ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಾಹಿತ್ಯ’ Category

15
ಏಪ್ರಿಲ್

ಬಯಲಾಗುತ್ತಿರುವ ಬುದ್ಧಿಜೀವಿಗಳ ಮನೋಲೋಕ..!

-ರಮಾನಂದ ಐನಕೈ

ಪ್ರಭುತ್ವವನ್ನು ಓಲೈಸಿಕೊಳ್ಳದಿದ್ದರೆ ಸಾಹಿತಿಗಳಿಗೂ ಉಳಿಗಾಲವಿಲ್ಲದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ, ಅಕಾಡೆಮಿಗಳ ಪ್ರಶಸ್ತಿಗಳು, ಅನುದಾನಗಳು, ಫೆಲೋಶಿಫ್ಗಳು, ವಿಶ್ವವಿದ್ಯಾಲಯಗಳ ಕುಲಪತಿತ್ವ ಮತ್ತು ವಿವಿಧ ಕಲಾಸಾಹಿತ್ಯ ಸಂಸ್ಥೆಗಳ ಹುದ್ದೆಗಳನ್ನು ಪಡೆಯಬೇಕಾದರೆ ದೊರೆಗಳ ಹಿಂದೆ ಬಹುಪರಾಕ್ ಹಾಕುತ್ತ ಓಡಾಡಬೇಕಾಗುತ್ತದೆ. ಅಂತೆಯೇ ರಾಜಕೀಯದವರಿಗೂ ಕೂಡ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಹತ್ತಿಕ್ಕಿ ಮುನ್ನಡೆಯಲು ಸಾಧ್ಯವಿಲ್ಲ. ಏಕೆಂದರೆ ಕನ್ನಡ ನಾಡಿನ ಸಾಂಸ್ಕೃತಿಕ ಶರೀರವನ್ನು ಎತ್ತಿ ತೋರಿಸಿ ಇಲ್ಲೊಂದು ಭೌತಿಕ ಪ್ರಭುತ್ವಕ್ಕೆ ಅನುವು ಮಾಡಿಕೊಡುವಲ್ಲಿ ಸಾಹಿತಿಗಳ ಪಾತ್ರ ಹಿರಿದಾಗಿದೆ. ಜೊತೆಗೆ ಸಾಹಿತಿಗಳು ಭಾಷೆಯನ್ನು ಬೆಳೆಸುವವರು ಮತ್ತು ಉಳಿಸುವವರು ಎಂಬ ಸಾಮಾನ್ಯ ನಂಬಿಕೆ. ಹಾಗಂತ ಈ ನಂಬಿಕೆಯ ಹಿಂದಿನ ಸತ್ಯಾಸತ್ಯತೆಯನ್ನೂ ಯಾರೂ ಒರೆಗೆ ಹಚ್ಚಿಲ್ಲ ಆ ಪ್ರಶ್ನೆ ಬೇರೆ. ಹಾಗಾಗಿ ಕಳ್ಳರು ದೇವರನ್ನು ಬಳಸಿಕೊಂಡಂತೆ ರಾಜಕಾರಣಿಗಳು ಸಾಹಿತಿಗಳನ್ನು ಕಾಲಕ್ಕೆ ತಕ್ಕುನಾಗಿ ಉಪಯೋಗಿಸಿಕೊಳ್ಳುತ್ತಾರೆ. ಸಾಹಿತಿಗಳು ಚುನಾವಣೆಗಳಲ್ಲಿ ಭಾಗಿಯಾಗಬಾರದೆ? ಅವರಿಗೂ ವಾಕ್ ಸ್ವಾತಂತ್ರ್ಯವಿಲ್ಲವೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಕನ್ನಡದ ಸಾರಸ್ವತ ಲೋಕವನ್ನು ಆವರಿಸಿಕೊಂಡಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸುವುದು ತಿಳಿದುಕೊಂಡಷ್ಟು ಸುಲಭವಾಗಿಲ್ಲ.

ಕರ್ನಾಟಕದಲ್ಲಿ ಪಕ್ಷಗಳ ಪರವಾಗಿ ಸಾಹಿತಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೊದಲು ಪ್ರಾರಂಭಿಸಿದವರು ಕಾಂಗ್ರೇಸ್ ಪರವಾದ ಸಾಹಿತಿಗಳು. ಅದಕ್ಕೆ ವಿರೋಧವಾಗಿ ಪ್ರತಿಕ್ರಿಯಿಸಿದ ಒಂದಿಷ್ಟು ಸಾಹಿತಿಗಳಿಗೆ ಬಿ.ಜೆ.ಪಿ.ಪಟ್ಟ ಕಟ್ಟಲಾಯಿತು. ಇಲ್ಲಿ ಯಾರು ಯಾರನ್ನು ಸಮರ್ಥಿಸಿದರು ಎಂಬುದು ವಾದಕಾರಣವಲ್ಲ. ಕೆಲವು ಸಾಹಿತಿಗಳು ಪಕ್ಷರಾಜಕಾರಣವನ್ನು ಆತುಕೊಂಡು ತಮ್ಮ ಅಪಕ್ವ ನಿಲುವುಗಳನ್ನು ಹೊರಗೆಡಹಿದ ರೀತಿ ಮಾತ್ರ ತೀರಾ ಹಾಸ್ಯಾಸ್ಪದವಾಗಿದೆ. ಅಹಿಂದ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ, ಭಾರತೀಯ ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳಾದ್ದರಿಂದ ನಿಷೇಧಿಸಬೇಕು, ಮದುವೆಯಾದ ಮುಸ್ಲಿಮ ಮಹಿಳೆಯರಿಗೆ ಮಾತ್ರ ಮಂಚ ಮುಂತಾದ ಸರ್ಕಾರಿ ಘೋಷಣೆಗಳಿಗೆಲ್ಲ ತುಟಿ ಪಿಟಕ್ಕೆನ್ನದೆ ಕುಳಿತ ಸಮನ್ವಯವಾದಿಗಳು ಈ ಚುನಾವಣಾ ಪ್ರಕರಣದ ಮೂಲಕ ತಾವು ನಿರ್ದಿಷ್ಟ ಪಕ್ಷದ ಮುಖವಾಣಿಗಳು ಎಂಬುದನ್ನು ಸಾಬೀತು ಮಾಡಿದರು. ಮತ್ತಷ್ಟು ಓದು »

12
ಏಪ್ರಿಲ್

ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨

-ಡಾ.ಶ್ರೀಪಾದ ಭಟ್, ತುಮಕೂರು

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧

ಕವಿಕಾಣದ್ದನ್ನು ವಿಮರ್ಶಕ ಕಂಡ!

ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್‍ನ ಕಾವ್ಯದ ಜನಪ್ರಿಯ ಗೀತೆಯ ’ಪದುಮಳು ಒಳಗಿಲ್ಲ’ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್‍ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?

ಮತ್ತಷ್ಟು ಓದು »

1
ಏಪ್ರಿಲ್

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

 

‘ಆವರಣ ‘ ಎಂಬ ವಿ-ಕೃತಿ  –  ಸಂಗ್ರಹ : ಗೌರಿ ಲಂಕೇಶ್

ಗೌರಿ ಲಂಕೇಶ್ ಅವರು ಸಂಗ್ರಹಿಸಿರುವ ‘ಆವರಣ’ ಎಂಬ ವಿಕೃತಿ’ (ಲಂಕೇಶ್ ಪ್ರಕಾಶನ ಬೆಂಗಳೂರು–೪, ೨೦೦೭) ವಿಮರ್ಶಾ ಸಂಕಲನದಲ್ಲಿ ಯು ಅರ್ ಅನಂತಮೂರ್ತಿ, ಕೆ ಮರುಳಸಿದ್ದಪ್ಪ, ರಹಮತ್ ತರೀಕೆರೆ, ಜಿ ರಾಜಶೇಖರ್, ಜಿ ಕೆ ಗೋವಿಂದರಾವ್, ಕೆ. ಫಣಿರಾಜ್ ಮುಂತಾದ ಪ್ರಸಿದ್ಧ ಲೇಖಕರು,ವಿಮರ್ಶಕರು ಹಾಗು ಚಿಂತಕರ ಲೇಖನಗಳಿವೆ. ‘ಆವರಣ’ದಲ್ಲಿ ಚಿತ್ರಿತಗೊಂಡಿರುವ ಚರಿತ್ರೆಯ ಅಂಶಗಳು ಎಷ್ಟರಮಟ್ಟಿಗೆ ನಂಬಲರ್ಹ/ಅದಷ್ಟೇ ನಿಜವೇ ಬೇರೆ ಮುಖಗಳು ಇಲ್ಲವೇ ಎಂಬುದರ ಜತೆಗೆ ಕಾದಂಬರಿಯ ತಾತ್ವಿಕತೆ, ರೂಪ,ವಿನ್ಯಾಸಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ಒತ್ತು ಜಾಸ್ತಿ. ಹಿಂದೆ ಏನೇನೋ ನಡೆದುಹೋಗಿದೆ;ಅದನ್ನೆಲ್ಲಾ ಮತ್ತೆ ಕೆದಕುವುದ್ಯಾಕೆ ಎಂಬ ಮಾತೂ ಆಗೀಗ ಬರುತ್ತದೆ. ಹೀಗಾಗಿ ಈ ವಿಮರ್ಶಾ ಸಂಕಲನದ ಲೇಖನಗಳನ್ನು ಸ್ವಲ್ಪ ವಿವರವಾಗಿ ಚರ್ಚಿಸಬೇಕಾಗಿದೆ.

ಮತ್ತಷ್ಟು ಓದು »

27
ಮಾರ್ಚ್

ಸಾಹಿತ್ಯ ಕ್ಷೇತ್ರದ ಒಳಹೊರಗು

-ಡಾ.ಶ್ರೀಪಾದ ಭಟ್, ತುಮಕೂರು

ಕನ್ನಡ ಸಾಹಿತ್ಯಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.

ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ!

ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್‍ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್‍ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್‍ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.

ಮತ್ತಷ್ಟು ಓದು »

25
ಮಾರ್ಚ್

ಕಥೆಯಾದರು ಚಿತ್ತಾಲ

– ರಾಘವೇಂದ್ರ ಅಡಿಗ ಎಚ್ಚೆನ್

ಯಶವಂತ ಚಿತ್ತಾಲಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ

ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.

ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.

ಮತ್ತಷ್ಟು ಓದು »

18
ಫೆಬ್ರ

ಆರ್.ಕೆ ಶ್ರೀಕಂಠನ್ ಅವರೊಂದಿಗಿನ ಮಾತುಕತೆಯ ನೆನಪು

ಆರ್.ಕೆ ಶ್ರೀಕಂಠನ್ಕರ್ನಾಟಕ ಸಂಗೀತದ ಹಿರಿಯ ಗಾಯಕರಾದ ಆರ್.ಕೆ ಶ್ರೀಕಂಠನ್ ಅವರು ನಿನ್ನೆ ವಿಧಿವಶರಾದರು.ತಮ್ಮ ೯೪ರ ವಯಸ್ಸಿನಲ್ಲೂ ಸಂಗೀತ ಕಛೇರಿಯನ್ನು ನಡೆಸಿಕೊಡುತಿದ್ದ ಶ್ರೀಕಂಠನ್ ಅವರ ಬಗ್ಗೆ ಹಂಸಾನಂದಿ ಹಾಗೂ ಪ್ರಭುಮೂರ್ತಿಯವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಪರವಾಗಿ ೨೦೦೮ರಲ್ಲಿ ನಡೆಸಿದ ಸಂದರ್ಶನವನ್ನು ಪ್ರಕಟಿಸುತಿದ್ದೇವೆ – ನಿಲುಮೆ

ಒಂದು ಮಾಘದ ತಂಪಿನಿರುಳಲಿ
ನಂದನದಿ ಸೇರಿರಲು ಸುರಗಣ
ಚಂದದಲಿ ತಲೆದೂಗಲಿಕೆ ನಾರದನ
ಗಾಯನಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ
ತಂದನೈ ಹಾಡಲಿಕೆ ಕರ್ನಾಟಕದ
ಕೋಗಿಲೆಯ!

ಮತ್ತಷ್ಟು ಓದು »

5
ಜನ

ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ “ಸಿದ್ಧಾರ್ಥ”

– ಡಾ ಅಶೋಕ್ ಕೆ ಆರ್

Siddharthaಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.

ಇಲ್ಲಿ ಬುದ್ಧನಿದ್ದಾನೆ; ಆದರವನು ‘ಸಿದ್ಧಾರ್ಥ’ನಲ್ಲ ‘ಗೌತಮ’. ಬುದ್ಧನನ್ನೇ ಧಿಕ್ಕರಿಸಿ ನಡೆಯುವ ಸಿದ್ಧಾರ್ಥನಿದ್ದಾನೆ. ಕಾದಂಬರಿಯ ನಾಯಕ ‘ಸಿದ್ಧಾರ್ಥ’ ಬ್ರಾಹ್ಮಣನೊಬ್ಬನ ಮಗ. ‘ಅರಿವು’ ಪಡೆದು ಮುಕ್ತಿ ಪಡೆಯಲೋಸಗ ಮನೆ ತೊರೆದು ಜ್ಞಾನಿಗಳೆಂದು ಹೆಸರಾದ ಸಮಾನರೊಡನೆ ಹೋಗುವ ಸಂಕಲ್ಪ ಮಾಡುತ್ತಾನೆ. ಸಿದ್ಧಾರ್ಥನ ತಂದೆ ಒಪ್ಪುವುದಿಲ್ಲ. ಸಿದ್ಧಾರ್ಥ ಹಟ ಬಿಡುವುದಿಲ್ಲ, ಅನುಮತಿ ಕೊಡುವವರೆಗೂ ನಿಂತ ಸ್ಥಳದಿಂದ ಅಲುಗಾಡುವುದಿಲ್ಲ. ಮಗನ ಕಾಠಿಣ್ಯವನ್ನು ನೋಡಿ ಬೆಚ್ಚಿ ಬೇಸರದಿಂದಲೇ ಮಗನನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ತನ್ನ ಗೆಳೆಯ ಗೋವಿಂದನ ಜತೆಗೆ ಅರಿವಿನ ಪಯಣ ಪ್ರಾರಂಭಿಸುತ್ತಾನೆ. ಕೆಲವು ದಿನಗಳಲ್ಲೇ ಪಡೆದ ಜ್ಞಾನ ತನ್ನನ್ನು ತಾನೇ ಅರಿಯುವುದಕ್ಕೆ ಸಾಲುತ್ತಿಲ್ಲವೆನ್ನಿಸಿ ಮನೋಕ್ಷೋಬೆಗೊಳಗಾಗುತ್ತಾನೆ. ರಾಜತ್ವವನ್ನು ತೊರೆದು ಜ್ಞಾನೋದಯ ಪಡೆದ ಗೌತಮ ಬುದ್ಧನ ಹೆಸರು ಪ್ರಖ್ಯಾತವಾಗುತ್ತಿದ್ದ ಕಾಲವದು. ಗೆಳೆಯ ಗೋವಿಂದನ ಜೊತೆಗೆ ಬುದ್ಧನ ತತ್ವಗಳನ್ನರಿಯಲು ಹೊರಡುತ್ತಾನೆ ಸಿದ್ಧಾರ್ಥ. ಬುದ್ಧನ ಉಪದೇಶಗಳಿಂದ ಈರ್ವರೂ ಪ್ರಭಾವಿತರಾಗುತ್ತಾರೆ. ‘ಸಮಾನ’ರು ತಿಳಿಸಿಕೊಟ್ಟದ್ದಕ್ಕಿಂತ ಹೆಚ್ಚಿನ ಅರಿವು ಬೌದ್ಧ ಧರ್ಮದಲ್ಲಿದೆ ಎಂದು ಮನವರಿಕೆಯಾದರೂ ಸಿದ್ಧಾರ್ಥ ಬುದ್ಧನ ಶಿಷ್ಯನಾಗಲು ಆಶಿಸುವುದಿಲ್ಲ.

ಮತ್ತಷ್ಟು ಓದು »

1
ಜನ

ಕನ್ನಡದ ನಾಡಿಮಿಡಿತ ಅರಿತ ಕಥೆಗಾರ: ‘ನಾಡಿ’

– ರಾಘವೇಂದ್ರ ಅಡಿಗ ಎಚ್ಚೆನ್

೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ*ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು ಸೃಷ್ಟಿಸಿರುವ ಅನೇಕ ಕಥೆ-ಕಾದಂಬರಿಗಳು ಜನಮಾನಸವನ್ನು ಸೂರೆಗೂಂಡಿವೆ. ಅದರಲ್ಲಿ ಕೆಲವಷ್ಟು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ. ಇಂತಹಾ ಅಪೂರ್ವ ಸಾಹಿತಿಯೊಬ್ಬರಿಗೆ ಕನ್ನಡ ಸಮ್ಮೇಳನದ
ಅಧ್ಯಕ್ಷಗಿರಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತ ಕಿರುನೋಟವೊಂದು ಇಲ್ಲಿದೆ.*

ಈ ಬಾರಿ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಡೆಯಲಿರುವ ಎಂಭತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಾಹಿತಿ ನಾ ಡಿಸೋಜಾರವರಿಗೆ ಈ ಮೂಲಕ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.

ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕು. ಸರ್ಕಾರ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸಬೇಕು,ಇದೇ ಮುಂತಾದ ಹೇಳಿಕೆಗಳನ್ನು ನೀಡುತ್ತಾ ತಾವು ಹಿಂದಿನಿಂದ ಆಂಗ್ಲ ಸಾಹಿತ್ಯ, ಭಾಷೆಗೆ ಕುಮ್ಮಕ್ಕು ನೀಡುತ್ತಿರುವ, ಜತೆಗೆ ಆಡಳಿತಾರೂಢ ಸರ್ಕಾರಗಳಿಂದ ತಮಗೆ ಬೇಕಾದ ಅನುಕೂಲಗಳನ್ನು ಪಡೆದುಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಒಂದು ವರ್ಗವೇ ನಮ್ಮ ನಡುವಿರುವ ಈ ದಿನಗಳಲ್ಲಿ ತಾವು ಬದುಕಿ ಬಾಳಿದ ಮಲೆನಾಡಿನ ಐಸಿರಿಯ ನಡುವಿನ ಪುಟ್ಟ ಊರು ಸಾಗರದ ಸುತ್ತ ಮುತ್ತ ನಡೆವ ಬೆಳವಣಿಗೆಗಳಿಂದ ಸ್ಪೂರ್ತಿಗೊಂಡು ಅತಿ ಸಾಮಾನ್ಯ ವಸ್ತುವನ್ನಿಟ್ಟುಕೊಂಡು ಓದುಗರಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಬಲ್ಲ ಜಾಣ ಕಥೆಗಾರರಾದ ನಾ.ಡಿಸೋಜಾರಂಥವರು ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು  ಕನ್ನಡದ ಕೆಲಸದಲ್ಲಿ ತೊಡಗಿರುವಂತಹವರೂ ನಮ್ಮೊಡನಿರುವುದು ನಮಗೆಲ್ಲರಿಗೂ ನಿಜಕ್ಕೂ ಖುಷಿಯ ಸಂಗತಿ. ಇಂತಹಾ ಅಪ್ಪಟ ಕನ್ನಡ ಪ್ರೇಮಿಯೊಬ್ಬರಿಗೆ ಈ ಬಾರಿ ಕನ್ನಡಮ್ಮನ ತೇರನ್ನೆಳೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾರವರ ಬದುಕು-ಬರಹಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

ಮತ್ತಷ್ಟು ಓದು »

23
ಡಿಸೆ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ  ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು  ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.

ಮತ್ತಷ್ಟು ಓದು »

30
ನವೆಂ

ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು

– ರಾಘವೇಂದ್ರ ಅಡಿಗ ಎಚ್ಚೆನ್

Bhadragiri Achyuta Dasaಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.

ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳನ್ನು ನಡೆಸಿ ಪ್ರಸಿದ್ದರಾಗಿದ್ದರೆ,ಸಂತ ಭದ್ರಗಿರಿ ಅಚ್ಯುತ ದಾಸರು ಭರತ ಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು.

ವ್ಯಕ್ತಿ ಪರಿಚಯ :

ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
ಮತ್ತಷ್ಟು ಓದು »