ಗುಂಡಣ್ಣನ ಗೂ+ ಪುರಾಣ
ಪ್ರಶಸ್ತಿ. ಪಿ, ಸಾಗರ
” fb ಹೋಯ್ತು ಗೂ+ ಬಂತು ಢಂ ಢಂ ಢಂ..” ಅಂತ ಕಟ್ಟಾ ಗೂಗಲ್ ಪ್ರೇಮಿ ಗುಂಡಣ್ಣ ಕಾಲೇಜ್ ಗ್ರೌಂಡಲ್ಲಿ ಗುನುಗ್ತಿರ್ಬೇಕಿದ್ರೆ ಅವನಂಗೆ ಕೆಲಸಿಲ್ಲದ ಕೆಲ ದೋಸ್ತುಗಳು ಅಲ್ಲಿಗೆ ವಕ್ಕರಿಸಿದ್ರು. ಗುಂಡಣ್ಣ ಪೇಟೆಗೆ ಬಂದು ಅಲ್ಲಿನ ಕೆಲ ದೋಸ್ತುಗಳ ಬಾಯಲ್ಲಿ ಮಿ.ರೌಂಡ್ ಆಗಿದ್ದ. ಏನು ಮಿ.ರೌಂಡ್ ತುಂಬಾ ಖುಷಿಯಾಗಿದ್ದೀರಿ ಅಂದ್ಳು ಇಳಾದೇವಿ ಅಲಿಯಾಸ್ ಇಳಾ. ಆಗ್ದೇ ಇನ್ನೇನು ಆರ್ಕುಟು, ಜೈಕು,ವೇವು,ಬಜ್ಜು ಎಲ್ಲಾ ಆದ್ಮೇಲೆ ಹೊಸಾದು ಬಂದಿದ್ಯಲ್ಲಾ ಗೂಗಲ್ ಪ್ಲಸ್ಸು ಅದ್ರಿಂದ ಸಾಹೇಬ್ರು ಸಿಕ್ಕಾಪಟ್ಟೆ ಖುಷಿಯಾಗಿದಾರೆ ಅಂದ ಟಾಂಗ್ ತಿಪ್ಪ ಅಲಿಯಾಸ್ ಟಿಪ್ಸ್. ಆರ್ಕುಟ್ ಅನ್ನೋದನ್ನ ಆರ್ಕುಟ್ ಬಯೋಕ್ಕೊಟೇನ್ ಅನ್ನೋ ಮಹಾಶಯ ಕಂಡು ಹಿಡಿದಿದ್ದಲ್ವಾ ಮಾರಾಯ್ರೇ ಅಂತ ತನ್ನನುಮಾನ ಹೇಳ್ದ ಮಂಗಳೂರು ಮಂಜ ಅಲಿಯಾಸ್ ಮಿ.ಮ್ಯಾಂಜ್.ಹೌದು ಆದ್ರೆ ಅವ್ನು ಈಗ ಗೂಗಲ್ ಅಲ್ಲಿ ಪ್ರಾಡಕ್ಟ್ ಮ್ಯಾನೇಜರ್. ಆರ್ಕುಟ್ ನ ಗೂಗಲ್ ಕೊಂಡ್ಕಂಡು ಸುಮಾರು ವರ್ಷ ಆಯ್ತು, ನೀವೆಲ್ಲಿದೀರಾ ಮಿ.ಮ್ಯಾಂಜ್ ಅಂದ್ಳು ಸರಸ್ವತಿ ಅಲಿಯಾಸ್ ಸರ್. ತಾನೇ ಬುದ್ದಿವಂತ ಅಂದ್ಕಂಡಿದ್ದ ಮಂಜನ ಮುಖ ಹುಳ್ಳಗಾಯ್ತು.
ಓ ಹೌದಾ? ಅದೆಂತದು ಜೈಕು ಅಂದ್ಯಲಾ ಅದೆಂತದು ಮಾರಾಯ ಅಂದ ತಿಮ್ಮ ವಿಷಯ ಬದಲಾಯಿಸಕ್ಕೆ . ಅದೂ fb ತರ ಒಂದು ಸಾಮಾಜಿಕ ತಾಣ. ಮಿಕ್ರೋ ಬ್ಲಾಗಿಂಗ್, ಲೈಫ್ ಸ್ಟ್ರೀಮ್ ಅನ್ನೋ ಸೇವೆ ಗಳನ್ನ ಟ್ವಿಟ್ಟರ್ ಗೆ ಕೊಡುತ್ತೆ ಅಂದ ತಿಪ್ಪ. ಹಂಗದ್ರೇ ಏನು ಅಂತ ಇಳಾ ಕೇಳೋದ್ರೊಳಗೆ ಅದನ್ನ 2006 ರಲ್ಲಿ ಫಿನ್ ಲ್ಯಾಂಡಿನ ಜೆರ್ರಿ ಮತ್ತೆ ಪೆಟ್ರಿ ಅನ್ನೋರು ಕಂಡು ಹಿಡಿದ್ರು ಅಂದ್ಳು ಸರು. ಅದನ್ನೂ ನಂಗೂಗಲ್ ನವ್ರು 2007 ರಲ್ಲಿ ತಂಗೊಡ್ರು. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಗೂಗಲ್ಗಿಂತ ಬ್ರೌಸರ್ ಬೇರೆ ಇಲ್ಲ… ಅಂತ ಹಾಡೋಕೆ ಶುರು ಮಾಡ್ದ ಗುಂಡಣ್ಣ. ಎಲ್ಲ ಸ್ವಲ್ಪ ಹೊತ್ತು ಕಿವಿ ಮುಚ್ಕಂಡ್ರು. ಮತ್ತಷ್ಟು ಓದು 





