ವಿಷಯದ ವಿವರಗಳಿಗೆ ದಾಟಿರಿ

Archive for

16
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಮಗು ಅರ್ಥ ಹೇಳುತ್ತಾನೆ…

ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ‘ನಿಲುಮೆ’ಯಲ್ಲಿ ಪ್ರಕಟವಾಗುತ್ತಿದೆ.
 

ಬಣ್ಣದ ಬದುಕು 2

 ತೀರ್ಥರೂಪರ ಕವಿತೆಗಳಲ್ಲಿ ‘ಕುಕ್ಕುಟಾಪುರ’ವೆನಿಸಿ ಮೆರೆದ ಕೋಳ್ಯೂರು ನಮ್ಮ ಬಯಲಿನಂತಹ ಹತ್ತಾರು ಬಯಲುಗಳಿಗೆ ದೈವ ಕೇಂದ್ರ. ಅಲ್ಲಿನ ‘ಮಂಡಲಪೂಜೆ’ ಎಂದರೆ ಸುತ್ತಿನ ಹತ್ತು ಗ್ರಾಮಗಳಲ್ಲೂ ಪ್ರಸಿದ್ಧವಾಗಿತ್ತು. ಕೆಲವರು ಆಸಕ್ತರಿಂದಾಗಿ ಜಾತ್ರೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ (ಆ ಹೆಸರಿನಿಂದಲ್ಲವಾದರೂ) ಅಲ್ಲಿ ನಡೆಯುವುದಿತ್ತು. ನಮ್ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಪುರಾಣವಾಚನ, ಹರಿಕಥೆ, ತಾಳಮದ್ದಳೆಗಳಿಗೆ ಮಾತ್ರ ಮುಕ್ತಾಯಗೊಳ್ಳುತ್ತಿದ್ದವು. ಆಗಿನ ಕಾಲದಲ್ಲಿ ಹತ್ತು ಸಮಸ್ತರು ಭಾಗವಹಿಸಿದ ಚಟುವಟಿಕೆಗಳೆಲ್ಲ ಅಲ್ಲೇ ನಡೆಯಬೇಕು.

ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ. Read more »

16
ಸೆಪ್ಟೆಂ

ವಿಮಾನಯಾನ: ವಿಷಯಾನ

ಪ್ರಶಸ್ತಿ ಪಿ, ಶಿವಮೊಗ್ಗ

ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು  ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.

ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾದ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ. ಹಂಗಂತಾ ನಾವ್ಯಾವಾಗ್ಲೂ ಸುರಕ್ಷಿತರಲ್ಲ ಸ್ವಾಮಿ. ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ.  ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ. Read more »