ವಿಷಯದ ವಿವರಗಳಿಗೆ ದಾಟಿರಿ

ಜುಲೈ 18, 2017

2

‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”

‍ನಿಲುಮೆ ಮೂಲಕ

– ಗೋಪಾಲಕೃಷ್ಣ

‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”

ಮೂರು ವರ್ಷಗಳಲ್ಲಿ ಮೋದಿಯ ಪುಕ್ಸಟ್ಟೆ ಸಾಧನೆಗಳು “ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ..”, “ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ…” , “ದೇಹ ನಿಮ್ಮದು ಚಾಪೇನೂ ನಿಮ್ಮದು, ಯೋಗ ದಿನವೂ ನಿಮ್ಮದು..” , “ಅಕೌಂಟೂ ನಿಮ್ಮದು, ಧನವೂ ನಿಮ್ಮದು..”, “ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ” ಇದಕ್ಕಿಂತಲೂ ತುಟ್ಟಿ/ಬಿಟ್ಟಿ ಯೋಜನೆಗಳಿವೆಯೇ? ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪೋಸ್ಟ್ ಗಳು ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ದೇಶದ ಅಭಿವೃದ್ಧಿಯನ್ನು ಗಮನಿಸುತ್ತಿರುವವರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿರುವುದು ನಿಜ, ಮೋದಿ ಭಕ್ತರಿಗಂತೂ ಮೋದಿ ಹೇಳಿದ್ದು, ಮಾಡಿದ್ದೆಲ್ಲವೂ ಸರಿಯಿರಬಹುದು! ಆದರೆ ಮೋದಿಯನ್ನು ವಿರೋಧಿಸುವವರು ಹಾಗೂ ವಿರೋಧಿಸಲಿಕ್ಕಾಗಿಯೇ ವಿರೋಧಿಸುವವರು ನರೇಂದ್ರ ಮೋದಿಯವರನ್ನು ಪವಾಡ ಪುರುಷನಂತೆ ನೋಡುತ್ತಿರುವುದೇ ಆಶ್ಚರ್ಯ ಉಂಟು ಮಾಡುತ್ತಿದೆ. ಇದಕ್ಕೆ ಮೇಲಿನ ಪೋಸ್ಟ್ ಒಂದು ಚಿಕ್ಕ ನಿದರ್ಶನ ಅಷ್ಟೇ.

‘ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ’ ಕನಸು ಕಾಣುತ್ತಿರಿ ಎಂದು ಹೀಯಾಳಿಸುವ ಮುನ್ನ ಎರಡು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಸಾಧ್ಯವೇ? ಎನ್ನುವುದರ ಅರಿವಾದರು ಬೇಡವೇ? 100 ಸ್ಮಾರ್ಟ್ ಸಿಟಿಗಳ ನಿರ್ಮಾಣದ ಬಗ್ಗೆ 25 ಜೂನ್ 2015ರಂದು ನರೇಂದ್ರ ಮೋದಿಯವರು ಘೋಷಣೆ ಮಾಡಿದರು. ಈವರೆವಿಗೂ ಸ್ಮಾರ್ಟ್ ಸಿಟಿ ಅನ್ನೋದು ಮಾತಿನ ಮೋಡಿಯಷ್ಟೇ ಎನ್ನುವುದು ವಿರೋಧಿಸುವುದಕ್ಕಾಗಿಯೇ ಇರುವ ವಿರೋಧಿಗಳ ಮಾತು. ತಮಾಷೆಯೆಂದರೆ; ದೃಶ್ಯ ವೈಭವವನ್ನು ಕಟ್ಟಿಕೊಡುವ ಬಾಹುಬಲಿ ಚಿತ್ರದ ಆರಂಭದ ಭಾಗ ಬಿಡುಗಡೆಯಾಗಿದ್ದು 10 ಜುಲೈ 2015ರಲ್ಲಿ. ಆಗ ಬಾಹುಬಲಿ ಸಿನಿಮಾದ ಅಂತಿಮ ಭಾಗವನ್ನು 2016ರಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿತ್ತು. ರಾಜಮೌಳಿಯಂತಹ ಚಿತ್ರ ನಿರ್ದೇಶಕ, ಅವರ ತಂಡ, ದೊಡ್ಡ ಸಂಸ್ಥೆಗಳ ಬಂಡವಾಳ, ಒಟ್ಟಿನಲ್ಲಿ ಕಾರ್ಪೋರೇಟ್ ರೀತಿಯಲ್ಲಿ ಸಿನಿಮಾ ನಿರ್ಮಾಣ ಕಾರ್ಯ ನಡೆದರೂ, ಬಿಡುಗಡೆಯಾಗಿದ್ದು ಮಾತ್ರ 28 ಏಪ್ರಿಲ್ 2017ರಲ್ಲಿ, ಅಂದರೆ ಹೇಳಿದ ಒಂದು ವರ್ಷಕ್ಕಿಂತಲೂ ತಡವಾಗಿ. ಸಕಲ ಸೌಲಭ್ಯಗಳಿದ್ದೂ ದೃಶ್ಯ ವೈಭವವೊಂದನ್ನು ಕಟ್ಟಿಕೊಡುವ ಕೆಲಸವೇ ಅಂದುಕೊಂಡದ್ದಕ್ಕಿಂತ ತಡವಾಗಬೇಕಾದರೇ, ಭಾರತದಂತಹ ದೇಶದಲ್ಲಿ ಸ್ಟಾರ್ಟ್ ಸಿಟಿಗಳ ನಿರ್ಮಾಣ ಘೋಷಣೆಯಾದ ಎರಡು ವರ್ಷದಲ್ಲಿಯೇ ಸಾಧ್ಯವಾಗುತ್ತದೆಯೇ? 2014ರಲ್ಲಿ ನೂರಾರು ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವನ್ನು ದೂಷಿಸಲು, ಸ್ಮಾರ್ಟ್‍ಸಿಟಿ ಘೋಷಣೆಯನ್ನು ಬಳಸಿಕೊಳ್ಳುವವರು, ಕೇಂದ್ರ ಸರ್ಕಾರದ ಮೂಲ ಸೌಕರ್ಯ ಯೋಜನೆಗಳಲ್ಲಿ ಅನಗತ್ಯವಾಗಿ ವೆಚ್ಚವಾಗುತ್ತಿದ್ದ ಹಣ, ಎರಡು ವರ್ಷಗಳಲ್ಲಿ 20% ನಿಂದ 11%ಗೆ ಇಳಿದಿರುವುದರ ಬಗ್ಗೆ ಒಂದೇ ಒಂದು ಮಾತೂ ಆಡುವುದಿಲ್ಲ. ಕರ್ನಾಟಕದಲ್ಲಿ ಮಾಂಸದ ಅಂಗಡಿಗೆ ಸಹಾಯಧನ ಕೊಡುವುದನ್ನು ಮುಕ್ತಕಂಠದಿಂದ ಸ್ವಾಗತಿಸುವ ಈ ‘ಭಾಗ್ಯ’ವಂತರು ಸ್ಮಾರ್ಟ್‍ಸಿಟಿ ಘೋಷಣೆಯನ್ನು ಅಪಹಾಸ್ಯ ಮಾಡುತ್ತಾರೆಯೇ ಹೊರತು, ಉದ್ಯಮಗಳು ಬೆಂಗಳೂರಿನಿಂದ ಹೈದರಬಾದ್, ಅಮರಾವತಿ ಕಡೆಗೆ ವಲಸೆ ಹೋಗುತ್ತಿರುವುದರ ಬಗ್ಗೆ ಚಕಾರ ಎತ್ತುವುದಿಲ್ಲ. ಕಾರಣ ಇವರು ಬಯಸುವುದು ‘ಭಾಗ್ಯ’ಗಳನ್ನು ಮಾತ್ರ. ‘ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ’ Blind following & blind criticism are equally dangerous ಎನ್ನುವುದಕ್ಕೆ ಇದೊಂದು ಉದಾಹರಣೆ.

ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ದಿನೇ ದಿನೇ ಸುದ್ದಿಯಾಗುತ್ತಿರುವಾಗ, ‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಎಂದು ಅರಿವು ಮೂಡಿಸುವುದನ್ನೂ ಲೇವಡಿ ಮಾಡುವವರಿಗೆ, ಕೇವಲ ಒಂದೇ ವರ್ಷದಲ್ಲಿ 2 ಕೋಟಿ ಎಲ್‍ಪಿಜಿ ಸಂಪರ್ಕ ಕಲ್ಪಿಸಿ, ನಿರೀಕ್ಷೆಗೂ ಮೀರಿ ಉಜ್ವಲ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಿರುವುದು ಕಾಣಿಸುವುದಿಲ್ಲ. ಮಹಿಳೆಯರ ಆರೋಗ್ಯದ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ 3 ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯೇ ‘ಉಜ್ವಲ ಯೋಜನೆ.’ ಜಾತಿ, ಧರ್ಮದ ಅಳತೆಗೋಲಿಲ್ಲದ ಈ ಯೋಜನೆ ಒಂದು ವರ್ಷದಲ್ಲಿಯೇ 2 ಕೋಟಿ ಕುಟುಂಬಗಳನ್ನು ತಲುಪಿರುವುದನ್ನು ಮರೆಮಾಚುತ್ತಾರೆ, ಆದರೆ ‘ಶಾದಿಭಾಗ್ಯ’ವನ್ನು ಬಿಗಿದಪ್ಪಿಕೊಳ್ಳುತ್ತಾರೆ. ಜೊತೆಗೆ ಮೋದಿಯವರು ಯುಪಿಎ ಜಾರಿಗೆ ತಂದಿದ್ದ ಯೋಜನೆಗಳನ್ನು ಹೆಸರು ಬದಲಿಸಿ ತಮ್ಮ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂಬ ಆರೋಪ ಬೇರೆ. ಯೋಜನೆಯನ್ನು ಘೋಷಿಸುವುದಕ್ಕೂ, ಅದನ್ನು ಫಲಾನುಭವಿಗಳಿಗೆ ತಲುಪಿಸುವುದಕ್ಕೂ ತುಂಬಾ ಅಂತರವಿದೆ. ಯುಪಿಎ ಸರ್ಕಾರ ತನ್ನ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಿದ್ದರೆ 2ಜಿ ಹಗರಣ, ಕೋಲ್‍ಗೇಟ್ ಹಗರಣ, ಕಾಮನ್‍ವೆಲ್ತ್ ಹಗರಣ, ಆದರ್ಶ ಸೊಸೈಟಿ ಹಗರಣ ಹೀಗೆ ಬಾಲದಂತೆ ಹಗರಣಗಳ ಪಟ್ಟಿ ಬೆಳೆಯುತ್ತಿರಲಿಲ್ಲ. ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿರುವ ‘ಉಜ್ವಲ ಯೋಜನೆ’ಯ ಬಗ್ಗೆ  ಮಾತನಾಡದ/ ವಿರೋಧಿಸಲಿಕ್ಕಾಗಿಯೇ ವಿರೋಧಿಸುವ ‘ಭಾಗ್ಯ’ವಂತರು ಹೆಮ್ಮೆಯ ‘ಯೋಗದಿನ’ ಆಚರಣೆಯನ್ನೂ ಅಪಹಾಸ್ಯ ಮಾಡುತ್ತಾರೆ. ‘ದೇಹ ನಿಮ್ಮದು, ಚಾಪೇನೂ ನಿಮ್ಮದು; ಯೋಗದಿನ.’ ನಮ್ಮ ನೆಲದ ಪ್ರತೀಕವಾಗಿರುವ, ದೇಶದ ಹೆಮ್ಮೆಯ ಯೋಗವನ್ನು ಜೂನ್ 21ರಂದು ‘ಯೋಗದಿನ’ವಾಗಿ ಇಡೀ ವಿಶ್ವವೇ ಸಂಭ್ರಮದಿಂದ ಆಚರಿಸುತ್ತದೆ. ಆದರೆ ಮೋದಿ ವಿರೋಧಿಸಲು ಯೋಗವೂ ಅಪಹಾಸ್ಯಕ್ಕೀಡಾಗುತ್ತಿರುವುದೇ ವಿಪರ್ಯಾಸ. ಉಚಿತವಾಗಿ ಕಲಿಯಬಹುದಾದ, ಆರೋಗ್ಯ ಸುಧಾರಿಸಿಕೊಳ್ಳಬಹುದಾದ ಯೋಗದಿನಾಚರಣೆಯನ್ನು ಅಪಹಾಸ್ಯ ಮಾಡುವವರು, ಕರ್ನಾಟಕ ಸರ್ಕಾರ ಹೆದ್ದಾರಿಗಳಲ್ಲಿನ ಬಾರ್ ಮಾಲೀಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ವಿರೋಧಿಸುವುದಿಲ್ಲ. ಕಾರಣ ‘ಮೋದಿವಿರೋಧಿ ನೀತಿ’ ಅಡ್ಡ ಬರುತ್ತದೆ. ಯೋಗದ ಹೆಸರಲ್ಲಿ ಮೋದಿ ವಿಶ್ವಾದ್ಯಂತ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂಬ ಅಸಹನೆಯೂ ಕಾರಣವಿರಬಹುದು.

ಅಷ್ಟಕ್ಕೂ ಜಾಗತಿಕ ಮಟ್ಟದಲ್ಲಿ ಮೋದಿ ನಾಯಕತ್ವ ಸದ್ದು ಮಾಡಿದರೆ ಭಾರತಕ್ಕಲ್ಲವೇ ಒಳ್ಳೆಯದು. ಒಂದು ಕಡೆ ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೇರಿಕಾದಲ್ಲಿ, ತನ್ನ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದ ಬರಾಕ್ ಒಬಾಮಾ ನಂತರ, ಬಂದು ಕುಳಿತಿರುವ ಡೊನಾಲ್ಡ್ ಟ್ರಂಪ್ ತನ್ನ ಹಾವಾಭಾವ, ನಾಲಿಗೆಯ ಮೇಲೆ ಹಿಡಿತವಿಲ್ಲದಿರುವುದರಿಂದ ನಕಾರಾತ್ಮಕ ಅಂಶಗಳನ್ನು ಬೀರುತ್ತಿದ್ದರೆ, ಇನ್ನೊಂದು ಕಡೆ ಮಾತಿನ ಮೇಲೆ ಹಿಡಿತ, ಹಾವಾಭಾವ, ಗಟ್ಟಿ ನಿರ್ಧಾರಗಳಿಂದ ಜಾಗತಿಕ ಮಟ್ಟದ ನಾಯಕರ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿರುವ ಮೋದಿ, ಹೊಸ ಶಖೆಯೊಂದಕ್ಕೆ ನಾಂದಿ ಹಾಡುತ್ತಿರುವಂತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಮೊನ್ನೆ ಮೋದಿಯವರ ಇಸ್ರೇಲ್ ಭೇಟಿಗೂ ಮುನ್ನ ಅಲ್ಲಿನ ಪತ್ರಿಕೆಯೊಂದು ‘ಎದ್ದೇಳಿ, ವಿಶ್ವದ ಬಲಿಷ್ಠ ನಾಯಕರೊಬ್ಬರು ಆಗಮಿಸುತ್ತಿದ್ದಾರೆ’ ಎಂದು ಮೋದಿಗೆ ಸ್ವಾಗತ ಕೋರಿರುವುದು. ಮತ್ತದೆ ಇಲ್ಲಿಯ ‘ಭಾಗ್ಯ’ವಂತರ ವಿರೋಧ. ಇಸ್ರೇಲ್ ಜೊತೆಗಿನ ಸಂಬಂಧ ಸುಧಾರಣೆಯ ಬಗ್ಗೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ವತಂತ್ರ ಭಾರತದ ಗುರಿಯನ್ನಷ್ಟೇ ಗಮನದಲ್ಲಿಟ್ಟುಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್‍ರವರು, ಸಹಾಯ ಕೇಳಿ ಹೋಗಿದ್ದು ಜರ್ಮನಿಯ ಹಿಟ್ಲರನ ಬಳಿಗೆ. ಹಿಟ್ಲರ್‍ನನ್ನು ಜಗತ್ತೇ ವಿರೋಧಿಸಿದರೂ, ಅಂದಿನ ಕಾಲಕ್ಕೆ ನೇತಾಜಿಯವರಿಗೆ ಬೇಕಿದ್ದುದು ಭಾರತಕ್ಕೆ ಸ್ವತಂತ್ರ ಮಾತ್ರ, ಹಾಗಾಗಿಯೇ ಶತ್ರುವಿನ ಶತ್ರು ಮಿತ್ರ ಎಂದುಕೊಂಡೇ ಸ್ನೇಹದ ಹಸ್ತ ಚಾಚಿದ್ದರು. ಸದ್ಯ ಅಕ್ಕಪಕ್ಕದ ಪಾಕಿಸ್ತಾನ, ಚೀನಾ ಕಾಲುಕೆರೆದುಕೊಂಡು ಜಗಳವಾಡುತ್ತಿರುವಾಗ ಬಲಿಷ್ಠ ಇಸ್ರೇಲ್‍ನೊಂದಿಗೆ ಸಂಬಂಧ ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು, ಪ್ಯಾಲೆಸ್ತೇನ್ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿದೆಯೇ? ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ಇಸ್ರೇಲ್‍ನೊಂದಿಗೆ ಮೋದಿ ಸರ್ಕಾರ ಮೈತ್ರಿ ರುದ್ಧಿಸಿಕೊಂಡಿರುವುದು, ಮೋದಿಯವರ ‘ಬಲಿಷ್ಠ ಭಾರತ ನಿರ್ಮಾಣ’ ಕನಸಿಗೆ ಪೂರಕವಾಗಿರುವುದಂತೂ ನಿಜ. ಈ ಕನಸಿನ ಸಾಕಾರಕ್ಕೆ ವಿದೇಶಿ ಭೇಟಿಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಮೋದಿಯವರನ್ನು FLIGHT MODE ಎಂದು ಅಣಕಿಸುವವರಿಗೆ, ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಅನ್ನು ಯಾವ ದೇಶಗಳೂ ವಿರೋಧಿಸದೇ ಇದ್ದುದು, ಸಿರಿಯಾದಲ್ಲಿನ ಯಶಸ್ವಿ ರಕ್ಷಣಾ ಕಾರ್ಯ, ವಿಶ್ವ ಯೋಗದಿನಾಚರಣೆ, ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗುತ್ತಿರುವ ಈ ಸಂಧರ್ಭದಲ್ಲಿ ವಿವಿಧ ದೇಶಗಳು ಭಾರತದೊಂದಿಗಿನ ಮೈತ್ರಿಯನ್ನು ಇನ್ನಷ್ಟು ಗಟ್ಟಿಕೊಳ್ಳುತ್ತಿರುವುದೆಲ್ಲವನ್ನು ಗಮನಿಸಿದರೆ ಸಾಕು. ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಗಟ್ಟಿಗೊಳಿಸುತ್ತಿರುವುದರ ಅರಿವಾಗುತ್ತದೆ. ಇದೆಲ್ಲಾ ಗೊತ್ತಿದ್ದೋ, ‘ಹಣ ನಿಮ್ಮದು ಅಕೌಂಟೂ ನಿಮ್ಮದು; ಜನಧನ್’ ಎಂದು ಜನಪಯೋಗಿ ಯೋಜನೆಗಳನ್ನು ಲೇವಡಿ ಮಾಡುತ್ತಾರೆ. ಉಚಿತವಾಗಿ ಜನಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆಯನ್ನೇನೋ ಜನ ತೆರೆದರು. ಆದರೆ ಅದರ ದುರ್ಬಳಕೆ ಮಾಡಿಕೊಂಡವರು ಜನರೇ. ನವೆಂಬರ್ 8ರಂದು 500-1000 ರೂಪಾಯಿಗಳ ಅಪಮೌಲ್ಯೀಕರಣದಂತಹ ಐತಿಹಾಸಿಕ ನಿರ್ಧಾರ ಪ್ರಕಟಿಸಿದ ನಂತರ, ತಮ್ಮ ಜನಧನ್ ಖಾತೆಗೆ ಕಪ್ಪುಕುಳಗಳ ಹಣವನ್ನು 2.50 ಲಕ್ಷದಂತೆ ಜಮಾ ಮಾಡಿ, ಕಮಿಷನ್! ಪಡೆದವರು ಸಾಮಾನ್ಯ ಜನರೇ ಅಲ್ಲವೇ? ಬರಿಗೈಯ ಫಕೀರ ನಾನು ಎನ್ನುವ ಮೋದಿ, ಸಾಮಾನ್ಯ ಜನರ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಜಮೆಯಾಗುವಂತೆ ಮಾಡಬಲ್ಲರು ಎಂದು ಊಹಿಸಿಕೊಳ್ಳಲು ಸಾಧ್ಯವಿತ್ತೇ? ಆದರೂ ಸಾಧ್ಯವಾಯಿತು. ಆದರೆ ಜನರೇ ದುರ್ಬಳಕೆ ಮಾಡಿಕೊಂಡರು. ಆದರೂ ಮೋದಿ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಕೆಲಸ ಮಾಡಲಿಲ್ಲ ಎನ್ನುವ ಮತ್ತದೇ ವಿರೋಧಿನೀತಿ.

ಹೀಗೆ ವಿರೋಧಿಸುವವರು, ಅಪಹಾಸ್ಯ ಮಾಡುವವರು, ಆಗಾಗ್ಗೆ ಭ್ರಷ್ಟರಿಗೆ ನಡುಕ ಹುಟ್ಟುಸುತ್ತಿದ್ದ ಕರ್ನಾಟಕ ಲೋಕಾಯುಕ್ತ ಪೋಲಿಸ್ ವ್ಯವಸ್ಥೆಯನ್ನು ಮುಚ್ಚಿ ಹಾಕಿ, ಭ್ರಷ್ಚಾಚಾರ ನಿಗ್ರಹ ದಳ (ಎಸಿಬಿ)ವನ್ನು ಸ್ಥಾಪಿಸಿದಾಗ ತುಟಿಕ್ ಪಿಟಿಕ್ ಎನ್ನಲಿಲ್ಲ. ವಿಫಲವಾದರೆ ತನಗೇ ಮುಳುವಾಗಬಹುದು ಎಂಬ ಅರಿವಿದ್ದರೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿಯವರನ್ನು ವಿರೋಧಿಸುವುದು ಮಾತ್ರ ‘ನೊಟ್ ಬ್ಯಾನ್-ಫ್ಲಾಪ್ ಶೋ’ ಎಂದು. ‘ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ’ ಎಂದು ಹಂಗಿಸುವವರಿಗೆ ಮೋದಿ ಸ್ವಚ್ಛ ಭಾರತಕ್ಕೆ ಅಣಿಯಾದ ನಂತರ ದೇಶದ ಯುವಜನಾಂಗ ಸ್ವಆಸಕ್ತಿಯಿಂದ ದೇಶಾದ್ಯಂತ ಪಾಲ್ಗೊಂಡಿದ್ದು/ಪಾಲ್ಗೊಳ್ಳುತ್ತಿರುವುದು ಕಾಣಿಸುವುದಿಲ್ಲ. ಸ್ವಚ್ಛ ಭಾರತವೆಂದರೆ ಕೇವಲ ಕಸ ಗುಡಿಸುವುದು ಮಾತ್ರವಲ್ಲ ಸ್ವಚ್ಛ ಆಡಳಿತವೂ ಅದರ ಅಂಗ ಎಂದು ಮೋದಿ ತೋರಿಸಿಕೊಟ್ಟಿದ್ದಾರೆ. ಪೊರಕೆಯನ್ನೇ ತನ್ನ ಗುರುತಾಗಿಸಿಕೊಂಡು, ಆಡಳಿತದಲ್ಲೂ ಸ್ವಚ್ಛತೆಯನ್ನು ತರುತ್ತೇವೆಂದ ಅರವಿಂದ್ ಕೇಜ್ರಿವಾಲ್ ಪಕ್ಷದವರು, ಲಾಲು ಪ್ರಸಾದ್ ಯಾದವ್‍ರೊಂದಿಗೆ ಕೈಜೋಡಿಸಿದ್ದರ ಬಗ್ಗೆ ಈ ‘ಭಾಗ್ಯ’ವಂತರು ಚಕಾರವೆತ್ತುವುದಿಲ್ಲ. ಜಾತಿ, ಧರ್ಮ ಮತ್ತು ತಮ್ಮ ಕುರ್ಚಿ ಭದ್ರವಾಗಿರುವುದನ್ನಷ್ಟೇ ಗಮನದಲ್ಲಿಟ್ಟುಕೊಂಡು ಮಂತ್ರಿಗಿರಿ ದಯಪಾಲಿಸುವ ಇಂದಿನ ರಾಜಕಾರಣದಲ್ಲಿ, ಆಯಾಕಟ್ಟಿನ ಸ್ಥಳಗಳಿಗೆ ಸಮರ್ಥರನ್ನೇ ನೇಮಿಸಿ ಸಮರ್ಥ ಆಡಳಿತ ನೀಡುತ್ತಿದ್ದರೂ ‘ಮೋದಿ ಏನೂ ಮಾಡಿಲ್ಲ’ ‘ಒಳ್ಳೆಯ ದಿನಗಳು ಬರಲಿಲ್ಲ’ ಎಂಬ ಅಪಹಾಸ್ಯದ ಹೊರತು ‘ಭಾಗ್ಯ’ವಂತರಿಗೆ ಮತ್ತೇನೂ ಕಾಣುತ್ತಿಲ್ಲ. 2004ರಿಂದ 2014ರವರೆಗೆ ಪ್ರತಿನಿತ್ಯದ ಪತ್ರಿಕೆಗಳು, ಸುದ್ದಿವಾಹಿನಿಗಳ ಚರ್ಚೆಗಳನ್ನು ಗಮನಿಸಿದರೆ ಕಣ್ಣಿಗೆ ಕಾಣುತ್ತಿದ್ದುದು ಬಹುತೇಕ ಹಗರಣ, ಉಗ್ರರ ಅಟ್ಟಹಾಸದಂತಹ ದೇಶವಿರೋಧಿ ವಿಚಾರಗಳೇ. ಆದರೀಗ ಅಭಿವೃದ್ಧಿಯ ವಿಚಾರಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ.

‘ಭಾಗ್ಯ’ಗಳನ್ನೇ ಬಯಸುವವರಿಗೆ ಲ್ಯೂಟಿನ್ ಮನಸ್ಸಿನ ಸೋಕಾಲ್ಡ್ ಬುದ್ಧಿಜೀವಿಗಳು, ಸೋಕಾಲ್ಡ್ ಉದಾರವಾದಿಗಳು ಹೇಳಿಕೊಡುತ್ತಿರುವ ಪಾಠದ ಹೆಸರು ‘ಮೋದಿವಿರೋಧಿ ನೀತಿ.’  ಕಾರಣ, ಇಷ್ಟು ವರ್ಷಗಳ ಕಾಲ ಸರ್ಕಾರದ ಆಯಾಕಟ್ಟಿನ ಸ್ಥಳಗಳಲ್ಲಿ ತಮಗೆ ಬೇಕಾದಂತೆ ಠಿಕಾಣಿ ಹೂಡಿದ್ದವರಿಗೆ ಇತ್ತೀಚಿಗೆ ಬಿಟ್ಟಿ ಫಲಗಳು ಸಿಗುತ್ತಿಲ್ಲದಿರುವುದು. ಇದೇನಾದರೂ ಮುಂದುವರೆದರೆ 2019ರಲ್ಲಿ ಇವರ ಪರಿಸ್ಥಿತಿ ಚಿಂತಾಜನಕವಾಗಲಿದೆ. 2014ರಲ್ಲಿ ಗುಜರಾತ್‍ನ ಅಭಿವೃದ್ಧಿ, ಆಡಳಿತ ವಿರೋಧಿ ಅಲೆ, ಅಣ್ಣಾ ಹಜಾರೆ ಹೋರಾಟದ ಫಲ, ತಳಮಟ್ಟದಲ್ಲಿ ಆರ್‍ಎಸ್‍ಎಸ್‍ನ ಕಾರ್ಯಕರ್ತರ ಕೆಲಸಗಳ ಕಾರಣದಿಂದ ನರೇಂದ್ರ ಮೋದಿಯವರಿಗೆ ಸ್ಪಷ್ಟಬಹುಮತ ದೊರೆತಿತ್ತು.

ಆದರೆ 2019ರಲ್ಲಿ ಮೋದಿ ಮತ ಕೇಳಬೇಕಿರುವುದು ‘ತಾನೇನು ಮಾಡಿದ್ದೀನಿ’ ಎನ್ನುವುದರ ಆಧಾರದ ಮೇಲೆಯೇ. ಆ ವೇಳೆಗೆ ದೇಶದಲ್ಲಿ ಹತ್ತು ಕೋಟಿಗೂ ಹೆಚ್ಚಿನ ಹೊಸ ಮತದಾರರು ಸೇರ್ಪಡೆಯಾಗಿರುತ್ತಾರೆ. ಅವರಲ್ಲಿ ಬಹುತೇಕರ ಆಯ್ಕೆ ಅಭಿವೃದ್ಧಿ ಮತ್ತು ಸ್ವಚ್ಛ ಆಡಳಿತವೇ ಆಗಿರುತ್ತದೆ. ಇದಕ್ಕಾಗಿಯೇ ನರೇಂದ್ರ ಮೋದಿಯವರು ‘ಚೀಫ್ ಎಕ್ಸಲೆಂಟ್ ಆಫೀಸರ್’ (ಸಿಇಓ) ರಂತೆ ಕೆಲಸ ಮಾಡುತ್ತಿರುವುದು. ಮೂರು ವರ್ಷಗಳಲ್ಲಿ ಕಾಯ್ದುಕೊಂಡಿರುವ ಮೋದಿ ಅಲೆ ಇನ್ನೊಂದು ವರ್ಷ ಮುಂದುವರೆದರೂ ಸಾಕು #NaMo4SecondTerm ಎಂಬ ರೀತಿಯ ಪ್ರಚಾರ ಆರಂಭವಾಗುದರಲ್ಲಿ ಸಂಶಯವಿಲ್ಲ. ಹಾಗೇನಾದರೂ ಆದರೆ 2019ರಲ್ಲಿ ಮೋದಿ 300+ ಗೆಲುವಿನೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದ್ದಾರೆ. ಹೀಗಾಗಿಯೇ ತುಟ್ಟಿ ಬಿಟ್ಟಿ ಯೋಜನೆಗಳಿಗಾಗಿಯೇ ಕಾದುಕುಳಿತವರು, ಸಾಮಾಜಿಕ ಜಾಲತಾಣಗಳಲ್ಲಿ ಸ್ಮಾರ್ಟ್‍ಸಿಟಿ, ಯೋಗದಿನ, ಸ್ಚಚ್ಛಭಾರತ ಹೀಗೆ ಮೋದಿ ಮಾಡಿದ ಪ್ರತಿ ಕೆಲಸವನ್ನು ವಿರೋಧಿಸುತ್ತಿರುವುದು.

ಅಂದ ಹಾಗೆ ‘ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ’ ಅಲ್ಲವೇ?

2 ಟಿಪ್ಪಣಿಗಳು Post a comment
 1. s.dinni
  ಜುಲೈ 19 2017

  ನೀರೇ ತೀರ್ಥ. ತೀರ್ಥವೇ ನೀರು.
  ಕಂಡವರಿಗಲ್ಲೊ, ಕಂಡವರಿಗಷ್ಟೆ, ತಿಳಿದದಾ ಇದರ ಬೆಲೆಯು – ಬೇಂದ್ರೆ
  ಮಾನ್ಯರೇ,
  ಒಕ್ಕೊರಲಿನಿಂದ ಒಡಲನುಡಿ,
  ಇವನಾರವ, ಇವನಾರವ….
  ಪವಿತ್ರತೆ,ದಿವ್ಯತೆಯ ದೃಷ್ಟಿಯಿಂದ ನಾನು ನೀರನ್ನು ಗೌರವಿಸುತ್ತೇನೆ. ಕಳೆದ ೩/೪ ವರ್ಷಗಳಿಂದ ಅಲ್ಲಿ,ಇಲ್ಲಿ ಅಭ್ಯಾಸಮಾಡುತ್ತ, ಗೂಗಲ್ ಹುಡುಕಾಟ,ಇಂಟರ್ನೆಟ್ ಸಹಾಯದಿಂದ ನಿರಂತರ ತೊಡಗಿಸಿಕೊಂಡಿದ್ದೇನೆ.
  ನೀರಿನ ಬಗ್ಗೆಯೇ ಸುಮಾರು ೧೮೦೦/೨೦೦೦ ಮೇಲ್/ಮೆಸೇಜ ಗಳು ನನ್ನ ಈಮೇಲ್ ನಲ್ಲಿರುತ್ತವೆ. ಬಹಳ ಉತ್ಸಾಹದಿಂದ RTI ದಲ್ಲಿ ತೊಡಗಿಸಿಕೊಂಡೆ, ಬರೆದು ಸಾಕಾಗಿ, ಅದುವಂದು ಪೋಸ್ಟ್ ಮಾರ್ಟಮ್ ಕೆಲಸ ಉಪಯೋಗವಿಲ್ಲದ್ದು ಎಂದು, ಹಿರಿಯ ಸ್ವಾತಂತ್ರ ಹೋರಾಟಗಾರ H S ದೊರೆಸ್ವಾಮಿ ಪ್ರತ್ಯಕ್ಷವಾಗಿ ಹೇಳಿದಾಗ, ತಿಳಿದು ಕೈತೊಳೆದುಕೊಂಡದ್ದಾಯಿತು. ಮುಂದೆ ನೇರವಾಗಿ ಕರ್ನಾಟಕ ಸರಕಾರ ಮುಖ್ಯ ಕಾರ್ಯದರ್ಶಿ,ಬಿ..ಡಬ್ಲ್ಯೂ.ಸ್.ಎಸ್. ಎಸ್.ಬಿ…….ನೀತಿ ಆಯೋಗ ಹೀಗೆ ಹಲವಾರು ಸಂಘ,ಸಂಸ್ಥೆಗಳಿಗೆ ಬರೆದಿದ್ದೇನೆ. ಇತ್ತೀಚೆಗಷ್ಟೇ ಆವಾಜ್.ಆರ್ಗ ಸಾಮಾಜಿಕ ಜಾಲತಾಣದಲ್ಲಿ ಒಂದು ಪಿಟಿಷನ್ ದೇಶದ ಎಲ್ಲ ಮುಖ್ಯ ಮಂತ್ರಿಗಳಿಗೆ ಹಾಗು ಪ್ರಧಾ ಮಂತ್ರಿಯವರಿಗೆ,ಈ ಸಂಬಂಧ ಸಹಿ ಸಂಗ್ರಹಿಸಿದ್ದಾಗಿದೆ. ರೈಟ್ ಟು ಪಿ.ಎಂ. ಎಂಬ ಶೀರ್ಷಿಕೆಯಡಿಯಲ್ಲಿ ಮೋದಿಜಿ ಅವರಿಗೂ ನವೆಂಬರ್,೧೪,೨೦೧೬ ರಂದು ಆರು ಪುಟದ ‘ನೀರಿನ ಸಮಗ್ರ ಶಿಕ್ಷಣ’ ಹಾಗು ಮಕ್ಕಳು,ಯುವಜನರನ್ನು ಒಳಗೊಳ್ಳುವಿಕೆ ವಿಷಯದ ಬಗ್ಗೆ ಕಳಿಸಿದ್ದೇನೆ . ಇದೆ ವಿಷಯವನ್ನು ಈಗ ನನ್ನ ೭೨ ವರುಷದ ದಣಿವು,ದಾಹವನ್ನು ಮೀರಿ ವಿಧಾನ ಸೌಧ,ವಿಕಾಶ ಸೌಧ, ಎಮ್ಮ.ಎಸ್. ಕಟ್ಟಡಗಳಲ್ಲೆಲ್ಲ ಎರಡು ತಾಸು ತಿರುಗಿ ೬ ಪುಟದ ‘ನೀರಿನ ಬಗ್ಗೆ ಏನಾಗಿದೆ,ಏನು ಮಾಡಬಹುದು,ಎಂದು ತಿಳಿಸುವ ಕಾಪಿಯನ್ನು ಸ್ವತಃ, ನೀರಾವರಿ,ಶಿಕ್ಷಣ ಹಾಗು ಮುಖ್ಯ ಕಾರ್ಯದರ್ಶಿಯವರಿಗೆ ಕೊಟ್ಟುಬಂದಿದ್ದೇನೆ. ಅವರಲ್ಲಿ ಯಾರೂ ಸ್ಪಂದಿಸುವ ಮನಸ್ಸಿಲ್ಲ.
  ಇತ್ತೀಚಿಗಷ್ಟೇ ನಡೆದ ಡಿಸೆಂಬರ್ ೨-೪,೨೦೧೬ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ( ನೀರಿನ ವಿಷಯದ ಬಗ್ಗೆ ೧೨-೧೫ ಭಿತ್ತಿ ಲೇಖನ ಹಾಗು ನಾಲ್ಕು ಹಳ್ಳಿ ಹೆಣ್ಣುಮಕ್ಳ್ಳೊಂದಿಗೆ ) ಮೌನ ಪ್ರದರ್ಶನ ಮಾಡಿದ್ದೆ.
  ಈಗ ನಾನು ವಾಸಿಸುತ್ತಿರುವ ಸುಮಾರು ೧೦೦೦ ಕುಟುಂಬಗಳ ಬಹುಮಹಡಿ ಕಟ್ಟಡದಲಿ , ಆಗಾಗ್ಗೆ ಗ್ರೂಪ್ ಮೆಸೇಜ್ ಹಾಗೂ ನೋಟೀಸ್ ಬೋರ್ಡ್ ಮೇಲೆ ಸೂಚಿಸಿದ್ದಾಯಿತು. ಬೆರಳೆಣಿಕೆಯ ಜನರು ಬೇಕೋ/ಬೇಡವೋ ಎಂಬಂತೆ ಮಾತಾಡುತ್ತಾರೆ. ನೀರಿನ ಗಂಭೀರ ಸಮಶ್ಯೆ ಯಾರಿಗೂ ತಿಳಿದಿಲ್ಲ ತಟ್ಟಿದಂತಲ್ಲ
  ಇವರು ತಮ್ಮ ಮಕ್ಕಳು,ಮೊಮ್ಮಕ್ಕಳ ಭವಿಷ್ಯದ ಯೋಚಿಸುವದು ಬೇಡವೇ?

  ನೀರು……………ನೀರು……………..ನೀರು
  ಮನಸ್ಸು ಚಲನೆಯಲ್ಲಿದ್ದರೆ ನೀರು ಇತಿಹಾಸ, ಮನುಷ್ಯ ಜನರಾಗಿದ್ದರೆ ನೀರು ಜಗತ್ತು ,ಮನುಷ್ಯ ಬದುಕಿದ್ದಾನೆಯೆಂದರೆ ನೀರೇ ಬದುಕು.ಜೀವ – ಜೋ.ಮಾ.ಸೆ. ‘ನೀರು ಇಲ್ಲದೆ ಜೀವನವಿಲ್ಲ’. ‘ನೀರು ನಮ್ಮ ತಾಯಿ, ಜೀವಾಮೃತ.’
  ಅಯ್ಯೋ ದೇವರೇ!!!! ನಮ್ಮ ಉಸಿರಿನಂತೆ ಸಹಜವಾಗಿರುವ ಈ ಮಾತುಗಳನ್ನು ಬರೆಯಬೇಕಾದ ಕೆಟ್ಟ ಕಾಲದಲ್ಲಿ ನಾವು ಇಂದು ಬದುಕುತ್ತಿದ್ದೇವೆ.
  ಭವಿಷ್ಯದ ಬಗ್ಗೆ ಹಿಂದೆಂದೂ ಇಲ್ಲದಷ್ಟು ಆಸಕ್ತಿ ಇದೀಗ ಮೊದಲ ಬಾರಿಗೆ ಬರುತ್ತಿದೆ.ಆದರೆ ತುಸು ವಿಪರ್ಯಾಸದ ಸಂಗತಿ ಏನಂದರೆ ನಮ್ಮ ಪಾಲಿಗೆ ಅದು ಇಲ್ಲವೇನೋ ಅನ್ನಿಸುತ್ತಿದೆ’ – ಖ್ಯಾತ ವಿಜ್ಞಾನ ಕತೆಗಾರ ಅರ್ಥರ್ ಕ್ಲಾರ್ಕ್.

  ಮನರಂಜನೆ, ವೈಭವೀಕರಣ,ಮೆರವಣಿಗೆಯ ಮೋಹ, ಮನ್ನಣೆಯ ದಾಹ (ಎಲ್ಲಕಂ ತೀಕ್ಷ್ಣತಮ ತಿನ್ನುವದಾದತ್ಮವನೆ ಮಂಕು ತಿಮ್ಮ)ದಲ್ಲಿ ಮುಳುಗಿ ತೇಲುತ್ತಿರುವವರಿಗೆ, ನೀರಿನ ದಾಹ, ಸಂಕಟ ಕಂಡೀತೇ?

  ಈಗ ನಾವು ನೀರನ್ನುಒಂದು ಗೌರವ,ಪೂಜೆ ಸ್ಥಾನಕ್ಕೆ ಏರಿಸಿ, ಆ ಬಗ್ಗೆ ಅಪಾರ ಶ್ರದ್ಧೆ,ದುಡಿಮೆ ಭಾವನೆಯಿಂದ ಕೆಲಸ ಮಾಡ ಬೇಕಾದ ಕಾಲ ಬಂದಿದೆ. ಹಾಗೆಯೇ ನೀರನ್ನು ದುರುಪಯೋಗ ಪಡಿಸುವದು,ಕಲುಷಿತ ಗೊಳಿಸುವದು ಹಾಗು ಯಾವುದೇ ಹಾನಿ ಮಾಡಿದರೆ ಅದು ಒಂದು , ಪೂಜೆ ಸ್ಥಾನಗಳ್ಳಲ್ಲಿಯಂತೆ ಅಪವಿತ್ರ ಆಗಿದ್ದೆಂದು ಶಿಕ್ಷೆಗೆ ಒಳಪಡಿಸಬೇಕು. ಒಬ್ಬಒಂಟಿಯಾಗಿ ( ಯಾರೂ , ವಿಶೇಷವಾಗಿ ಹಿರಿಯರು ಕೂಡ ನಿರ್ಲಕ್ಷ ತೋರಿಸುವದು ಅಘಾತವೆನಿಸಿತು), ಮುಂದಿನ ಪೀಳಿಗೆಗೆ ಕಾದಿರುವ ಭಯಂಕರ ನೀರಿನ ಆಪತ್ತಿನಬಗ್ಗೆ ಎಚ್ಚರಿಸುವ ಕೆಲಸ. ಒಂದು ರಿತಿಯಲ್ಲಿ ಇದೊಂದು ನಿರಾಶೆಯದಾಯಕ ಕೆಲಸ. ಆದರೆ ನನ್ನೊಂದು ಅಂತರಾಳದ ಧ್ವನಿ ಈ ಕೆಲಸವನ್ನು ಹೇಗೋ ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದಂತಾಗುತತ್ತದೆ .
  ಇದು ನಾನು ಈ ಭೂಮಿತಾಯಿಗೆ ಜೀವನದಲ್ಲಿ ಋಣ ತಿರಿಷಬೇಕೆಂಬ ಒಂದು ತೀವ್ರ ಪ್ಯಾಶನ್, ಫೀಲಿಂಗ್/ಬಯಕೆ.
  ನೀರನ್ನು ಪೂಜ್ಯ,ಉಚ್ಚ ಸ್ಥಾನದಲ್ಲಿಡುವ ಕಾಲ ಈಗ ಬಂದಿದೆ. ಅದಕ್ಕಾಗಿ ಎಲ್ಲರು ಒಳಗೊಂಡು, ನೀರಿಗೆ ಸಂಭಂದ್ ಪಟ್ಟ ಯಾವದೇ ಕೆಲಸದಲ್ಲಿ ತೊಡಗಿ ಕೊಂಡರೆ ಮಾತ್ರ ಸಾಧ್ಯ. ಯಾವದೇ ರೀತಿಯ ಮಲಿನ,,ಹಾನಿ ಮಾಡುವದನ್ನು ,ನಿರ್ಲಕ್ಷ ತೋರಿಸುವದನ್ನು ಸಹಿಸದೆ, ಹೇಗೆ ದೇವಸ್ಥಾನಗಳಿಗೆ ಅನಾದರ, ಭ್ರಷ್ಟಗೊಳಿಸಿದವರಿಗೆ ಮಾಡುವಂತೆ ಶಿಸ್ತು, ಕಠಿಣ ಕ್ರಮ ಪರಿಗಣಿಸುವ ಕಾಲವಿದು . ಬೇರೆ ದಾರಿ ಇಲ್ಲ.
  ಕೆಲವು ಕ್ಷಣ ೧೦-೩೦ ಸೆಕೆಂಡ್ಸ್ ಯೋಚಿಸಿ. ನೀವು ಮೊದಲು ಸ್ನಾನಗೃಹ, ಅಡುಗೆ ಮನೆಯಲ್ಲಿ ಬಿಸಿ,ಬಿಸಿ ಚಹಾ/ಕಾಫೀ ಕುಡಿದ ನಂತರವೇ ….ದೇವರ ಪೂಜೆ, ತೀರ್ಥ ಎಲ್ಲವೂ ನಂತರ. ಅಂದರೆ ಮೊದಲು ನಾವು ಗೌರವಿಸಬೇಕಾದದ್ದು ನೀರು.
  ನಮ್ಮ, ನಿಮ್ಮ ಸಮಯ ವ್ಯರ್ಥ ಮಾಡುವದರಿಂದ ಯಾರಿಗೂ ಉಪಯೋಗವಾಗದು. ಸುತ್ತುವರಿದು ಮಾತುಗಳಲ್ಲಿ ವಿಷಯವನ್ನು ಮುಂದಕ್ಕೆ ಹಾಕಬೇಡಿ. ಈಗಿನ ಪ್ರಜಾಪ್ರಭುತ್ವ ?? ದಲ್ಲಿ , ಒಂದು ಪಾರ್ಟಿ ಹೋಗುತ್ತದೆ ಇನ್ನೊಂದು ಪಾರ್ಟಿ ಬರುತ್ತದೆ. ಸಮಸ್ಯೆ ಮಾತ್ರ ಹಾಗೆಯೇ ಉಳಿಯುತ್ತದೆ.
  ದಯಮಾಡಿ ತಿಳಿಯಬೇಕಾಗಿ ವಿನಂತಿ. ಇದು ವೈಯ್ಯುಕ್ತಿಕ ದೂರು,ಅತೃಪ್ತಿಗಾಗಿ ಬರೆದದ್ದಲ್ಲ.
  ಇದು ಒಂದು ಇಡೀ ಸಮಾಜದ ಬೇಗುದಿ. ಭವಿವಿಷ್ಯದಲ್ಲಿ ನೀರಿನ ಬಗ್ಗೆ ಭಾರೀ ಸಂಕಷ್ಟದ ಎಲ್ಲ ಸಾಧ್ಯತೆಗಳು ಕಾಣುತ್ತವೆ. ನೀರಿನ ಬಗ್ಗೆ ಮೇಲೆ ವಿವರಿಸದಹಾಗೆ ಸ್ತಬ್ಧವಾಗಿ ೩೦ ಸೆಕೆಂಡ್ಸ್ ಫೀಲ್ ಮಾಡಿ ಭಾವನೆ, ಹೃದಯಪೂರ್ವಕ ಸ್ಪಂದಿಸಿ. ಕೃತಜ್ಞತೆ ಇರಲಿ. ಉಪಕಾರ ಸ್ಮರಣೆ ಇರಬೇಕಲ್ಲವೇ?
  ಮೊದಲು ಜೀವ ಹುಟ್ಟಿದ್ದೇ ನೀರಲ್ಲಿ ಎಂಬುದನ್ನು ಸ್ಮರಿಸಿ, ನಮ್ಮ ಬದುಕಿಗೆ ಆಧಾರವಾದ ನೀರಿಗೆ ಕೃತಜ್ಞತೆ ತೋರಿಸಿದರೆ ಮಾತ್ರ ಜೀವನ ಸಾರ್ಥಕ. ನಂತರವೇ ಉಳಿದೆಲ್ಲ ದಾನ,ಧರ್ಮ,ಸೇವೆ, ಒಳ್ಳೆಯ ಕೆಲಸಗಳಿಗೆ ಅರ್ಥ ಬರುತ್ತದೆ.
  ಬನ್ನಿ ನೀರನ್ನು ಗೌರವಿಸೋಣ.
  ಕಂಡವರಿಗಲ್ಲೊ, ಕಂಡವರಿಗಷ್ಟೆ, ತಿಳಿದದಾ ಇದರ ಬೆಲೆಯು – ಬೇಂದ್ರೆ
  ನೀರು,ಗಿಡ-ಮರಗಳಲ್ಲಿ ದೇವರನ್ನು ಕಾಣೋಣ ಬನ್ನಿ.
  ನೀರೇ ತೀರ್ಥ. ತೀರ್ಥವೇ ನೀರು.
  ಇವ ನಿಮ್ಮವ.
  ಸಿದ್ರಾಮಪ್ಪ ದಿನ್ನಿ – ಬೆಂಗಳೂರು ಫೋನ್-೯೪೪೯೮೯೦೯೮1
  …………………………….

  ‘More than ever before in human history, we share a common destiny’ – Kofi Amman
  ……………………………………………………………………………………………………………………………..
  Final hard copy (soft copy already lying with PMO office & Karnataka Govt. since Nov.2016) ) to be sent PMO & SC later.
  Sir/Madam,
  At first i sincerely beg you to read this appeal ‘as a common mans language as i am’ of keen observation,reading and love for the subject. And not of experts in the field, whose help we need to take once rightly understood.
  Brief forward:I am sr. citizen struggling for the last 1.5 years to draw attention about water crisis and initiate some work on it. Beginning with great enthusiasm of applying RTI with GOK,writing to institutes here & there,internet groups and Aavaaz social website….etc and finally writing to PMO on 14-11-2016. PMO forwarded the same to GOK. I have followed both PMO & GOK with 4/5 reminders and no action til date. In the last 1.5 years I must have sent 30/40 Emails to BWSSB,water resources, some others and finally CS of GOK. I have lost hope about GOK taking any action on my letters.
  Meanwhile i was struggling (searching & collecting data)for the last 2/3 months for the appropriate subject matter, content and appealing words to finally write to the highest authorities of the land like this. My heart felt thanks to the following ref, which has appropriately come to my aid, except it is not mentioning human suffering, catastrophic situation and so called big talk of economic progress falling upside down once the water crisis hits all of us. I believe this brief is enough as more details already in the 6 pages petition/appeal to PMO mentioned
  The great Reference that came to my aid:Two recent terrifying and yet true,news paper articles.Many thanks to TOI group. In the last two years i have nearly 100 pages of articles collected from other news papers as well. Thanks to all of them.
  I: TOI dated 16-01-2017 ‘Running On Empty’- How water might dissolve the Indian Union if it cannot resolve river disputes.
  Highlights – ………water situation worsen steadily with time………..Population growth, rapid urbanisation and industrialisation and exponential growth in human activities over the past century, have resulted in higher water requirements for all types of water uses: human, thermo-industrial and agricultural………..Furthermore, for centuries domestic and industrial wastewaters have been indiscriminately discharged to water bodies without any, or partial treatment. Consequently, all water bodies within and near population centres have already been contaminated seriously with domestic and industrial pollutants. This has posed serious health and environmental problems………In addition, with steady economic growth, higher literacy and increasing skill levels, the number of Indian middle class families has gone up exponentially. The median income of Indian households is expected to reach over $10,000, by 2030, in 2014 prices. Direct results of this affluence have been rapid changes in dietary patterns and energy consumption levels. As the country has prospered, people have moved to a higher protein-based diet like milk products, fish and meat, all of which need significantly more water to produce than cereal-based diets. Their energy consumption has gone up because of increasing use of refrigerators, washing machines and cars. All these need extra energy and no energy can be generated without significant amount of water.
  In terms of water, the country now is facing a perfect storm. This means water management practices in India need to change dramatically in the coming years. However, we do not see any sustained political will which will be essential to take some hard decisions in the future.
  Because of poor water management in all the Indian states and steadily increasing water demands, India is now witnessing increasing conflicts on water allocations in interstate rivers. This has become a serious challenge to the regional stability of the country…………An important factor linking water disputes to state politics is the power of state campaigns in distracting voters from real issues of poor governance and lack of administrative skills and actions. Water has now assumed the role of a political weapon. …………………..With a number of states defying orders of tribunals and Supreme Court, water is becoming an important threat to Indian’s federalism and future social and economic development.
  In the absence of functioning water institutions at central and state levels and lack of political will to take hard decisions of all political levels, interstate water allocation problems will become increasingly more difficult to resolve. It proves Mark Twain’s adage “Whiskey is for drinking, water ( the elixir of life.No water no life) is for fighting over.” ( What a human predicament,tragedy? ……..city will turn hell as mentioned in below ref. As some one said ‘ There is no more crime than apathy’. This is very much true of water.
  My letter ‘ Criminal complacence’ to editor unusually full page to draw wider attention is published in environment Down To Earth Magzine dated 16-30 Sept. 2016). Please note only words in bracket are added by me. Otherwise the above extract is exactly copied from the above ref.
  II: Bengaluru Mirror dated Feb 1,2017 Article on water in Bengaluru. Title headline reads – A neer ( neeru means water in Kannada & near is English)- death experience. Bengaluru-Bengaluru is a parched city.No rain fall, completely burgeoning population,is making the area almost liveable.If this is the situation in January itself, the months ahead are likely to be dreadful. Bengaluru Mirror dated Jan 28, 2017City says-Stop the Greenocide. Do not chop Namma trees,says experts.City will turn hell,says experts.This also has effects on rainfall & water bodies.
  Water crisis: terrifying,scary,catastrophic ,only ignore at our peril. These statements article available with me. Central Govt itself admits.
  Response to the crisis: Totally inadequate. My little knowledge, interaction, communication is that even 0.1 % are not serious and utterly uncaring. My painful actual experience explained in petition to PMO. We have played enough with politicians and the same thing is pointed in the above article.Indian Express Pune 07-05-2016 Editorial ‘ A Ringing Silence’……80 odd MPs were present in the parliament not talking on drought…….something rotten indeed. The absence of serious debate in Parliament on the drought reflects law maker’s skewed priorities….Centres own admission affected 33 crore people , 256 districts in 10 States. No one is talking about the farmer……drought water crisis.80 odd MPs were present in the parliament. When the list of those not talking includes even the honourable MPs, something rotten indeed…..It is just coincidence and as luck would have it,on the same page two great quotes. ‘The world is a dangerous place….Because of those who look on do nothing. Albert Eistein-‘Because the truth involves us all. Goanka.
  Suggestions to be noted urgently: Azim Premji of Chairman of Wipro ( also many others stated & working on it. Thanks to all of them)at first Babgalore vision group meeting few months back rightly stated that water crisis need to me met on war footing. My letter to PMO is mainly on education. Here one can write many things which again time consuming. Moreover what i write will be incomplete. Now the best way as the time demands to meet the crisis is to quickly farm a group with full constitution power of committed individuals in the field of environment,water resources and those who love nature, say first 8 + only 2 from Govt.
  Ample right people right action available: Let us look at the classic example actually took place.
  A sane and lonely voice always get ignored: Bengaluru water riots, violence were predicted and expected.In the Kannada daily news paper ‘ Prajavani editorial page main article’ on the same day, Monday 12,Sept, 2016 on the issue of Cauvery title headline reads……In Kannada ‘Mandeyali ondagi,swantateye bandagi’ in English roughly it means ‘Becoming one with the crowd,thus losing/closed to one’s free thinking’,supporting the crowd are signs to leading to dangers/violence. This has come true.This article also includes protest kills the water issue and is not the way and it demands persistent work.Unfortunately knowingly or unknowingly-directly or indirectly many intellectuals,writers,activists, every one became part of the crowd. Please note exactly same thing happened in Chennai and this message is to look at ‘water issue as whole’ addressed to the country itself.It is easy to blame the mass/mob,but every one has become’mandeyali ondagi,swantateye bandagi’.
  ………………………………………………….
  1. Petition in brief.
  Respected Prime Minister, Shri Narendra Modi ji,
  Subject: Introducing ‘All about Water Education’ as a separate and compulsory subject in the National.Curriculum – A mini revolution
  Sir,
  You have been exhorting ordinary citizens to write to you directly, and give suggestions on any subject
  which will take India to greater heights. Therefore, I, as an ordinary Senior Citizen, would humbly like to draw your attention to the urgent need for the Government of India to introduce suitable policy
  directives for making ‘All about Water Education’ a separate and compulsory subject in the National curriculum from KG to higher education in all branches.
  ……………..
  May I request your kind attention to the attached letter, elaborating the following.
  Water first – a deepening crisis with ever-increasing conflicts
  Needs a totally new outlook and fresh thinking that leads towards the right direction
  Alarming statistics, shrinking resource and tragically, totally inadequate response
  A painful and disturbing trend that I have experienced
  Let young minds take the lead, as education is the key
  Policy decision and implementation
  Let India be the ‘Beacon of Light’ and take the lead towards ‘WEFE & One Humanity …………………………………………………..
  2. Petition to PMO 6 page appeal as mentioned above
  3. Two pictures below.
  Inline imageInline image
  END.

  ಉತ್ತರ
 2. ಚೇತನ್
  ಜುಲೈ 19 2017

  ಬಿಟ್ಟಿ ಭಾಗ್ಯಗಳಲ್ಲೇ ಸಂತೋಷ ಪಡುವವರಿಗೆ ಸ್ವಾಭಿಮಾನಿ ಯೋಜನೆಗಳು ಒಪ್ಪಿಗೆಯಾಗದು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments