ಅಪ್ಪನೆಂಬ ಆಪ್ತ…
– ಗೀತಾ ಹೆಗ್ಡೆ
ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.
ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೋ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ ಅಂತೆಲ್ಲಾ.. ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿನದ್ದು. ಮತ್ತಷ್ಟು ಓದು