿತ್ರರನ್ನು “ನಮ ಒರ ಪೋದು ತೂದು ಬರ್ಕನ?” (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.

Read more »