ಈ ಎಡವಟ್ಟುಗಳು ಯಾಕೆ ಹೀಗೆ ಅಂತ?
– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.
ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.
ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.
೧. ಇಡೀ ದೇಸ ಅಣ್ಣಾ ಹೋರಟಕ್ಕೆ ನಿಂತಿದೆ ಅನ್ನೋದು ಸುಳ್ಳು, ಇವರಲ್ಲಿ ರೈತರು ಅವ್ರಾ? ಕೂಲಿ ಕಾರ್ಮಿಕರು ಅವ್ರಾ?
ಅಲ್ಲಾ ಕಣಣ್ಣೋ, ನಿಮ್ಮಂತೋರು ಸ್ವಾತಂತ್ರ್ಯ ಬರೋದಿಕ್ಕೆ ಮುಂಚೆ ಹುಟ್ಟಿದ್ದಿದ್ದರೆ ಇಂತ ಪ್ರಸ್ನೆ ಖಂಡಿತ ಕೇಳ್ತಿದಿದ್ದ್ರಿ. ಸ್ವಾತಂತ್ರ್ಯ ಕ್ಕೆ ಹೋರಾಟ ಮಾಡೋ ಜನರಲ್ಲಿ ಬಡವರು ಯಾರೂ ಇಲ್ಲ ಬರೀ ಸ್ರೀಮಂತ್ರೇ ತುಂಬಾ ಜನ ಅವ್ರೆ. ಬಡವರು ಎಲ್ಲಾ ಹೋರಾಟ ಮಾಡಾಕ್ಕೆ ಆದೀತಾ? ಹೋರಾಟ ಮಾಡಿದ್ರೆ ಹೊಟ್ಟೆಗೆ ಹಿಟ್ಟು ಕೊಡೋರ್ಯಾರು ಅಂತ ಕೇಳ್ತಿದ್ರಿ ಕಣಣ್ಣೋ!
ನಿಮ್ಮಂತ ಎಡವಟ್ಟು ಗಳು ಎಲ್ಲ ಕಾಲದಲ್ಲಿ ಇರೋರೆ. ಅವಾಗಿನ ಕಾಲದ್ದು ಒಂದು ಮಾತು ಇವಾಗ್ಲು ವೇ ಜನ ಮಾತಾಡ್ತಾರೆ. ಯಾರು ರಾಜ ಆದ್ರೇನು ಯಾರು ಮಂತ್ರಿ ಆದರೇನು ರಾಗಿ ಬೀಸೋದು ತಪ್ಪಲ್ಲ ಅಂತ. ಈ ಮಾತು ಎಲ್ಲ ಕಾಲಕ್ಕು ಒಪ್ಪುತ್ತೆ.
೨. ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ. ಅಣ್ಣಾ ಹಜಾರೆಯವರ ಜನಲೋಕಪಾಲ್ ಹಾಗು ಸರ್ಕಾರ ತರಲು ಹೊರಟಿರುವ ಲೋಕಪಾಲ್ ನಡುವೆ ಇರುವ ವ್ಯತ್ಯಾಸಗಳೂ ಅವರಿಗೆ ಗೊತ್ತಿಲ್ಲ
ನೀವು ಹೇಳೋದು ನೋಡಿದ್ರೆ ಎಲ್ಲ ಓದಿ ತಿಳ್ಕೊಂಡು ಪ್ರತಿಭಟನೆ ಮಾಡಿ ಅಂತಿದೀರಾ, ಎಲ್ಲ ಕಾನೂನುಗಳನ್ನು ಓದಿ ತಿಳ್ಕೋಂಡು ಕುಂತ್ಕಳ್ಳಕ್ಕೆ ನಮ್ಮ ಕೈಲಿ ಆಗ್ತದಾ ಬುದ್ದಿ. ಓದಿರೋ ಬುದ್ದಿವಂತರು ನಮ್ಮಂತ ಬಡವರ ಪರವಾಗಿ ಓದಿ ತಿಳ್ಕಂಡು ನಮ್ಮ ದೇಸದ ಜನಕ್ಕೆ ಯಾವುದು ಸರಿ ಯಾವುದು ಸರಿಯಲ್ಲ ಅಂತ ಹೇಳಿದ್ರೆ ಸಾಕಪ್ಪ. ಅಂಗೆ ನೋಡಿದ್ರೆ ನ್ಯಾ.ಸಂತೋಷ್ ಹೆಗ್ಡೆಗೆ ಗೊತ್ತಿಲ್ವ ನಮ್ಮ ಜನಕ್ಕೆ ಯಾವೂದು ಬೇಕು ಯಾವ್ದು ಬೇಡ. ಅವರೆ ತಾನೆ ಯಡ್ಯೂರಪ್ಪ ನ ರಾಜಿನಾಮೆ ಗೆ ಕಾರಣರಾದವ್ರು, ಅಂಥವರ ಮಾರ್ಗದರ್ಶನ ನಮಗೆ ಬೇಡ ಅಲ್ವಾ. ಯಡ್ಯೂರಪ್ಪನ ರಾಜಿನಾಮೆಗೆ ಮಾತ್ರ ಅವರು ಬೇಕಾಗಿತ್ತು. ಈಗ ಬೇಡ ಅಲ್ವಾ ಸಾ. ಈ ದೇಸದಲ್ಲಿ ನೂರಾರು ಕಾನೂನುಗಳು ಅವೆ, ಅವೆಲ್ಲವನ್ನು ನಾವು ಓದಿ ತಿಳ್ಕಳ್ಳಾಕ್ಕಾಯ್ತದ. ಅದಕ್ಕಂತನೇ ವಕೀಲರು,
ನ್ಯಾಯಮೂರ್ತಿಗಳು ಅಂತ ಸರ್ಕಾರನೇ ಮಾಡಿಲ್ವ. ಅವರೆಲ್ಲರ ಪ್ರಾಮಾಣಿಕತೆಯ ಫಲವಾಗಿ ಇಂದು ದೊಡ್ಡ ದೊಡ್ಡ ಮಂತ್ರಿ ಮಹೋದಯರು ಕಂಬಿ ಏಣಿಸ್ತಾಇಲ್ವಾ.
ನಿಮ್ದೊಳ್ಳೆ ಕ್ಯಾತೆ ಸಾರ್, ಹಂಗೇ ಹೋದರೆ “ಹಂಗಲ್ಲ” ಹಿಂಗೆ ಅಂತೀರಾ, ಹಿಂಗೇ ಹೋದರೆ ಹಿಂಗಲ್ಲ ಅಂತೀರಾ, ಒಳ್ಳೆ ಎಡವಟ್ಟು ಜನಗಳು ಸಾರ್ ನೀವು!
೩.ಬೆಳೆದು ನಿಂತಿರೋ ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಅಧಿಕಾರಿಗಳು ಎಷ್ಟು ಕಾರಣವೋ, ಇಲ್ಲೀ ತನಕ ಬೆಳೆಯೋ ದಕ್ಕೆ ಬಿಟ್ಟಿದ್ದು ನಮ್ಮಂಥ ಸಾಮಾನ್ಯ ಜನಗಳೂ ಕಾರಣ ಅಲ್ವಾ?
ಸರಿ, ತಪ್ಪೋ ಆಗಿ ಹೋಗಿದೆ ಈಗ ತಪ್ಪು ತಿಳ್ಕೋಳ್ಳೊದು ತಪ್ಪಾ. ಇದು ಬಿಟ್ಟು ಮತ್ತೇನು ಮಾಡ್ಬೇಕಿತ್ತು? ಅದಕ್ಕೆ ವಸೀ ಉತ್ತರ ಕೊಡ್ತೀರಾ.
೪. ಅಣ್ಣಾ ನಡವಳಿಕೆ ಪ್ರಜಾಸತ್ತೆಗೆ ಮಾರಕ’ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ಅಣ್ಣಾ ಈ ದೇಶದ ಸಮಸ್ತ ವರ್ಗ, ಜಾತಿಗಳ ಪ್ರತಿನಿಧಿಯಲ್ಲ. ಸಂಸತ್ತನ್ನು ತನ್ನ ಮೂಗಿನ ನೇರಕ್ಕೆ ನಿಯಂತ್ರಿಸುವುದು ತಪ್ಪು.
ನಮ್ಮ ಪ್ರತಿನಿಧಿಗಳಾಗಿ ಇವರು ಕಡಿದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಇದೆ, ಸತತವಾಗಿ ಕೇಂದ್ರದಲ್ಲಿ ೫೦ ವರ್ಷ ಆಳ್ವಿಕೆ ಮಾಡಿದ ಪಕ್ಷ ಏನು ಮಾಡಿದೆ ಅಂತ ಈ ಪ್ರಪಂಚಕ್ಕೆ ಗೊತ್ತು. ಭ್ರಷ್ಟಚಾರದ ಇವತ್ತಿನ ಈ ಸ್ಥಿತಿಗೆ ಇವರು ಕಾರಣರಲ್ಲದೆ ಬೇರೆ ಯಾರು ಸಾರ್? ಈ ಬೇಗುದಿಯನ್ನು ಇಂದು ಅಣ್ಣಾಗೆ ಬೆಂಬಲಿಸುವ ಮೂಲಕ ಹೊರಗೆ ಬಿಡುತಿದ್ದಾರೆ. ಈ ಪ್ರಜಾಸತ್ತಾತ್ಮಕ ಆಡಳಿತ ದಿಂದಾನೆ, ಈ ರಾಜಕಾರಣಿಗಳು ಈ ದೇಶಾನ ಲೂಟಿ ಮಾಡಿದ್ದು.
ಅಕ್ರಮ ಗಣಿಗಾರಿಕೆ ಅಂತ ಬಾಯಿ ಬಾಯಿ ಬಡ್ಕೊಂಡ್ರಿ, ಆದರೆ ಗಣಿಗಾರಿಕೆ ಮಾಡೋದಿಕ್ಕೆ ಲೈಸೆನ್ಸ್ ಕೊಟ್ಟಿದ್ದು ನಾವು ಆರಿಸಿ ಕಳ್ಸಿದ ಸಂಸತ್ತಿನ ಜನರಲ್ವೇ?
ರಾಷ್ಟ್ರೀಯ ಸಂಪತ್ತು ನ್ನ ಹೇಗೆ ರಕ್ಷಿಸಬೇಕು ಅಂತ ಇವರ್ಯರಿಗು ಗೊತ್ತಿರಲಿಲ್ವ? ಡೀ ನೋಟಿಫಿಕೇಶನ್ ಯಾಕೆ ಬೇಕಿತ್ತು, ಆ ಕಾನೂನನ್ನು ಮಾಡಿದ್ದು ಯಾರು? ನಮ್ಮ ರಾಜಕಾರಣಿಗಳಲ್ವೆ, ಅವರಿಗೆ ಎಲ್ಲಿ ಲಾಭವಾಗುತ್ತೊ ಅಂತಹ ಕಾನೂನು ಮಾಡಿಕೊಂಡ್ರು. ಅವರು ತಿಂದು, ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು ತಿನ್ನೋತನಕ ಆಸ್ತಿ ಮಾಡಿಟ್ಟಿದ್ದಾರೆ ನಾವು ಆರಿಸಿ ಕಳುಹಿಸಿದ ಜನ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು.
ಸುಮ್ಮನೆ ಕಾಗಕ್ಕ ಗ್ಗುಬ್ಬಕ್ಕನ ಕತೆ ಗಳನ್ನು ಹೇಳ್ತಾ ಜನರ ದಿಕ್ಕನ್ನು ಯಾಕೆ ಬದಲಾಯಿಸ್ತೀರಾ?
೫. ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಬಹುದು ಎಂಬುದು ಅಣ್ಣಾ ತಂಡದ ಎಣಿಕೆ.
ಗಾಂಧಿ ತಾತ ಹೇಳಿ ಕೊಟ್ಟ ಪಾಠ, ಎಲ್ಲರಿಗೂ ಚೆನ್ನಾಗಿ ಗೊತ್ತು. ಉಪ್ವಾಸ ಮಾಡಿ ಏನೇನಲ್ಲ ಮಾಡಿದ್ರು ಅಂತ ಇತಿಹಾಸ ಪುಸ್ತಕ ಹೇಳುತ್ತೆ. ಇನ್ನು ನಾವೇನು ಹೇಳೋದು.
೬. ಅಣ್ಣಾ ಚಳವಳಿ ಎಲ್ಲ ತರಹದ ಜನಗಳು ಕಾಣಿಸ್ತಾ ಇದ್ದಾರೆ. ಕೆಲವರ ಕೈಯಲ್ಲಿ ರಾಷ್ಟ್ರಧ್ವಜ, ಕೆಲವರ ಕೈಯಲ್ಲಿ ಕೇಸರಿ ಧ್ವಜ, ಮತ್ತೆ ಕೆಲವರ ಕೈಯಲ್ಲಿ ಇನ್ನ್ಯಾವುದೋ ವೆರೈಟಿಯ ಧ್ವಜಗಳು
ಅದು ಎಲ್ಲಿ ಕಾಣಿಸ್ತು ಅಂತ ಗೊತ್ತಾಗ್ತಿಲ್ಲ ಸ್ವಾಮಿ, ನಮ್ಮ ಕಣ್ಣಿಗೆ ರಾಷ್ಟ್ರಧ್ವಜ ಬಿಟ್ರೆ ಬೇರೆ ಏನು ಕಾಣಿಸಲಿಲ್ಲ, ಒಂದು ವೇಳೆ ಕಾಣಿಸಿದ್ರೆ ತಪ್ಪೇನು ಅಂತ? ಸ್ವಾತಂತ್ರ್ಯ ಚಳುವಳಿ ಯಲ್ಲೂ ಸಹ ಕೇಸರಿ ಧ್ವಜ ಸಹ ಇತ್ತು,
ಬೇಕಿದ್ದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ರೆ ಗೊತ್ತಾಗುತ್ತೆ. ಸುಮ್ಮನೆ ಮನಸ್ನಾಗೆ ಗಲೀಜು ತುಂಬ್ಕೊಂಡು ಬಾಯಲ್ಲಿ ಗಬ್ಬು ನಾರಬೇಡಿ. ನಿಮ್ಮಂತ ಎಡಬಿಡಂಗಿ ಗಳಿಂದ ಇದು ಎಲ್ಲಾ ಕಾಲಕ್ಕೂ ಇದ್ದದ್ದೆ. ಕೇಸರಿ ಕಂಡ್ರೆ ಪಾಪ ಖಾರದ ಉರಿ ಜಾಸ್ತಿಯಾಗುತ್ತೆ ನಿಮ್ಮಂತವರಿಗೆ.
ಇದಕ್ಕೆಲ್ಲ ಕಾರಣ ಏನೆಂದ್ರೆ ಒಟ್ನಾಗೆ ಕೇಸರಿ ಪಡೆ ಇಂತದ್ಯಾವುದೆ ವಿಸ್ಯದಾಗೆ ಮೂಗು ತೂರಿಸಬಾರದು. ಅದು ತೂರಿಸಿದ್ರೆ ನಿಮಗೆಲ್ಲ ಮೆಣಸಿನಕಾಯಿ ತೂರಿಸಿಕೊಂಡಂಗೆ ಆಗ್ತದಲ್ಲಾ.
ಏನು ಮಾಡಕಾಯ್ತದೆ ಎಲ್ಲ ಎಡವಟ್ಟು ಗಳ ಸಹವಾಸ ದೋಸ, ಎಡಬಿಡಂಗಿ ಯಂಗೆ ಆಡ್ತೀರಾ. ನೀವು ಹ್ಹೂಂ ಅಂದ್ರೆ ನಾವು ಹ್ಹೂಂ ಅನ್ನಬೇಕು, ನೀವು ಸೀನಿದ್ರೆ ನಾವು ಸೀನಬೇಕು ಅವಾಗ್ಲೆ ಅಲ್ವ ನಿಮ್ಗೆ ಖುಸಿ ಯಾಗೋದು.
ಬುಡೀ ಸಾ ಇದೆಲ್ಲ ಪ್ರಜಾಪ್ರಭುತ್ವದಾಗೆ ಕಾಮನ್ನು. ಎಲ್ಲರಲ್ಲು ಬೇರೆ ಬೇರೆ ತರದ್ದು ಅಭಿಪ್ರಾಯ ಇರ್ತದೆ. ನಿಮ್ಮದು ಅಂಗೆ ನಮ್ಮದು ಹಿಂಗೆ. ಏನ್ ಮಾಡೋಕೆ ಆಯ್ತದೆ.





suuuuuuuuuuuuuper aagide lekhana
Great, Sachin.. you are rocking
http://prajaprabhutva.blogspot.com/2011/08/blog-post_18.html
ತಕ್ಕಳಪ್ಪಾ!!! ತನ್ನ ಕುಂಡೀ ಕೆರೀಲಿಲ್ಲ್ದೋನು ಹೊಟ್ಟೆಗೆ ಅನ್ನ ತಿನ್ನಲ್ಲ ಅಂತಾವ್ನೆ ಈ ವಯ್ಯ..!!!
ಸಿವಾ ನಿಂಗೆ ಚೋಲೋ ಬುದ್ದಿ ಕೊಡಲಿ ಮಗಾ!!!!
wonderful sir 🙂
ತುಂಬಾ ಜನರಿಗೆ ಲೋಕಪಾಲವನ್ನ ವಿರೋಧಿಸಿ “ವಿಭಿನ್ನ” ಅಂತ ಅನ್ನಿಸಿಕೊಳ್ಳೋ ಚಟ. ಏನೂ ಮಾಡೋಕಾಗಲ್ಲ
ಛಲೋ ಮಾತನ್ನ ಹೇಳಿದ್ರಿ ನೋಡ್ರಿ. ನಮ್ಮಂಥ ನೇರ ಮಾತಿನವರೇ ನಮ್ಮ ರಾಜಕಾರಣೆಗಳಿಗೆ ಸರಿ. ನಿಮ್ಮ ಮಾತು ಎನ್ನೂ ಹರಿತವಾಗಿದ್ರೆ ಛಲೋ ನೋಡ್ರಿ. ರಾಮಕ್ರಷ್ಣ ನಿಡಗುಂದಿ