ವಿಷಯದ ವಿವರಗಳಿಗೆ ದಾಟಿರಿ

Archive for

22
ಏಪ್ರಿಲ್

ಸೆಮೆಟಿಕ್ ರಿಲಿಜನ್ನಿನ ಪವಿತ್ರ ಗ್ರಂಥಗಳೂ ಮತ್ತು ಹಿಂದೂ ಧರ್ಮದ ವೇದಗಳೂ

– ವಿನಾಯಕ ಹಂಪಿಹೊಳಿ

Pustakaಸೆಮೆಟಿಕ್ ರಿಲಿಜನ್ನಿನ ಅನುಯಾಯಿಗಳು ತಮ್ಮ ಪವಿತ್ರ ಗ್ರಂಥಗಳ ರಚನೆಯನ್ನು ಕಾಲದ ಪರಿಧಿಯೊಳಗೇ ಕಾಣುತ್ತಾರೆ.ಸೃಷ್ಟಿಯ ನಂತರವೇ,ಆಡಮ್,ಮೋಸಸ್ ಬರುವದರಿಂದ ಸೃಷ್ಟಿ ಮೊದಲು, ಹಳೆ ಒಡಂಬಡಿಕೆ ನಂತರ ಎಂಬುದು ಅವರ ನಂಬಿಕೆ ಮತ್ತು ಅದು ತರ್ಕಕ್ಕೆ ಒಪ್ಪತಕ್ಕದ್ದೂ ಆಗಿದೆ. ಜೀಸಸ್ ನಂತರವೇ ಹೊಸ ಒಡಂಬಡಿಕೆ, ಪೈಗಂಬರರ ನಂತರವೇ ಖುರಾನ್ ಆವೃತ್ತಿ ಎಂಬುದನ್ನೂ ಒಪ್ಪುತ್ತಾರೆ. ಇವರೆಲ್ಲರಿಗೂ ಸೃಷ್ಟಿ ಒಂದೇ ಆಗಿರುತ್ತದೆ. ಕೇವಲ ಒಮ್ಮೆ ಮಾತ್ರ ಸೃಷ್ಟಿಯಾಗಿರುವ ಇಲ್ಲಿ ಪ್ರಳಯದ ನಂತರ ಇನ್ನೊಂದು ಸೃಷ್ಟಿ, ನಂತರ ಮತ್ತೊಂದು ಸೃಷ್ಟಿ, ಈ ಸೃಷ್ಟಿಯ ಹಿಂದಿನ ಇನ್ನೊಂದು ಸೃಷ್ಟಿ ಇವುಗಳ ಬಗ್ಗೆ ಅವರು ನಂಬುವದೇ ಇಲ್ಲವಾದ್ದರಿಂದ, ಅವರ ಪವಿತ್ರ ಗ್ರಂಥಗಳಿಗೆ ಕಾಲದ ಎಲ್ಲೆಕಟ್ಟುಗಳು ಇರುವದು ಯುಕ್ತವೇ ಆಗಿದೆ ಎಂದರೂ ತಪ್ಪಿಲ್ಲ.

ಗಮನಿಸಬೇಕಾದ ಅಂಶವೆಂದರೆ, ನಂತರ ಬಂದ ಸೆಮೆಟಿಕ್ ರಿಲಿಜನ್ ಹಿಂದಿನಿಂದ ಬಂದ ರಿಲಿಜನ್ ಅನ್ನು ತಿರಸ್ಕರಿಸದೇ, ಕೇವಲ ಅದರ ಪರಿಷ್ಕೃತ ಆವೃತ್ತಿ ಎಂಬುದಾಗಿ ಮಾತ್ರ ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಜೀಸಸ್ ಮುಖಾಂತರ ಮೂಲ ಬೋಧನೆಗಳನ್ನು ಹೊಸ ಒಡಂಬಡಿಕೆಯಲ್ಲಿ ನೀಡಲಾಗಿದೆ ಎಂದು ಕ್ಯಾಥೋಲಿಕ್ ಜನರೂ,ಎರಡೂ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಖುರಾನಿನಲ್ಲಿ ಇನ್ನೊಮ್ಮೆ ಮೂಲ ಬೋಧನೆಗಳನ್ನು ನೀಡಲಾಗಿದೆ ಎಂದು ಮುಸ್ಲಿಮ್ ಜನರೂ ಭಾವಿಸುತ್ತಾರೆ. ವಿಶೇಷವೆಂದರೆ ಖುರಾನು ತನ್ನ ಹಿಂದಿನ ಗ್ರಂಥಗಳಂತೆ ಭವಿಷ್ಯದಲ್ಲಿ ಇನ್ನೊಬ್ಬ ದೇವದೂತನ ಆಗಮನವನ್ನು ಅಲ್ಲಗಳೆದು ಅದೇ ಅಂತಿಮ ಎಂದು ಹೇಳಿಕೊಂಡಿದೆ.
ಮತ್ತಷ್ಟು ಓದು »

22
ಏಪ್ರಿಲ್

ಸರಳ ಯೋಚನೆ ಕಾಲದ ಅನಿವಾರ್ಯ

– ಡಾ.ಕಿರಣ್.ಎಂ ಗಾಜನೂರು

Badanavalu Gandhijiಗೌರವಾನ್ವಿತ ಮು.ಅ ಶ್ರೀರಂಗ ಅವರೆ ತಾವು ನನ್ನ ಲೇಖನಕ್ಕೆ ನೀಡಿದ ಸಹಸ್ಪಂದನಕ್ಕೆ ಧನ್ಯವಾದಗಳು.ನೀವು ಎತ್ತಿರುವ ಪ್ರಶ್ನೆಗಳು ನಿಮ್ಮೊಬ್ಬರವೆ ಅಲ್ಲ ಜಗತ್ತಿನ ಬಹಳಷ್ಟು ಜನ ಇದೆ ಮಾದರಿಯ ಪ್ರಶ್ನೆಗಳನ್ನು ಹೊಂದಿದ್ದಾರೆ.ಆದರೆ,ಉತ್ತರ ಮತ್ತು ಪರಿಹಾರದ ಪ್ರಯತ್ನಗಳಿಂದ ದೂರ ಉಳಿದಿದ್ದಾರೆ.ನಮ್ಮ ನಡುವೆಯೇ ಇರುವ ಪ್ರಸನ್ನ ಅವರಂತಹ ಕೆಲವರಿಂದ ನಮ್ಮ ಆಧುನಿಕತೆಯ ವ್ಯಸನಗಳಿಗೆ ಪರಿಹಾರದ ಪ್ರಯತ್ನಗಳು ನಡೆದಾಗ ಅದನ್ನು ನೈತಿಕವಾಗಿ ಸಮರ್ಥಿಸುವುದು ನನ್ನ ನೈತಿಕತೆ ಎಂಬುದು ನನ್ನ ನಿಲುವು.ಇನ್ನು ನಾನು ನಿಮಗೆ ಎರಡು ಉದಾಹರಣೆಗಳ ಮೂಲಕ ಸುಸ್ಥಿರ ಬದುಕನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.

೧) ಒಂದು ಜಗತ್ತಿನ ಶ್ರೇಷ್ಟ ನಟ ಚಾರ್ಲಿ ಚಾಂಪ್ಲೀನ್ ನ ಒಂದು ಸಿನಿಮಾ ಇದೆ ಮಾಡ್ರನ್ ಟೈಮ್ಸ್ ಅಂತ.ಅದರಲ್ಲಿ ಆತನೊಂದು ಕಾರ್ಖಾನೆಯ ನೌಕರ, ಆ ಉದ್ದಿಮೆಯ ಮಾಲಿಕನಿಗೆ ತನ್ನ ನೌಕರರು ಊಟ ಮಾಡುವ ಸಮಯದಲ್ಲಿ  ಕೆಲಸ ನಿಲ್ಲಿಸುತ್ತಿದ್ದಾರೆ ಇದರಿಂದ ನಷ್ಟವಾಗುತ್ತಿದೆ ಅನ್ನಿಸುತ್ತದೆ ‌ಆದ್ದರಿಂದ ಊಟ ಮಾಡುತ್ತಲೇ ಕೆಲಸ ಮಾಡುವ ಒಂದು ಯಂತ್ರವನ್ನು ರೂಪಿಸುವ, ಅಳವಡಿಸುವ ಪ್ರಯತ್ನ ಮಾಡುತ್ತಾನೆ ಮತ್ತು ಪರೀಕ್ಷಾರ್ಥವಾಗಿ ಅದನ್ನು ಚಾರ್ಲಿಯ ಮೇಲೆ ಪ್ರಯೋಗಿಸಲಾಗುತ್ತದೆ ಮುಂದಿನದು ಹಾಸ್ಯದ ಮೂಲಕವೇ ತನ್ನ ಕಾಲದ ಉದ್ಯಮಿಗಳ ಆಸೆಬುರುಕ ತನವನ್ನು ವಿಡಂಬನೆ ಮಾಡುವ ಚಿತ್ರ ಆಧುನಿಕತೆಯ ಪ್ರಭಾವಕ್ಕೆ ಒಳಗಾದ ಮನುಷ್ಯ ಹೇಗೆ ತನ್ನ ಸಹಜೀವಿಯಾದ ಇನ್ನೂಬ್ಬ ಮನುಷ್ಯನನ್ನು ನೌಕರ, ಕಾರ್ಮಿಕ, ಕೂಲಿ ಇತ್ಯಾದಿ ಚೌಕಟ್ಟುಗಳಲ್ಲಿ ನೋಡುತ್ತಾನೆ ಮತ್ತು ಲಾಭದ ಕಾರಣಕ್ಕೆ ಮಾನವೀಯತೆಯನ್ನು, ವ್ಯಕ್ತಿ ಗೌರವವನ್ನು ನಗಣ್ಯಗೊಳಿಸುತ್ತಾನೆ ಎಂಬುದನ್ನು ಚಿತ್ರ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದೆ.

ಮತ್ತಷ್ಟು ಓದು »