ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 12, 2011

2

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

‍ನಿಲುಮೆ ಮೂಲಕ

– ಮಹೇಶ.ಎಮ್.ಆರ್

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.!

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ.


ಆಗಿನಿಂದ ಇಂದಿನವರೆಗೆ ಹಿಂದಿಯೇತರರ ಮೇಲೆ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುತ್ತಿದೆ. ಈಗಿರುವ ಆಡಳಿತ ಬಾಶೆಯೆಂಬ ಅಸ್ತ್ರವನ್ನು ಬಳಸಿಕೊಂಡು ಬಾರತೀಯರೆಲ್ಲರ ಮೇಲೆ ಹಿಂದಿಯನ್ನು ಹೇರಿ ಮುಂದೊಂದು ದಿನ ಪೊಳ್ಳು ಬಾರತೀಯತೆ, ಮತ್ತು ದೇಶಕ್ಕೊಂದು ಸಂವಹನ ಬಾಶೆ ಬೇಕು ಎಂಬ ಅರ್ಥವಿಲ್ಲದ ವಾದದ ಮೂಲಕ ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡುವ ಹುನ್ನಾರ ಕೇಂದ್ರ ಸರಕಾರ ಹೊಂದಿದೆ ಎಂಬುದು ಈಗಿನ ಹೇರಿಕೆಯಿಂದ ಸ್ಪಶ್ಟವಾಗುತ್ತದೆ. ಈಗಾಗಲೇ ಈ ನಿಟ್ಟಿನಲ್ಲಿ ಉತ್ತರ ಬಾರತದಲ್ಲಿ ಹೆಚ್ಚು ಮಟ್ಟಿಗೆ ಯಶಸ್ವಿಯಾಗಿದ್ದು, ಅಲ್ಲಿನ ಇತರ ಬಾಶೆಗಳಾದ ಗುಜರಾತಿ, ಪಂಜಾಬಿ, ರಾಜಸ್ಥಾನಿ ಹೀಗೆ ಅನೇಕ ಬಾಶೆಗಳು ಹಿಂದಿ ಹೇರಿಕೆಗೆ ಸಿಲುಕಿ ತಮ್ಮ ಅಸ್ಮಿತೆಗೆ ದಕ್ಕೆ ತಂದುಕೊಂಡಿವೆ. ಇದರ ಮುಂದುವರಿದ ಬಾಗವಾಗಿ ಇಡೀ ಬಾರತವನ್ನು ಹಿಂದಿ ಎಂದು ಬಿಂಬಿಸಲು ಹೊರಟಿರುವ ಕೇಂದ್ರ ಸರಕಾರ ದಕ್ಶಿಣ ಬಾರತದ ಮೇಲೆ ಕಣ್ಣಿಟ್ಟು ಎಲ್ಲೆಂದರಲ್ಲಿ ಹಿಂದಿಯನ್ನು ಹೇರುತ್ತಿದೆ.

ರೇಲ್ವೇ ಇಲಾಖೆಯೆಂಬ ಹಿಂದಿ ಹೇರಿಕೆಯ ತವರು ಮನೆ.!
ಹಿಂದಿ ಹೇರಿಕೆ ಅನೇಕ ಸಂಸ್ಥೆಗಳ ಮೂಲಕ ನಡೆಯುತ್ತಿದ್ದು, ರೇಲ್ವೇ ಇಲಾಖೆಯಲ್ಲೂ ಈ ಪ್ರಯತ್ನ  ಬಿರುಸಿನಿಂದ ಸಾಗಿದ್ದು, ಇತ್ತೀಚಿಗೆ ರೈಲು ನಿಲ್ದಾಣಕ್ಕೆ ಭೇಟಿ ಕೊಟ್ಟಾಗ ಹಿಂದಿ ಹೇರಿಕೆಯ ಉಗ್ರ ಸ್ವರೂಪ ಕಂಡು ಬಂತು. ಕಂಡು ಬಂದ ಸಂಕ್ಷೀಪ್ತ ಚಿತ್ರಣ ಇಲ್ಲಿದೆ.

ರೈಲಿನ ಮೇಲೆ ಕಾಣುವ ಫಲಕಗಳನ್ನು ಪರೀಕ್ಶಿಸಲು ಬಾರತದ ವಿವಿದ ಪ್ರದೇಶಗಳಿಗೆ ತೆರಳುವ ಕೆಲವು ರೈಲುಗಳನ್ನು ನೋಡಲಾಯಿತು. ಆಗ ಕಂಡು ಬಂದಿದ್ದು ಅಂದ್ರೆ, ರೈಲು ಯಾವುದೇ ಸ್ಥಳಕ್ಕೆ ಹೋಗಲಿ, ಅದು ದಕ್ಷಿಣ ಬಾರತಕ್ಕೆ ಹೋಗಲಿ, ಉತ್ತರ ಬಾರತಕ್ಕೆ ಹೋಗಲಿ ಅಥವಾ ಕರ್ನಾಟಕದಲ್ಲೇ ಸುತ್ತಾಡಲಿ, ಎಲ್ಲ ಕಡೆಯೂ ಹಿಂದಿ ನಾಮಫಲಕಗಳನ್ನು ಹಾಕಲಾಗಿದೆ. ವಿಚಿತ್ರ ಅಂದ್ರೆ ಬೆಂಗಳೂರಿನಿಂದ ಉತ್ತರ ಬಾರತದ ಗುಜರಾತಿಗೆ ತೆರಳುವ ರೈಲಿನಲ್ಲಿ ಕನ್ನಡ, ಇಂಗ್ಲೀಶ, ಗುಜರಾತಿ ಮೂರು ಬಾಶೆ ಸೇರಿದರೂ ಅದಕ್ಕಿಂತ ಹೆಚ್ಚು ಹಿಂದಿಯಲ್ಲಿ ಫಲಕಗಳಿದ್ದದ್ದು ಕಂಡು ಬಂತು. ಇನ್ನೂ ಕರ್ನಾಟಕದಲ್ಲೇ ಸಂಚರಿಸುವ ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಡುವ ರೈಲಿನಲ್ಲಿ ಹಿಂದಿ ನಾಮಫಲಕಗಳು ಏಕೆ ಬೇಕು.? ಕೇವಲ ಕನ್ನಡ ಮತ್ತು ಇಂಗ್ಲೀಶ್ ಸಾಕಾಗುವುದಿಲ್ಲವೇ.? ಇನ್ನು ಹಿಂದಿಗೆ ಸಂಬಂದವೇ ಇರದ ದಕ್ಶಿಣ ಬಾರತದ ಅನೇಕ ಕಡೆ ಸಂಚರಿಸುವ ರೈಲಿನಲ್ಲೂ ಹಿಂದಿಯನ್ನು ಹೇರಲಾಗಿದೆ. ಸ್ಥಳೀಯ ಮತ್ತು ರೈಲು ಹೊರಡುವ ಬಾಶೆಯಶ್ಟೇ ಫಲಕಗಳು ಹಿಂದಿಯಲ್ಲೂ ಇವೆ. ಕೇರಳಕ್ಕೆ ತೆರಳುವ ಒಂದು ರೈಲಿನಲ್ಲಿ ಕನ್ನಡ, ಮಲಯಾಳಿ, ಇಂಗ್ಲೀಶಿಗಿಂತ ಹಿಂದಿಯಲ್ಲೇ ಹೆಚ್ಚು ಫಲಕಗಳಿವೆ. ಇದು ಹೇರಿಕೆ ಅಲ್ಲದೇ ಮತ್ತೇನು.? ಸ್ಥಳೀಯ ಅಥವಾ ರೈಲು ಹೊರಡುವ ಸ್ಥಳಗಳ ಬಾಶೆಗಳಲ್ಲಿ ಮಾಹಿತಿ ಲಬ್ಯವಿಲ್ಲದಿದ್ದರೂ ಎಲ್ಲಿಯೂ ಹಿಂದಿಯನ್ನು ಬಿಟ್ಟಿಲ್ಲ. ರೈಲು ನಿಲ್ದಾಣದಲ್ಲೂ ಅನೇಕ ಮಾಹಿತಿಗಳನ್ನು ಸ್ಥಳೀಯ ಬಾಶೆಯಲ್ಲಿ ಕೊಡದೇ ಕೇವಲ ಹಿಂದಿ ಇಂಗ್ಲೀಶಿನಲ್ಲಿ ಕೊಡಲಾಗಿದೆ. ಇನ್ನು ಅದರ ಜೊತೆಗೆ ಒಂದ್ ಸಲ ನಮ್ಮ ಬಾರತೀಯ ರೇಲ್ವೇ ಇಲಾಖೆಯ ಮಿಂಬಲೆ (ವೆಬ್ ತಾಣ) ಮೇಲೆ ಕಣ್ಣು ಹಾಯಿಸಿದರೆ ನಮಗೆ ಕಾಣೋದು ಕೇವಲ ಒಂದೇ ಬಾಶೆಯ ಆಯ್ಕೆ. ಅದು ಹಿಂದಿ. ಇತರರಿಗೆ ಅನಾನುಕೂಲ ಆದರೂ ಪರ್ವಾಗಿಲ್ಲ, ಹಿಂದಿ ಬಲ್ಲವರಿಗೆ ಅನಾನುಕೂಲ ಆಗಬಾರದು ಅನ್ನೋ ದಾಟಿಯಲ್ಲಿ ರೇಲ್ವೇ ಇಲಾಖೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದನ್ನು ವಿರೋದಿಸದೇ ವಿದಿಯಿಲ್ಲ.!

ಹಿಂದಿ ಹೇರಿಕೆಯಿಂದ ಕೈಗೆಟುಕದ ಸೇವೆ.
ಕೇಂದ್ರ ಸರಕಾರದ ಇಂತಹ ಹೇರಿಕೆಯ ನೀತಿಯಿಂದ ರೇಲ್ವೇ ಇಲಾಖೆಯಲ್ಲಿ ಹಿಂದಿಯೇತರರಿಗೆ ತಮ್ಮ ನುಡಿಯಲ್ಲಿ ಸೇವೆ ಪಡೆದುಕೊಳ್ಳೋದು ಕೈಗೆಟುಕದಂತಾಗಿದೆ. ಇದನ್ನು ಗಂಬೀರವಾಗಿ ಪರಿಗಣಿಸದ ಕೇಂದ್ರ ಸರಕಾರ ಮಾತ್ರ ಎಂದಿನಂತೆ ಹಿಂದಿ ಹೇರಿಕೆಯಲ್ಲಿ ಮಗ್ನವಾಗಿದೆ. ಇದು ಸಾಲದೆಂಬಂತೆ ಇಂತಹ ಹಿಂದಿ ಹೇರಿಕೆಯನ್ನು ಪ್ರತಿ ವರುಶ ಸೆಪ್ಟೆಂಬರ್ ೧೪ ರಂದು ಕೇಂದ್ರ ಸರಕಾರ ಹಿಂದಿ ದಿನವನ್ನಾಗಿ ಆಚರಣೆ ಮಾಡುತ್ತದೆ. ಬಾಶಾ ವೈವಿದ್ಯತೆಗೆ ಪೆಟ್ಟು ಕೊಟ್ಟು, ನಮ್ಮ ನುಡಿಯಲ್ಲಿ ಸೇವೆ ಪಡೆದುಕೊಳ್ಳುವುದಕ್ಕೆ  ಅವಕಾಶ ನೀಡದ ಹಿಂದಿ ಹೇರಿಕೆಯಂತಹ ಪ್ರಯತ್ನಗಳನ್ನು ಒಕ್ಕೋರಲಿನಿಂದ ಖಂಡಿಸಬೇಕು. ಹಿಂದಿ ಹೇರಿಕೆಯನ್ನು ಕೊನೆಗೊಳಿಸಿ ದೇಶದ ವ್ಯವಸ್ಥೆಯಲ್ಲಿ ದೊರಕುವ ಎಲ್ಲ ಸೇವೆಯನ್ನು ನಮ್ಮ ನುಡಿಯಲ್ಲಿ ಪಡೆದುಕೊಳ್ಳುವತ್ತ ಹೆಜ್ಜೆ ಇಡಬೇಕಾಗಿರುವುದು ಇಂದಿನ ಅಗತ್ಯ.

2 ಟಿಪ್ಪಣಿಗಳು Post a comment
  1. raghavendra's avatar
    raghavendra
    ಸೆಪ್ಟೆಂ 12 2011

    ಲೇಕನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇನ್ನೂಂದು ವಿಷಯ ನಿಮಗೆ ಹೇಳಲು ಇಷ್ಟ ಪಡುತ್ತೇನೆ.

    ಮುಂಬೈ ನಿಂದಾ ಮೈಸೂರಿಗೆ ಹೋಗುವ. ರೈಲ್ (SHARAVATHI EXP) ಮೇಲೆ ೧ ಫಲಕವು ಕೂಡಾ ಕನ್ನಡದಲ್ಲಿ ಇಲ್ಲಾ.
    ಅದೇ ರೀತಿ ಮುಂಬೈದಿಂದ ಕರ್ನಾಟಕಕ್ಕೆ ಹೋಗು ಎಲ್ಲಾ ರೈಲಿನಲ್ಲಿ ಎಲೊಂದು ಇಲ್ಲೊಂದು ಕನ್ನಡ ಫಲಕಗಳಿವೇ.

    ಆದರೆ ಮುಂಬೈನಿಂದಾ ಅಂದ್ರ ಪ್ರದೇಶಕ್ಕೆ ಹೋಗುವ ನಾನು ನೋಡಿದ ಎಲ್ಲಾ ರೈಲುಗಳ ಪ್ರತಿ ಬೋಗಿ ಮೇಲೆ ತೆಲುಗುದಲ್ಲಿ ಫಲಕಗಳಿವೇ. ಅದರ ಜೊತೆಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಫಲಕಗಳಿವೇ.

    ಉತ್ತರ
  2. ಮಹೇಶ್. ಎಮ್. ಆರ್'s avatar
    ಮಹೇಶ್. ಎಮ್. ಆರ್
    ಸೆಪ್ಟೆಂ 12 2011

    ಹಿಂದಿ ಹೇರಿಕೆ ಎಶ್ಟರ ಮಟ್ಟಿಗೆ ಆಗಿದೆ ಅಂದ್ರೆ,, ಹಿಂದಿ ಯಾಕಿದೆ ಅಂತ ಕೇಳಬೇಕಾದ ನಾವು ಕನ್ನಡ ಯಾಕಿಲ್ಲ ಅಂತ ಕೇಳೊ ಹಾಗಾಗಿದೆ. ಕರ್ನಾಟಕದವರು ಅಂದ್ರೆ ಹೇಗಿದ್ರೂ ನಡೆಯುತ್ತದೆ, ಏನ್ ತೋರಿಸಿದ್ರು ನೋಡ್ತಾರೆ, ಏನ್ ಬಡಿಸಿದ್ರು ತಿಂತಾರೆ ಅನ್ನೊ ದೋರಣೆ ಇರಬೇಕು. ಇದು ಕೊನೆಯಾಗಬೇಕು. ನಮ್ಮ ನಮ್ಮ ಚೌಕಟ್ಟಿನಲ್ಲಿ ಹಿಂದಿ ಹೇರಿಕೆಯ ಬಗ್ಗೆ ಜಾಗ್ರುತಿ ಮೂಡಿಸೋಣ ಮತ್ತು ಅದನ್ನು ಬಲವಾಗಿ ವಿರೋದಿಸೋಣ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments