ರಸಪ್ರಶ್ನೆಯಲ್ಲಿ ರೈಲು ಹಳಿಗಳಿಲ್ಲದ ಜಿಲ್ಲೆ ಯಾವುದು ಎಂದು ಕೇಳುತಿದ್ದಾಗಲೇ ಧೂರ್ತರಲ್ಲಿ ತಂತ್ರಗಾರಿಕೆಯೊಂದು ಹುಟ್ಟುತ್ತಿತ್ತು..
– ಶಿಲ್ಪಾ ನೂರೆರ
ಅಭಿವೃದ್ಧಿಗೆ ಮಾನದಂಡಗಳೇನು? ಅಷ್ಟಕ್ಕೂ ಅಭಿವೃದ್ಧಿ ಎಂದರೇನು? ಇರುವುದನ್ನೆಲ್ಲಾ ಗುಡಿಸಿ ಎಸೆದು ಮತ್ತೊಂದನ್ನು ಕಟ್ಟುವುದು ಅಭಿವೃದ್ಧಿಯೇ? ಸಹಜವಾದುದನ್ನು ನಾಶಮಾಡಿ ಕೃತಕವಾದದ್ದನ್ನು ಸೃಷ್ಟಿಸುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಹಾಗಾದರೆ ಸಹಜವಾದುದನ್ನು, ಈ ಮೊದಲೇ ನೆಲೆಯಾದವುಗಳಿಗೆ ನಾನಾ ಕಿರೀಟಗಳನ್ನು ಕೊಟ್ಟು ಹೊಗಳಿ ಹೊನ್ನಶೂಲಕ್ಕೇಕೆ ಏರಿಸುವಿರಿ?- ಇಂಥ ಅನೇಕ ಪ್ರಶ್ನೆಗಳು ಹುಟ್ಟುವುದು ವ್ಯಾಖ್ಯಾನಕಾರರಿಗೆ, ವಿಶ್ಲೇಷಕರಿಗೆ, ಸಮಾಜಶಾಸ್ತ್ರಜ್ಞರಿಗೆ ಮತ್ತು ಅಭಿವೃದ್ಧಿ ನಿರೀಕ್ಷಿಸುವವರಿಗೆ ಹೊರತು ಅಭಿವೃದ್ಧಿಯನ್ನು ಕೈಗೊಳ್ಳುವವರಿಗಲ್ಲ! ಅಭಿವೃದ್ಧಿಗೆ ಸುಸ್ಥಿರ, ಸಮಗ್ರ ಇತ್ಯಾದಿ ವಿಶೇಷಣಗಳನ್ನು ಕೊಟ್ಟುಕೊಂಡವರೂ ಕೂಡ ಅವರೇ. ಹಾಗಾಗಿ ಅಭಿವೃದ್ಧಿ ಎಂಬುದು ತನ್ನ ಗುರಿಯನ್ನು ಇನ್ನೂ ಮುಟ್ಟದೆ ಅಡ್ಡಾದಿಡ್ಡಿ ಓಡುತ್ತಲೇ ಇದೆ. ಇಂದಿಗೂ ಅಭಿವೃದ್ಧಿ ರಾಜಕೀಯದ ಪ್ರಮುಖ ದಾಳವಾಗಿ ಬಳಕೆಯಾಗುತ್ತಲೇ ಇದೆ. ಹೊರನೋಟಕ್ಕೆ ಆಕರ್ಷಕವಾಗಿ, ಜನರ ಆಶಾಕಿರಣವಾಗಿ ನರ್ತನ ಮಾಡುತ್ತ ಬರುವ ಅಭಿವೃದ್ಧಿ ಯೋಜನೆಗಳು ಇನ್ನೂ ಏಕೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿಲ್ಲ ಎನ್ನುವುದರ ಹಿಂದೆ ಇಂಥಾ ವ್ಯಾಖ್ಯಾನಗಳ ಕ್ಲೀಷೆಗಳಿವೆ. ಮತ್ತಷ್ಟು ಓದು