ವಿಷಯದ ವಿವರಗಳಿಗೆ ದಾಟಿರಿ

Archive for

13
ಜೂನ್

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ ೧

ಹಿನ್ನೆಲೆ:

ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು. ಮತ್ತಷ್ಟು ಓದು »