`ಆವರಣ’ ಹಿಂದಿಗೆ
-ಕಾಲಂ ೯
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಕ್ಸಿತಕ್ಕೆ ಆವರಣ ಹೋದ ಸುದ್ದಿ ಇತ್ತು.
ಮುಸ್ಲಿಂ ನವಾಬರ ‘ಜನಾನ’ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಶದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.
ಮೂಲಕಥೆ ಉತ್ತರಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ| ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.
ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಧಾನ ತಂದಿಲ್ಲ.
ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.
**********





ತುಂಬಾ ಒಳ್ಳೆಯ ಸುದ್ದಿ ಸರ್… ಎಸ್ ಎಲ್ ಭೈರಪ್ಪ ನವರಿಗೆ ಸರಿಸಾಟಿ ಆಗುವ ಮತ್ತೊಬ್ಬ ಲೇಖಕರಿಲ್ಲ…ಈ ಡೋಂಗಿ ಬುದ್ದಿಜೀವಿಗಳಿಗೆ ಸರಿಯಾದ ಚಾಟಿನೆ ಬಿಸಿದಾರೆ…
Soooper sir
ಆವರಣ ನಿಜವಾಗಿಯೂ ಉತ್ತಮ ಕಾದಂಬರಿ. ಹಾಗೆಯೋ ಅಂತಹ ಕೃತಿಗಳನ್ನು ಅನುವಾದ ಮಾಡುವುದು ಸುಲಭ ಸಾಧ್ಯವಲ್ಲ. ಸಂಸ್ಕ್ರೃತಕ್ಕೆ ಯಾರು ಅನುವಾದ ಮಾಡಿದ್ದು??
ನಮಸ್ಕಾರ ಬಿಂದು….ಆವರಣ ಕಾದಂಬರಿ ಅನ್ನು ಸಂಸ್ಕೃತಕ್ಕೆ “Dr. H. R. Vishwasa” ಅನುವಾದ ಮಾಡಿದಾರೆ…
Thanks Kumar,
ನಿಮ್ಮ ಉತ್ತರವನ್ನು ಇಂದು ನೋಡಿದೆ!
ನಿಜಕ್ಕೂ H R ವಿಶ್ವಾಸ great. ಆವರಣ ಇನ್ನೂ english ಗೆ ಅನುವಾದವಾಗಿಲ್ಲವೇ? ಹಾಗಿದ್ದಲ್ಲಿ ನಾನು ಪ್ರಯತ್ನಿಸಬಹುದು. 🙂
One of the Great book …. Our So called socailist Must and Should Need to read it.