ವಿಷಯದ ವಿವರಗಳಿಗೆ ದಾಟಿರಿ

Archive for

22
ಆಗಸ್ಟ್

ದುಡ್ಡು ಇದ್ದರೆ ದುನಿಯಾ, ಜಾತಿ ಇದ್ದರೆ ಅಧಿಕಾರ – ಹೊಸಗಾದೆ

ಕೋಮಲ್

ಸಿದ್ದ ಯಾಕೋ ಸಾನೇ ಬೇಜಾರಾಗಿದ್ದ, ಮನೆ ಮುಂದೆ ತಲೆ ಮ್ಯಾಕೆ ಟವಲ್ ಹಾಕ್ಕಂಡು, ವಿಧವೆ ತರಾ ಕುಂತಿದ್ದ. ಯಾಕ್ಲಾ ಸಿದ್ದ ಅಂದ ಸಂಭು. ನೋಡ್ಲಾ ನಾನು ರಾಜಕೀಯ ನೋಡ್ತಾನೇ ಇದೀನಿ, ಎಲ್ಲಿಗಲಾ ಬಂತು ನಮ್ಮ ರಾಜಕೀಯ, ಅಧಿಕಾರಕ್ಕಾಗಿ ಹೊಡೆದಾಟ, ಜಾತಿ, ಕಾಸು ಎಲ್ಲಾ ಬತ್ತಾ ಐತಲ್ಲೋ, ಹಿಂಗಾದ್ರೆ ನಮ್ಮಂತಹ ಬಡವರು, ರೈತರು ಬದಕಕ್ಕೆ ಆಯ್ತದೇನ್ಲಾ ಅಂದ ಸಿದ್ದ.  ನಮ್ಮ ಜಾತಿ ಪ್ರಬಲವಾಗಿಲ್ಲ ಅಂದ್ರೆ ಸಾಯೋ ಗಂಟ ಬರೀ ಕಾರ್ಯಕರ್ತನಾಗೇ ಇರಬೇಕಾಯ್ತದೆ ಕಲಾ, ಅದೇ ಪ್ರಬಲ ಜಾತಿ ಇದ್ದೋರು ಅಧಿಕಾರನೂ ಮಾಡ್ತಾರೆ, ಅಂಗೇ ಕಾಸು ಮಾಡ್ಕಂತಾರೆ ಅಂದ ಸಂಭು. ಪಾಪ ಸಂಭುನೂ ಅಳಕ್ಕೆ ಸುರು ಮಾಡ್ದ. ಬುಡ್ಲಾ ಅಳಬೇಡ ಬುಡ್ಲಾ ಅಂದ ಸಿದ್ದ. ನಮ್ಮದು ಜಾತ್ಯಾತೀತ ರಾಜ್ಯ ಅಲ್ಲ ಕಲಾ.  ನಮ್ಮದು ಜಾತಿ ರಾಜ್ಯ ಅಂದ ಸುಬ್ಬ.

ಕಡೆಗೆ ಎಲ್ಲಾ ಸೇರ್ಕಂಡು, ನಿಂಗನ ಅಂಗಡಿಗೆ ಚಾ ಕುಡಿಯುವಾ ಅಂತಾ ಹೋದ್ವಿ. ಅಲ್ಲಿ ನಮ್ಮ ಮಿಕ್ಕಿದ ಗೆಳೆಯರು ಕೂಡ ಬೈ ಟು ಚಾ ಕುಡಿತಾ ಕುಂತಿದ್ರು, ಬರೀ ಚಲ್ಟಾ ಐತೆ ಅನ್ನೋರು. ಕಿಸ್ನ ಡಿಕಾಕ್ಸನ್ ಕಮ್ಮಿ ಆಗೈತೆ ಅಂತಿದ್ದ. ಮಗಾ ನಾಗ ಮಾತ್ರ ಇಂಗ್ಲೀಸ್ ಪೇಪರ್ ಓದ್ತಾ ಇದ್ದ. ಓದಿರೋದು ಮಾತ್ರ ಮೂರನೇ ಕಿಲಾಸು. ಪೋಟೋ ನೋಡ್ತಾ ಇದೀನಿ ಕನ್ರಲಾ ಅಂತಿದ್ದ ನಾಗ, ಅದೂ ಉಲ್ಟಾ ಮಡಿಕ್ಕಂಡು. ಏಥೂ.  ಏನ್ರಲಾ ಸಮಾಚಾರ ಅಂದ ತಂಬೂರಿ ನಾಗ. ನೋಡ್ರಲಾ ಒಂದು ಟೇಮಲ್ಲಿ ರೆಡ್ಡಿಗಳು ಅಂದ್ರೆ ಸರ್ಕಾರನೇ ಹೆದರೋದು ಕಲಾ, ಅವರು ಇಲ್ಲದೆ ಸರ್ಕಾರನೇ ನಡೆಸಕ್ಕೆ ಆಗಕ್ಕಿಲ್ಲಾ ಅನ್ನೋ ಟೇಮ್ ಇತ್ತು. ಯಡೂರಪ್ಪನು ಹೆದರೋದು. ಹಯ ಕಮಾಂಡ್ ಹೆದರೋದು. ಮತ್ತಷ್ಟು ಓದು »