ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!! – ಸತ್ಯವೆಷ್ಟು ??
– ಆಜಾದ್ ಐ.ಎಸ್,ಕುವೈತ್
ಡಾಕ್ಟ್ರೇ..ಮೀನಿಗೆ ಕ್ಯಾನ್ಸರ್ ಬರೊಲ್ವಂತೆ ನಿಜವೇ…?, ನನಗೆ ಕೆಲವು ಕಡೆ ಎದುರಾಗಿರೋ ಪ್ರಶ್ನೆ ಇದು. ಹೌದೇ..? ನನಗೂ ಜಿಜ್ಞಾಸೆಗೆ ಎಡೆಮಾಡಿದ ವಿಷಯವಾಯಿತು-ಮೀನಿನ ಕ್ಯಾನ್ಸರ್ ನಿರೋಧಕತೆಯ ಪ್ರಶ್ನೆ. ಮೀನಿನ ಆರೋಗ್ಯನಿರ್ವಹಣೆ ನನ್ನ ಸಂಶೋಧನಾ ವಿಷಯವಾದರೂ ಈ ಬಗ್ಗೆ ಹೆಚ್ಚು ಓದಿದ ನೆನಪಿಲ್ಲ. ವಿಷಯ ಜಿಜ್ಞಾಸೆಯ ಹುಳ ತಲೆಗೆ ಹೊಕ್ಕರೆ ಅದರ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಹಂಬಲ ಎಲ್ಲಾ ಸಂಶೋಧಕರಲ್ಲೂ ಇರುತ್ತೆ ಎನ್ನುವುದಕ್ಕೆ ನಾನು ಹೊರತಾಗಿಲ್ಲವಾದ್ದರಿಂದ ಶೋಧಕಾರ್ಯ ಪ್ರಾರಂಭವಾಯ್ತು.
ಮೀನು ಕಶೇರುಕಗಳ ವಿಕಸನಾ ಹಾದಿಯ ಮೂಲ ಜೀವಿ ಅಲ್ಲಿಂದಲೇ ಮಾನವ ವಿಕಾಸಗೊಂಡಿರುವುದು. ಹಾಗಾಗಿ ಕ್ಯಾನ್ಸರ್ ಬರದೇ ಇರಬಹುದಾದ ಗುಣವಿಶೇಷ ಮೀನುಗಳಲ್ಲಿದೆ ಎನ್ನುವುದೇ ಇಲ್ಲಿಯವರೆಗಿನ ನಡೆದಿರುವ ಸಂಶೋಧನೆಗಳಿಂದ ಸಿಧ್ದವಾಗಿರುವ ವಿಷಯ. ಮೀನು, ಉಭಯ ಜೀವಿ ಮತ್ತು ಉರಗಗಳ ಸುಮಾರು ೪೦೦೦ ಮಾದರಿ (ಸ್ಯಾಂಪಲ್) ಗಳು ಕ್ಯಾನ್ಸರ್ ಹೊಂದಿವೆ ಎನ್ನುವುದನ್ನು ಮಾದರಿಗಳ ಅಧ್ಯಯನದ ಮೂಲಕ ತಿಳಿದುಕೊಳ್ಳಲಾಗಿದೆ. ಹಾಗಾದರೆ ಮೀನುಗಳಲ್ಲಿ ಕ್ಯಾನ್ಸರ್ ವಿರೋಧಿಸುವ ಅಥವಾ ಕ್ಯಾನ್ಸರ್ ಗೆ ಕಡಿಮೆ ಗುರಿಯಾಗುವ ಬಗ್ಗೆ ಸುದ್ದಿಯಾಗಿದ್ದು ಏಕೆ?? ಇದರಲ್ಲಿ ಏನೂ ಹುರುಳಿಲ್ಲವೇ..???
ಮತ್ತಷ್ಟು ಓದು 




