ವಿಷಯದ ವಿವರಗಳಿಗೆ ದಾಟಿರಿ

Archive for

17
ಸೆಪ್ಟೆಂ

ಕತ್ತಲೆಯಲ್ಲಿ ಕನ್ನಿಕಾ…

ಶ್ರೀಮುಖ ಸುಳ್ಯ

ಕತ್ತಲೆಯ ಕೋಣೆಯಲ್ಲಿ ಕನ್ನಿಕಾ ಬಿಕ್ಕಿ-ಬಿಕ್ಕಿ ಅಳುತ್ತಾ ಇದ್ದಾಳೆ. ಅವಳ ಕಣ್ಣೀರು ಕಣ್ಣನ್ನು ತೊರೆಯದಂತೆ ರೆಪ್ಪೆಗಳು ಮಾಡಿದ ಯತ್ನಗಳು ವಿಫಲವಾಗುತ್ತಿವೆ. ಕಣ್ಣಿನ ರೆಪ್ಪೆಯ ಬಂಧವನ್ನು ಕಳೆದು ಕಣ್ಣ ಹನಿಗಳು ಕೆನ್ನೆಯನ್ನು ಒರೆಸಿ, ಸಮಾಧಾನಿಸುವಲ್ಲಿ ಅಸಹಾಯಕರಾಗಿ ಕೆಳಬೀಳುತ್ತಿವೆ. ಮುಚ್ಚಿದ ಕೋಣೆಯ ಬಾಗಿಲು- ಆಕೆಯ ನೋವು ಕತ್ತಲಿನಿಂದ ಬೆಳಕಿನೆಡೆಗೆ ಸರಿಯದಂತೆ ನೋಡಿಕೊಳ್ಳುತ್ತಿವೆ. ತುಂಬಿದ ಮನೆಯ- ಮುಂದಿನ ಕೋಣೆಯ- ಗೋಡೆಗಳ ಬದಿಯಲ್ಲಿ ಆಕೆ ಕುಳಿತು ಅಳುತ್ತಿರುವ ಕಾರಣ ಆದರು ಏನು?!.. ಆಕೆಯ ಬೆಚ್ಚಗಿನ ಮಡಿಲಲ್ಲಿ, ಸೆರಗನ್ನು ಬಳಸಿ ಮಗುವಿನಂತಹ ಚಿಕ್ಕದೊಂದು ಗೊಂಬೆ ಉಸಿರಿಡದೆ ಮಲಗಿದೆ.    

          ಕೋಣೆಯ ಕತ್ತಲಿಗೂ- ಆಕೆ ಮಗುವಿನ ಮನಸ್ಸೊಂದನ್ನು ಕಳಕೊಂಡಿದ್ದಾಳೆ- ಎಂಬುದು ಸ್ಪಷ್ಟವಾಗಿ ತಿಳಿಯುವಂತಿದೆ. 
               ಸರಿಯಾಗಿ 2 ವರ್ಷಗಳ ಹಿಂದೆ, ಪರಮೇಶಿ ಅನ್ನುವ ದೂರದ ಸಂಬಂಧಿ ಕನ್ನಿಕಾಳಿಗೆ ಹತ್ತಿರವಾಗಿರುತ್ತಾನೆ. ಇಬ್ಬರೂ ಸ್ನೇಹಿತರಾಗಿರುತ್ತಾರೆ. ಪರಮೇಶಿ ಸ್ನೇಹವನ್ನು ಪ್ರೀತಿಯಾಗಿ ಬದಲಿಸುವ ಹಂಬಲವನ್ನು ಮುಂದಿಟ್ಟಾಗ,ಬಹಳ ಕಟುವಾಗಿ ತಿರಸ್ಕರಿಸಿದ ಕನ್ನಿಕಾ-ಕೆಲ ತಿಂಗಳುಗಳ ನಂತರ ಒಲುಮೆಗೆ ಒಪ್ಪಿಯೇ ಬಿಡುತ್ತಾಳೆ.  Read more »