ವಿಷಯದ ವಿವರಗಳಿಗೆ ದಾಟಿರಿ

Archive for

29
ಸೆಪ್ಟೆಂ

ಸಂಸ್ಕೃತಿ ಸಂಕಥನ – ೭

– ರಮಾನಂದ ಐನಕೈ
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ

ನಮ್ಮೂರಿನಲ್ಲೊಬ್ಬ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಿದ್ದಾರೆ. ಎಂ.ಎಸ್.ಸಿ.ಯಲ್ಲಿ ಬಂಗಾ ರದ ಪದಕ ಪಡೆದವರು. ನಿವೃತ್ತಿಯ ನಂತರ ಊರಿಗೆ ಬಂದು ಕೃಷಿಕರಾಗಿದ್ದಾರೆ. ಅವರಿಗೆ ಗೊತ್ತಿ ಲ್ಲದ ವಿಷಯವಿಲ್ಲ. ಯಾವ ಕ್ಷೇತ್ರದ ಬಗ್ಗಾದರೂ ಘಂಟೆಗಟ್ಟಲೇ ಮಾತನಾಡುತ್ತಾರೆ. ತಮಗೆ ಸಿಕ್ಕಾ ಪಟ್ಟೆ ಜ್ಞಾನವಿದೆಯೆಂಬ ಅಹಂಕಾರವೂ ಇದೆ. ಆದರೆ ಒಂದು ತೊಂದರೆ ಅಂದರೆ ಅವರು ಅಂದು ಕೊಂಡಂತೆ ಒಂದೂ ಆಗುವುದಿಲ್ಲ. ಅವರ ಮಾತಿ ನಲ್ಲಿ ತೋರುವ ಚಾಕಚಕ್ಯತೆ ಕೃತಿಯಲ್ಲಿ ಕಾಣುವು ದಿಲ್ಲ. ಉದಾಹರಣೆಗೆ ಅವರು ಶಕ್ತಿಯ ಮೂಲದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ವಿದ್ಯುತ್ ಅನ್ವೇಷಣೆಯ ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ವಿದ್ಯುತ್ ಕಂಡು ಹಿಡಿದ ವರು, ವಿದ್ಯುತ್ ಹೇಗೆ ಉತ್ಪಾದಿಸಲ್ಪಡುತ್ತದೆ; ತಂತಿ ಹೇಗೆ ವಿದ್ಯುತ್ ವಾಹಕವಾಗುತ್ತದೆ; ಬಲ್ಪಿನ ಒಳ ಗಡೆಯಿಂದ ಹೇಗೆ ಪ್ರಕಾಶ ನೀಡುತ್ತದೆ ಇತ್ಯಾದಿ. ಅವರ ನೆಚ್ಚಿನ ಆಳು ಶಂಕರ. ಆತ ಅಕ್ಷರ ಜ್ಞಾನಿಯಲ್ಲ. ಅವನಿಗೆ ಈ ಪ್ರಪಂಚದ ಬಗ್ಗೆ ಕಡಿಮೆ ತಿಳುವಳಿಕೆ ಇದೆ. ಮೇಸ್ಟ್ರು ಹೇಳಿದಷ್ಟು ಮಾಡುವುದು ಅವನ ಕಾಯಕ. ವಿದ್ಯುತ್ತಿನ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುವ ಪ್ರಾಧ್ಯಾಪಕರಿಗೆ ಮನೆಯಲ್ಲಿ ಫ್ಯೂಸ್ ಹೋದರೆ, ಹೋಲ್ಡರಿನಲ್ಲಿ ವಯರ್ ಬಿಟ್ಟರೆ ಹಾಕಲು ಬರುವುದಿಲ್ಲ. ಆ ಕೆಲಸ ಮಾಡುವವನು ಶಂಕರ. ವಿದ್ಯುತ್ತಿಗೆ ಸಂಬಂಧಿಸಿದ ಅಷ್ಟೂ ರಿಪೇರಿ ಕೆಲಸವನ್ನು ಶಂಕರ ಮಾಡುತ್ತಾನೆ. ಆತನನ್ನು ಕೇಳಿ ದರೆ ತನಗೆ ಇದರ ಬಗ್ಗೆ ತಿಳುವಳಿಕೆಯೇನಿಲ್ಲ. ಹೀಗೆ ಮಾಡಿ ಮಾಡಿ ಕಲಿತೆ ಅನ್ನುತ್ತಾನೆ. ಜೀವನದ ಚಿಕ್ಕ ಕೆಲಸಕ್ಕೆ ನೆರವಿಗೆ ಬಾರದ ಪ್ರಾಧ್ಯಾಪಕರ ಪಾಂಡಿತ್ಯವನ್ನು ಏನನ್ನೋಣ? ಪ್ರಾಧ್ಯಾಪಕರದ್ದು ಲೋಕಜ್ಞಾನ, ಶಂಕರನದ್ದು ಕ್ರಿಯಾಜ್ಞಾನ ಅನ್ನೋಣವೇ? ಉತ್ತರ ಗೊತ್ತಿಲ್ಲ. ಹುಡುಕಲು ಪ್ರಯತ್ನಿಸೋಣ.
Read more »

29
ಸೆಪ್ಟೆಂ

ಲೈಫು ಇಷ್ಟೇನೇ

– ರೂಪಾ ರಾಜೀವ್
ಗಾಂಧಿನಗರದಲ್ಲಿ ತಯಾರಾಗುವ ಪ್ರತಿ ಚಲನಚಿತ್ರಗಳು ಇಂತಿಂತಹ ಗುಂಪಿಗೆ ಎಂದು ತಯಾರಾಗುತ್ತವೆ.  ಉದಾಹರಣೆಗೆ ಮಚ್ಚು, ಲಾಂಗ್, ಫೈಟ್, ಇಂತಹವು ಒಂದು ವರ್ಗದ ವೀಕ್ಷಕರಿಗೆ, ಕಣ್ಣೀರು, ತಾಯಿ ಸೆಂಟಿಮೆಂಟ್ಸ್ ಮತ್ತೊಂದು ವರ್ಗದವರಿಗೆ, ದೇವಿ ಮಹಾತ್ಮೆ ಇಂತಹ ಭಕ್ತಿ ಪ್ರಧಾನ ಚಿತ್ರಗಳು ಇನ್ನೊಂದು ವರ್ಗದ ವೀಕ್ಷಕರಿಗೆ, ಹೀಗೆ.  ಯೋಗರಾಜ್ ಭಟ್ ತಮ್ಮ ‘ಪಂಚರಂಗಿ’ ನಿರ್ಮಾಣದ ವೇಳೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು, ನಮ್ಮ ಕನ್ನಡ ಚಲನಚಿತ್ರಗಳು ಉಳಿಯಬೇಕಾದರೆ ಅಥವಾ ಥಿಯೇಟರು ಗಳಲ್ಲಿ ಹಣ ಮಾಡಬೇಕೆಂದಿದ್ದರೆ ಆ ಚಿತ್ರವು ಯುವ ಜನಾಂಗವನ್ನು ಅಂದರೆ ೧೮ ವಯಸ್ಸಿನಿಂದ ೨೩ ವರ್ಷದವರನ್ನು ಸೆಳೆಯುವಂತಿರಬೇಕು. ಆ ವರ್ಗದವರಿಗೆ ಸಿನೆಮಾ ಹಿಡಿಸಿದರೆ ಚಿತ್ರವು ಹಿಟ್ ಆಗುವುದು ಎಂದಿದ್ದರು. ಅವರ ಶಿಷ್ಯ ಪವನ್ ಕುಮಾರ್ ಅಕ್ಷರಷಃ ಭಟ್ಟರ ಈ ಮಾತಿಗೆ ಮಾರು ಹೋಗಿ ನಿರ್ದೇಶಿಸಿರುವ ಸಿನೆಮಾ ‘ಲೈಫು ಇಷ್ಟೇನೇ’.

Read more »