ವಿಷಯದ ವಿವರಗಳಿಗೆ ದಾಟಿರಿ

Archive for

3
ಆಗಸ್ಟ್

ಅಲಾಲ್ ಟಪಾಲ್…!

ಪವನ್ ಪಾರುಪತ್ತೇದಾರ

ನಮ್ಮಪ್ಪ ನನ್ನ ಹಾಗೆ ಕರೆಯೋದ್ರಲ್ಲು ಒಂದು ಅರ್ಥ ಇತ್ತು ಕಾರಣ ಇತ್ತು. ಏಳುತ್ತಾ ಇದ್ದದ್ದು ೯ ಘಂಟೆ ಎದ್ದು ಹಲ್ಲು ತಿಕ್ಕೋ ಅಷ್ಟರಲ್ಲಿ ಅಮ್ಮ ಕಾಫೀ ಕೊಡುತಿದ್ದರು, ನಂತರ ಸ್ನಾನ ಮುಗಿಸಿ ತಿಂಡಿ. ಅಷ್ಟರಲ್ಲಿ ೧೧ ಘಂಟೆ ಆಗಿರೋದು. ಇನ್ನು ಆಗ ಕಂಪ್ಯೂಟರ್ ಮುಂದೆ facebook, orkut, ಅ ಸಂಘ, ಈ ಕೂಟ, ಇನ್ಯಾವುದೋ ಬಳಗ ಅಂತ ಚಾಟಿಂಗ್ ಮಾಡುತ್ತಾ ಕೂತರೆ ಮಧ್ಯಾಹ್ನ ೨ ಘಂಟೆ ಆಗುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾರೆ. ಊಟ ಮಾಡಲು ಎಲ್ಲರು ಕೂತು ಊಟ ಮುಗಿಸಿ ನಂತರ ಮತ್ತೆ online ಹೋದರೆ ಮತ್ತೆ ಸಮಯದ ಅರಿವೇ ಇರುವುದಿಲ್ಲ.

ಸಂಜೆ ೬ ಘಂಟೆ ಹೊತ್ತಿಗೆ ಹಸು ಮನೆಯಲ್ಲಿನ ಸಗಣಿ ಕಸ clean ಮಾಡಿ, ಮತ್ತೆ ಒಂದು ರೌಂಡ್ ಕಾಫೀ ಕುಡಿದು ಹೊರಟರೆ ಮತ್ತೆ ಮನೆ ಸೇರುತಿದ್ದಿದ್ದು 10 ಘಂಟೆಗೆ. ಸ್ನೇಹಿತರ ಜೊತೆ ಅಡ್ಡ, ಕಾಡು ಹರಟೆ, ಮನೆಗೆ ಬಂದೊಡನೆ ಊಟ ಮಾಡಿ ಮತ್ತೆ online 12 ರ ತನಕ ಚಾಟಿಂಗ್ ನಂತರ ನಿದ್ದೆ. ಈ ರೀತಿಯ ದಿನಚರಿ ಇರುವ ಯಾವ ಮಗನನ್ನಾದರೂ ಅಲಾಲ್ ಟಪಾಲ್ ಅನ್ನದೆ ಮುದ್ದು ಮಾಡೋದಕ್ಕ ಸಾಧ್ಯ??

ಹೌದು ನಾನು ಅಲಾಲ್ ಟಪಾಲೇ, ಅಲೆದು ಅಲೆದು ನಂತರ ಅದರ ಗುರಿಯನ್ನು ಸೇರುವ ಟಪಾಲಿನ ಮೇಲೆ ಒಂದು ವಿಳಾಸ ಇರುತ್ತದೆ. ಹಾಗೆ ನನ್ನ ಈ ಬದುಕಿನ ವಿಳಾಸ ನಾನೆ ಬರೆದುಕೊಂಡಿರುವಂತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಬೇಕೆಂದು. ಆದರೆ ವಿಧಿ ಅದನ್ನು ಸರ್ಟಿಫಿಕೇಟ್ ಗಷ್ಟೇ ಸೀಮಿತಗೊಳಿಸಿದೆ. campus ಇಂಟರ್ವ್ಯೂ ಗೆ ಬಂದ ಕಂಪನಿಗಳೆಲ್ಲ software ಗಳೆ, ನಾನು ಅದ್ರಲ್ಲಿ ಸೆಲೆಕ್ಟ್ ಆಗೋವಷ್ಟು ಬುದ್ಧಿವಂತ ಆಗಿರಲಿಲ್ಲ ಅನ್ಸುತ್ತೆ. ಯಾವ ಕಂಪನಿಯವರು ನನ್ನ ಸೆಲೆಕ್ಟ್ ಮಾಡಿಲ್ಲ.

ಮತ್ತಷ್ಟು ಓದು »

3
ಆಗಸ್ಟ್

ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ?

-ಪ್ರಶಸ್ತಿ. ಪಿ,ಶಿವಮೊಗ್ಗ

ಇಸ್ತ್ರಿಯಂಗಡಿಗೆ ಹೋಗಿದ್ದೆ.. ಅಲ್ಲಿ ಅವ ಹೇಳ್ತಾ ಇದ್ದ. ೧ ಚೀಲ ಇದ್ದಿಲಿಗೆ ೧೫೦೦ ರೂಪಯಿ. ಒಂದು ವರ್ಷನೂ ಬರಲ್ಲ ಈ ಇಸ್ತ್ರಿ ಪೆಟ್ಟಿಗೆ, ಅದ್ಕೆ ೪೦೦೦ ರೂಪಾಯಿ. ಬಟ್ಟೆಗೆ ೩ ರೂ ಕೇಳಿದ್ರೆ ನೀವು ಹಿಂದೆ ಮುಂದೆ ನೋಡ್ತೀರ. ಜೀವನ ಕಷ್ಟಾಪ್ಪ. ಅವನು ಹೇಳೋದು ಕೇಳ್ದಾಗ ಅನುಸ್ತು.. ” ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ” ಅಂತ.

ಅಪ್ಪನೋ ಅಮ್ಮನೋ ಬೇಕಾದಗ ದುಡ್ಡು ಕೊಟ್ಟಿರ್ತಾರೆ. ಬ್ಯಾಂಕ್ ಸಾಲ ಮಾಡಿ ಓದೋ ಹಲ ಗೆಳೆಯರಿಗೂ A.T.M ಇಂದ ದುಡ್ಡು ಬೇಕಂದಾಗ ಸಿಗುತ್ತೆ ಅನ್ನೋ ಭರವಸೆ ಇರುತ್ತೆ. ಅದ್ರ ಹಿಂದೆ ನಮ್ಮ ತಂದೆ/ತಾಯಿ ಶ್ರಮ ಎಷ್ಟಿರುತ್ತೆ ಅಂತ ಎಂದಾದ್ರು ಯೋಚ್ನೆ ಮಾಡಿರ್ತೀವಾ? ಪ್ರತೀ ಪೈಸೆ ಹಿಂದೆನೂ ಎಷ್ಟು ಶ್ರಮ ಅಡಗಿರುತ್ತೆ ಅಂತ ಯೋಚ್ನೆ ಮಾಡ್ತೀವಾ?

ಖರ್ಚು ಮಾಡೋದು ತಪ್ಪು ಅಂತ ನಾ ಹೇಳ್ತಿಲ್ಲ. ಆದ್ರೆ ನಾವು ಖರ್ಚು ಮಾಡ್ತಿರೋ ಪ್ರತೀ ರೂಪಾಯಿ ಬೆಲೆ ನಮಗೆ ಗೊತ್ತಾ ಅನ್ನೋ ಸಂದೇಹ ಸುಮಾರು ಸಲ ಕಾಡುತ್ತೆ. ದುಡ್ಡು ಕೊಟ್ಟು ತಂಗಡಿರ್ತೀವಿ. ಸ್ವಲ್ಪ ಉಪ್ಪೋ , ಖಾರಾನೋ ಜಾಸ್ತಿ ಆಯ್ತು ಅಂದ್ರೆ ಹಾಗೆ ದಂಡ ಮಾಡ್ತೀವಿ.. ಮನೇನಲ್ಲೂ ಎಷ್ಟೋ ಸಲ ತಿಂಡಿ ತಿನ್ನದೇ ಜಗಳ ಮಾಡ್ಕೊಂಡು ಹೊರಟು ಬಂದಿರ್ತೀವಿ.. ದುಡ್ಡಿರುತ್ತಲ್ಲಾ.. ಕೊಟ್ರೆ ಬೇರೆದು, ಒಳ್ಳೇದು ಸಿಗುತ್ತೆ ಅನ್ನೋ ಭಾವನೆ ಅಲ್ವಾ?. . ಆದ್ರೆ ನಮಗೆ ಬೇಜಾರು ಮಾಡ್ಬಾರ್ದು ಅಂತ ಸುಮ್ಮನಿರೋ ಅಪ್ಪ-ಅಮ್ಮ, ದುಡ್ಡು ಕೊಟ್ಟಿದೀವಿ ಅಂತ ಸುಮ್ಮನಿರೋ ಹೋಟಲಿನವರು.. ಹೀಗೆ ಏನು ಕಾಣ್ತಿದೆಯೋ ಆದರ ಹಿಂದಿನ ವಾಸ್ತವ ಅರಿಯೋಕೆ ಪ್ರಯತ್ನನೇ ಮಾಡಲ್ಲ ಅಲ್ವಾ? ನೀರು ತರ ಖರ್ಚು ಮಾಡ್ತಿರೋ ದುಡ್ಡಿನ ಬೆಲೆ ಬಗ್ಗೆ ಒಂದಿನನಾದ್ರೂ ತಲೆ ಕೆಡ್ಸ್ಕಂಡಿರ್ತೀವಾ?

ಮತ್ತಷ್ಟು ಓದು »