ಲಿ೦ಗಾಯತ ಅಥವಾ ವೀರಶೈವ – ಹಿ೦ದೂ ಧರ್ಮದಿ೦ದ ಬೇರೆಯೇ?
– ಕಿರಣ್ ಕೆ.ಎಸ್
ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಗೆ ಒಳಗಾಗುತ್ತಿರುವ ವಿಷಯ – ಲಿ೦ಗಾಯತರು ಹಿ೦ದೂಗಳೋ, ಅಲ್ಲವೋ? ಇದರ ಬಗ್ಗೆ ಬಹಳ ತಿಳಿದವರು ಅಭಿಪ್ರಾಯಗಳನ್ನು ಆಗಲೇ ತಿಳಿಸಿದ್ದಾರೆ. ಈ ಲೇಖನದ ಉದ್ಡೇಶ, ಒಬ್ಬ ಸಾಮಾನ್ಯ ಹಿ೦ದೂವಾಗಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುವುದು. ಇವುಗಳ ಉತ್ತರ ಹುಡುಕುವಾಗ ನಮಗೆ ವಿಷಯ ಇನ್ನಷ್ಟು ಗಾಢವಾಗಿ ತಿಳಿಯಬಹುದೆ೦ದು ಆಶಯ.
ಮೊದಲನೆಯದಾಗಿ – ಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ?
ಶಿವ ಅಥವಾ ಶ೦ಕರ ಎ೦ದರೆ, ಮ೦ಗಳವನ್ನು ಉ೦ಟುಮಾಡುವನು ಎ೦ದು. ಯಜುರ್ವೇದದ ತೈತ್ತಿರೀಯ ಸ೦ಹಿತೆಯಲ್ಲಿ ಬರುವ ರುದ್ರ ಮತ್ತು ಚಮಕ ಪ್ರಶ್ನೆಗಳಲ್ಲಿ, ಶಿವ ಎನ್ನುವ ಸ೦ಸ್ಕೃತ ಪದ ಬ೦ದಿದೆ. ಶಿವನನ್ನು ಕುರಿತು ಭಾವಪೂರ್ಣವಾಗಿ, ಬಹು ನಾಮಗಳಿ೦ದ ಹೀಗೆ ಸ್ತುತಿಸಿದ್ದಾರೆ. “ನಮಸ್ತೇ ಅಸ್ತು ಭಗವಾನ್ ವಿಶ್ವೇಶ್ವರಾಯ, ಮಹಾದೇವಾಯ, ತ್ರ್ಯ೦ಬಕಾಯ, ತ್ರಿಪುರಾ೦ತಕಾಯ, ತ್ರಿಕಾಗ್ನಿ ಕಾಲಾಯ, ಕಾಲಾಗ್ನಿ ರುದ್ತ್ರಾಯ, ನೀಲಕ೦ಠಾಯ, ಮೃತ್ಯು೦ಜಯಾಯ, ಸರ್ವೇಶ್ವರಾಯ, ಸದಾಶಿವಾಯ, ಶ್ರೀಮನ್ ಮಹಾದೇವಾಯ ನಮಃ”. ಶ೦ಕರಾಚಾರ್ಯರು ಬಸವಣ್ಣನವರಿಗಿ೦ಥ ಸುಮಾರು ೩೫೦ ವರ್ಷಗಳ ಮೊದಲು, “ಚಿದಾನ೦ದ ರೂಪಮ್ ಶಿವೋಹಮ್, ಶಿವೋಹಮ್” ಎ೦ದು ಆತ್ಮ ಶತಕದಲ್ಲಿ ಹಾಡಿದ್ದಾರೆ. ಭಾರತೀಯ ಹಿ೦ದೂ ಪರ೦ಪರೆಯಲ್ಲಿ, ಸಹಸ್ರಾರು ಶೈವ ಪದ್ಢತಿಗಳು ಬ೦ದು ಹೋಗಿದ್ದಾವೆ. ತಮಿಳುನಾಡಿನ ಶೈವರು, ಕಾಶ್ಮೀರದ ಶೈವರು, ನಾಥರು, ನೇಪಾಳದ ಪಶುಪತಿಗಳು, ಕಾಪಾಲಿಕರು, ಹೀಗೆ.. ಕರ್ನಾಟಕದಲ್ಲೇ ನೂರಾರು ಶೈವ ಪದ್ಧತಿಗಳು ಬ೦ದು ಹೋಗಿವೆ, ಮತ್ತು ಲಭ್ಯವಾಗೂ ಇವೆ. ಗೌಡರು, ಕುರುಬರು, ಬ್ರಾಹ್ಮಣರು, ಹೀಗೆ ನೂರಾರು ಪ೦ಗಡಗಳಲ್ಲಿ, ಶಿವನ ಆರಾಧನೆ ಇದೆ. ಅದಕ್ಕೇ ಕೇಳಿದ್ದು, ಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ? ಮತ್ತಷ್ಟು ಓದು
ಆ ಮುದ್ದು ಕಂದ ತೀರಿಕೊಂಡು ಈಗ 50 ವರ್ಷ
– ರೋಹಿತ್ ಚಕ್ರತೀರ್ಥ
ಸಾವಿನ ಸುದ್ದಿಯಲ್ಲಿದ್ದ ಒಂದು ವಾಕ್ಯ ಇಡೀ ಪ್ರಕರಣದ ಹಾದಿಯನ್ನು ಬದಲಿಸಿಬಿಟ್ಟಿತು!
ಈ ಕತೆ ನನ್ನೊಳಗೆ ಎಬ್ಬಿಸಿರುವ ಬಿರುಗಾಳಿಗೆ ಗಿರಗಿರ ತಿರುಗುವ ತರಗೆಲೆಯಾಗಿದ್ದೇನೆ. ಬರೆಯಬೇಕೆಂದರೂ ಕೈ ಏಳುತ್ತಿಲ್ಲ. ಏನೆಂದು ಬರೆಯಲಿ? ಎಲ್ಲಿಂದ ಶುರುಮಾಡಲಿ? ಈ ಕತೆಯನ್ನು ಹೇಳಿಕೊಂಡು ನಾನು ಸಾಧಿಸಲು ಬಯಸುತ್ತಿರುವುದಾದರೂ ಏನನ್ನು? ಆದರೂ.. ಇಷ್ಟೊಂದು ಖಾಲಿತನ ಮೈಯನ್ನು ಉರಿಸಿ ಬೂದಿ ಮಾಡುತ್ತಿರುವಾಗ ಸುಮ್ಮನಿರುವುದು ಸರಿಯಲ್ಲ. ನಿಮಗಿದನ್ನು ಹೇಳಿ ಹಗುರಾಗುವುದು, ಅಥವಾ ಇನ್ನಷ್ಟು ಭಾರವಾಗುವುದಷ್ಟೇ ನನಗೀಗ ಉಳಿದಿರುವ ದಾರಿ. ಈ ಕತೆಯ ಅರ್ಥ-ವ್ಯಾಖ್ಯಾನ ಮಾಡುವುದೆಲ್ಲ ನಿಮ್ಮ ಬುದ್ಧಿ-ಭಾವ-ಯೋಚನೆಗಳಿಗೆ ಬಿಟ್ಟ ವಿಷಯ.
ಲೊಯಿಸ್ ಎಂಬ ಆ ಹುಡುಗಿಗೆ ಆಗಲೇ 35 ವರ್ಷ ವಯಸ್ಸು. ಹಾಗಾಗಿ ಅವಳನ್ನು ಹೆಂಗಸು ಎನ್ನುವುದೇ ಹೆಚ್ಚು ಸೂಕ್ತ. ಹದಿನೈದು ಜನ ಸೋದರ-ಸೋದರಿಯರಿದ್ದ ದೊಡ್ಡ ಕುಟುಂಬದಿಂದ ಬಂದಿದ್ದ ಲೊಯಿಸ್, ಹೆರಾಲ್ಡ್ ಜರ್ಗಿನ್ಸ್ ಎಂಬವನನ್ನು ಮದುವೆಯಾದಳು. ವಿಪರ್ಯಾಸವೆಂದರೆ, ಆ ದಂಪತಿಗೆ ಮಾತ್ರ ಹಲವು ವರ್ಷಗಳು ಕಳೆದರೂ ಸಂತಾನಭಾಗ್ಯ ಲಭಿಸಲಿಲ್ಲ. ಹದಿನಾರು ವರ್ಷ ಹೀಗೆ ಕಾದು ಬೇಸರ ಬಂದ ಮೇಲೆ ಇಬ್ಬರೂ ಹೊರಗಿನಿಂದ ಮಗುವನ್ನು ದತ್ತು ಪಡೆಯುವ ನಿರ್ಧಾರ ಮಾಡಿದರು. ಆಗಷ್ಟೇ ಹುಟ್ಟಿ ಕೆಲ ತಿಂಗಳು ಕಳೆದಿದ್ದ ಮಗುವೊಂದನ್ನು ದತ್ತುಪಡೆದು ರಾಬರ್ಟ್ ಎಂದು ಹೆಸರಿಟ್ಟರು. ಒಂದೆರಡು ವರ್ಷವಾದ ಮೇಲೆ, ಆಕೆಗೆ ಮತ್ತೊಂದು ಮಗುವನ್ನೂ ಎತ್ತಿ ಆಡಿಸಬೇಕೆಂಬ ಬಯಕೆಯಾಗಿರಬೇಕು; ಒಂದು ವರ್ಷ ಕಳೆದಿದ್ದ ಮತ್ತೊಂದು ಗಂಡುಮಗುವನ್ನು ದತ್ತು ಪಡೆದರು. ಡೆನ್ನಿಸ್ ಎಂದು ನಾಮಕರಣ ಮಾಡಿದರು. ರಾಬರ್ಟ್ ಮತ್ತು ಡೆನ್ನಿಸ್‍ರಿಗೆ ಒಂದೂವರೆ ವರ್ಷದ ಅಂತರವಷ್ಟೇ. ಇಬ್ಬರೂ ಒಬ್ಬರಿಗೊಬ್ಬರು ಜೀವ ಕೊಡಬಲ್ಲ, ಜೀವ ಬಿಡಬಲ್ಲ ಆತ್ಮೀಯ ಸೋದರರಾದರು. ಸುಖವಾದ ಸಂಸಾರ ಎನ್ನುವುದಕ್ಕೆ ಏನೇನೂ ಕೊರತೆ ಇರಲಿಲ್ಲ.
ಮತ್ತಷ್ಟು ಓದು