ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2011

7

ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!

‍ನಿಲುಮೆ ಮೂಲಕ

– ಮಹೇಶ್ ರುದ್ರಗೌಡರ್

ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.

 ಹುರುಳಿಲ್ಲದ ವಾದ.!

ಈ ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.!

ಅರ್ಥವಾಗದ ಕನ್ನಡತನ.!

ಇಷ್ಟಕ್ಕೂ ಡಬ್ಬಿಂಗ್ ವಿಶಯ ಬಂದಾಗ ಕನ್ನಡವನ್ನು ಮುಂದೆ ಮಾಡಿ ವಾದ ಮಾಡುವವರು, ಅನೇಕ ಕನ್ನಡ ವಾಹಿನಿಯಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುವುದು, ಆ ಹಾಡಿಗೆ ಕುಣಿಯುವುದು ನಡೆದಾಗ ಯಾವ ಲೋಕದಲ್ಲಿದ್ದರು,? ಅದು ಅವರಿಗೆ ಕನ್ನಡ ವಿರೋದಿಯಾಗಿ ಕಾಣಲಿಲ್ಲವೇ.? ಆ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗಿದ್ದು ಇದೇ ಕಲಾವಿದರಲ್ಲವೇ.? ನೀರಾವರಿ, ಶಾಸ್ತ್ರೀಯ ಬಾಶೆ ಸ್ಥಾನಮಾನ ಹೀಗೆ ಅನೇಕ ವಿಶಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ದ್ವನಿಗೂಡಿಸದ ಇವರ ಕನ್ನಡತನ ಆಗ ಎಲ್ಲಿತ್ತು.? ಮೊನ್ನೆ ನಡೆದ ಕನ್ನಡ ಚಲನಚಿತ್ರ ಪ್ರಶಸ್ತಿ ಸಮಾರಂಬದಲ್ಲಿ ಮೂರು ಬಿಟ್ಟವರಂತೆ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದಾಗ ಎಲ್ಲಿ ಅಡಗಿತ್ತು ಇವರ ಕನ್ನಡ ಸ್ವಾಭಿಮಾನ.? ಡಬ್ಬಿಂಗ್ ವಿರೋದಿಯಂತಹ ನಿಲುವಿನಿಂದಾಗಿಯೇ ಇವತ್ತು ವಿಜ್ಞಾನ (ಡಿಸ್ಕವರಿ, ನ್ಯಾಟ್ ಜಿಯೊ,ಅನಿಮಲ್ ಪ್ಲಾನೇಟ್), ಕಾರ್ಟೂನ್ (ಪೊಗೊ, ಡಿಸ್ನಿ, ಕಾರ್ಟೂನ್ ನೆಟವರ್ಕ್) ತರಹದ ವಿಶಯಗಳು ಕನ್ನಡದ ಮಕ್ಕಳಿಗೆ ಆಡುವ ನುಡಿಯಲ್ಲಿ ದೊರಕದೇ ಅವರು ಅವಕಾಶ ವಂಚಿತರಾಗುತ್ತಿರುವುದು. ಹೋಗಲಿ, ಡಬ್ಬಿಂಗ್ ಬಗ್ಗೆ ಇಶ್ಟೊಂದು ಕಿಡಿ ಕಾರುವ ಇವರು ಇಂಗ್ಲೀಶ್ ಚಿತ್ರ ತೆಲುಗಿಗೆ, ಹಿಂದಿಗೆ ಡಬ್ ಆಗಿ ರಾಜ್ಯದಾದ್ಯಂತ ಓಡುತ್ತ ಇದೆ, ಇದು ಹೇಗೆ ಅವರ ಕಣ್ಣಿಗೆ ಕಾಣಲಿಲ್ಲ.! ಹಿಂದಿ ಸಿಂಗಂ ಚಿತ್ರದಲ್ಲಿ ಕನ್ನಡಿಗರ ಮೇಲೆ ಜನಾಂಗೀಯ ನಿಂದನೆ ನಡೆದಾಗ ಈಗ ಪ್ರತಿಭಟನೆ ಮಾಡಿದವರಲ್ಲಿ ಎಶ್ಟು ಜನ ಬೀದಿಗಿಳಿದಿದ್ದರು.? ಓಟ್ಟಾರೆ ಏನಾದ್ರು ಆಗಲಿ, ಯಾವುದೇ ಮನರಂಜನೆ ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ವಾದದಲ್ಲಿ ಅಡಗಿರೋದು ಕನ್ನಡದ ಹಿತಾಸಕ್ತಿಯೋ, ಸ್ವಹಿತಾಸಕ್ತಿಯೋ ಎಂಬುದು ಅರ್ಥವಾಗದ ಸಂಗತಿಯೇನಲ್ಲ.!

ಒಟ್ಟಿನಲ್ಲಿ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಜೀ ಟಿವಿಯವರು ದಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಿದ್ದಾರೆ. ಜಾನ್ಸಿ ರಾಣಿ ದಾರಾವಾಹಿ ಹಿಂದಿಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದರೆ ದ್ವನಿ ಎತ್ತಬೇಕು. ಕನ್ನಡದಲ್ಲೇ ಪ್ರಸಾರ ಆಗುತ್ತಿರುವಾಗ ಅದರಲ್ಲಿ ತಪ್ಪೇನಿದೆ..? ಅದು ತಪ್ಪು ಅಂತ ಸಮರ್ಥಿಸಲು ಅವಕಾಶಗಳೇ ಇಲ್ಲ. ಅದನ್ನು ತಪ್ಪು ಅನ್ನುವವರ ವಾದವೇ ತಪ್ಪು. ತಮ್ಮ ಹೊಟ್ಟೆಪಾಡು ಎಂದು ಹೇಳುವ ಕಲಾವಿದರು ಆ ಹೊಟ್ಟೆಪಾಡಿಗೆ ಕಾರಣನಾದ ಅನ್ನದಾತನಿಗೆ ತನ್ನ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳಲು ಬಿಡದೇ ವಂಚಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಉದ್ದಿಮೆ ಅವಲಂಬಿತವಾಗಿರುವುದು ಗ್ರಾಹಕನ ಮೇಲೆನೇ. ಮನರಂಜನೆ ಉದ್ದಿಮೆ ಅಂತ ನೋಡಿದರೆ ನಮಗೆ ಕಾಣುವುದು ಗ್ರಾಹಕ, ಟಿವಿ ಮಾಲೀಕ, ಜಾಹೀರಾತುದಾರ ಮತ್ತು ಸರಕು ಪೂರೈಕೆದಾರ. ಇಲ್ಲಿ ಇತರ ಮೂವರೂ ಅವಲಂಬಿತವಾಗಿರುವುದು ಗ್ರಾಹಕನ ಮೇಲೆ. ಹೀಗಾಗಿ ಗ್ರಾಹಕನನ್ನು ಯಾರೋ ಸರಕು ಪೂರೈಕೆದಾರರು ನಿಯಂತ್ರಿಸುವುದು ಬಾಲವೇ ನಾಯಿನ ಅಲ್ಲಾಡಿಸಿದಂತೆ ಆಗುತ್ತದೆ. ಒಂದು ಕಡೆ ಸ್ವಾತಂತ್ರ್ಯ ಬಂದಿದೆ ಅಂತ ಆಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಗ್ರಾಹಕನನ್ನು ನಿಯಂತ್ರಿಸಲು ಕೆಲವರು ಹೊರಟಿರುವುದು ಸಂವಿದಾನ ವಿರೋದಿ ನಡೆಯಾಗಿದೆ.

7 ಟಿಪ್ಪಣಿಗಳು Post a comment
  1. Nanjunda Raju's avatar
    ಆಗಸ್ಟ್ 18 2011

    ಮಾನ್ಯರೇ, ಕನ್ನಡ ಅಭಿಮಾನಿಗಳೆಂದು ಹೇಳಿಕೊಂಡು, ಕನ್ನಡಿಗರಿಗೆ ಕನ್ನಡ ಬೆಳೆಯಲು ಬಿಡದೇ ಏನೋ ಕಾರಣ ಹೇಳಿಕೊಂಡು ಕನ್ನಡದ ಕುತ್ತಿಗೆ ಹಿಸುಕುತ್ತಿದ್ದಾರೆ. ಒಟ್ಟಿನಲ್ಲಿ ಇದೊಂದು ಒಳ್ಳೆಯ ಲೇಖನ. ಒಂದು ರೀತಿಯಲ್ಲಿ ಕನ್ನಡ ಬೆಳವಣಿಗೆಗೆ ಇದೊಂದು ಮಾರಕ ಹೋರಾಟ. ಸ್ವಾಭಿಮಾನಿಗಳಾದ ನಾವು ಕನ್ನಡ ಬಿಟ್ಟು ಬೇರೆ ಭಾಷೆ ನೋಡುವುದಿಲ್ಲ. ಆದರೆ ಮಕ್ಕಳಿಗೆ ಇತಿಹಾಸದ ಆಸಕ್ತರಿಗೆ ಈ ಕಥೆ ನೋಡಬೇಕೆಂದರೆ, ಬೇರೆ ಭಾಷೆಯ ಛಾನಲ್ ನೋಡುವುದು ಅನಿವಾರ್ಯ. ಹೋಗಲಿ ಬಿಡಿ ಹಂತಹಂತವಾಗಿ ಕನ್ನಡಿಗರು ಕನ್ನಡ ಮರೆಯಲಿ, ನೆರೆ ಭಾಷೆಗಳನ್ನು ಈ ರೀತಿಯಿಂದಲಾದರು ಕಲಿಯಲಿ. ಒಂದು ರೀತಿಯಲ್ಲಿ ಯೋಚಿಸಿದರೆ.ಇಂತಹ ಹೋರಾಟಗಾರರಿಗೆ ಯಾರು ಕೇಳುವವರೇ ಇಲ್ಲವೇನೋ ಎನಿಸುತ್ತದೆ. ಈ ಹೋರಾಟದಿಂದ ಕನ್ನಡಿಗರನ್ನು ಕತ್ತಲ್ಲಲ್ಲಿ ಇಟ್ಟಂತಾಗಿದೆ, ಅದೇ ಬೇರೆ ಭಾಷೆಗಳಲ್ಲಿ ಇಡೀ ಛಾನಲ್ ಗಳನ್ನು ಅವರವರ ಭಾಷೆಗೆ ಡಬ್ ಮಾಡಿಕೊಳ್ಳುತ್ತಿದ್ದಾರೆ. ಉದಾಹರಣೆಗೆ: ಡಿಸ್ಕವರಿ, ಅನಿಮಲ್ ಪ್ಲಾನೆಟ್, ಕೌನ್ ಬನೇಗ ಕರೋಡ್ ಪತಿ ಆದರೂ ಅವರ ಭಾಷೆಗಳು ಸತ್ತಿಲ್ಲ. ಮತ್ತು ಬೆಳೆಯದೇ ನಿಂತಿಲ್ಲ. ಏನಾದರೂ ಡಬ್ಬಿಂಗ್ ವಿರೋಧಿಗಳ ಹೋರಾಟ ನ್ಯಾಯವಲ್ಲ.

    ಉತ್ತರ
  2. anantharaju's avatar
    anantharaju
    ಆಗಸ್ಟ್ 18 2011

    http://thatskannada.oneindia.in/movies/tv/2011/08/17-jhansi-rani-serial-dub-zee-kannada-viewers-demand-aid0039.html

    ಈ ಲೇಖನ ನಿನ್ನೆ thatskannada.oneindia.in ದಲ್ಲಿ ಪ್ರಕಟವಾಗಿತ್ತು.

    ಉತ್ತರ
  3. ಶ್ರೀಕರ್'s avatar
    ಶ್ರೀಕರ್
    ಆಗಸ್ಟ್ 18 2011

    ನನಗನ್ನಿಸುವ ಪ್ರಕಾರ ಡಬ್ಬಿಂಗ್ ಮಾಡಬಾರದು ಎಂದು ಬಾಯಿಮಾತಿನಲ್ಲಿ ಇದೆ. ಎಲ್ಲೂ ಶಾಸನವಿಲ್ಲ. ಯಾರಾದರು ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ‘ಯಾಕೆ ಇಲ್ಲ’ ? ಎಂದು ಮೊಕದ್ದಮೆ ಹೂಡಿದರೆ ಏನಾಗಬಹುದು ?

    ಉತ್ತರ
  4. pavan's avatar
    ಆಗಸ್ಟ್ 18 2011

    kailagadavanu mai parachi kondanatte hagaituu namma kirutereyavara kate

    ಉತ್ತರ
  5. pavan's avatar
    ಆಗಸ್ಟ್ 18 2011

    kailagadavanu maai parachikondanatte hagaitu namma kannada kirutereyavara kate

    ಉತ್ತರ
  6. bindu's avatar
    ಆಗಸ್ಟ್ 18 2011

    ನಾನು ಹೈದರಾಬಾದ್ ಗೆ ಬಂದು ಎರಡು ವರ್ಷವಾಯಿತು, ಇಲ್ಲಿನ ಚಾನಲ್ ಗಳನ್ನು ನೋಡುತ್ತಿದ್ದರೆ ತೆಲುಗಿನವರಿಗಿರುವಷ್ತು ಭಾಷಾಪ್ರೇಮ, ನಮ್ಮ ಜನರು ಎಲ್ಲಾ ಉತ್ತಮ ಚಿತ್ರಗಳನ್ನೂ ತೆಲುಗಿನಲ್ಲಿ ನೋಡಿ ಆನಂದಿಸಲಿ ಎಂಬ ಮನಸ್ಸು ಕನ್ನಡಿಗರಿಗಿಲ್ಲವಲ್ಲ ಎನಿಸುತ್ತಿತ್ತು. cartoon network, pogo ಇತ್ಯಾದಿ ಎಲ್ಲಾ ವಾಹಿನಿಗಳೂ ಇಲ್ಲಿ ತೆಲುಗಿನಲ್ಲಿ ಬರುತ್ತವೆ!! ಅಂದರೆ ಇಲ್ಲಿನ ಮಕ್ಕಳು spiderman, harry potter ಇತ್ಯಾದಿ ಚಿತ್ರಗಳನ್ನು ಹಿರಿಯರ ಸಹಾಯವಿಲ್ಲದೆ ಅರ್ಥಮಾಡಿಕೊಳ್ಳಬಹುದು. ಅದೇ ನಮ್ಮ ಮಕ್ಕಳು ಕರ್ನಾಟಕದಲ್ಲಿ ಅರ್ಥವಾಗದೇ ಸುಮ್ಮನೆ ನೋಡುತ್ತಾರೆ, ನಂತರ ಆಂಗ್ಲಭಾಷೆಯಲ್ಲೇ ಹೆಚ್ಚು ಆಸಕ್ತರಾಗುತ್ತಾರೆ.

    ಬಾಲಿಕಾವಧು (colors), ಹಾಗೇ ಎಷ್ಟೋ ಕನ್ನಡದ ಚಿತ್ರಗಳು, ಧಾರಾವಾಹಿಗಳು ಇಲ್ಲಿ ತೆಲುಗಿನಲ್ಲಿ ಪ್ರಸಾರವಾಗುತ್ತವೆ, ಹಾಗಾಗಿ ಅಕ್ಕ ಪಕ್ಕದವರು, ನಮಗೆ ನಿಮ್ಮ ಆ ನಟ ಇಷ್ತ, ಈ ನಟಿ ಗೊತ್ತು ಎಂದು ಹೇಳುತ್ತಾ ಇರುತ್ತಾರೆ.

    ಝಾನ್ಸಿ ರಾಣಿಯನ್ನು ಇಲ್ಲಿ ತೆಲುಗಿನಲ್ಲಿ ನಂತರ ಹಿಂದಿಯಲ್ಲಿ ನೋಡುತ್ತಿದ್ದೆ, ಕನ್ನಡದಲ್ಲೂ ಬರುತ್ತಿದೆ ಎಂದರೆ ನಿಜವಾಗಿಯೂ ಸಂತೋಷಪಡುವ ವಿಷಯ. ಅಳುಮುಂಜಿ ಧಾರವಾಹಿಗಳನ್ನು ನೋಡುವ ಬದಲು ನಮ್ಮ ಝಾನ್ಸಿರಾಣಿ ಲಕ್ಶ್ಮೀಬಾಯಿಯ ಧಾರವಾಹಿ ನೋಡಿದರೆ ಜೀವನ ಉಧ್ದಾರವಾಗುತ್ತದೆ.

    ನಮ್ಮ ನಿರ್ದೇಶಕರುಗಳು, ನಿರ್ಮಾಪಕರು ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಇದನ್ನೂ ಮೀರಿಸಿದ ಧಾರವಾಹಿಯನ್ನು ತೆಗೆಯಲಿ, ಅದೂ ಎಲ್ಲಾ ಭಾಷೆಯಲ್ಲೂ ಡಬ್ ಆಗುತ್ತದೆ!

    ಜೈ ಹಿಂದ್, ಜೈ ಕನ್ನಡಾಂಬೆ.

    ಉತ್ತರ
  7. Kumar K's avatar
    Kumar K
    ಆಗಸ್ಟ್ 18 2011

    ಮಹೇಶ್, ನನಗೆ ನಿಮ್ಮ ವಾದ ಯಾ ಥರ ಸರಿ ಅಂತ ಗೊತ್ತಾಗತ ಇಲ್ಲ….ಅಲ್ಲ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಆದ್ರೆ ಅದರಿಂದ ಆ ಕರ್ಯಕೆಷ್ಟ್ರ ದಲ್ಲಿರುವರಿಗೆ ತೊಂದ್ರೆ ಆಗಲ್ಲ ಅಂತ ಹೇಗೆ ಹೇಳ್ತಿರಿ ನೀವು?….ನೀವು ಯಾರಾದ್ರೂ ಆ ರಂಗದಲ್ಲಿ ಇರೋವ್ರನ್ನ ವಿಚಾರಿಸಿದರ?…ಅವರ ವಿಚಾರ ಕೇಳಿದಿರಾ?…ಆ ರಂಗದಲ್ಲಿ ಇರೋವ್ರಿಗೆ ಗೊತ್ತು ಅದರಲ್ಲಿ ಏನು ತೊಂದ್ರೆ ಇದೆ ಅಂತ ಹೊರತು ಹೊರಗಡಿಯವರಿಗೆ ಅಲ್ಲ….
    ….ಕನ್ನಡ ಚಿತ್ರರಂಗದವರು ಕೆಲ ಹಿಂದಿ ಚಲನ ಚಿತ್ರೆಗಳಿಗೆ ಕುಣಿದರೆ ಏನ್ ತಪ್ಪು?….ಅದು ಅವರ ಇಷ್ಟ ಮತ್ತು ಅದು ಅವರ ಸ್ವಾತಂತ್ರ್ಯ….ಅದು ಬೇಡ ಅದು ಹೇಸಿಗೆ ತರತ್ತೆ ಅಂತ ಹೇಗೆ ಹೇಳ್ತಿರಿ?….ಈಗ ಅಣ್ಣ ಹಜಾರೆ ಆಂದೋಲನದಲ್ಲಿ ಭಾಗವಹಿಸಿದ ಎಲ್ಲ ಜನರು ಹಿಂದೂ ನಲ್ಲಿ “ಭಾರತ ಮಾತಾ ಕಿ ಜೈ” ,”ಅಣ್ಣ ತುಂ ಆಗೇ ಬಡೋ ಹಂ ತುಮ್ಹಾರೆ ಸಾಥ ಹೈ” ಅಂತ ಕರ್ನಾಟಕ ದಾದ್ಯಂತ ಎಲ್ಲ ಜನರು ಜಯಕಾರ ನಡೀತಾ ಇದೆ….ಸೊ ಹಾಗಂದ್ರೆ ಅವರು ಹಿಂದಿ ನಲ್ಲಿ ಹೇಳಿದ್ದು ಹೇಸಿಗೆ ನ? …ಕನ್ನಡ ದ ರಘು ದಿಕ್ಷಿತ ನವರು ಮುಂಬೈ ನಲ್ಲಿ ಶರೀಫ ರ ಕನ್ನಡ ಹಾಡನ್ನು ಪ್ರೊಗ್ರಾಮ್ ನಲ್ಲಿ ಮತ್ತು award ಕಾರ್ಯಕ್ರಮದಲ್ಲಿ ಹೇಳಿದಾರೆ?….ಸೊ ಅದನ್ನ ನಮ್ಮ ಶರೀಫರ ಹಾಡನ್ನು ಅವ್ರು ಬೇರೆಯವರಿಗೆ ಪರಿಚಯ ಮಾಡಿದರು ಅಂತ ತಿಳ್ಕೊಬೇಕು ಅಥವಾ ನೀವು ಹೇಳೋ ಥರ marati ಜನರು ಹೇಸಿಗೆ ಪಡಕೋ ಬೇಕ?….

    ಉತ್ತರ

Leave a reply to pavan ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments