ವಿಷಯದ ವಿವರಗಳಿಗೆ ದಾಟಿರಿ

Archive for

29
ಮೇ

ಪುಕಾರೋ ದಿಲೇ ಸೇ , ನಮೋ ಫಿರ್ ಸೇ

– ರಾಕೇಶ್ ಶೆಟ್ಟಿ

ರಾಜ್ಯ ವಿಧಾನಸಭೆಯ ಚುನಾವಣೆಯ ನಂತರ ಕಚೇರಿಯಲ್ಲಿ, ನನ್ನ ತಂಡದವರು ಹೀಗೆ ಹರಟೆ ಹೊಡೆಯುತ್ತ ಕುಳಿತಿದ್ದರು. ಮಾತಿನ ಮಧ್ಯೆ, ನೀನು ಯಾವ ಪಕ್ಷಕ್ಕೆ ವೋಟ್ ಹಾಕಿದ್ದು? ಒಬ್ಬಳನ್ನು ಕೇಳಿದರು. ಆಕೆ ಕಾಂಗ್ರೆಸ್ಸಿಗೆ ಎಂದಳಷ್ಟೇ! ಸುತ್ತ ಮುತ್ತಲಿದ್ದವರೆಲ್ಲಾ, OMG!, What? ಅಂತೆಲ್ಲಾ ಉದ್ಗಾರ ತೆಗೆದರು. ಈ ಕಾಲದಲ್ಲೂ ಕಾಂಗ್ರೆಸ್ಸಿಗೆ ಮತ ನೀಡುವ ವಿದ್ಯಾವಂತರಿದ್ದಾರಲ್ಲಪ್ಪ ಎನ್ನುವುದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ಸಿಗೆ ಯಾಕೆ ಮತ ನೀಡಿದೆ ಎಂದು ಕೇಳಿದರೆ,ಮೊದಲಿಗೆ ಅವಳದು ಶುದ್ಧ ಕಾರ್ಪೊರೇಟ್ ಜಗತ್ತಿನವರ ಡಿಪ್ಲೋಮಾಟಿಕ್ ಉತ್ತರದಂತೆ,ಅವೆಲ್ಲಾ ಟೂ ಪರ್ಸನಲ್ ಯು ನೋ ಎಂದಳು,ನಂತರ ಮುಂದುವರೆದು ನನಗೆ ಮೋದಿಯವರ ವಿರುದ್ಧ ಕಂಪ್ಲೇಂಟುಗಳಿವೆ ಅದಕ್ಕೆ ಎಂದಳು. ಅದೇನು ಕಂಪ್ಲೇಂಟು? ಅಂತ ಕೇಳಿದರೆ ಉತ್ತರವಿಲ್ಲ.

ಮತ್ತೊಬ್ಬರು ಆಂಧ್ರದವರು.ಫಲಿತಾಂಶದ ದಿನ, ಬಿಜೆಪಿ ಗೆಲ್ಲಬಾರದು ಎನ್ನುತ್ತಿದ್ದರು. ಬಿಜೆಪಿ ಯಾಕೆ ಗೆಲ್ಲಬಾರದು? ಅಂತ ಕೇಳಿದೆ.ನನಗೆ ಮೋದಿ ಕಂಡರೆ ಆಗುವುದಿಲ್ಲ ಎಂದರು.ಯಾಕೆ ಎಂದರೇ ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದೇ ಮೋಸ ಮಾಡಿದ್ದಾರೆ ಆ ಕಾರಣಕ್ಕೆ ಅವರು ಇಲ್ಲೂ ಗೆಲ್ಲಬಾರದು ಎನ್ನುವ ಉತ್ತರ. ಆಂಧ್ರಕ್ಕೆ ಅವರು ಮೋಸ ಮಾಡಿದ್ದಾರೆ ಅಂತ ನಿನಗೆ ಹೇಗೆ ಗೊತ್ತು? ಎಂದರೆ,ಎಲ್ಲರೂ ಹೇಳುತ್ತಿದ್ದಾರಲ್ಲ ಎನ್ನುವ ಉತ್ತರ.ತಕ್ಷಣವೇ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕುರಿತು ಅರುಣ್ ಜೈಟ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದು ತೋರಿಸಿದೆ. ಯುಪಿಎ ಎಡವಟ್ಟಿನಿಂದ ವಿಭಜನೆಯಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಆಂಧ್ರಪ್ರದೇಶಕ್ಕೆ ಸಂಪೂರ್ಣ ಹಣಕಾಸಿನ ನೆರವು ನೀಡಲು ಕೇಂದ್ರ ಬದ್ಧವಾಗಿದೆ. ಆದರೆ,ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದನ್ನು ೧೪ನೇ ಹಣಕಾಸು ಸಮಿತಿ ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಿದೆ.ಹಾಗಾಗಿ ಆ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ವಿಶೇಷ ಸ್ಥಾನಮಾನ ಪಡೆದ ರಾಜ್ಯಕ್ಕೆ ಕೇಂದ್ರದಿಂದ ಶೇ.೯೦ರಷ್ಟು ಅನುದಾನ ಸಿಗುತ್ತದೆ,ಉಳಿದ ರಾಜ್ಯಗಳಿಗೆ ಶೇ. ೬೦ರಷ್ಟು ಸಿಗುತ್ತದೆ.ಆಂಧ್ರಪ್ರದೇಶಕ್ಕೂ ಕೇಂದ್ರದಿಂದ ಶೇ.೯೦ ರಷ್ಟು ಅನುದಾನ ಕೊಡಲು ನಾವು ಬದ್ಧರಿದ್ದೇವೆ ಎಂದಿದ್ದರು. ಒಟ್ಟಾರೆಯಾಗಿ ವಿಶೇಷ ರಾಜ್ಯದ ಸ್ಥಾನಮಾನ ನೀಡಲು ೧೪ನೇ ಹಣಕಾಸು ಆಯೋಗದ ಅಡ್ಡಿಯಿದ್ದರೂ,ಅದಕ್ಕೆ ಸರಿಸಮಾನವಾದ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿತ್ತು. ನಿಮ್ಮ ಚಂದ್ರಬಾಬು ನಾಯ್ಡು ಅವರೇ ರಾಜಕೀಯ ಲಾಭಕ್ಕಾಗಿ,ಎನ್ಡಿಎ ತೊರೆದು ಈಗ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದೇ.ಎಂತ ಲಾಭ ಎಂದರು? ನಿಮ್ಮ ವೈಎಸಾರ್ ಪಕ್ಷದ ಜಗನ್, ಈ ವಿಶೇಷ ಸ್ಥಾನಮಾನದ ನಿರಾಕರಣೆಯ ಕತೆ ಹೇಳಿಕೊಂಡೇ ಆಡಳಿತ ವಿರೋಧಿ ಅಲೆ ಎಬ್ಬಿಸಿ ಬಿಡುತ್ತಾನೋ ಎಂಬ ಭಯದಿಂದಲೂ ಇದ್ದಿರಬಹುದು ಎಂದೇ. ನಾಯ್ಡು ಅಭಿಮಾನಿಯಾದ ಅವರು ಒಪ್ಪಲು ಸಿದ್ಧರಿರಲಿಲ್ಲ,ಆದರೆ ಕೇಂದ್ರ ಸರ್ಕಾರ ಕೊಡಲು ಸಿದ್ಧವಿತ್ತು,ಆಂಧ್ರವೇ ಪಡೆಯಲಿಲ್ಲ ಎನ್ನುವುದು ಅವರಿಗೆ ಅರ್ಥವಾಗಿತ್ತು. Read more »

Advertisements
29
ಮೇ

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ…?

– ಸುಜಿತ್ ಕುಮಾರ್

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರಶ್ನಿಸುವುದೂ ಒಂದು. ಅದು ‘ಏನಲೇ..!?’ ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರಶ್ನೆಗಳನ್ನು ಕೇಳುವ ‘ಅಧಿಕಾರ’  ಹಾಗು ‘ಧೈರ್ಯ’ ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು. ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲೀ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು! Read more »