ವಿಷಯದ ವಿವರಗಳಿಗೆ ದಾಟಿರಿ

Archive for

11
ಮೇ

ಮುಧೋಳ ನಾಯಿಯ ಜೊತೆಯ ಹೋಲಿಕೆಗೆ ಇವರು ಅರ್ಹರೇ?

– ಸಂತೋಷ್ ತಮ್ಮಯ್ಯ 
ಚುನಾವಣೆ ಸಮೀಪಿಸಿದಾಗಲೆಲ್ಲಾ ಕಾಂಗ್ರೆಸಿಗರು, “ನಮ್ಮ ಇತಿಹಾಸ ತೆರೆದ ಪುಸ್ತಕವಿದ್ದಂತೆ’,‘ದೇಶಕ್ಕೆ ಕಾಂಗ್ರೆಸಿನ ಕೊಡುಗೆಯೇನೆಂಬುದನ್ನು ಯಾರಿಗೂ ನಿರೂಪಿಸುವ ಆವಶ್ಯಕತೆಯಿಲ್ಲ’ಎಂದು ಆಲಾಪಿಸತೊಡಗುತ್ತಾರೆ. ಅವರ ತೆರೆದ ಪುಸ್ತಕದ ಕೆಲವೇ ಪುಟಗಳನ್ನು ನೋಡಿದರೆ ಅಲ್ಲಿ ವಿಚಿತ್ರಗಳೇ ಕಾಣಿಸುತ್ತವೆ. ಇದು ಅಂಥ ಒಂದು ಸ್ಯಾಂಪಲ್.
ಲಾಲ್ ಬಹೂದ್ದೂರ್ ಶಾಸ್ತ್ರಿಗಳ ಬಾಯಿಂದ ಭಾರತ್ ಕೀ ಆಯೂಬ್ ಎಂದು ಬೆನ್ನು ತಟ್ಟಿಸಿಕೊಂಡ ಒರ್ವ ಯೋಧ ಕ್ಯಾ.ಆಯೂಬ್ ಖಾನ್. ವೀರ ಚಕ್ರ ಪುರಷ್ಕೃತ ಕ್ಯಾ.ಖಾನ್‌ಗೆ ಶಾಸ್ತ್ರಿ ಮೇಲೆ ಅದೆಷ್ಟು ಅಭಿಮಾನವಿತ್ತೆಂದರೆ ನಿವೃತ್ತಿಯ ನಂತರ ಅವರು ಕಾಂಗ್ರೆಸ್‌ಗೆ ಸೇರಿದರು. ಎರಡು ಬಾರಿ ರಾಜಾಸ್ಥಾನದ ಜುಂಜುನು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಸಂಸದರೂ ಆದರು. ಆದರೆ ಆಯೂಬ್ ಖಾನರಿಗೆ ಶಾಸ್ತ್ರಿಗಳ ನಿಧನಾನಂತರ ಯಾಕೋ ತನ್ನ ಆಯ್ಕೆ ತಪ್ಪಿದೆ ಎನಿಸತೊಡಗಿತು. ಇಂದಿರಾ ಸರ್ವಾಧಿಕಾರ ಮತ್ತು ರಾಜೀವ್ ಗಾಂಧಿ ಪಟಾಲಮ್ಮಿನ ಸೈನಿಕ ವಿರೋಧಿ ನೀತಿಗಳನ್ನು ಸಹಿಸುವಷ್ಟು ದಿನ ಸಹಿಸಿದರು. ಕೊನೆಗೆ ಶಾಸ್ತ್ರಿಗಳಿಗಾದ ಸ್ಥಿತಿ ನರಸಿಂಹರಾಯರಿಗೂ ಬಂದಾಗ ಹಿಂದೆ ಮುಂದೆ ನೋಡದೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸಂನ್ಯಾಸ ಸ್ವೀಕರಿಸಿದರು. ಕೊನೆ ಕಾಲದಲ್ಲಿ ಆಯೂಬ್ ಖಾನರಿಗೆ ಕಾಂಗ್ರೆಸ್ ಸೇರಿದ್ದ ಬಗ್ಗೆ ಎಷ್ಟು ಪಾಪಪ್ರಜ್ಞೆ ಕಾಡುತ್ತಿತ್ತೆಂದರೆ ಆರೋಗ್ಯ ವಿಚಾರಿಸಲು ಬಂದ ವಾಜಪೇಯಿಯವರ ಪಾದಸ್ಪರ್ಶಕ್ಕೆ ಅನುಮತಿಯನ್ನೂ ಆ ಯೋಧ ಕೇಳಿದ್ದರು. ಏಕೆಂದರೆ ಒಬ್ಬ ದೇಶಭಕ್ತ ಯೋಧ ಮತ್ತು ಕಾಂಗ್ರೆಸಿಗ ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ ಎಂಬ ಸತ್ಯ ಆಯೂಬ್ ಖಾನರಿಗೆ ತಮ್ಮ ಕೊನೆಕಾಲದಲ್ಲಿ ಅರ್ಥವಾಗಿತ್ತು.
ಹಾಗಾಗಿಯೋ ಏನೋ ಸ್ವಾತಂತ್ರ್ಯಾನಂತರ ರಾಜಕಾರಣಕ್ಕೆ ಬಂದ ಶೇ.೯೯ರಷ್ಟು ಮಾಜಿ ಯೋಧರು ಕಾಂಗ್ರೆಸಿಗೆ ಸೇರಲಿಲ್ಲ. ಕ್ಯಾ.ಅಮರೀಂದರ್ ಸಿಂಗರನ್ನೇ ನೋಡಿ. ಅವರೋರ್ವ ಕಾಂಗ್ರೆಸಿಗ ಎಂಬುದಕ್ಕಿಂತ ಹೆಚ್ಚಾಗಿ ಸಿಕ್ಖ್ ನಾಯಕನಾಗೇ ದೇಶಕ್ಕೆ ಕಾಣುತ್ತಾರೆ. ಇತ್ತೀಚೆಗೆ ಕೆನಡಾದ ಪ್ರಧಾನಿ ಭಾರತಕ್ಕೆ ಬಂದಾಗ ಅವರು ನಡೆದುಕೊಂಡ ರೀತಿಯಿಂದ ಹಿಡಿದು ಕಾರ್ಗಿಲ್ ಯುದ್ಧ, ಉರಿ ಆಕ್ರಮಣ, ಪಟಾನ್‌ಕೋಟ್ ದಾಳಿಗಳ ಸಂದರ್ಭದಲ್ಲೆಲ್ಲಾ ಅವರು ಮುಖ್ಯಮಂತ್ರಿಯಾಗಿ ಕಂಡದ್ದಕ್ಕಿಂತಲೂ ಮಾಜಿ ಯೋಧನಾಗಿಯೇ ಕಂಡರು. ರಾಜೇಶ್ ಪೈಲೆಟ್ ಎಂಬ ಸೋನಿಯಾ ಮನೆಯ ನಿಯತ್ತಿನ ಪ್ರಾಣಿಯೊಂದನ್ನು ಬಿಟ್ಟರೆ ಅಣ್ಣಾ ಹಜಾರೆ, ರಾಜ್ಯವರ್ಧನ ಸಿಂಗ್ ರಾಥೋಡ್, ಜ. ವಿಕೆ ಸಿಂಗ್, ಬಿ.ಸಿ ಖಂಡೂರಿ, ಜೆಎಫ್‌ಆರ್ ಜೆಕಬ್, ಕುಂಜ್ಞಿರಾಮನ್ ಪಾಲಟ್ ಕಂಡೇತ್, ಜಸ್ವಂತ್ ಸಿಂಗ್, ಕ್ಯಾ.ಜಗತ್ ರ್ ಸಿಂಗ್ ದ್ರೋಣ, ಅಡ್ಮಿರಲ್ ವಿಷ್ಣು ಭಾಗ್ವತ್‌ರಂಥಾ ನೂರಾರು ಮಾಜಿ ಯೋಧರು ರಾಜಕಾರಣದಲ್ಲಿದ್ದರೂ ಅವರಾರೂ ಕಾಂಗ್ರೆಸಿದ್ದೆಡೆ ಮಗ್ಗುಲು ಕೂಡಾ ಬದಲಿಸಿಲ್ಲ!
ಯಾಕೆಂದರೆ ಸೈನಿಕನನ್ನ್ನು ಗೌರವಿಸಿದ ಒಂದೇ ಒಂದೇ ಒಂದು ಉದಾಹರಣೆ ಕಾಂಗ್ರೆಸಿನಲ್ಲಿ ಕಾಣಸಿಕ್ಕುವುದಿಲ್ಲ. ಕಾಂಗ್ರೆಸಿನ ಮನೆದೇವರು ನೆಹರೂ ಪ್ರತಿಷ್ಠಾಪನೆಯಾದಂದಿನಿಂದಲೂ ಆ ಗುಣ ಅವರ ‘ತೆರೆದ ಪುಸ್ತಕ ’ದಲ್ಲಿ ಕಂಡುಬರುತ್ತವೆ. ಏಕೆಂದರೆ ದೇಶ ಸ್ವಾತಂತ್ರ್ಯದ ಆನಂದದಲ್ಲಿ ತೇಲುತ್ತಿದ್ದರೆ ಅತ್ತ ಸೇನೆಗಿನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ! ೧೯೪೭ರ ಆಗಸ್ಟ್ ೧೫ರಂದು ಮೌಂಟ್ ಬ್ಯಾಟನ್ ಜಾಗಕ್ಕೆ ನೆಹರೂ ಬಂದು ಕೂತಾಗ ನೆಹರೂಗೆ ಸೇನಾ ಮುಖ್ಯಸ್ಥ ಕೂಡಾ ಭಾರತೀಯನೇ ಆಗಿರಲಿ ಎಂಬ ಮನಸ್ಸು ಬಂದಿರಲಿಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ನೆಹರೂ ಅದೇ ದಿನ ರಾಬ್ ಲೊಖಾರ್ಟ್ ಎಂಬವನನ್ನು ಸೇನಾ ದಂಡನಾಯಕನನ್ನಾಗಿ ನೇಮಿಸಿದರು. ಕೊನೆಗೆ ಈ ಲೊಖಾರ್ಟನಿಗೇ ನಾಚಿಕೆಯಾಗಿ ಇಂಗ್ಲೆಂಡಿಗೆ ಹೊರಟುಹೋದ. ನಂತರ ಕೂಡಾ ನೆಹರೂ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಗುಣ ಭಾರತೀಯರಿಗೆಲ್ಲಿದೆ ಎನ್ನುತ್ತಾ ಮತ್ತೊಬ್ಬ ಬಿಳಿಯ ರಾಯ್ ಬುಷರ್ ನನ್ನು ನೇಮಕ ಮಾಡಿದರು. ಒಂದು ವರ್ಷದವರೆಗೆ ಸೇನಾ ಮುಖ್ಯಸ್ಥನಾಗಿದ್ದ ಬುಷರ್ ಮತ್ತಷ್ಟು ವರ್ಷ ಮುಂದುವರಿಯುತ್ತಿದ್ದನೋ ಏನೋ. ಆದರೆ ದೇಶೀ ಸೇನಾ ನಾಯಕನ ಕೂಗು ಸೈನ್ಯದೊಳಗೆ ಗಟ್ಟಿಯಾಗುತ್ತಿತ್ತು. ಆಗ ನೆಹರೂ ಅಂದಿನ ರಕ್ಷಣಾ ಸಚಿವ ಬಲವಂತ್ ಸಿಂಗ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಲ್ಲದ ಮನಸ್ಸಿನಿಂದ ಕೆ.ಎಂ ಕಾರ್ಯಪ್ಪನವರನ್ನು ಸೇನಾ ಮಹಾದಂಡನಾಯಕನನ್ನಾಗಿ ನೇಮಕ ಮಾಡಿದರು. ಮತ್ತು ಕಾರ್ಯಪ್ಪರ ಮೇಲೆ ಒಂದು ಕಣ್ಣಿಡಲಾರಂಭಿಸಿದರು. ಸರಿಯಾಗಿ ಅದೇ ಹೊತ್ತಲ್ಲಿ ಪಾಕಿಸ್ಥಾನದ ಆಕ್ರಮಣದ ಸೂಚನೆಯೂ ಇದ್ದುದರಿಂದ ನೆಹರೂಗೆ ಹಾಗೆ ಮಾಡದೆ ಬೇರೆ ದಾರಿ ಇರಲಿಲ್ಲ. ಕಾಶ್ಮೀರ ಆಕ್ರಮಣವನ್ನು ಹಿಮ್ಮೆಟ್ಟಿಸಲು ಕಾರ್ಯಪ್ಪ ಕಳುಹಿಸಿದ ಮತ್ತೊಬ್ಬ ಅಧಿಕಾರಿ ತಿಮ್ಮಯ್ಯ ಕೆಲವೇ ದಿನಗಳಲ್ಲಿ ಕಾಶ್ಮೀರಿಗಳ ಮನಸ್ಸು ಗೆದ್ದಿದ್ದು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ತಿಮ್ಮಯ್ಯ ಆಳಿದರೆ ನಾವು ಭಾರತ ಒಕ್ಕೂಟಕ್ಕೆ ಸೇರುವೆವು ಎಂದದ್ದೆಲ್ಲವೂ ನೆಹರೂಗೆ ನಡುಕ ಹುಟ್ಟಿಸಿ ಕಾರ್ಯಪ್ಪ ಮತ್ತು ತಿಮ್ಮಯ್ಯರಿಬ್ಬರನ್ನೂ ತಣ್ಣಗೆ ದ್ವೇಷಿಸತೊಡಗಿದರು. ಇವೆಲ್ಲವನ್ನೂ ಜಾರಿಗೆ ತರುತ್ತಿದ್ದವನು ಹಿಟ್ಲರನ ಹಿಂದಿದ್ದ ಹಿಮ್ಲರ್ ನಂಥ ಸರ್ದಾರ್ ಬಲವಂತ್ ಸಿಂಗ್. ಅಂದರೆ ‘ಕಾರ್ಯಪ್ಪ-ತಿಮ್ಮಯ್ಯರನ್ನು ನೆಹರೂ-ಮೆನನ್‌ಗಳು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂಬ ಮೋದಿ ಹೇಳಿಕೆ ಕಾಂಗ್ರೆಸಿನ ‘ತೆರೆದ ಪುಸ್ತಕ’ದಲ್ಲೇ ಇವೆ ಎಂದಂತಾಯಿತು!

ಮತ್ತಷ್ಟು ಓದು »

11
ಮೇ

ಹಿಟ್ಲರನ ಗೊಬೆಲ್ಸ್ ಮತ್ತು ನೆಹರೂವಿನ ಗಂಜಿಗಿರಾಕಿಗಳು

 – ರಾಕೇಶ್ ಶೆಟ್ಟಿ

‘ಸುಳ್ಳನ್ನೇ ಪದೇ ಪದೇ ಜನರ ಕಿವಿಗೆ ಬೀಳುವಂತೆ ಬೊಬ್ಬೆ ಹೊಡೆಯುತ್ತಾ ಹೋದರೆ ಅದೇ ಸತ್ಯವಾಗುತ್ತ ಹೋಗುತ್ತದೆ’ ಹೀಗೊಂದು ಮಾತನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿ Public Enlightenment & Propaganda ಸಚಿವನಾಗಿದ್ದ ಗೊಬೆಲ್ಸ್ ಹೇಳಿದ್ದನೆಂಬ ಮಾತಿದೆ.ಈ ಮಾತನ್ನು ಗೊಬೆಲ್ಸ್ ಹೇಳಿದ್ದನೋ ಇಲ್ಲವೋ,ಆದರೆ ಈ ಮಾತು ಪ್ರಾಕ್ಟಿಕಲಿ ಸತ್ಯವಂತೂ ಹೌದು.ಬೇಕಿದ್ದರೆ ಗೊಬೆಲ್ಸ್ ಹೇಳಿಕೊಟ್ಟ ಈ ಸೂತ್ರವನ್ನು ಬಳಸುತ್ತಿರುವ ಭಾರತದ ಗಂಜಿಗಿರಾಕಿಗಳನ್ನು ಈ ಬಗ್ಗೆ ಕೇಳಿ ನೋಡಿ. ಉದಾಹರಣೆಗೆ, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಾವೇಶವೊಂದರಲ್ಲಿ ನರೇಂದ್ರ ಮೋದಿಯವರು ಮಾತನಾಡುತ್ತ ‘ ಲೂಟಿಕೋರ-ಕಳ್ಳರು ವಿದೇಶದ ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣವಿಟ್ಟಿದ್ದಾರೆಂದರೆ,ಅದನ್ನು ವಾಪಸ್ ತಂದರೆ ಭಾರತದ ಪ್ರತಿ ಬಡವನಿಗೆ ೧೫ ಲಕ್ಷದಷ್ಟು ಹಣವನ್ನು ಉಚಿತವಾಗಿ ಕೊಡುವಷ್ಟಿದೆ’ ಎಂದಿದ್ದರು(ಈ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ).ಇದೇ ಮಾತನ್ನು ಈಗ ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು ‘ಮೋದಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಕೌಂಟಿಗೆ ೧೫ ಲಕ್ಷ ಹಣ ಹಾಕ್ತಿನಿ ಅಂದಿದ್ರು.ಹಾಕಿಯೇ ಇಲ್ಲ’ ಎಂದು ಊರಿಡಿ ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡರು. ಈಗ ಈ ಸುಳ್ಳು ಯಾವ ಪರಿ ಹರಡಿದೆಯೆಂದರೆ,ಮೋದಿಯನ್ನು ವಿರೋಧಿಸಲು ಕಾರಣವೇ ಸಿಗದವರು ಎಲ್ರಿ ನಮ್ಮ ೧೫ ಲಕ್ಷ ಎಂದು ಕೇಳುವಷ್ಟು. ವಿಚಿತ್ರವೆಂದರೆ,ಇದು ಗಂಜಿಗಿರಾಕಿಗಳ ಅಪಪ್ರಚಾರದ ಕ್ಯಾಮ್ಪೇನು ಎಂದು ಹೇಳಬೇಕಾದವರೇ ತಡಬಡಾಯಿಸುವಂತಾಗಿದೆ.ಇದೇ ನೋಡಿ GGG Lying Formula (ಗಂಜಿ ಗಿರಾಕಿ ಗೊಬೆಲ್ಸ್ ಸುಳ್ಳಿನ ಸೂತ್ರ)ದ ತಾಕತ್ತು.

ಭಾರತದ ಗಂಜಿಗಿರಾಕಿಗಳ ಗೊಬೆಲ್ಸ್ ಕಾರ್ಯಾಚರಣೆಯ ಬಗ್ಗೆ ಮಾತನಾಡುವ ಮುನ್ನ, ಜರ್ಮನಿಯ ಗೊಬೆಲ್ಸ್ ಪರಿಚಯ ಮಾಡಿಕೊಳ್ಳಬೇಕು,ಆಗ ಅವರಿಬ್ಬರ ಸಾಮ್ಯತೆ ಅರ್ಥವಾದೀತು. ಜರ್ಮನಿಯಲ್ಲಿ National Socialist German Workers’ (Nazi) Party ಹಿಟ್ಲರನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಪೋಗ್ಯಾಂಡ ಸಚಿವನಾಗಿ ಬಂದವನು ಗೊಬೆಲ್ಸ್. ಹೈಡಲ್ ಬರ್ಗ್ ವಿವಿಯಿಂದ ಸಾಹಿತ್ಯದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದ ಚಾಣಾಕ್ಷ ಈತ. ಈತನಿಗೆ ಯಾವುದೇ ಸುಳ್ಳನ್ನು ಸತ್ಯವೆಂದು ಓದುಗರನ್ನು ಮರುಳು ಮಾಡುವ ಬರವಣಿಗೆ ಒಲಿದಿತ್ತು. ಇದರ ಜೊತೆಗೆ ಸಾಹಿತ್ಯ,ಸಿನಿಮಾ,ಕಲೆ ಇವನ ಆಸಕ್ತಿಕರ ಕ್ಷೇತ್ರಗಳು. ಇಷ್ಟೆಲ್ಲಾ ಆಸಕ್ತಿ ಮತ್ತು ಸಾಮರ್ಥ್ಯವಿದ್ದ  ವ್ಯಕ್ತಿ ದೇಶದ ಸಾಂಸ್ಕೃತಿಕ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಸಮರ್ಥ ವ್ಯಕ್ತಿಯಾಗಿ ಹಿಟ್ಲರನಿಗೆ ಅನ್ನಿಸಿದ್ದು ಸಹಜವೇ. ಅಧಿಕಾರಕ್ಕೆ ಬಂದ ಗೊಬೆಲ್ಸ್ ಕೂಡ ಹಿಟ್ಲರ್ ಸುತ್ತ ನಕಲಿ ಪ್ರಭಾವಳಿಯನ್ನು ಸೃಷ್ಟಿಸುವಲ್ಲಿ ಸಫಲನಾಗಿದ್ದ,  ಇವನಿಲ್ಲದಿದ್ದರೆ ಜರ್ಮನಿ ಮತ್ತೊಮ್ಮೆ ಗೌರವಯುತವಾಗಿ ತಲೆ ಎತ್ತಲಾರದು ಎಂದ, ಜನರು ನಂಬಿದರು.

ಮತ್ತಷ್ಟು ಓದು »

11
ಮೇ

ದಲಿತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?

– ಶಿವಾನಂದ ಸೈದಾಪೂರ

ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್

ಬೆಳಗಾವಿ.

ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಸಿಸುವಾಗ ನಡೆದಂತದ್ದವುಗಳು. ಘಟನೆ  ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ.

ಘಟನೆ ಎರಡು; ರಾಯಬಾಗ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದೇ ಹೆಸರಾದ ಹಿಡಕಲ್ ನಲ್ಲಿ ನಡೆದದ್ದು. ಇದೇ ಒಂದು ವಾರದಲ್ಲಿ ನಡೀದಿದೆ. ದಲಿತರ ಓಣಿಯಲ್ಲಿ ಮಹಿಳೆಯೊಬ್ಬಳು ಬೈಗುಳಗಳುಳ್ಳ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿರುವುದೇನು ಸಾಮಾನ್ಯ ಸಂಗತಿಯೇನಲ್ಲ. ಹಾಲಿ ಶಾಸಕ ಮತ್ತು ಈ ಸಲದ ಕುಡಚಿ ಮತ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜು ಅವರನ್ನು ಅತ್ಯಂತ ಕೀಳು ಮಟ್ಟಕ್ಕಿಳಿದು ಬಾಯಿಗೆ ಬಂದಂತೆ ನಿಂದಿಸುತ್ತಿರುವುದು. ಸ್ವತಃ ತಾನು ಒಬ್ಬ ಹೆಣ್ಣು ಅನ್ನೋದನ್ನು ಮರೆತು ಪಿ.ರಾಜು ಅವರ ತಾಯಿಯನ್ನು ಬೈಯುತ್ತಿರುವುದು.  ಹೇಳುವುದಕ್ಕೆ ಸಾಧ್ಯವೇ ಇಲ್ಲದ ಕನಿಷ್ಠ ಮಟ್ಟದ ಶಬ್ದಗಳನ್ನು ಬಳಸಿ ಬೈಯುತ್ತಿರುವುದನ್ನು ನೋಡಿದರೆ ಎಂಥವರಿಗಾದರೂ ಮೈ ಬೆವರುತ್ತದೆ. ಆ ಕೀಳುಮಟ್ಟದ ಶಬ್ದಗಳನ್ನು ಕೇಳಿದರೆ ಯಾವ ಸ್ತ್ರೀ ಪುರುಷರು ಅಸಹ್ಯ ಪಡುವದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಆ ವಿಡಿಯೋದಲ್ಲಿ ಮಹಿಳೆ ಮಾಡುತ್ತಿರುವುದಾದರೇನು ಗೊತ್ತೇ? ಈ ಸಲದ ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮಿತ್ ಘಾಟಗೆ ಪರ ಪ್ರಚಾರ ಮಾಡುತ್ತಿದ್ದಾಳೆ. ಸ್ವತಃ ಅವಳೇ ಹೇಳುತ್ತಾಳೆ ದಲಿತಕೇರಿಗಳಲ್ಲಿ ಅಮಿತ್ ಘಾಟಗೆ ಮತ್ತು ಸಿದ್ದರಾಮಯ್ಯನವರನ್ನು ಬಿಟ್ಟರೆ ಬೇರೆ ಯಾರೂ ಬರಬಾರದಂತೆ!  ಉಳಿದವರ್ಯಾರು ದಲಿತ ಕೇರಿಯ ಸಮೀಪ ಕೂಡ ಸುಳಿಬಾರದಂತೆ! ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಲ್ಲಿ ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಈ ದೇಶವನ್ನು ಆಳಿದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಅಭಿವೃದ್ಧಿಗಿಂತ ಜನಸಾಮಾನ್ಯರಲ್ಲಿ ಯಾವ ರೀತಿ ಜಾತಿಯತೆಯನ್ನು ಬಿತ್ತಿ ಬೆಳೆಸಿದೆ ಎಂಬುವುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಮತ್ತಷ್ಟು ಓದು »