ಸಮಾನತೆಯ ಪ್ರಶ್ನೆ, ಸಾಮರಸ್ಯದ ಸಂಕೇತ ಶಬರಿಮಲೆ
– ಸ್ನೇಹಾ ಸಾಗರ
ಕೆಲ ದಿನಗಳ ಪ್ರಶ್ನೆಯಲ್ಲ, ಹಲವು ವರ್ಷಗಳ ಪ್ರಶ್ನೆ. ‘ಶಬರಿಮಲೆಗೆ ಹೆಣ್ಣಿಗೇಕೆ ಪ್ರವೇಶವಿಲ್ಲ’ ಎನ್ನುವುದು. ಹೆಣ್ಣೆೆಂದೆರೆ ಅಪವಿತ್ರತೆ ಎನ್ನುವುದೋ, ಪಂದಳದ ರಾಜ ಹೆಣ್ಣಿನ ವಿರೋಧಿ ಎನ್ನುವುದೋ ಅಥವಾ 48 ದಿನಗಳ ಕಠಿಣ ವೃತ ಮತ್ತು ದೊಡ್ಡ ಪಾದ, ಸಣ್ಣ ಪಾದಗಳನ್ನು ಹತ್ತಿ ದೇವರ ದರ್ಶನ ಪಡೆಯುವುದು ಹೆಣ್ಣಿನ ಶಕ್ತಿಗೆ ಆಗದ್ದು ಎನ್ನುವುದೋ. ಒಟ್ಟಿನಲ್ಲಿ ಶಬರಿಮಲೆ ಅಂದಿಗೂ – ಇಂದಿಗೂ ಪ್ರಶ್ನೆೆಯೇ, ವಿವಾದವೇ. ಆದರೆ ಅದು ಯಾರಿಗೆ ಎನ್ನುವುದು ದೊಡ್ಡ ಪ್ರಶ್ನೆೆ. ಭಾರತವೆಂದರೆ ಪರಂಪರೆ, ಭಾರತವೆಂದರೆ ಸಂಸ್ಕೃತಿ – ಸಂಪ್ರದಾಯ ಎನ್ನುವರಿಗೆ ಹಾಗೂ ದೇವರೊಡನೆ ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆೆ ನಂಬಿಕೆಗಳನ್ನು ಉಳಿಸಿಕೊಂಡು ಬಂದವರಿಗೆ ಖಂಡಿತ ಶಬರಿಮಲೆಯ ಈ ಕಟ್ಟುಪಾಡು ಸಮಸ್ಯೆೆಯೇ ಅಲ್ಲ. Read more
ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!
– ಶ್ರೇಯಾಂಕ ಎಸ್ ರಾನಡೆ.
‘ಬೋಸ್ ಹಾಗೂ ಐಎನ್ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್ಲ್ಯಾಂಡ್ ಪ್ರಕಾಶನ, 1964, ಪುಟ: 93.
ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. Read more