ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ
– ಪವನ್ ಪರುಪತ್ತೆದಾರ್
ಮೊದಲಿಗೆ ನಿಲುಮೆಯ ಎಲ್ಲ ಓದುಗರಿಗೆ ಸ್ವಾತಂತ್ರ್ಯದಿನದ ಶುಭಾಶಯಗಳು. ೬೫ ನೆ ಸ್ವತಂತ್ರ ದಿನದ ಆಚರಣೆ ಎಲ್ಲ ಕಡೆ ಭರ್ಜರಿಯಿಂದ ಸಾಗಲಿ ಎಂದು ಆಶಿಸೋಣ. ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿದ ವಿಷಯ ನಮಗೆಲ್ಲ ತಿಳಿದಿದ್ದೆ. ಇಂದು ನಮಗೆ ಅ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಸಿಕ್ಕಿದೆಯೆಂದರೆ ನಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸುವ ಮಟ್ಟಿಗೆ ಸಿಕ್ಕಿದೆ. ನಾ ಬೇಕಾದರೆ ಬಾಜಿ ಕಟ್ಟುತ್ತೇನೆ ನಾಳಿನ ಪೇಪರ್ ನೋಡಿ ನಮ್ಮ ರಾಜ್ಯದಲ್ಲೇ ಒಂದೆರಡು ಕಡೆಯಾದರು ಧ್ವಜವನ್ನು ಉಲ್ಟಾ ಹಾರಿಸಿರುತ್ತಾರೆ. ಬ್ರಿಟಿಷರ ದಬ್ಬಾಳಿಕೆ ಹದ್ದು ಮೀರಿದಾಗ ಹಿಂಸೆಯ ನಾನಾ ಮಾರ್ಗಗಳು ಪ್ರಯೋಗಿಸಿ ಹುತಾತ್ಮರಾದವರು, ನಂತರ ದೇಶವನ್ನೆಲ್ಲ ಒಟ್ಟಿಗೆ ಸಂಘಟಿಸಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಾಧ್ಯ ಎಂದು ತೋರಿಸಿಕೊಟ್ಟು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮರು, ನಮ್ಮ ಈಗಿನ ಸ್ವಾತಂತ್ರ್ಯವನ್ನೇನಾದರು ನೋಡಿದ್ದರೆ, ಇವರಿಗೆ ಯಾಕಾದ್ರು ಸ್ವಾತಂತ್ರ್ಯ ಕೊಡಿಸಿದೆವೋ ಎಂದು ಮರುಗುತಿದ್ದರೆನೋ…..
ನನ್ನ ಮಾತುಗಳು ಅತಿಶಯೋಕ್ತಿ ಎನಿಸಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲರಿಗು ಎಷ್ಟು ಸ್ವಾತಂತ್ರ್ಯವಿದೆ ಅಂತ ನಿಮಗೆ ಗೊತ್ತು. ಟ್ರಾಫಿಕ್ ಪೋಲಿಸ್ ಡಾಕುಮೆಂಟ್ ಸರಿ ಇದ್ದರು ಲಂಚ ಪಡೆಯುವ ಸ್ವಾತಂತ್ರ್ಯ, ಖಾತೆ ಬದಲಾವಣೆ ಮಾಡಿಸಬೇಕಾದರೆ ಪತ್ರ ಸ್ಕಾನ್ನಿಂಗ್ ಮಾಡುವನಿಂದ ಹಿಡಿದು, ಮೊಹರು ಹಾಕುವ ಗುಮಸ್ತನಿಂದ ಹಿಡಿದು, revinue inspector ತನಕ ಲಂಚ ಪಡೆಯುವ ಸ್ವಾತಂತ್ರ್ಯ. ಗೆದ್ದೊಡನೆ ತಮ್ಮ ಕ್ಷೇತ್ರದ ಜನತೆಯನ್ನು ಮರೆತು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಸ್ವಾತಂತ್ರ್ಯ, ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷಾಂತರ ಮಾಡುವ ಸ್ವಾತಂತ್ರ್ಯ, ರೈತನ ಜಮೀನನ್ನು ಕಸಿದು ಅಧುನಿಕರಣದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸ್ವಾತಂತ್ರ್ಯ, ನಮ್ಮ ಭೂಮಿಯ ಸಂಪತ್ತಲ್ಲದೆ ಅಂತರಂಗದಲ್ಲಿರುವ ತರಂಗಾಂತರಗಳನ್ನು ಮೋಸದಿಂದ ಮಾರುವ ಸ್ವಾತಂತ್ರ್ಯ, ಇನ್ನು ತಮಾಷೆಯೆಂದರೆ ತಪ್ಪು ಮಾಡಿ ದುಷ್ಕ್ರುತ್ಯಗಳನ್ನೆಸಗಿ ವಾರ್ಷಿಕ ೧೧ ಕೋಟಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿಸಿಕೊಳ್ಳೋ ಸ್ವಾತಂತ್ರ್ಯ ಮತ್ತು ತಪ್ಪಿತಸ್ತ ಎಂದು ಖಾತರಿಯಾದ ಮೇಲು ಶಿಕ್ಷೆ ಇಲ್ಲದೆ ಐಶಾರಾಮಿ ಜೀವನ ನಡೆಸುವ ಸ್ವಾತಂತ್ರ್ಯ, ಇಂತಹದ್ದೆನ್ನಲ್ಲ ವಿರೋಧಿಸಿದರೆ ವಿರೋಧಿಸಿದವರ ವಿರುದ್ದವೇ ಕೇಸು ಜಡಿಯುವ ಸ್ವಾತಂತ್ರ್ಯ.ಆಹಾ ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಸ್ವಾತಂತ್ರ್ಯಗಳು ಸಿಗುತ್ತವೆ.
ಇಂತಹ ಸ್ವಾತಂತ್ರ್ಯವನ್ನು ನೋಡಿದ ಮೇಲೆ ನಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಡಿದ ನಾಯಕರಿಗೆ ಸಂತೋಷವಗುತ್ತ? ಖಂಡಿತ ಇಲ್ಲ ಯಾರೋ ಒಬ್ಬ ಬ್ರಿಟಿಷ್ ವ್ಯಕ್ತಿ ಹೇಳಿದ್ದನಂತೆ ಭಾರತೀಯರಿಗೆ ಅಳಿ ಅಭ್ಯಾಸವಿಲ್ಲ ಇನ್ನೊಬ್ಬರ ಅಡಿಯಲ್ಲಿದ್ದೆ ಅಭ್ಯಾಸ ಎಂದು. ನಮ್ಮ ಈಗಿನ ನಾಯಕರು ಹೀಗೆ ಭ್ರಷ್ಟರಾಗೆ ಇದ್ದರೆ ಅ ದಿನ ದೂರವಲ್ಲ ಎನಿಸುತ್ತದೆ. ನಮ್ಮ ಹಿರಿಯರು ಕಷ್ಟ ಪಟ್ಟು ನಮಗೆ ಕೊಟ್ಟ ಈ ಸ್ವಾತಂತ್ಯ ಎಂಬ ಉಡುಗೊರೆ ಮತ್ತೆ ನಮ್ಮ ಕೈ ತಪ್ಪಿ ಹೋಗಬಹುದಾದೀತು. ಈಗಾಗಲೇ ನಮ್ಮ ಅಂತರಿಕ ವಿಷಯಗಳಲ್ಲಿ ಬೇರೆ ದೇಶಗಳು ಮುಗು ತೂರಿಸುವ ಎಷ್ಟೋ ಪ್ರಯತ್ನಗಳು ನಡೆದಿವೆ. ನಮ್ಮ ಬೆಳವಣಿಗೆ ಬಹಳ ದೇಶಗಳ ಹೊಟ್ಟೆ ಉರಿಸಿದೆ ಪಕ್ಕದಲ್ಲಿರುವ ಪಾಕಿಸ್ತಾನ ಚೀನಾಗಂತೂ ದಯದಿ ಮತ್ಸರ ನಮ್ಮ ಮೇಲೆ.
ಇಂತಹ ಒಂದು ರಾಷ್ಟೀಯ ಹಬ್ಬದ ಸಮಯದಲ್ಲಿ ನಾವು ಬ್ರಷ್ಟಚಾರದ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸೋಣ. ಲಂಚ ಕೊಡುವುದನ್ನು ನಿಲ್ಲಿಸೋಣ. ಭ್ರಷ್ಟಚಾರಿಗಳನ್ನು ಅಸಮರ್ಥರನ್ನು ಆಯ್ಕೆ ಮಾಡುವುದು ಬೇಡ. ಭ್ರಷ್ಟರ ವಿರುದ್ಧ ನಮ್ಮಿಂದ ಹೋರಾಡಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಹೋರಾಡುವವರಿಗಾದರು ಬೆಂಬಲಿಸೋಣ. ಆದಷ್ಟು ನಮ್ಮತನವನ್ನು ನಾವು ರೂಡಿಸಿಕೊಳ್ಳೋಣ ನಮ್ಮ ಸಂಸ್ಕೃತಿ, ನಮ್ಮ ದೇಶ, ಎಂಬ ಒಲವು ನಮ್ಮಲ್ಲಿ ಮೂಡಲಿ ಪ್ರಪಂಚದಲ್ಲೇ ಅತ್ಯಂತ ಒಳ್ಳೆ ಸಂಸ್ಕೃತಿ ಇರುವ ನಾವು ಯಾಕೆ ಪಾಶ್ಚಾತ್ಯ ಸಂಸ್ಕೃತಿಯ ದಾಸರಗಾಬೇಕು?? ಇಲ್ಲವಾದಲ್ಲಿ ನಮ್ಮ ಮೊಮ್ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಶುರು ಮಾಡಬೇಕಾಗುವುದೇನೋ ನಮ್ಮ ಸಿದ್ಧಲಿಂಗಯ್ಯನವರ ಪದ್ಯ ಹಾಡುತ….
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
***********************************************************************
ಚಿತ್ರಕೃಪ: zabrigraphics.com





ಮಾನ್ಯರೇ, ನೀವು ಹೇಳಿದ್ದೆಲ್ಲಾ ಸರಿ. ಆದರೆ ನಾವು ಹೇಗಿದ್ದೇವೆ ಎಂದರೆ, ನಮ್ಮ ದೇಶದಲ್ಲಿ ಯಾರೇ ಆದರೂ ಬ್ರಷ್ಟಚಾರ ಮಾಡುವವರೆಗೆ ಸುಮ್ಮನಿರುತ್ತೇವೆ. ತಿನ್ನುವವರೆಗೆ ಸುಮ್ಮನಿರುತ್ತೇವೆ. ತಿಂದ ನಂತರ ತಿಂದರು ಎಂದು ಬೊಬ್ಬೆ ಹೊಡೆಯುತ್ತೇವೆ. ಪತ್ರಿಕೆಯಲ್ಲಿ ಬರೆಯುತ್ತೇವೆ. ಓದುತ್ತೇವೆ. ಆದರೂ ಅದನ್ನು ತಡೆಯಲು ಯಾರು ಪ್ರಯತ್ನಿಸುವುದಿಲ್ಲ. ಕೊನೆಗಾದರೂ ಇಂತಹವನ್ನೆಲ್ಲ ಸುದ್ದಿ ಮಾಧ್ಯಮ ದೃಷ್ಯ ಮಾಧ್ಯಮಗಳಲ್ಲಿ ಚರ್ಚಿಸುವ, ಸ್ವಾತಂತ್ರ್ಯವಾದರೂ ಸಿಕ್ಕಿತಲ್ಲ. ಇದಕ್ಕಾದರೂ ಸಂತೋಷ ಪಟ್ಟುಕೊಳಬಹುದಷ್ಟೆ.
ನಿಮ್ಮ ಕಾಳಜಿಗೆ ಧನ್ಯವಾದ ನಂಜುಂಡಣ್ಣ, ಭ್ರಷ್ಟಾಚಾರ ನಿರ್ಮೂಲನೆ ನಮ್ಮಂಥ ಯುವಕರಿಂದ ಮಾತ್ರ ಸಾಧ್ಯ ಪ್ರಯತ್ನಿಸೋಣ, ಅದರ ನಿರ್ಮೂಲನೆಗೆ ನಮ್ಮಿಂದ ೧೦ ಪೈಸೆ ಅಷ್ಟಾದರೂ ಸಹಾಯವಾಗಲಿ