ಅಲಾಲ್ ಟಪಾಲ್…!
– ಪವನ್ ಪಾರುಪತ್ತೇದಾರ
ನಮ್ಮಪ್ಪ ನನ್ನ ಹಾಗೆ ಕರೆಯೋದ್ರಲ್ಲು ಒಂದು ಅರ್ಥ ಇತ್ತು ಕಾರಣ ಇತ್ತು. ಏಳುತ್ತಾ ಇದ್ದದ್ದು ೯ ಘಂಟೆ ಎದ್ದು ಹಲ್ಲು ತಿಕ್ಕೋ ಅಷ್ಟರಲ್ಲಿ ಅಮ್ಮ ಕಾಫೀ ಕೊಡುತಿದ್ದರು, ನಂತರ ಸ್ನಾನ ಮುಗಿಸಿ
ತಿಂಡಿ. ಅಷ್ಟರಲ್ಲಿ ೧೧ ಘಂಟೆ ಆಗಿರೋದು. ಇನ್ನು ಆಗ ಕಂಪ್ಯೂಟರ್ ಮುಂದೆ facebook, orkut, ಅ ಸಂಘ, ಈ ಕೂಟ, ಇನ್ಯಾವುದೋ ಬಳಗ ಅಂತ ಚಾಟಿಂಗ್ ಮಾಡುತ್ತಾ ಕೂತರೆ ಮಧ್ಯಾಹ್ನ ೨ ಘಂಟೆ ಆಗುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾರೆ. ಊಟ ಮಾಡಲು ಎಲ್ಲರು ಕೂತು ಊಟ ಮುಗಿಸಿ ನಂತರ ಮತ್ತೆ online ಹೋದರೆ ಮತ್ತೆ ಸಮಯದ ಅರಿವೇ ಇರುವುದಿಲ್ಲ.
ಸಂಜೆ ೬ ಘಂಟೆ ಹೊತ್ತಿಗೆ ಹಸು ಮನೆಯಲ್ಲಿನ ಸಗಣಿ ಕಸ clean ಮಾಡಿ, ಮತ್ತೆ ಒಂದು ರೌಂಡ್ ಕಾಫೀ ಕುಡಿದು ಹೊರಟರೆ ಮತ್ತೆ ಮನೆ ಸೇರುತಿದ್ದಿದ್ದು 10 ಘಂಟೆಗೆ. ಸ್ನೇಹಿತರ ಜೊತೆ ಅಡ್ಡ, ಕಾಡು ಹರಟೆ, ಮನೆಗೆ ಬಂದೊಡನೆ ಊಟ ಮಾಡಿ ಮತ್ತೆ online 12 ರ ತನಕ ಚಾಟಿಂಗ್ ನಂತರ ನಿದ್ದೆ. ಈ ರೀತಿಯ ದಿನಚರಿ ಇರುವ ಯಾವ ಮಗನನ್ನಾದರೂ ಅಲಾಲ್ ಟಪಾಲ್ ಅನ್ನದೆ ಮುದ್ದು ಮಾಡೋದಕ್ಕ ಸಾಧ್ಯ??
ಹೌದು ನಾನು ಅಲಾಲ್ ಟಪಾಲೇ, ಅಲೆದು ಅಲೆದು ನಂತರ ಅದರ ಗುರಿಯನ್ನು ಸೇರುವ ಟಪಾಲಿನ ಮೇಲೆ ಒಂದು ವಿಳಾಸ ಇರುತ್ತದೆ. ಹಾಗೆ ನನ್ನ ಈ ಬದುಕಿನ ವಿಳಾಸ ನಾನೆ ಬರೆದುಕೊಂಡಿರುವಂತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಬೇಕೆಂದು. ಆದರೆ ವಿಧಿ ಅದನ್ನು ಸರ್ಟಿಫಿಕೇಟ್ ಗಷ್ಟೇ ಸೀಮಿತಗೊಳಿಸಿದೆ. campus ಇಂಟರ್ವ್ಯೂ ಗೆ ಬಂದ ಕಂಪನಿಗಳೆಲ್ಲ software ಗಳೆ, ನಾನು ಅದ್ರಲ್ಲಿ ಸೆಲೆಕ್ಟ್ ಆಗೋವಷ್ಟು ಬುದ್ಧಿವಂತ ಆಗಿರಲಿಲ್ಲ ಅನ್ಸುತ್ತೆ. ಯಾವ ಕಂಪನಿಯವರು ನನ್ನ ಸೆಲೆಕ್ಟ್ ಮಾಡಿಲ್ಲ.
ಆದರು ಕಡೆಯ ಸೆಮಿಸ್ಟರ್ ರಿಸಲ್ಟ್ ಬರುವ ತನಕ ಏನೋ ಒಂದು ರೀತಿ ಮೊಂಡು ಧೈರ್ಯ, ನನಗೆ ಕೆಲಸ ಸಿಕ್ಕೆ ಸಿಗುತ್ತೆ, fisrt ಕ್ಲಾಸ್ ಮಾರ್ಕ್ಸ್ ಇದೆ, ಒಳ್ಳೆ communication ಇದೆ, contacts ಇದೆ, ಸಬ್ಜೆಕ್ಟ್ ಬಗ್ಗೆ ಸಹ ಸುಮಾರಾದ knowledge ಇದೆ, ಹೀಗೆಲ್ಲ ನಂಗೆ ನಾನೆ ಅಂದುಕೊಂಡು ಬಿಟ್ಟಿದ್ದೆ.. ಆದರೆ result ಬಂದು ನನ್ನ ಸ್ನೇಹಿತ ರೆಫರ್ ಮಾಡಿ attend ಮಾಡಿದ ಮೊದಲ ಇಂಟರ್ವ್ಯೂ ಅಲ್ಲೇ ನನ್ನ ಮೊಂಡು ಧೈರ್ಯವೆಲ್ಲ ಮಣ್ಣು ಪಾಲಾಯಿತು…
ಮೊದಲು aptitude ಮತ್ತು technical ರೌಂಡ್ ಪಾಸು ಆದೆ. ನಂತರ ಪಿಯುಶ್ ಎಂಬ ವ್ಯಕ್ತಿ ಇಂಟರ್ವ್ಯೂ ಮಾಡಿದ. ಸುಮಾರು 50 ನಿಮಿಷ GSM ಮತ್ತು microcontroller ಮತ್ತು microprocessor ಇವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ. ನಾನು ನನಗೆ ಗೊತ್ತಿದ್ದಷ್ಟು ಉತ್ತರ ನೀಡಿದೆ. ಆತ ಮುಂದಿನ ರೌಂಡ್ ಗೆ ನನ್ನ ಸೆಲೆಕ್ಟ್ ಮಾಡಿದ.
ಮುಂದಿನ ರೌಂಡ್ ಅಲ್ಲಿ ತಮಿಳಿಗ ಇಂಟರ್ವ್ಯೂ ಮಾಡಿದ. ಇಂಟರ್ವ್ಯೂ ಮಾಡುತಿದ್ದವನ ಕಡೆಯಿಂದ ಮಿಂಚಿನಂತೆ ಒಂದರ ಹಿಂದೆ ಒಂದು ಪ್ರಶ್ನೆ ಹರಿದುಬಂತು, ನಿಮಗೆ ಜಾವ ಗೊತ್ತ?? ಲಿನಿಕ್ಷ್ ಗೊತ್ತ ? C ++ ಗೊತ್ತಾ? ಆಗ ಒಂದು ಕ್ಷಣ ನಾ ಓದಿದ್ದು ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ಎಂಬುದರ ಬಗ್ಗೆ ಸಂದೇಹ ನನಗೇ ಮೂಡಿಬಂತು. ನಾ ಸ್ವಲ್ಪ ತಡವರಿಸಿ ಸರ್ ನಾನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಮ್ಯುನಿಕೇಶನ್ ಹುಡುಗ, ನನಗೇ ಇದರ ಬಗ್ಗೆ ಅಷ್ಟಾಗಿ ಅರಿವಿಲ್ಲ ಆದರೆ ಆದಷ್ಟು ಬೇಗ ಕಲಿತುಬಿಡುತ್ತಿನಿ. ಒಂದೇ ಒಂದು ಅವಕಾಶ ಕೊಡಿ ಸರ್ ಅಂದೆ, ಒಂದು ರೀತಿಯ ಮಾರ್ಮಿಕವಾದ ನಗು ನೀಡಿದ ಅತ ಹೊರಗಡೆ ಕಾಯಲು ಸೂಚಿಸಿದ.
ಸ್ವಲ್ಪ ಸಮಯದ ನಂತರ ಇನ್ನೊಬ್ಬಾತ ಬಂದು ನನ್ನ ಹೆಸರನ್ನ ಕರೆದ, ನನಗ್ಯಾಕೋ ಪಾಸು ಆಗ್ತೀನಿ ಅನ್ನೋ ನಂಬಿಕೆ ಇರಲಿಲ್ಲ, ಯಾಕಂದ್ರೆ ಕರುಣೆಗೆ ಕೆಲಸ ಕೊಡುವುದಕ್ಕೆ ಕಂಪನಿ ನನ್ನ ಇಂಟರ್ವ್ಯೂ ಮಾಡಿದವನ ಮಾವನದ್ದಲ್ಲ, ಆದರು ನೋಡುವ ಅಂತ ನನ್ನ ದೃಷ್ಟಿಯನ್ನ ಅವನೆದೆ ತಿರುಗಿಸಿ ಕೈ ಎತ್ತಿ ನಾನೆ ನೀವು ಕರೆದ ವ್ಯಕ್ತಿ ಅನ್ನೋ ಸೂಚನೆಯನ್ನು ಮಾಡಿದೆ, ಅದಕ್ಕವನು ಸ್ವಲ್ಪವು ಮುಜುಗರ ಬೇಜಾರು ಇಲ್ಲದೆ u can leave for ದಿ ಡೇ ಅಂದ. ಇಷ್ಟಕ್ಕೂ ಅವನಿಗೆ ಬೇಜಾರಾಗುವ ಪ್ರಸಂಗವಾದರು ಏನಿದೆ ಅಲ್ಲಿ ಕೆಲಸ ಬೇಕಾಗಿದ್ದುದು ನನಗೇ, ಸಿಗದಿದ್ದರೆ ನನಗೇ ತಾನೆ ಬೇಜಾರು.
ಪೆಚ್ಚು ಮೊರೆ ಹಾಕಿಕೊಂಡು ಮನೆಗೆ ಬಂದೆ. ನಮ್ಮನೆಯಲ್ಲಿ ಇಂಟರ್ವ್ಯೂ ಗೆ ಹೋದರೆ ಕೆಲಸವೇ ಸಿಕ್ಕಿ ಬಿಟ್ಟಷ್ಟು
ಸಂತೋಷದಲ್ಲಿದ್ದರು. ಮನೆ ಒಳಗೆ ಕಾಲಿಡುತಿದ್ದಂತೆ ಏನಯ್ಯ ಏನಾಯ್ತು ಹೊಗಿದ್ ಕೆಲಸ ಅಂತ ಅಪ್ಪನ ಪ್ರಶ್ನೆ, ಇಲ್ಲಪ್ಪ ಸೆಲೆಕ್ಟ್ ಆಗಿಲ್ಲ ಅವರಿಗೆ ಜಾವ linix ಎಲ್ಲ ಗೊತ್ತಿರೋ engineers ಬೇಕಂತೆ ಅಂದೆ. ಅಪ್ಪ ನೀನು ಇಂಜಿನಿಯರ್ ಅಲ್ವಾ ನಿನಗ ಬರಲ್ವ ಅಂದ್ರು ಪಾಪ ಅಮಾಯಕತೆಯಿಂದ.
ಇಲ್ಲಪ್ಪ ಅದು ಕಂಪ್ಯೂಟರ್ ಓದಿರೋ ಅವರು ಓದೋ ಸಬ್ಜೆಕ್ಟ್ ನನಗೇ ಅದರ ಅನುಭವ ಇಲ್ಲ, ಕೋರ್ಸ್ ಗೆ ಸೇರಿ ಕಲಿಬೇಕು ಅಂದೆ. ಇಷ್ಟು ವರ್ಷ ಓದಿದ ಮಗ ಇನ್ನು ಸ್ವಲ್ಪ ದಿನ ಮನೆಯಲ್ಲೇ ಇರ್ತಾನೆ ಕೆಲಸಕ್ಕೆ ಹೋಗದೆ ಅಂತ ನನ್ನಪ್ಪನಿಗೆ ಖಾತ್ರಿ ಆಯಿತು. ಮನಸಲ್ಲಿ ಸ್ವಲ್ಪ ಬೇಜಾರು ಆಗಿರಬಹುದು, ಅದ್ರು ಅದನ್ನ ತೋರ್ಪಡಿಸದೆ ಇರಲಿ ಮುಂದಿನ ಬರಿ ಪ್ರಯತ್ನ ಮಾಡು ಸಿಗುತ್ತೆ ಅಂದ್ರು. ಆಗ ನನಗೇ ನಾನೆ ಸ್ವಲ್ಪ ಸಮಾಧಾನ ಮಾಡ್ಕೊಂಡು ಚಿಂತೆಯ ಮರವನ್ನು ಹತ್ತುತ್ತಾ ಹೋದೆ. ಬಹಳಷ್ಟು ಜಾಳು ಜಾಳದ ಪ್ರಶ್ನೆಗಳು ನನ್ನ ಕಾಡ ತೊಡಗಿದವು.
ಅಪ್ಪನ ಕೈಲಿ ದುಡ್ಡು ಖರ್ಚು ಮಾಡಿಸಿದ್ದು ಸಾಕು, ಇನ್ನು ಕೋರ್ಸ್ ಅಂತ ಎಲ್ಲ ಹಣ ತೆಗೆದುಕೊಳ್ಳುವುದು ಬೇಡ ಅನ್ನೋ ನನ್ನ ಮನಸ್ಸು ನಿಜವಾಗಲು ಅಲಾಲ್ ಟಪಾಲೇ…..??
CET ಅಲ್ಲಿ ಒಳ್ಳೆ ರಾಂಕಿಂಗ್ ಅಲ್ಲದಿದ್ದರೂ, ಸುಮಾರಾದ ರಾಂಕಿಂಗ್ ಬಂದರೂ, ಜನರಲ್ ಮೆರಿಟ್ ಗೆ ಸೇರಿದಕ್ಕೆ reputed ಎನಿಸಿಕೊಳೋ ಕಾಲೇಜ್ ನಲ್ಲಿ ಸೀಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ನಾನು ಅಲಾಲ್ ಟಪಾಲೇ…….??
ಎಲೆಕ್ಟ್ರಾನಿಕ್ಸ್ ನ ಕಂಪನಿಗಳಿಗೆಲ್ಲ ಅನುಭವ ಇರುವವರೇ ಬೇಕಂತೆ ಇಲ್ಲವಾದಲ್ಲಿ ಯಾವುದಾದರು ಟ್ರೇನಿಂಗ ಇನ್ಸ್ಟಿಟ್ಯೂಟ್ ಇಂದ ಅಥವಾ reputed ಕಾಲೇಜ್ ಗಳಿಂದ ಕ್ಯಾಮ್ಪುಸ್ inteview ಮಾಡಿ ತೊಗೋತಾರಂತೆ. ಆದ್ರೆ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಾಲ್ ಮೆಕ್ಯಾನಿಕಲ್ ವಿಭಾಗದಲ್ಲಿ ಇ ಸಮಸ್ಯೆ ಇಲ್ಲ, ನಾ ಎಲೆಕ್ಟ್ರಾನಿಕ್ಸ್ ತೊಗೊಂಡು ಅಲಾಲ್ ಟಪಾಲಾದೇನೆ???
ಮತ್ತೆ ಯಾವ ಕೆಲಸದ ಮಾಹಿತಿ ಇರೋ website ನೋಡಿದರು ಸಾಫ್ಟ್ವೇರ್ ಇಂಜಿನಿಯರ್ ಬೇಕು ಎಂಬ ಆಡ್ ಇರತ್ತೆ ಆದರೆ ನಮಗೆ ಆ ಅವಕಾಶವಿಲ್ಲ ಅವಕಾಶಗಳ ಕೊರತೆ. ಅವಕಾಶಗಳನ್ನ ಹುಡುಕುತ್ತಿರುವ ನಾನು ಅಲಾಲ್ ಟಪಾಲೇ……??
ಸಧ್ಯ ಈಗ ಯಾವುದೊ ಖಾಸಗಿ ಕಂಪ್ಯೂಟರ್ ಕೇಂದ್ರದಲ್ಲಿ java C C ++ unix ಮತ್ತು linux ಕಲಿಯಲು ಸೇರಿದ್ದೀನಿ ನೋಡೋಣ ನಮ್ಮ ದಿಕ್ಕು ಹೇಗೇಗೆ ಬದಲಾಗುತ್ತೋ……………………..!!!!!
* ಈ ಅಲಾಲ್ ಟಪಾಲ್ ಗೆ ಒಂದು ಕಂಪನಿ ಅಡ್ರೆಸ್ ಸಿಗುತ್ತಾ ನೋಡೋಣ *





ಗೆಳೆಯಾ..
ಇಷ್ಟೆಲ್ಲಾ ಗಳಿಸಿದ್ದರೂ ನಿಮಗೆ ಒಂದೂ ಕೆಲಸ ಸಿಗುತ್ತಿಲ್ಲ ಎಂದರೆ ನೀವು comfort zoneಗೆ ವಾಲಿದ್ದೀರಾ ಎಂದನಿಸುತ್ತದೆ. ಇನ್ನಷ್ಟು ಪ್ರಯತ್ನ ಪಟ್ಟರೆ ಯಶಸ್ಸು ಕಂಡಿತಾ ಸಿಗುತ್ತದೆ.. ಆ ತಮಿಳಿನವನ ಬಗ್ಗೆ ಉಲ್ಲೇಖಿಸಿದ್ದೀರಲ್ಲಾ. ಅಂತಹಾ ಅನುಭವ ನನಗೂ ಆಗಿದೆ. ಐ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಕರ್ನಾಟಕದವನು ಮತ್ತೊಬ್ಬ ಕನ್ನಡಿಗನಿಗೆ ಕೆಲಸ ಕೊಡಿಸಲು ಸರ್ವಥಾ ಪ್ರಯತ್ನಿಸುವುದಿಲ್ಲ. ಆದರೆ ಒಬ್ಬ ತಮಿಳಿನವ, ಮಲೆಯಾಳಿಯವ ಅಥವಾ ತೆಲುಗಿನವ ಒಂದು ಕೆಲಸಕ್ಕೆ ಸೇರಿದರೆ ಆತ ತನ್ನ ಬಾಷೆಯವನಿಗೆ ಕೆಲಸ ಕೊಡಿಸಲು ಗರಿಷ್ಟ ಪ್ರಯತ್ನ ಪಡುತ್ತಾನೆ.
ಇದನ್ನು ಓದುವ ಗೆಳೆಯರೇ, ನೀವ್ಯಾದರೂ ಒಂದೊಳ್ಳೆ ಕೆಲಸದಲ್ಲಿದ್ದರೆ ಕನ್ನಡಿಗರಿಗೆ ಅವಕಾಶ ಕೊಡಿಸಲು ಪ್ರಯತ್ನಿಸಿ, ನಿಮ್ಮಿಂದ ನಮ್ಮವರು ಬೆಳೆಯಲಿ..
nimma commentige dhanyavadagalu 🙂 na attend madidda interview nalli gottiruva bhashegalannu hesarisi matrubhasheyannu underline madabekamba niyamavittu, comfert zone andre enu embudu nanage artha agilla 🙂
ನಾವೂ ಇದನ್ನ ನೋಡಿದವರೇ.. ಕಂಫರ್ಟ್ ಜೋನ್ ಎಂದರೆ ನಿಮಗೆ ಸುಖ ಎನ್ನಿಸುವ ರೀತಿಯಲ್ಲಿ ಕೆಲಸದಲ್ಲಿರುವುದು. ರಂಗನಾಥರು ಇಲ್ಲಿ ಅದನ್ನು ಪ್ರಯೋಗಿಸಿದ್ದರ ಉದ್ದೇಶ ತಿಳಿಯಲಿಲ್ಲ.
ಸಾಕಷ್ಟು ಉದ್ಯೋಗಾವಕಾಶಗಳಿವೆ. ನನ್ನ ಗೆಳೆಯರನೇಕರು ಎರಡು ವರ್ಷಗಳ ನಂತರ ಉದ್ಯೋಗಿಗಳಾದರು.ಕೆಲವರು ವರ್ಷಗಟ್ಟಲೆ ಪುಕ್ಕಟೆ ಕೆಲಸ ಮಾಡಿದರು. ಈಗ ಅಮೇರಿಕ ಜಪಾನ್ ಯುರೋಪುಗಳಲ್ಲಿದ್ದಾರೆ.
ನಿರಾಶರಾಗಬೇಕಿಲ್ಲ, ಮಪ್ರ ಬಿಹಾರ ಉಪ್ರ ಜಾರ್ಖಂಡ ಗಳಿಂದ ಬಂದ ಕೆಲಸಕ್ಕೆ ಬಾರದವರೇ ಟೆಕ್ಕಿಗಳಾಗಿದ್ದಾರೆ. ನಮ್ಮವರಿಗೆ ದೊಡ್ಡದಲ್ಲ. ನಾನು ಫ್ರೆಶರ್ ಗಳಿಗೆ ಉದ್ಯೋಗಾವಕಾಶಗಳನ್ನು ಫೇಸ್ ಬುಕ್ಕಿನಲ್ಲಿ ಹಾಕುತ್ತಿರುತ್ತೇನೆ. (ಕನ್ನಡಿಗರು ಮಾತ್ರ ಓದಲಿ ಅಂತ ಕನ್ನಡದಲ್ಲಿ ಹಾಕುತ್ತಿರುತ್ತೇನೆ.)
ಧನ್ಯವಾದ ಶ್ರೀ ಹರ್ಷ 🙂 ನಾನು ನಿಮ್ಮ facebook ಅಕೌಂಟ್ ನ ಫಾಲ್ಲೌ ಮಾಡ್ತೀನಿ
ಗೌರವಾನ್ವಿತ ಶ್ರೀಹರ್ಷರಿಗೆ ನಮಸ್ತೆ,
ನಿಮ್ಮ ಸಲಹೆ ತುಂಬಾ ಉಪಯುಕ್ತವಾಗಿದೆ.ನೀವು ಪ್ರಕಟಿಸುವ ಉದ್ಯೋಗಾವಕಾಶಗಳನ್ನು ಗಮನಿಸಿದ್ದೇನೆ. ಪವನ್ ಅದನ್ನು ಅನುಸರಿಸುವುದು ಉತ್ತಮ. ನಾನು ಆಪ್ರೀಕಾದ ಕ್ಯಾಮರೂನಿನಲ್ಲಿದ್ದೇನೆ. ಇಲ್ಲಿಯ ಕೆಲಸಕಾಗಿ ಮುಂಬೈನಲ್ಲಿ ಒಂದೂವರೆ ವರ್ಷಗಳ ಕಾಲ ಹರ ಸಾಹಸ ಪಟ್ಟೆ.ಬಿ.ಕಾಂ ಪದವಿ, ಎಂಟು ವರ್ಷಗಳ ಅಕೌಂಟೆನ್ಸಿ ಅನುಭವಿದ್ದರೂ, ನನಗೆ ಸಿಕ್ಕಿದ್ದು, ಕನ್ಸಲ್ಟೇನ್ಸಿಗೆ ೩೦,೦೦೦ ರೂಪಾಯಿ ಕೊಟ್ಟು ತಿಂಗಳ ೧೫,೦೦೦ ಭಾರತದ ಹಣಕ್ಕೆ ಸರಿಹೊಂದುವ ಕೆಲಸ ಸಿಕ್ಕಿತು.ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿತ.ಇರುವ ಸಂಸಾರ, ಸಂತೋಷ ಎಲ್ಲವನ್ನೂ ತೊರೆದ ನನಗೆ ಸಿಗುತ್ತಿರುವುದು ಈ ಸಂಭಳ. ಉಪ ಸಂಪಾದಕನಾಗಿ ಹತ್ತು ವರ್ಷಗಳ ಕಾಲ ದುಡಿದೆ. ತಿಂಗಳಿಗೆ ೨,೦೦೦ ಸಾವಿರ ಕೊಟ್ಟು ಕೈ ತೊಳೆದು ಕೊಳ್ಳುತ್ತಿದ್ದರು ನಮ್ಮ ಕನ್ನಡ ದಿನಪತ್ರಿಕೆಗಳ ಸಂಪಾದಕರುಗಳು. ಈಗಲೂ ಕಷ್ಟಗಳು ನಿವಾರಣೆಯಾಗಿಲ್ಲ ನೋಡಿ. ಕೆಲಸಕ್ಕಾಗಿ ಕಳೆದ ಎಂಟು ತಿಂಗಳಿನಿಂದ ನೈಜಿರಿಯಾ, ಘಾನ, ಮುಂತಾದ ರಾಷ್ಟ್ರಗಳಲ್ಲಿ ನೌಕ್ರಿ ಡಾಟ್ ಕಾಂ. ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ. ಯಾವುದು ಬರುತ್ತಿಲ್ಲ.
ಮಾನ್ಯ ಪವನ್‍ರವರಿಗೆ ನನ್ನ ಸಲಹೆ, ಕರ್ನಾಟಕದಲ್ಲಿಯೇ ಉತ್ತಮ ಉದ್ಯೋಗ ಹುಡುಕಿ ತಂದೆ-ತಾಯಿ ಜೊತೆಯಲ್ಲಿಯೇ ಬದುಕು ಕಂಡುಕೊಳ್ಳುವುದು ಚೆಂದ. ಇದು ನನ್ನ ಅನುಭವದ ಮಾತು.
ನಿಮ್ಮಂತಹ ಹೃದಯವಂತರಿಂದ ಹಲವು ಕನ್ನಡದ ಗೆಳೆಯ- ಗೆಳತಿಯರು ಬದುಕು ಉತ್ತಮವಾಗಲಿ ಎಂದು ಹಾರೈಸುತ್ತೇನೆ.
Ravi,
There are plenty of openings for accountancy. Even freshers are getting Rs.18k PM salary in companies like Wipro. CA s, auditing firms, Educational institutions, PSUs are having huge requirements for genuine accountants. Skills have lot of value in today’s Market.
The reason you may not be getting the calls is that you are staying in a remote country and many companies don’t have telephone packages to call those countries. Even consultancies can not reach you.
There are openings in Internet sections of daily papers like KP and parsers for online news portals like Thatskannada etc where packages start with 8K to 10K per month.
There are openings for IT recruiters, Payroll managers, Financial analysts in IT industry. If not all you can be a freelance auditor! If you could send me your resume I will try to get you few references here. (you are in my facebook friend list. Please get id from there, I don’t want to spam here)
Thanks for calling me “Gouravanvita”, I afraid even though I don’t think so about myself. 🙂
ಶ್ರೀ ಪವನರವರೇ, ಲೇಖನ ಚೆನ್ನಾಗಿದೆ. ಸ್ವಂತ ಅನುಭವವನ್ನೆ ರಸವತ್ತಾಗಿ ಬರೆದಿದ್ದೀರಿ. ಒಬ್ಬ ವಿದ್ಯಾವಂತ ನಿರುದ್ಯೋಗಿಯ ಮನಸಿಕ ತೊಳಲಾಟ, ಸಂದರ್ಶನದಲ್ಲಿ ನಮ್ಮದಲ್ಲದ ತಪ್ಪಿನಿಂದ ಆಗುವ ಅವಮಾನ, ತಂದೆ, ತಾಯಂದಿರ ಮೊದಲಿಕೆ,ಖರ್ಚಿಗೆ ಕಾಸಿಲ್ಲದೆ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವ ಪರಿ. ಯಾವುದಾದರೂ ಕೆಲಸ ಸಿಗುವುದೇನೋ ಎನ್ನುವ ಗಾಢವಾದ ನಿರೀಕ್ಷೆ. ಇವುಗಳಲ್ಲೇ ಅರ್ಧ ಆಯುಷ್ಯ ಮುಗಿದಿರುತ್ತದೆ. ಏನಾದರೂ ಲೇಖನವಂತೂ ಚೆನ್ನಾಗಿದೆ. ನಿಮ್ಮ ವಿಧ್ವತ್ತಿಗೆ ತಕ್ಕ ಫಲದೊರೆತು. ಒಳ್ಳೆಯ ಕೆಲಸ ಸಿಕ್ಕಿ ಇದೇ ಅಂಕಣದಲ್ಲಿ ಓದುಗರಾದ ನಾವು ಓದುವಂತಾಗಲೆಂದು ಹರೈಸುತ್ತೇನೆ. ವಂದನೆಗಳೊಡನೆ.
ಧನ್ಯವಾದ ನಂಜುಂಡಣ್ಣ ಶ್ರೀ ಕಾರ ಜೊತೆಯಲ್ಲಿ ಸೇರಿಸಿಕೊಳೋ ಅಷ್ಟು ದೊಡ್ಡವ ನಾನಲ್ಲ 🙂 ನಿಮ್ಮ ಆಶಿರ್ವಾದದಂತೆ ಕೆಲಸ ಸಿಕ್ಕಿದ ಮೇಲೆ ಕೆಲಸದ ಅನುಭವಗಳನ್ನು ಹಂಚಿಕೊಳ್ಳುತ್ತೇನೆ 🙂