ದೇಶಾಭಿಮಾನದ ಮುಂದೆ ದೇಹಾಭಿಮಾನವನ್ನು ಮರೆಯಾಗಿಸಿದ ನಾಯಕ..
– ಸುಜಿತ್ ಕುಮಾರ್
ಗುಡಾಣ ದೇಹದ ಮೇಲಿನ ಕರಿ ಕೋಟು, ತಲೆಯ ಮೇಲೊಂದು ಹಾಂಬರ್ಗ್ ಹ್ಯಾಟು, ಹುಟ್ಟುವಾಗಲೇ ಅಂಟಿಕೊಂಡು ಬಂದಿತ್ತೇನೋ ಎಂಬಂತೆ ಬಾಯನ್ನು ಬಿಟ್ಟಿರದ ಹೊಗೆಯಾರದ ಸಿಗಾರಿನೊಂದು ತುಂಡು, ಕೈಯಲ್ಲೊಂದು ಭಯ ಹುಟ್ಟಿಸುವ ವಾಕಿಂಗ್ ಸ್ಟಿಕ್ಕು. ಇವಿಷ್ಟೇ ಸಾಕು ಇಪ್ಪತ್ತನೇ ಶತಮಾನದ ಕಾಂಟ್ರವೇರ್ಷಿಯಲ್ ವ್ಯಕ್ತಿತ್ವವೊಂದನ್ನು ಬಣ್ಣಿಸಲು. ಭಾರತೀಯರ ಮಟ್ಟಿಗೆ ಗಾಂಧಿಯನ್ನು ಜರಿಯುತ್ತಿದ್ದ, ಭಾರತವನ್ನು ನಿಂತ ನೆರಳಿಗೆ ಆಗದ ಅಲ್ಲದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಕಾರಣನಾದ ಈತ ದೇಶಪ್ರೇಮಿಗಳಿಗೆ ಅಕ್ಷರ ಸಹ ವಿಲನ್ನಂತಾದರೂ ಬ್ರಿಟನ್ನಿಗರ ಪಾಲಿಗೆ ಮಾತ್ರ ಸಾಕ್ಷಾತ್ ದೇವಧೂತ! ಪ್ರಪಂಚವನ್ನೇ ನುಂಗಿ ನೀರು ಕುಡಿಯುವಂತೆ ಧಾವಿಸುತಿದ್ದ ಹಿಟ್ಲರ್ ಎಂಬ ರಾಕ್ಷಸನಿಂದ ಬ್ರಿಟನ್ನನ್ನು ರಕ್ಷಿಸಿದನಲ್ಲದೆ ಎರಡನೇ ಮಹಾಯುದ್ದಕ್ಕೂ ಅಂತ್ಯವನ್ನು ಹಾಡಿಸಿದವನೀತ. ಎರಡು ಬಾರಿ ಬ್ರಿಟನಿನ್ನ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ ಈತ ಒಬ್ಬ ಬರಹಗಾರ, ಅಧಿಕೃತ ಪತ್ರಕರ್ತ, ಸೇನಾನಾಯಕ ಹಾಗು ಒಬ್ಬ ಖ್ಯಾತ ಚಿತ್ರಗಾರನೂ ಹೌದು. ಕೆಲವು ನೆಗೆಟಿವ್ ಅಂಶಗಳನ್ನು ಬದಿಗಿರಿಸಿ ಈತನನ್ನು ನೋಡಬಯಸಿದವರಿಗೆ ವಿಶ್ವವನ್ನೇ ಆಳಿದ ದೇಶವೊಂದು ಹಿಟ್ಲರ್ನ ನಾಝಿ ಜರ್ಮನಿಯ ಗುಲಾಮನಾಗಬೇಕಿದ್ದ ಸಂದಿಗ್ಧ ಘಳಿಗೆಯಲ್ಲಿಯೂ ತಲೆ ತಗ್ಗಿಸದೆ ಹೋರಾಡಿದ ಧೈರ್ಯಶಾಲಿ ನಾಯಕನೊಬ್ಬ ಅನಾವರಣಗೊಳ್ಳುತ್ತಾನೆ. ಅವನ ಹೆಸರು ವಿನ್ಸ್ಟನ್ ಲಿಯೊನಾರ್ಡ್ ಸ್ಪೆನ್ಸರ್ ಚರ್ಚಿಲ್. ಮತ್ತಷ್ಟು ಓದು