ವಿಷಯದ ವಿವರಗಳಿಗೆ ದಾಟಿರಿ

Archive for

8
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ: ತಲೆಗೆ ಬಿದ್ದ ತಾಳ

“ನನ್ನಿಂದಾದಷ್ಟು ಸಮಯ… ಈ ಜೀವನ ನನ್ನನ್ನು ಕುಣಿಸಿದಷ್ಟು ದಿನವೂ ಕುಣಿಯುತ್ತೇನೆ…. ಕುಣಿಯುತ್ತಲಿರುತ್ತೇನೆ…”  ಎಂದು ತೀರ್ಮಾನಿಸಿ ಯಕ್ಷಗಾನ ಕಲೆಗಾಗಿ ಅವಿರತವಾಗಿ ದುಡಿದು  18.11.1972  ರಂದು ಬಣ್ಣ ಕಳಚಿ  ಯಕ್ಷಗಾನ ರಂಗವನ್ನು ತಬ್ಬಲಿಯನ್ನಾಗಿ ಮಾಡಿ ಯಕ್ಷಮಾತೆಯ ಪಾದವನ್ನು ಸೇರಿದ ಕುರಿಯ ವಿಠಲ ಶಾಸ್ತ್ರಿಯವರು ಜನಿಸಿದ್ದು ಕಳೆದ ಶತಮಾನದ ದಿನಾಂಕ 8.9.1912  ರಂದು .ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪದ್ಯಾಣ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಯಕ್ಷಗಾನ .ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರದಲ್ಲಿ  ಮೊದಲ ಬಾರಿಗೆ ಯಕ್ಷಗಾನದ ಕೇಳಿ ಬಡಿದವರು ಎಂದು 1955ನೇ ಇಸವಿಯಲ್ಲಿ ಗುರುತಿಸಿಕೊಂಡವರು ಕಳೆದ ಶತಮಾನದ ಮಂಗಳೂರಿನ ಹಿರಿಯ ಪತ್ರಕರ್ತ ಹಾಗೂ  ಅಂಕಣಕಾರ  ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. 1928 -1997 ).)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಇಂದು ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆಯಲ್ಲಿ…

—————-

Read more »

8
ಸೆಪ್ಟೆಂ

ಮೊದಲ ಪ್ರೇಮ ಗೀತೆ……

ಪವನ್ ಪರುಪತ್ತೇದಾರ್

ಸುತ್ತಲೂ ದೊಡ್ಡದಾಗಿ ನೆರೆದಿದ್ದ ವಿದ್ಯಾರ್ಥಿ ಸಮೂಹ, ಅಲ್ಲಲ್ಲಿ ಒಬ್ಬಬ್ಬರು ಒಂದೊಂದು ಆಟ ಅಡುತಿದ್ದರು. ಕೆಲವರು ಬಾಕ್ಸ್ ಟೆನ್ನಿಸ್, ಕೆಲವರು ಲೆಗ್ ಕ್ರಿಕೆಟ್, ಕೆಲವರು ಹೈ ಜಂಪ್ ಮತ್ತೆ ಕೆಲವರು ಕಬ್ಬಡ್ಡಿ, ಇನ್ನೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ನೆನ್ನೆ ಕೊಟ್ಟ ಹೋಂ ವರ್ಕ್ ಮನೆಯಲ್ಲಿ ಮಾಡಿಲ್ಲದಿದ್ದರಿಂದ ಸ್ನೇಹಿತರ ಬಳಿ ಪಡೆದು ಆತುರಾತುರವಾಗಿ ಗೀಚುತಿದ್ದರು.

ಅಲ್ಲೇ ಒಂದು ಮೂಲೆಯಲ್ಲಿ ಪ್ರವೀಣ ಗೆತನ್ನೇ ನೋಡುತ್ತಾ ನಿಂತಿದ್ದ. ತನ್ನ ಸ್ನೇಹಿತರೆಲ್ಲ ಒಂದಲ್ಲ ಒಂದು ಆಟ ಅಡುತಿದ್ದರು ಪ್ರವಿಣನಿಗೆ ಅ ಕಡೆ ಗಮನ ಬಂದಿಲ್ಲ, ಅವನ ಗಮನ ಏನಿದ್ದರು ಸಂಪೂರ್ಣ ಗೇಟಿನ ಕಡೆಯೇ ಕೆಂದ್ರಿಕ್ರುತವಗಿತ್ತು. ಇದ್ದಕ್ಕಿದ್ದಂತೆ PT ಮೇಷ್ಟ್ರು ಜೋರಾಗಿ ಪೀಪಿ ಊದಿದರು. ಆಡುತಿದ್ದ ಮಕ್ಕಳೆಲ್ಲರೂ ಓಡೋಡಿ ಬಂದು ಸಾಲುಗಳಲ್ಲಿ ನಿಂತರು. ಹೋಂ ವರ್ಕ್ ಮದುತಿದ್ದವರೆಲ್ಲ ಘಾಬರಿ ಘಾಬರಿಯಾಗಿ ಪುಸ್ತಕಗಳನ್ನು ಹೇಗೆ ಬರೆಯುತಿದ್ದರೋ ಹಾಗೇ ಬ್ಯಾಗ್ ಗೆ ತುಂಬಿಸಿಕೊಂಡು ಬಂದು ಸಾಲಲ್ಲಿ ನಿಂತರು. ಪ್ರವೀಣ ಗೇಟನ್ನು ನೋಡುತ್ತಲೇ ಮುಖ ಚಿಕ್ಕದು ಮಾಡಿಕೊಂಡು ಬೇಸರವಾಗಿ ಭಾರವಾದ ಹೆಜ್ಜೆ ಇಡುತ್ತಾ ಬಂದು ಸಾಲಿನ ಮುಂಭಾಗದಲ್ಲಿ ಪ್ರಾರ್ಥನೆ ಹೇಳಿಕೊಡುವ ಜಾಗದಲ್ಲಿ ನಿಂತನು.  ಅಷ್ಟರಲ್ಲೇ ಬಜಾಜ್ ಸ್ಕೂಟರ್ ಒಂದು ಬಂದು ಗೇಟಿನ ಹೊರಗಡೆ ನಿಂತಿತು. ಭಾರವಾದ ಬ್ಯಾಗ್ ಹೊತ್ತ ಹುಡುಗಿ ತನ್ನ ತಂದೆಗೆ ಟಾಟಾ ಮಾಡುತ್ತ ಗೇಟ್ ಒಳಗೆ ಬಂದು ಓಡೋಡಿ ಪ್ರಾರ್ಥನೆಯ ಜಾಗಕ್ಕೆ ಬರುತಿದ್ದಳು, ಪ್ರವಿಣನ ಬಾಡಿದ್ದ ಮುಖ ಚಿಗುರಿ ಮನ ಆತ್ಮ ವಿಶ್ವಾಸದಿಂದ ತುಳುಕಾಡಿತು. ಬ್ಯಾಗ್ ಪಕ್ಕ ಇಟ್ಟು ಅ ಹುಡುಗಿಯು ಬಂದು ಪ್ರವಿಣನ ಪಕ್ಕ ನಿಂತಳು. ಪ್ರವೀಣ ಯಾಕೆ ಕಾವ್ಯ ಇವತ್ತು ಲೇಟ್ ಅಂದ, ಅಮ್ಮ ಬಾಕ್ಸ್ ಕೊಡೋದು ಲೇಟ್ ಮಾಡಿದ್ರು ಅನ್ನೋ ಮಾಮೂಲಿ ಉತ್ತರವನ್ನೇ ಅವಳು ಕೊಟ್ಟಳು. ಸ್ವಾಮಿ ದೇವನೇ ಲೋಕ ಪಾಲನೆ ಎಂದು ಪ್ರಾರ್ಥನೆ ಮಡಿ ಎಲ್ಲರು ತಮ್ಮ ತಮ್ಮ ತರಗತಿಗಳಿಗೆ ಸೇರಿಕೊಂಡರು… Read more »