ವಿಷಯದ ವಿವರಗಳಿಗೆ ದಾಟಿರಿ

Archive for

15
ಆಗಸ್ಟ್

ಗುಂಡಿಗೆ ಎದೆ ಕೊಟ್ಟವ ೧೩ರ ಪೋರ..!

– ರಾಕೇಶ್ ಶೆಟ್ಟಿ

ಸರಿಯಾಗಿ ಇಂದಿಗೆ ೬೯ ವರ್ಶದ ಹಿಂದಿನ,ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ ‘ವಂದೇ ಮಾತರಂ’ ‘ಭಾರತ ಮಾತಾಕಿ ಜೈ’ ಘೋಷಣೆಗಳು ಮೊಳಗುತಿದ್ದವು. ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಆಟವಾಡುತಿದ್ದರೆ ಅವನು ಮಾತ್ರ ಬೆಳಿಗ್ಗೆ ಬೇಗ ಎದ್ದು, ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತನಗಿಂತಲೂ ಎತ್ತರವಿದ್ದ ಒಂದು ಬೊಂಬಿಗೆ ‘ತ್ರಿವರ್ಣ ಧ್ವಜ’ ಕಟ್ಟಿಕೊಂಡವನೇ ಮಲಗಿದ್ದ ತಾಯಿಯ ಬಳಿ ಹೋಗಿ ಅವಳನ್ನು ಎಬ್ಬಿಸಿ ಆಶೀರ್ವದಿಸುವಂತೆ ಕೇಳಿದ. ಶ್ವೇತ ವಸ್ತ್ರಧಾರಿಯಾಗಿ ‘ತ್ರಿವರ್ಣ ಧ್ವಜ’ವನ್ನಿಡಿದ ಮಗನನ್ನು ನೋಡಿ,

ಆ ತಾಯಿ ಕೇಳಿದಳು “ಎಲ್ಲಿ ಹೊರಟೆ ಮಗು?”
“ಅಮ್ಮ , ನಾನು ದುರ್ಗದ ಬಯಲಿನಲ್ಲಿ ನಡೆಯುತ್ತಿರುವ ‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ”

“ಆದರೆ ಮಗು, ಅಲ್ಲಿ ಹಿರಿಯರೇ ಇರುತ್ತಾರೆ ಕಣೋ!”
ಮತ್ತಷ್ಟು ಓದು »

13
ಆಗಸ್ಟ್

ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ

ಡಾ ಅಶೋಕ್ ಕೆ ಆರ್Modi12

‘ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ. ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ ಹೊಡೆದಾಡಿ……..’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ …… ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’ ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು! ಮತ್ತಷ್ಟು ಓದು »

12
ಆಗಸ್ಟ್

ಇನ್ನು10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?

– ಗಣೇಶ್ ಕೆ ದಾವಣಗೆರೆ

chini yuddhaಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.

ಮತ್ತಷ್ಟು ಓದು »

7
ಆಗಸ್ಟ್

ಅಘೋರಿಗಳ ನಡುವೆ….. ಭಯಾನಕತೆಯ ಲೋಕದ ಅನಾವರಣ…

 – ಕೆ.ಗುರುಪ್ರಸಾದ್

Aghorigala Naduveಇತ್ತೀಚೆಗೆ ನನ್ನ ಗೆಳೆಯನೋರ್ವನ ಬಳಿ ಒಂದು ಪುಸ್ತಕ ನೋಡಲು ಸಿಕ್ಕಿತ್ತು. ” ಅಘೋರಿಗಳ ನಡುವೆ” ಮೂಲ “ಸುರೇಶ್ ಸೋಮಪುರ” ಬರೆದಿರುವ ಪುಸ್ತಕ ” ಎಮ್. ಎ. ನಾಗರಾಜ್ ರಾವ್ ” ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.(ಬಹಳ ವರ್ಷಗಳ ಹಿಂದೆ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿತ್ತಂತೆ) ಕುಂಭಮೇಳದ ಸಂಧರ್ಭಗಳಲ್ಲಿ ಕಾಣಸಿಗುವ “ಅಘೋರಿ” ಗಳ ಜೀವನ ಶೈಲಿಯನ್ನ ಸುರೇಶ್ ಸೋಮಪುರ ಅವರು ತಮ್ಮ ಪುಸ್ತಕದ ವಸ್ತುವನ್ನಾಗಿಸಿದ್ದಾರೆ. ನಿಜಕ್ಕೂ, ಈ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಭಯಾನಕತೆಯ ಅನಾವರಣವಾಗುತ್ತಾ ಹೋಗುತ್ತದೆ. ಅಘೋರಿಗಳ ಜೀವನ ಅಂದರೆ ಈ ರೀತಿಯಲ್ಲೂ ಇರುತ್ತಾ ಅನ್ನುವಷ್ಟು ಭೀಕರವಾಗಿರುತ್ತಾ ಅಂತನಿಸತೊಡಗುತ್ತದೆ. ಅದಕ್ಕೆ ಅಲ್ವಾ ಅಘೋರಿಗಳನ್ನ ಹಠಯೋಗಿಗಳು ಅಂತ ಕರೆಯೋದು. ಹಿಮಾಲಯದ ಮಂಜಿನಲ್ಲಿ ನಗ್ನರಾಗಿ ಮಲಗುವುದು, ಚೂಪಾದ ಮೊಳೆಯ ಹಾಸಿಗೆಯ ಮೇಲೆ ಮಲಗುವುದು, ಸೂಜಿಯಿಂದ ಚುಚ್ಚಿಸಿಕೊಂಡು ತಮ್ಮನ್ನು ತಾವು ನೋಯಿಸಿಕೊಳ್ಳುವುದು ಇವೆಲ್ಲಾ ಅವರ ಹಠಯೋಗದ ಕೆಲವು ನಿದರ್ಶನಗಳು.

ಒಬ್ಬ ಅಘೋರಿಯಿಂದಾದ ತನ್ನ ಗೆಳೆಯನ ಸಾವು , ಲೇಖಕರನ್ನು ಈ ಅಘೋರಿಗಳ ಸಿದ್ಧಿಯ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳಲು ಕಾತರರಾಗುವಂತೆ ಮಾಡುತ್ತದೆ. ಅದೃಷ್ಟವಶಾತ್ ಲೇಖಕರಿಗೆ ಅಜ್ನಾತ ಸ್ಥಳವೊಂದರಲ್ಲಿ ನಡೆಯುವ ಈ ಅಘೋರಿಗಳ ಸಾಧನಾ ಶಿಬಿರಕ್ಕೆ ಅತಿಥಿಯಾಗಿ ಹೋಗುವ ಅವಕಾಶ ಸಿಗುತ್ತದೆ. ಆ ಸಾಧನಾ ಶಿಬಿರದಲ್ಲಿ ಲೇಖಕರ ಸಹಾಯಕ್ಕಾಗಿ ಸಿಗುವ ಅಘೋರಿಯೊಬ್ಬ ತನ್ನ ಪೂರ್ವಾಶ್ರಮದಲ್ಲಿ ಒಬ್ಬ ಡಾಕ್ಟರ್ ಆಗಿದ್ದಿರುತ್ತಾನೆ ಅನ್ನೋ ವಿಷಯ ನಿಜಕ್ಕೂ ನಮ್ಮಲ್ಲಿ ಆಶ್ಚರ್ಯವನ್ನುಂಟುಮಾಡುತ್ತದೆ. ಅಲ್ಲಿಂದ ಮುಂದೆ ಓದುತ್ತಿದ್ದಂತೆ ನಿಮ್ಮ ಕಣ್ಣೆದುರು ಭಯ ಸುಳಿದಾಡಲು ಪ್ರಾರಂಭವಾಗುತ್ತದೆ. ತಮ್ಮ ಮಂತ್ರಶಕ್ತಿಯ ಬಲದಿಂದಾಗಿ ಈ ಅಘೋರಿಗಳು ಅನೇಕ ಸಿದ್ಧಿಗಳನ್ನು ಕರಗತ ಮಾಡಿಕೊಂಡಿರುತ್ತಾರಂತೆ. ಅವರಿಗೆ ತಮ್ಮ ಮಂತ್ರಶಕ್ತಿಯ ಮೇಲೆ ಬಲವಾದ ನಂಬಿಕೆ. ಸಾಧಾನಾ ಶಿಬಿರವನ್ನು ತಲುಪುತ್ತಿದ್ದಂತೆಯೇ ಲೇಖಕರಿಗೆ ಇದರ ಅನುಭವವಾಗುತ್ತದೆ. ನಿರ್ಮಲ್ ಆನಂದ್ ಅನ್ನುವ ಅಘೋರಿಯೊಬ್ಬ ಲೇಖಕರ ಕೈಗಳನ್ನು ಗೋಡೆಗೆ ಅಂಟುವಂತೆ ಮಾಡುತ್ತಾನೆ. ಅದೆಷ್ಟೇ ಪ್ರಯತ್ನ ಪಟ್ಟರೂ ಲೇಖಕರಿಗೆ ತಮ್ಮ ಕೈಗಳನ್ನು ಹಿಂಪಡೆಯಲಾಗುವುದಿಲ್ಲ. ಇದೊಂದು ಸಣ್ಣ ಉದಾಹರಣೆ… ಹೀಗೆ ಮುಂದೆ ಹೋದಂತೆಲ್ಲಾ ಲೇಖಕರು ಅನುಭವಿಸಿದ ಭೀಕರತೆಯನ್ನು ನಿಮ್ಮ ಕಂಗಳಿಗೆ ಉಣಬಡಿಸುತ್ತಾರೆ.

ಮತ್ತಷ್ಟು ಓದು »

5
ಆಗಸ್ಟ್

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

– ಪ್ರೇಮಶೇಖರ
Terrorismತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ.
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.
2
ಆಗಸ್ಟ್

ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ…!?

– ರಾಕೇಶ್ ಶೆಟ್ಟಿ
ಆಂಧ್ರ ಪ್ರದೇಶ ಹೋಳಾಗಿದ್ದಕ್ಕೆ ಕೆಲವು ಕನ್ನಡಿಗರು ಬಹಳ ವೇದನೆ ಅನುಭವಿಸುತಿದ್ದಾರೆ. ತಮ್ಮದೇ ರಾಜ್ಯದ ಭಾಗವಾಗಿದ್ದ “ಕಾಸರಗೋಡು” ಕೇರಳಕ್ಕೆ ಹೋದಾಗ ಇವರಿಗೆ ಏನು ಅನಿಸಿರಲಿಲ್ಲವೇ? ಏಕೀಕರಣದ ಸಮಯದಲ್ಲಿ “ಕಾಸರಗೋಡಿನವರ” ಸಹಾಯ ನಮಗೆ ಬೇಕಿತ್ತು.ಈಗ ಅದನ್ನು ಮರೆತು ಅವರ ನೋವಿಗೆ ದನಿಯಾಗದ ನಾವುಗಳು “ದ್ರೋಹಿ”ಗಳಲ್ಲವೇ…!? ೩ ವರ್ಷದ ಹಿಂದೆ ಕಾಸರಗೋಡಿನ ಬಗ್ಗೆ ಬರೆದ ಲೇಖನವಿದು.
————————————————

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು’
ಅಂತ ‘ಹುಯಿಲಗೋಳ ನಾರಾಯಣರಾಯ’ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

‘ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’
ಅಂತ ಏಕೀಕರಣದ ನಂತರ ಬರೆದವರು ‘ಸಿದ್ದಯ್ಯ ಪುರಾಣಿಕ್’.

ಇವೆರಡು ಹಾಡುಗಳನ್ನ ವರ್ಷಕ್ಕೊಮ್ಮೆ ರಾಜ್ಯೋತ್ಸವದ ದಿನಗಳಲ್ಲಿ(ದಿನಗಳಲ್ಲಾದರೂ!) ನಾವು ಹಾಗೂ ನಮ್ಮ ರಾಜಕಾರಣಿಗಳು ನೆನಪಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕೆಳಗೆ ಇನ್ನೊಂದು ನತದೃಷ್ಟ ಹಾಡಿದೆ ನೋಡಿ.ಬಹಳಷ್ಟು ಜನ ಇದನ್ನ ಮರೆತಿದ್ದಾರೆ, ಹಲವರಿಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ,ಇನ್ನುಳಿದವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

‘ಬೆಂಕಿ ಬಿದ್ದಿದೆ ನಮ್ಮ ಮನೆಗೆ
ಓ ಬೇಗ ಬನ್ನಿ
ಕನ್ನಡ ಗಡಿಯ ಕಾಯೋಣ ಬನ್ನಿ
ಕನ್ನಡ ನುಡಿಯ ಕಾಯೋಣ ಬನ್ನಿ’

ಅಂತ ಬರೆದ ‘ಕಯ್ಯಾರ ಕಿಞಞಣ್ಣ ರೈ’ ಇಡಿ ಕಾಸರಗೋಡಿನ ಜನತೆಯ ನೋವನ್ನ ಈ ಸಾಲುಗಳಲ್ಲಿ ಅಭಿವ್ಯಕ್ತ ಪಡಿಸಿದ್ದರು. ಮತ್ತಷ್ಟು ಓದು »