ವಿಷಯದ ವಿವರಗಳಿಗೆ ದಾಟಿರಿ

Archive for

9
ಆಗಸ್ಟ್

ಕಾರ್ಯಕರ್ತ

– ಪವನ್ ಪರುಪತ್ತೆದಾರ

ಊರಲೆಲ್ಲ ತಲೆಯ ಮೇಲೆ ಹಾರ್ನ್ ಹೊತ್ತ ಆಟೋ ಒಂದೇ ಡೈಲಾಗ್ ಅನ್ನು ಹೇಳುತ್ತಾ ತಿರುಗಾಡುತಿತ್ತು,ಮರಯದಿರಿ ಮತ ಬಾಂಧವರೆ ಮರೆತು ನಿರಾಶರಾಗದಿರಿ, ಈಗ ಮರೆತು ಮುಂದೆ ಯಾಕಾದರೂ ಇಂತಹ ತಪ್ಪು ಮಾಡಿದೆನೋ ಎಂದು ಮರುಗದಿರಿ, ನಿಮ್ಮ ಮತವನ್ನು ನಮ್ಮ ಕಮಲಣ್ಣನ ಪಾರ್ಟಿಯ ಅಭ್ಯರ್ಥಿಯಾದಂಥ ಬಡವರ ಬಂಧು ಧಿಮಂತ ನಾಯಕ ಶ್ರೀಮಾನ್ ಸಿದ್ದಣ್ಣ ನವರಿಗೆ ನೀಡಿ, ಸಿದ್ದಣ್ಣ ನವರಿಗೆ ಮತ ನಮ್ಮೂರಿನ ಜನತೆಗೆ ಹಿತ  ಇದನ್ನೇ ಮತ್ತೆ ಮತ್ತೆ ಅರಚುತ್ತ ಸಾಗುತಿದ್ದ ಆಟೋ ಒಳಗಿಂದ ಸುರೇಶ ಸಿದ್ದಣ್ಣನ ಹೆಸರಿನಲ್ಲಿರುವಂತಹ ಒಂದು pamplet ಅನ್ನು ಹಂಚುತಿದ್ದ, ಅದಕ್ಕಾಗಿ ಮಕ್ಕಳು ಆ ಆಟೋ ಹಿಂದೆಯೇ ಓಡುತ್ತಾ ಇದ್ದರು………

ಅಂಗಡಿ ಬೀದಿಯಲ್ಲಿ ಅಬ್ಧುಲ್ಲ ತನ್ನ ಒಂದು ಸಣ್ಣ ಗುಂಪನ್ನು ಕಟ್ಟಿಕೊಂಡು ಅಲ್ಲಿರುವ ಕರೆಂಟ್ ಕಂಬಗಳನೆಲ್ಲ ನೋಡುತ್ತಾ, ಅರೆ ಇಸ್ಕಿ ಕ್ಯಾ ರೆ ಕಮಲಣ್ಣನ ಪಾರ್ಟಿ ಅವ್ರು ಆಗಲೇ banner ಗೆ ಕಟ್ಬಿಟ್ಟಿ ಅವ್ರೆ. ನಮ್ದುಕೆ ಇನ್ನು ಎಲ್ಡು ಅಡಿ ಮೇಲಕ್ಕೆ ಕಟ್ಟೋಣ ಅಂತ ತನ್ನ ಶಿಷ್ಯನ್ನ ಕರೆದ, ಹೇ ಪಟ್ಟೆ ಅರೆ ಇದರ್ ಅಂತ ಕಂಬ ಹತ್ತಿಸಿ ಹಸ್ತಣ್ಣನ ಪಾರ್ಟಿ ಕಡೆ ಇಂದ ನಿಂತಿದ್ದ ಸನಾಉಲ್ಲ ನ ಫೋಟೋ ಸಮೇತ ಇರೋ ಹಸ್ತಣ್ಣನ ಪಾರ್ಟಿಗೆ ಮತ ನಮ್ಮೂರಿನ ಜನಕ್ಕೆ ಹಿತ. ಅಂತ ಇರೋ banner ಗಳನ್ನ ಕಟ್ಟಿಸ್ತ ಇದ್ದ. ಅಷ್ಟರಲ್ಲೇ ಅಲ್ಲಿದ್ದ ಕೆಲವರು ಗುಂಪು ಸೇರಿ ಇವರು ಮಾಡುತ್ತಾ ಇದ್ದ ಕೆಲಸವನ್ನು ಗಮನಿಸ್ತ ಇದ್ರು, ಅವರನ್ನ ನೋಡಿದ ಅಬ್ದುಲ್ಲ ಹೇ ಅಣ್ಣ ನಮಸ್ಕಾರ ನಮ್ಮ ನೆಚ್ಚಿನ ನಾಯಕ, ಬಡವರ್ಗೆ ಸಹಾಯ ಮಾಡೋದ್ರಾಗ ಎತ್ತಿದ ಕೈ ನಮ್ ಸನಾಉಲ್ಲಾದು. ನಿಮ್ಮದು ಎಲ್ಲರ್ದುಗೆ ಓಟು ನಮ್ದು ಹಸ್ತಣ್ಣ ಪಾರ್ಟಿ ಗೆ ಹಾಕಿ ಅಂತ ಭಾಷಣ ಮಾಡಿದ. ಅದೇ ಬೀದಿಲಿ ಹಾದು ಹೋಗುತ್ತಿದ್ದ ಕಮಲಣ್ಣನ ಪಾರ್ಟಿಯ ಒಬ್ಬ ವ್ಯಕ್ತಿ ಇದನ್ನ ನೋಡಿ ಮಖ ಕೆಂಪಗ ಮಾಡಿಕೊಂಡು ಹೋದ……. Read more »