ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 8, 2011

6

ಸ್ಥಿರತೆಯತ್ತ… ಸರ್ಕಾರವೋ? ಮಾಧ್ಯಮವೋ?

‍ನಿಲುಮೆ ಮೂಲಕ

-ಕಾಲಂ ೯

ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡ ಕಳೆದ ೧೫ ದಿನಗಳ ಘಟನಾವಳಿ ಈಗ ಒಂದು ಮಜಲಿಗೆ ಬಂದು ನಿಂತಂತೆ ಗೋಚರಿಸುತ್ತದೆ.

2008ರ ಚುನಾವಣೆ ನಡೆದಿದ್ದೇ ‘ನನಗಾದ ಅನ್ಯಾಯ’ಕ್ಕೆ. ಜನತೆ ಓಟು ಹಾಕಿದ್ದೇ ನನಗಾದ ಅನ್ಯಾಯ ಸರಿಪಡಿಸಲು. ನನಗೆ ಸಿಕ್ಕ ಜನತಾ ನ್ಯಾಯವನ್ನು ಯಾವ ಹೈಕಮಾಂಡು ಕಿತ್ತುಕೊಳ್ಳುವ ಹಾಗಿಲ್ಲ ಎಂಬಂತೆ ಸೆಟೆದು ನಿಂತಿದ್ದ ಯಡಿಯೂರಪ್ಪ 15 ದಿನ ಕನ್ನಡದ ಮಾಧ್ಯಮಗಳಿಗೆ ಭವಿಷ್ಯದ ಕೆಲಸ ಕೊಟ್ಟಿದ್ದರು.

ಕನ್ನಡ ಸುದ್ದಿವಾಹಿನಿಗಳ ಎಳಸುತನ, ಗಂಭೀರ ವರದಿಗಾರಿಕೆಯ ಕೊರತೆ, ಮತ್ತೆ ಮತ್ತೆ ಪ್ರದರ್ಶನಕ್ಕೆ ಬಂದಿತೆನ್ನಬೇಕು.

ರೇಸ್ ಕೋರ್ಸ್ ರಸ್ತೆಯತ್ತ ಎರಡು ಬಸ್‍ಗಳು ಕಾಣಿಸಿಕೊಂಡಿದ್ದೇ ತಡ, ವಾಹಿನಿಯೊಂದು ‘ಶಾಸಕರು ರೆಸಾರ್ಟ್‍ನತ್ತ’ ಎಂದು ‘ಬ್ರೇಕಿಂಗ್ ನ್ಯೂಸ್’ ಬಿತ್ತರಿಸಿತು. ಕೆಲವೇ ಕ್ಷಣಗಳಲ್ಲಿ ಉಳಿದ ವಾಹಿನಿಗಳೂ ಅದನ್ನೇ ಹೇಳತೊಡಗಿದವು. ಯಾರೊಬ್ಬರೂ ಇಂತಹ ಸುದ್ದಿಗಳ ನೈಜತೆ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಯಾವುದೋ ನಾಯಕರ ವಾಹನ ಚಾಲಕರು, ಅಲ್ಲೆಲ್ಲೋ ನಿಂತ ಪೋಲಿಸ್ ಕಾನ್‍ಸ್ಟೇಬಲ್‍ಗಳೇ ಸುದ್ದಿಯ ಸೋರ್ಸ್‍ಗಳಾಗಿರೋದು ಮಾಧ್ಯಮದ ದುರಂತವಾಗಿದೆ. ಮೂರೋ, ಆರೋ ತಿಂಗಳ ಅನುಭವದ ಪತ್ರಕರ್ತರ ದಂಡನ್ನೂ ಕಟ್ಟಿಕೊಂಡು ಮುಖ್ಯಮಂತ್ರಿ ನಿವಾಸ, ಅಶೋಕ ಹೋಟೆಲ್, ಬಿಜೆಪಿ ಕಛೇರಿ, ಕೇಶವಕೃಪಾ… ಇಲ್ಲೆಲ್ಲ ಒಬ್ಬೊಬ್ಬರನ್ನು ನಿಲ್ಲಿಸಿಕೊಂಡು ಕ್ಷಣ, ಕ್ಷಣದ ಸುದ್ದಿ ಬಿತ್ತರಿಸುವ ಕನ್ನಡ ಸುದ್ದಿ ವಾಹಿನಿಗಳ ಪಾಡು ಹೇಳತೀರದು. ಸುದ್ದಿ ಯಾವುದು? ಅಂದಾಜು ಯಾವುದು? ಸುಳ್ಳು ಯಾವುದು? ಆ ಕ್ಷಣದಲ್ಲೇ ಬೆತ್ತಲಾಗಿ ಸುದ್ದಿ ವಾಹಿನಿಗಳ ವಿಶ್ವಾಸಾರ್ಹತೆ ಮೂರಾಬಟ್ಟೆ ಯಾಗಿದೆ.

ತನ್ನ ಸ್ಥಿರತೆ ಎಷ್ಟಾದರೂ ಎಕ್ಕುಟ್ಟು ಹೋಗಿಲ್ಲ. ಮಾಧ್ಯಮಗಳ ಸ್ಥಿರತೆ ಚೆನ್ನಾಗಿ ಆಗಬೇಕು ಎಂದು ಪಣತೊಟ್ಟಂತಿದೆ ಬಿಜೆಪಿ. ಪ್ರತಿ ಎರಡು – ಮೂರು ತಿಂಗಳಿಗೊಂದು ರಾಧಾಂತ ಎಬ್ಬಿಸಿಕೊಂಡು ಮಾಧ್ಯಮಗಳಿಗೆ ಸುದ್ದಿಯ ಸುಗ್ಗಿ ತಂದುಕೊಡುತ್ತಿರುವವರು ಬಿಜೆಪಿ.

ಅಸ್ಥಿರ ಸರ್ಕಾರವಿದ್ದರೆ, ಅದರಲ್ಲೂ ವರ್ತೂರ್ ಪ್ರಕಾಶ್, ರೇಣುಕಾಚಾರ್ಯನಿಂದ ಹಿಡಿದು ಯಡ್ಡಿ, ರೆಡ್ಡಿಯಂತಹ ‘ತಮ್ಮದೇ ದಾರಿಯ’ ನಾಯಕರಿದ್ದಾರೆ ಅಲ್ಲಿ ನಿಜಕ್ಕೂ ಮಾಧ್ಯಮಗಳು ಸ್ಥಿರಗೊಳ್ಳಲು ಒಳ್ಳೆಯ ಅವಕಾಶ. ಪದೇ ಪದೇ ಸನ್ನಿವೇಶಗಳು ಬರುತ್ತಲೇ ಇದ್ದರೂ ಸುದ್ದಿ ವಾಹಿನಿಗಳ ಪಕ್ವತೆ ದೂರದ ಮಾತಾಗೇ ಉಳಿದಿದೆ.

ಕನ್ನಡಪ್ರಭಕ್ಕೆ ಹೊಸ ನಾಯಕತ್ವ ಬಂದ ತರುವಾಯ ಮುದ್ರಣ ಮಾಧ್ಯಮಕ್ಕೆ ಅಪಕ್ವತೆಯ ಖಾಯಿಲೆ ಕಾಲಿಡುತ್ತಿದೆಯೇ? ಮಾಧ್ಯಮ ಚರ್ಚೆಗೆ ಕಾರಣವಾಗುತ್ತಿರುವ ವಿಷಯವಿದು.

ಬಿಜೆಪಿಯ ಇಬ್ಬಣಗಳಲ್ಲಿ ಒಂದು ಬಣದ ಅತಿರೇಕದ ವಕ್ತಾರಿಕೆ ಇಳಿದಂತಿದ್ದ ಕನ್ನಡಪ್ರಭ ‘ಪತ್ರಿಕೋದ್ಯಮದ ನೀತಿ-ನಿಯತ್ತಿನ ಗೋಯಂಕಾ ತನ್ನ ಮಾಲಿಕರಲ್ಲ’ ಎಂಬುದನ್ನು ಸಾಬೀತು ಮಾಡಲು ಹೊರಟಂತಿತ್ತು.

ಪ್ರತಿದಿನ, ಪ್ರತಿಪುಟ, ಪ್ರತಿ  ಹೆಡ್ಡಿಂಗ್‍ನಲ್ಲೂ ‘ಮಾಂತ್ರಿಕ ಸ್ಪರ್ಷ’ ಇರಲೇಬೇಕೆಂಬಂತೆ ಪಣತೊಟ್ಟು,  ಕೊನೆಗದು ಸುದ್ದಿ-ವಿಶ್ಲೇಷಣೆಯ  ಗಂಭೀರತೆಯನ್ನೇ ಕೊಂದುಕೊಳ್ಳುವ ಮಟ್ಟಿಗೆ ತಲುಪಿಬಿಟ್ಟಿದೆ. ಯಾಕೆ ಈ ಬೆಳಬಣಿಗೆಯನ್ನು ಖಾಯಿಲೆ ಅನ್ನಬೇಕಾಗಿದೆ ಎಂದರೆ ಉಳಿದ ಪತ್ರಿಕೆಗಳು ಇದನ್ನೇ ಅಂಟಿಸಿಕೊಂಡು ಮುಗ್ಗರಿಸುತ್ತಿರುವುದು. ಪಾಪ ಸಂಯುಕ್ತಕರ್ನಾಟಕ  ಹೊಸ ಸಿಎಂ ಬಂದ ದಿನ ‘ಸದಾ’ ಆನಂದ ಅಂತ 8ಕಾಲಂ ಹೆಡ್ಡಿಂಗ್ ಕೊಟ್ಟಿತ್ತು.

ಪ್ರಾಸ ಗಣ ಯತಿಗಳನು ಎದೆಗೆಡೆದೆ ಪೇರಿಸಲು ಕಾವ್ಯವಾಗುವುದೇನು?

ಕಾಗದದ ಹೂವಿನಲಿ ದೊರೆಯುವುದೇ ಜೇನು?

ಈ ಪ್ರಾಸವನ್ನು ಅವತ್ತು ವೈಎನ್ಕೆ ಕನ್ನಡ ಕಾವ್ಯದ ಬಗ್ಗೆ ಹೇಳಿದ್ದರು. ಅದೇ ಪ್ರಶ್ನೆಯನ್ನು ಮಾಧ್ಯಮಕ್ಕೂ ಅನ್ವಯಿಸಿಕೊಳ್ಳಬಹುದೇನೋ?

6 ಟಿಪ್ಪಣಿಗಳು Post a comment
  1. Raj Yaligar's avatar
    ಆಗಸ್ಟ್ 8 2011

    howdu, adarallu kannada prabha mathu Suvarna news channel navarau athi aithu, naijathege beleye illadande suddi bitharisuthiddare. Avara varadigararigu kooda hageye mathadabeku heegeye mathadabeku endu training kottiruvanthide Bhatru!

    ಉತ್ತರ
  2. ಆಸು ಹೆಗ್ಡೆ's avatar
    ಆಗಸ್ಟ್ 8 2011

    ಶೀರ್ಷಿಕೆಗೂ ಬರಹಕ್ಕೂ ಸಂಬಂಧ ಕೂಡಿಬರಲೇ ಇಲ್ಲ ಕೊನೆಗೂ.
    ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದು ಅಪಕ್ವ ಲೇಖನ.
    ಬರೆಯಲೇಬೇಕೆಂದು ಕೂತು ಬರೆದಂತಿದೆ.
    ತಾಳ್ಮೆಯಿಂದ ಇನ್ನು ಅರ್ಧಘಂಟೆ ಸಮಯವನ್ನು ವ್ಯಯಿಸಿದ್ದರೆ, ಇದೇ ಲೇಖನವನ್ನು ಇನ್ನೂ ಪಕ್ವಗೊಳಿಸಬಹುದಿತ್ತೇನೋ…!

    ಉತ್ತರ
  3. ಆಸು ಹೆಗ್ಡೆ's avatar
    ಆಗಸ್ಟ್ 8 2011

    “’ಸದಾ’ ಆನಂದ” ಎಂಬ ಶೀರ್ಷಿಕೆಯನ್ನು ಪ್ರಕಟಿಸಿದ “ಸಂಯುಕ್ತ ಕರ್ನಾಟಕ” ಪಾಪ ಅನಿಸಿದ್ದು ಯಾಕೆಂದೇ ಅರ್ಥ ಆಗ್ಲಿಲ್ಲ!

    ಉತ್ತರ
  4. ಆಸು ಹೆಗ್ಡೆ's avatar
    ಆಗಸ್ಟ್ 8 2011

    ಎಲ್ಲರೂ ಬರೆದ ಕವಿತೆ, ಕವನಗಳೆಲ್ಲಾ ಕಾವ್ಯಗಳೇ ಆಗಬೇಕೇನು?
    ಕಾಗದದ ಹೂವುಗಳಲ್ಲೂ ಸವಿಜೇನನ್ನು ಸವಿಯುವ ಆಸೆಯೇನು?

    ಉತ್ತರ
  5. Sundar's avatar
    Sundar
    ಆಗಸ್ಟ್ 8 2011

    ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನ ಮಂದಿಗೆ ಅದೇನು ದೆವ್ವ ಹಿಡಿದುಕೊಂಡಿತ್ತೊ ಗೊತ್ತಿಲ್ಲ. ಅವರದ್ದು ಬಹುತೇಕ ಅತಿರೇಕದ ವರ್ತನೆ ಯಾಗಿತ್ತು. ಯಡಿಯೂರಪ್ಪನ ಸರ್ಕಾರ ವನ್ನು ಕಿತ್ತು ಹಾಕಲೇ ಬೇಕೆಂದು ಪಣತೊಟ್ಟಿದ್ದರು ಅಂತ ಅನ್ನಿಸುತ್ತೆ. ನನ್ನ ಊಹೆಯ ಪ್ರಕಾರ ಇವೆರಡರ ಒಡೆಯ ರಾಜೀವ್ ಚಂದ್ರಶೇಕರ್ ನಮ್ಮ ಅನಂತ್ ಕುಮಾರ್ ರ ಅಂತರಂಗದ ದೋಸ್ತ್. ಅನಂತ್ ಕುಮಾರ್ ರವರ ಒಂದು ಕಾಲದ ಒಡನಾಡಿ ಈ ವಿಶ್ವೇಶ್ವರ್ ಭಟ್. ಈ ಗ ಭಟ್ಟರು ಇವೆರಡರ ಮುಖ್ಯಸ್ಥರು. ಅವರ ಋಣ ಸಂದಾಯ ಮಾಡಲು ಇಂತಹ ತಪರಾಕಿ ಕೆಲಸವನ್ನು ಶುರು ವಿಟ್ಟುಕೊಂಡಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶ ವೆಂದರೆ ರಾಜ್ಯದ ರಾಜಕೀಯ ಬಿಕ್ಕಟ್ಟಿಗೆ ಅನಂತ್ ಕುಮಾರ್ ಹೊಣೆಗಾರರು ಅಂತ ತೆಹೆಲ್ಕಾ ವರದಿ ಮಾಡಿದೆ.
    ಅದೆಲ್ಲ ಇರಲಿ ಬಿಡಿ, ಮಾಡಿದ್ದುಣ್ಣೊ ಮಹರಾಯ ಅಂತ ಯಡ್ಡಿ ಮಾಡಿದ್ದನ್ನು ಅನುಭವಿಸಿದ್ದಾರೆ ಹಾಗು ಮುಂದೆ ಅನುಭವಿಸುವುದು ಬೇಕಾದಷ್ಟಿದೆ. ಇಂದು ಕಟ್ಟಾ ಗೆ ಸೆರೆವಾಸ ಆದ ಹಾಗೆ.
    ಆದರೆ ಈ ಡಬ್ಬಾ ಚಾನೆಲ್ ಗಳಿಗೆ ರಾಜಕೀಯದ ಬಿಕ್ಕಟ್ಟನ್ನು ವರದಿ ಮಾಡೋದು ಬಿಟ್ಟರೆ ಬೇರೆ ಏನು ಇಲ್ವೆ? ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ ಅದರ ಬಗ್ಗೆ ವರದಿ ಮಾಡೋದು ಬಿಟ್ಟು ಒಂದು ವಿಷ್ಯ ಇಟ್ಟುಕೊಂಡು ೧೫ ದಿನ ನಮ್ಮ ತಲೆ ತಿಂದ್ರಲ್ಲ ಇವರಿಗೆ ಚೆನ್ನಾಗಿ ಉಗಿ ಬೇಕು ಕಣ್ರಿ.,
    ಇಂತಹ ಭಟ್ಟಂಗಿ ಗಳಿಗೆ ಮಾಡೋಕೆ ಬೇರೆ ಎನು ಕೆಲಸ ಇಲ್ಲ, ಅವರಿಗೆ ಬೈದರೆ ಇಲ್ಲಿ ಇವರಿಗೆ ಮೆಣಸಿನಕಾಯಿ ಇಟ್ಕೊಂಡಂಗೆ ಆಗುತ್ತೆ. ದರಿದ್ರ ಜನ.

    ಉತ್ತರ
  6. Sundar's avatar
    Sundar
    ಆಗಸ್ಟ್ 8 2011

    ಕನ್ನಡಪ್ರಭದ ಪ್ರಾಸ ಶೈಲಿ ಯ ತಲೆ ಬರಹ ಗಳು ಅದ್ಯಾರಿ ಗೆ ಪ್ರೀತಿ ನೋ ನಾಕಾಣೆ. ಅದನ್ನು ಅರ್ಥ ಮಾಡಿಕೊಳ್ಳೋದಿಕ್ಕೆ ಸಾಕು ಸಾಕು ಹೋಗುತ್ತೆ. ಕಳೆದ ೨೫ ವರ್ಷಗಳಿಂದ ಕನ್ನಡ ಪ್ರಭ ದ ಅಭಿಮಾನಿ ಯಾಗಿದ್ದ ನಾನು, ಇಂದು ಆ ಪತ್ರಿಕೆ ಯನ್ನು ಓದುವುದಕ್ಕೆ ಬೇಸರ ಅನ್ನಿಸುತ್ತೆ. ಕೊನೆ ಪಕ್ಷ ಹೆಚ್.ಆರ್.ರಂಗನಾಥ ಮತ್ತು ಶಿವ ಸುಬ್ರಮಣ್ಯ ರವರ ಸಂಪಾದಕತ್ವದಲ್ಲಿ ಚೆನ್ನಾಗಿ ಬರ್ತಾ ಯಿತ್ತು. ಭಟ್ಟರು ಬಂದ ಮೇಲೆ ೬ ಕ್ಕೂ ಏರಲಿಲ್ಲ ೩ ಕ್ಕೂ ಇಳೀಲಿಲ್ಲ ಪತ್ರಿಕೆ ಯ ಸ್ಥಿತಿ.
    ಇನ್ನು ಸುವರ್ಣ ನ್ಯೂಸ್ ನಲ್ಲಿ ಮೆಗ ಫೈಟ್ ಬೇರೆ ಶುರುವಾಗುತ್ತೆ “ಎಲ್ಲೋ ಒಂದು ಕಡೆ” ಖ್ಯಾತಿಯ ರಂಗನಾಥ್ “ಭಾರ” ಧ್ವಜ್ ಮತ್ತೆ ಜನರನ್ನು ದುಂಬಾಲು ಬಿಂದು ಕರೆಸಿ ಗಲಾಟೆ ಮಾಡಿಸಿ, ಒಳ್ಳೊಳ್ಳೆ ವಿಶ್ಯುಯಲ್ಸ್ ಪ್ರೊಮೊ ಕೊಡ್ತಾರೆ ನೋಡ್ತಾ ಯಿರಿ.
    ಇತ್ತೀಚೆಗೆ ಬೇರೆ ಮದನಾರಿ ಆಮೇಲೆ ಅದೇನೋ “A” ಅಂಥ ಮೂರನೇ ದರ್ಜೆಯ ಕಾರ್ಯಕ್ರಮ ಬೇರೆ ತೋರಿಸ್ತಾಯಿದ್ದಾರೆ. ಇದೆಲ್ಲ ಭಟ್ಟರ ಟೇಸ್ಟ್ ಅಂತ ಗೊತ್ತಾಗ್ತ ಯಿದೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments