ಎಳೆ ಹುಡುಗನ ಕನಸುಗಳು
ಪವನ್ ಪರುಪತ್ತೆದಾರ
ಜೀವನವನ್ನು ಸರಿಯಾಗಿ ಗಮನಿಸುತ್ತಾ ಹೋದರೆ ಒಮ್ಮೊಮ್ಮೆ ಅತೀ ಚಿಕ್ಕ ವಿಷಯಗಳು ಮನಸಿಗೆ ನಾಟಿಬಿಡುತ್ತವೆ, ನಮ್ಮ ಮನೆ ಪಕ್ಕದಲ್ಲೇ ಇರುವ ಒಬ್ಬ ಹುಡುಗನ್ನ ನನ್ನ ಗಾಡಿ ಒರೆಸಲೆಂದು ಕರೆದೆ ಅವನ ಹೆಸರು ವಿಶ್ವನಾಥ, ಪ್ರೀತಿಯಿಂದ ಎಲ್ಲರು ಪಪ್ಪಳ ಎಂದು ಕರೀತಾರೆ. ಹತ್ತಿರದಲ್ಲೇ ಇರೋ ಒಂದು ಸರ್ಕಾರೀ ಶಾಲೆಯಲ್ಲಿ 3 ನೆ ತರಗತಿ ವ್ಯಾಸಂಗ ಮಾಡ್ತಾ ಇದಾನೆ. ಓದಿನಲ್ಲೂ ಮುಂದು ಕೆಲಸದಲ್ಲೂ ಮುಂದು ನ ಕರೆದ ತಕ್ಷಣ ಓಡಿ ಬಂದು ಏನು ಪವನಣ್ಣ ಕರೆದ್ರಲ್ಲ ಅಂದ, ಗಾಡಿ ಒರೆಸಿ ಕೊಡೊ ಪಪ್ಪಳ ಅಂದೆ, ಅದಕ್ಕೆ ಅವರಮ್ಮಮ್ಗೆ ಅಮ್ಮೋ ನ ಪವನಣ್ಣ ವೀಟ್ ಕಿಟೆ ಇರಕ್ಕೆ ಅಂತ ಕಿರುಚಿದ( ಅವರ ಮಾತೃ ಭಾಷೆ ತಮಿಳು ).
ನಾನು ಗಾಡಿ ವರೆಸೋ ಬಟ್ಟೆ ತೆಗೆದು ಕೊಟ್ಟೆ ಹಾಗೆ ಒರೆಸುತ್ತಾ ಒರೆಸುತ್ತಾ ಪವನಣ್ಣ ನೀವು ಎಷ್ಟನೆ ಕ್ಲಾಸು ಅಂದ, ನಾನು ಇಂಜಿನಿಯರಿಂಗ್ ಕಣೋ ಪಪ್ಪಳ ಅಂದೆ, ಅಂದ್ರೆ 20 ನೆ ಕ್ಲಾಸ್ ಅ ಅಂದ ನಾನು ಸ್ವಲ್ಪ ಯೋಚಿಸಿ ಲೆಕ್ಕ ಹಾಕಿ 16 ನೆ ಕ್ಲಾಸು ಅಂದೆ, ಹಾಗಾದ್ರೆ ನಾನು ಇ ಥರ ಗಾಡಿ ತೊಗೋಬೇಕು ಅಂದ್ರೆ ಇನ್ನು ೧೩ ಕ್ಲಾಸ್ ಓದಬೇಕು ಅಂದ. ಸ್ವಲ್ಪ ನಕ್ಕು ಹೌದು ಧೌದು ಎಂದೆ..
ಹಾಗೆ ಗಾಡಿ ಒರೆಸುತ್ತಾ ಒರೆಸುತ್ತಾ ಪವನಣ್ಣ ನೆನ್ನೆ ನಾನು ಸೌತೆ ಕಾಯಿ ಮಾರಕ್ ಹೋಗಿದ್ದೆ ಅಂದ , ಅವರ ತೋಟದಲ್ಲಿ ಸೌತೆ ಕಾಯಿ ಬೆಳೆ ಇರಲಿಲ್ಲ ಅಲ್ಲದೆ ಅಕ್ಕ ಪಕ್ಕದ ಯಾವ ತೋಟದಲ್ಲೂ ಸೌತೆಕಾಯಿ ಬೆಳೆ ಇರಲಿಲ್ಲ ಇವನ ಹೇಗೆ ಮಾರಿಕೊಂಡು ಬಂದ ಅನ್ನೋ ಅನುಮಾನದಲ್ಲೇ, ಲೋ ಪಪ್ಪಳ ಸೌತೆಕಾಯಿ ಎಲ್ಲಿಂದ ಬಂತೋ ಅಂದೆ. ಅದಕ್ಕೆ ಅವ ಪವನಣ್ಣ ಆದ ಯಾರ್ದೋ ಮನೇಲಿ ಸ್ಕೂಲ್ ಇಂದ ವಾಪಾಸ್ ಬರೋವಾಗ ಹಸುಕಾಕು ಅಂತ ಕೊಟ್ರು, ನ ಮಾರಿಕೊಂಡು ಬಂದ್ ಬಿಟ್ಟೆ ಅಂದ ಅದಕ್ಕೆ ನಾನು ಲೋ ಕೆಟ್ಟಿರೋ ಸೌತೆಕಾಯಿ ಯಾರದ್ರು ಮಾರ್ತರೇನೋ ಅಂದೆ ಅವನು ಇಲ್ಲ ಪವನಣೋ.ಚಂದಗಿತ್ತು ಸ್ವಲ್ಪ ಬಲ್ತೋಗಿತ್ತು ಅಷ್ಟೇ ಅದಕ್ಕೆ ಮಾರಿಕೊಂಡು ಬಂದೆ ಅಂದ. ಸರಿ ಎಷ್ಟು ಕಾಸ್ ಬಂತು ಏನ್ ಮಾಡಿದೆ ಅಂದೆ, ಅದಕ್ಕೆ ೨೦ ರುಪಾಯಿ ಬಂತು, ನಮ್ಮಮ್ಮ ಪಾಪ ಓಲೆ ಇಲ್ಲ ಅಂತ ಇದ್ಲು ಅದಕ್ಕೆ ಚಿನ್ನದ ವಾಲೆ ತಂದು ಕೊಟ್ಟೆ ಅಂದ. ನನಗೆ ನಗು ತಡೆಯಕ್ಕಾಗದೆ, ಲೋ ಪಪ್ಪಳ 20 ರೂಪಾಯಿಗೆ ಯಾರೋ ಚಿನ್ನದ ವೋಲೆ ಕೊಡ್ತಾರೆ ಅಂದ್ರೆ ಅಯ್ಯೋ ಹೋಗ ಪವನಣ್ಣ ಅಷ್ಟೇ ಮತ್ತೆ ನಿಮಗೆ ಗೊತ್ತಿಲ್ಲ ಅಂದ , ಆಮೇಲೆ ಹಾಗೆ ಮುಂದುವರೆಸುತ್ತಾ ಆದ್ರೆ ಆ ವಾಲೆನ ಐಶು ಕದ್ದುಕೊಂಡೋಗವಳೆ ಕೇಳಿದ್ರೆ ನಂದೇ ಅಂತವ್ಲೇ ಪವನಣ್ಣ ಅಂದ, ಮತ್ತೆ ಈಗ ಏನೋ ಮಾಡ್ತ್ಯ ಅಂದೆ ಅದಕ್ಕೆ ಅವನು ಅಯ್ಯೋ ಹೋದ್ರೆ ಹೋಗ್ಲಿ ಶುಕ್ರವಾರ ಸಂತೆಗೆ ನಮ್ಮತ್ತೆ ಜೊತೆ carrot ಮಾರಕ್ ಹೋಗ್ತೀನಿ ಸ್ಕೂಲ್ ಬಿಟ್ ತಕ್ಷಣ ಹೋಗಿ 3 hour ವ್ಯಾಪಾರ ಮಾಡಿದ್ರೆ 20 ರುಪಾಯಿ ಕೊಡ್ತಾರೆ ಅ ಕಾಸಲ್ಲಿ ಸಂತೆಲೆ ಓಲೆ ತೆಕ್ಕೊಡ್ತೀನಿ ಅಂದ.
wow ಅವನ ಅಮ್ಮನಿಗೆ ವಾಲೆ ಕೊಡಿಸಬೇಕಂಬ ಅಸೆ ಅ ವಯಸಿಗೆ ತಾಯಿಯ ನೋವನ್ನ ಅರ್ಥ ಮಾಡ್ಕೊಳೋ ಮನಸು ನೋಡಿ ನನಗೆ ದಿಗ್ಭ್ರಮೆ ಆಯಿತು.ಅಷ್ಟರಲ್ಲೇ ಗಾಡಿ ಒರೆಸಿದ್ದಾಗಿತ್ತು ಒರೆಸೋ ಬಟ್ಟೆ ಒದೆರಿ ವಾಪಾಸ್ ಕೊಟ್ಟು ಹೋಗ್ತೀನಿ ಪವನಣ್ಣ ನಮ್ಮಪ್ಪನ ಜೊತೆ ನೀರ್ ಕಟ್ಟಕ್ ಹೋಗ್ಬೇಕು ಅಂತ ನಿಂತ, ನಾನು ಜೆಬಿಗೆ ಕೈ ಹಾಕಿದರೆ 3 ರು ಚಿಲ್ಲರೆ ಇತ್ತು ಕೊಟ್ಟು ಹೋಗಿ ಹುಂಡಿಗೆ ಹಕ್ಕೊಲೋ ಪಪ್ಪಳ ಅಂದೇ ಕುಷಿ ಕುಷಿಯಾಗಿ ಮನೆ ಕಡೆ ಓಡಿದ,…..!!!
********************************************************************





mitrare, kathe chikkadaadru chokkavaagide. Vandanegalodane.
ಧನ್ಯವಾದಗಳು, ಭಾವನೆಗಳಿಗೆ ಚಿಕ್ಕದು ದೊಡ್ಡದು ಎಂಬುದಿಲ್ಲ ಅಲ್ವಾ ಅಣ್ಣ
Very nice.. yaar oorin kate idu?
ನಮ್ಮೂರಿನ ಕಥೆ, ನಮ್ಮ ಪಕ್ಕದ ಮನೆ ಹುಡುಗನ ಕಥೆ 🙂