ವಿಷಯದ ವಿವರಗಳಿಗೆ ದಾಟಿರಿ

Archive for

18
ಆಕ್ಟೋ

ರೈತರ ಬಾಳನು ಹಸನಾಗಿಸಿದ ಹೈನುಗಾರಿಕೆ

– ಸಂಜಯ.ಆರ್

• ಹೈನುಗಾರಿಕೆಯಿಂದಾಗಿ ಸ್ತ್ರೀ ಸಬಲೀಕರಣ
• ಸಾವಯವ ಹೈನುಗಾರಿಕೆಯಲ್ಲಿ ಕ್ಷೀರ ಕ್ರಾಂತಿ

1ಅಭಿವೃದ್ಧಿ ಹೊಂದುತ್ತಿರುವ ದೇಶದ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಕೈಗಾರಿಕಾ ಕ್ರಾಂತಿ ಐ.ಟಿ ಹಾಗೂ ಪ್ರಾರಂಭಿಕ ಉದ್ದಿಮೆ (ಸ್ಟಾರ್ಟ್ ಅಪ್) ಗಳ ಮೂಲಕೇಂದ್ರ ಬಿಂದುವಾದರೂ ಕೃಷಿ ಮತ್ತು ಹೈನುಗಾರಿಕೆ ಇಂದಿಗೂ ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿದೆ. ರಾಷ್ಟ್ರದ ಶೇ ೪೦% ಅಧಿಕ ಜನಸಂಖ್ಯೆ ಇಂದಿಗೂ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಾದ ಹೈನುಗಾರಿಕೆ ಮೇಲೆ ಅವಲಂಭಿತವಾಗಿದೆ. ಇಷ್ಟಾದರೂ ಕೃಷಿ ಅಧ್ಯಯನದ ಮೇಲೆ ಹೂಡಿಕೆ ಮಾಡುತ್ತಿರುವುದು ಶೇ ೦.೩೦% ರಷ್ಟು. ಇಂದು ಚೈನಾ (೦.೬೨%) ಅಮೇರಿಕಾ (೧.೨೦%) ಬ್ರೆಜಿಲ್ (೧.೮೨) ಹಾಗೂ ದಕ್ಷಿಣ ಆಫ್ರಿಕಾ (೩.೦೬) ಕ್ಕಿಂತ ಕಡಿಮೆಯಾಗಿದ್ದು, ರೈತರ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಮತ್ತಷ್ಟು ಓದು »