ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 17, 2011

1

ಕತ್ತಲೆಯಲ್ಲಿ ಕನ್ನಿಕಾ…

‍ನಿಲುಮೆ ಮೂಲಕ

ಶ್ರೀಮುಖ ಸುಳ್ಯ

ಕತ್ತಲೆಯ ಕೋಣೆಯಲ್ಲಿ ಕನ್ನಿಕಾ ಬಿಕ್ಕಿ-ಬಿಕ್ಕಿ ಅಳುತ್ತಾ ಇದ್ದಾಳೆ. ಅವಳ ಕಣ್ಣೀರು ಕಣ್ಣನ್ನು ತೊರೆಯದಂತೆ ರೆಪ್ಪೆಗಳು ಮಾಡಿದ ಯತ್ನಗಳು ವಿಫಲವಾಗುತ್ತಿವೆ. ಕಣ್ಣಿನ ರೆಪ್ಪೆಯ ಬಂಧವನ್ನು ಕಳೆದು ಕಣ್ಣ ಹನಿಗಳು ಕೆನ್ನೆಯನ್ನು ಒರೆಸಿ, ಸಮಾಧಾನಿಸುವಲ್ಲಿ ಅಸಹಾಯಕರಾಗಿ ಕೆಳಬೀಳುತ್ತಿವೆ. ಮುಚ್ಚಿದ ಕೋಣೆಯ ಬಾಗಿಲು- ಆಕೆಯ ನೋವು ಕತ್ತಲಿನಿಂದ ಬೆಳಕಿನೆಡೆಗೆ ಸರಿಯದಂತೆ ನೋಡಿಕೊಳ್ಳುತ್ತಿವೆ. ತುಂಬಿದ ಮನೆಯ- ಮುಂದಿನ ಕೋಣೆಯ- ಗೋಡೆಗಳ ಬದಿಯಲ್ಲಿ ಆಕೆ ಕುಳಿತು ಅಳುತ್ತಿರುವ ಕಾರಣ ಆದರು ಏನು?!.. ಆಕೆಯ ಬೆಚ್ಚಗಿನ ಮಡಿಲಲ್ಲಿ, ಸೆರಗನ್ನು ಬಳಸಿ ಮಗುವಿನಂತಹ ಚಿಕ್ಕದೊಂದು ಗೊಂಬೆ ಉಸಿರಿಡದೆ ಮಲಗಿದೆ.    

          ಕೋಣೆಯ ಕತ್ತಲಿಗೂ- ಆಕೆ ಮಗುವಿನ ಮನಸ್ಸೊಂದನ್ನು ಕಳಕೊಂಡಿದ್ದಾಳೆ- ಎಂಬುದು ಸ್ಪಷ್ಟವಾಗಿ ತಿಳಿಯುವಂತಿದೆ. 
               ಸರಿಯಾಗಿ 2 ವರ್ಷಗಳ ಹಿಂದೆ, ಪರಮೇಶಿ ಅನ್ನುವ ದೂರದ ಸಂಬಂಧಿ ಕನ್ನಿಕಾಳಿಗೆ ಹತ್ತಿರವಾಗಿರುತ್ತಾನೆ. ಇಬ್ಬರೂ ಸ್ನೇಹಿತರಾಗಿರುತ್ತಾರೆ. ಪರಮೇಶಿ ಸ್ನೇಹವನ್ನು ಪ್ರೀತಿಯಾಗಿ ಬದಲಿಸುವ ಹಂಬಲವನ್ನು ಮುಂದಿಟ್ಟಾಗ,ಬಹಳ ಕಟುವಾಗಿ ತಿರಸ್ಕರಿಸಿದ ಕನ್ನಿಕಾ-ಕೆಲ ತಿಂಗಳುಗಳ ನಂತರ ಒಲುಮೆಗೆ ಒಪ್ಪಿಯೇ ಬಿಡುತ್ತಾಳೆ. 
              ಕನ್ನಿಕಾ- ‘ಪ್ರೀತಿ ತನಗೊಲಿಯಿತು ಎಂಬುದನ್ನು ಮರೆತು, ಪ್ರೀತಿಗೆ ತಾನು ಒಲಿದೆ’,ಎಂಬಂತೆ ಪರಮೇಶಿಯನ್ನು ಬಳಸಲು ಪ್ರಾರಂಭಿಸುತ್ತಾಳೆ.- ಶರಣಾದ ಭಕ್ತನನ್ನು ದೈವ ಆಡಿಸಿದಂತೆ. ತನ್ನ ಯೋಚನೆ ಅಥವಾ ಯೋಜನೆಗೆ ಹೊರತಾಗಿ ಪರಮೇಶಿ ನಡಕೊಂಡರೆ- ಪರಮೇಶಿಯದ್ದೇ ತಪ್ಪು ಎಂಬಂತೆ, ಪ್ರೀತಿಗೆ good bye.. ಅನ್ನುತ್ತಿದ್ದಳು. ಆದರೂ ಅದು ಯಾವುದೋ ಆದರ್ಶಕ್ಕೆ ಅಂಟಿಕೊಂಡ ಪರಮೇಶಿ- ಆಕೆಯನ್ನು ತೊರೆಯುವ ಯಾವುದೇ ಯೋಚನೆಗೆ ಬದ್ದನಾಗುತ್ತಿರಲಿಲ್ಲ. ಅಯಸ್ಕಾಂತದಂತೆ- ಮತ್ತೆ ಅವಳ ಬಳಿಗೆ ‘ತುಂಬು ಬುಟ್ಟಿಯ sorry’ಯೊಂದಿಗೆ ಹಾಜರ್ ಆಗುತ್ತಿದ್ದ. 
              ಪರಮೇಶಿ ಎಷ್ಟಾದರೂ ಜೊತೆಗೇ ಇರುತ್ತಾನೆಂದಾದ ಮೇಲೆ-  ಅವನ ಪ್ರೀತಿಯನ್ನು test ಮಾಡೋದರಲ್ಲಿ ತಪ್ಪೇನು?- ಹೀಗಂದುಕೊಂಡಳು ಕನ್ನಿಕಾ. test ಅಂದರೆ- ಕೆಲವು ಬಾರಿ ಸುಮ್ಮನೆ ಸಿಟ್ಟಾಗುತ್ತಿದ್ದಳು. ಹೇಳದೆ 2-3 ದಿನ ಕಾಣೆಯಾಗುತ್ತಿದ್ದಳು. ಪರಮೇಶಿಯನ್ನು ಭೇಟಿಯಾಗಲು ತಿರಸ್ಕರಿಸುತ್ತಿದ್ದಳು. ಅಷ್ಟೇ ಯಾಕೆ? ಪರಮೇಶಿಯನ್ನೇ ತಿರಸ್ಕರಿಸಿದ್ದೂ ಉಂಟು. ಆದರೂ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದ- ಪರಮೇಶಿ. ಇಲ್ಲೂ ಹಳೆ sceneಗಳೇ repeat ಆಗುತ್ತಿದ್ದವು.ಪರಮೇಶಿಯೇ ಆರೋಪಿ ಆಗಿ ಬಿಡುತ್ತಿದ್ದ. ಪುನಃ ‘ತುಂಬು ಬುಟ್ಟಿಯ sorry‘ ಕನ್ನಿಕಾ ಮುಂದೆ ಬರುತ್ತಿದ್ದವು. ‘ಇದೇ ಕೊನೆ’ ಎಂಬಂತೆ ಮತ್ತೆ ಜೊತೆಯಾಗುತ್ತಿದ್ದಳು- ಕನ್ನಿಕಾ. ಆತನ ಪ್ರೀತಿಯನ್ನು test ಮಾಡುವುದೇ ಆಕೆಗೊಂದು ಸರ್ಕಸ್. ಇದರಲ್ಲೇ ಆಕೆಗೆ ಏನೋ ತೃಪ್ತಿ. ಒಟ್ಟಿನಲ್ಲಿ ಪರಮೇಶಿಯ ಪ್ರೀತಿ ‘laboratoryಯ ಇಲಿ’ಯಾದದ್ದು ಸತ್ಯ.
                ಪ್ರೀತಿ ಸಾಯಬಾರದೆಂಬುದು ಆದರ್ಶವಾದರೂ, ಪೂರ್ತಿಯಾಗಿ ಕನ್ನಿಕಾಳಿಗೆ ಶರಣಾಗಬಾರದೆಂಬುದು- ಪರಮೇಶಿಯ ನಿಲುಮೆ. ಈ ಕಾರಣದಲ್ಲೇ ಅವರ ನಡುವೆ ಜಗಳ ನಡೀತಾ ಇತ್ತು. ಕನ್ನಿಕಾ- ಪರಮೇಶಿಯನ್ನು ತುಂಬು ಬುಟ್ಟಿಯ ಕ್ಷಮೆಗಳೊಂದಿಗೆ ಕಾಣಲೆಂದೇ- ಆತನಿಗೆ ‘ಜಗಳಗಂಟ’ ಎಂಬ ಬಿರುದನ್ನೂ  ಕೊಟ್ಟುಬಿಟ್ಟಳು. ಆತನಿಗೆ ‘ಜಗಳಗಂಟ’ ಎಂದೆನಿಸಿಕೊಳ್ಳಲು ಇಷ್ಟವಿಲ್ಲದೇ- ಪುನಃ ಜಗಳ ನಡೆದದ್ದನ್ನು ಯಾರಾದರು ಕಂಡಿದ್ದರೆ ನಗುವ ಪ್ರಸಂಗವಾಗುತ್ತಿತ್ತೋ ಏನೋ!!!. ಕನ್ನಿಕಾಳ ಆಟದಿಂದ ಬಳಲಿದ ಪರಮೇಶಿ- ಏನಾದರೂ ಸರಿಯೇ, ಸ್ವಾಭಿಮಾನ ಮುಖ್ಯ- ಅನ್ನುವ ನಿರ್ಧಾರಕ್ಕೆ ಬದಲಾಗಿ ಬಿಟ್ಟ.
                ಹೇಗಾದರೂ ‘ಜಗಳಗಂಟ’ನೆಂದಾದ ಮೇಲೆ ಜಗಳವಾದರೇನು?- ಎಂದುಕೊಂಡ. ಆಕೆಯ ಮೊಂಡು ಮಾತಿಗೆ ಕಟುವಾಗಿಯೇ ಉತ್ತರಿಸತೊಡಗಿದ. Laboratoryಯ ಇಲಿಗೆ ಹುಲಿಯ ರೋಷ  ಬಂದದ್ದು ತಿಳಿಯದೆ, ಕನ್ನಿಕಾ- ಪರಮೇಶಿ ಮತ್ತೆ ಬಂದಾನೆಂಬ ತಿರಸ್ಕಾರದಿಂದ, ಆತನನ್ನು ತೊರೆದೇ ಬಿಟ್ಟಳು.
                  *               *
                ಮೊದಲೆಲ್ಲ ಎರಡೇ ಗಂಟೆಗೆ sorry ಅನ್ನುತ್ತಿದ್ದ ಪರಮೇಶಿ, ಮತ್ತಿನ ದಿನಗಳಲ್ಲಿ ಎರಡು ದಿನ ಕಳೆದು, ಅಮ್ಮಾವ್ರ ಸದ್ದಿಲ್ಲದಾಗ- ‘ಹೋಗ್ಲಿಬಿಡಿ’ ಅಂದುಕೊಂಡು ‘sorry’ ಅನ್ನುತ್ತಿದ್ದ. ಆದರೆ ಈಗ ಎರಡು ವಾರಗಳು ಸಂದು ಹೋಗಿವೆ. ಪರಮೇಶಿ- ಆತನದಲ್ಲದ ಹಾಗೂ ತನ್ನದೇ ಆದ ತಪ್ಪಿಗೆ- ಇನ್ನೇನು ಗಂಟೆಗಳಲ್ಲಿ, ಹೆಚ್ಚೆಂದರೆ ದಿನಗಳಲ್ಲಿ ‘sorry’ ಅಂದಾನು.-  ಎಂದುಕೊಂಡಳು ಕನ್ನಿಕಾ.
                ಆಕೆಯ ಲೆಕ್ಕಾಚಾರದಲ್ಲೇ ತಿಂಗಳು ಸಂದಿತು. ಪರಮೇಶಿಯ ಪತ್ತೆ ಇಲ್ಲ. ಕನ್ನಿಕಾಳ ಎದೆಯಲ್ಲಿ ನಡುಕ. “ಪರಮೇಶಿ ಮರಳಲಾರನೆ?”- ಎಂಬ ಭಯ. “ತಾನು ಆಡಿದ್ದು ಹೆಚ್ಚಾಯಿತೇ?”- ತನ್ನ ಮೇಲೆಯೇ ಆಕೆಗೆ ಸಿಟ್ಟು. “ತಾನಾಗಿಯೇ ‘sorry’ ಎನ್ನಲೇ?”- “ಬೇಡ, ಸೋತಂತಾಗುತ್ತದೆ.” ಎಂದಿತು ಮನಸ್ಸು. “ಒಂದು ತಿಂಗಳು ಕಾದದ್ದಾಗಿದೆ. ಇನ್ನೂ ಸ್ವಲ್ಪ ಸಮಯ ಕಾದರೇನಂತೆ?”-ಎಂದಿತು ಹೃದಯ.
                ಈಕೆ ಕಾದಂತೆ, ಸಮಯವೂ ಕಾದಿತು. ವಿರಹದ ಬೆಂಕಿಯು ಕಾದಿತು. ಪರಮೇಶಿ ಬರಲೇ ಇಲ್ಲ!!. ಆತನ contact ಆಗುವ ದಾರಿಗಳೆಲ್ಲಾ  ಬದಲಾಗಿದ್ದವು. ಅಥವಾ ಪರಮೇಶಿಯೇ ಬದಲು ಮಾಡಿದ್ದಾನೆ.  ಎರಡು ತಿಂಗಳುಗಳಿಂದ ಅಸಹಾಯಕಿಯಾಗಿರುವ ಕನ್ನಿಕಾ- ಅಳು ಬಂದಾಗ ಕತ್ತಲೆಯ ಕೋಣೆಯ ಮುಲೆಯಲ್ಲಿ ಗೋಡೆಗೆ ಒರಗಿ ಕುಳಿತುಕೊಳ್ಳುತ್ತಾಳೆ. ಕೈಯಲ್ಲೊಂದು ಪುಟ್ಟ ಮಗುವಿನ ಗೊಂಬೆ ಹಿಡಿದು- “ತನ್ನ ನೋವು ಕೇಳುವ ಕಿವಿಗಳನ್ನು ಕಳಕೊಂಡೆ” ಎಂದು ದುಃಖಿಸುತ್ತಾಳೆ.ತನ್ನಷ್ಟಕ್ಕೇ, ತನ್ನ ತಪ್ಪಿನ ಅರಿವಲ್ಲಿ ಅಳುತ್ತಾಳೆ. ಕಣ್ಣೀರು ಬತ್ತುತ್ತಿದ್ದಂತೆ ‘ಪೆದ್ದು ನಗುವಿನ, ಮುಗ್ದ ಪರಮೇಶಿ’ಯ ಯಾವುದೋ ಹಾಸ್ಯದ ಮಾತು ನೆನಪಾಗಿ ನಗುತ್ತಾಳೆ. ಅದೇ temporary ನಗು ಮುಖದಲ್ಲಿ, ಕತ್ತಲೆಯ ಬಾಗಿಲು ತೆರೆದು- ಎಂದೆಂದೂ ಹೊರ ಬರುತ್ತಾಳೆ ಕನ್ನಿಕಾ.
                  *               *              *
                ಪ್ರೀತಿಯ ಓದುಗರೇ…  “ನಾವೂ lifeನಲ್ಲಿ, ನಮ್ಮ ಪ್ರಿಯರೊಡನೆ, ಅದೆಷ್ಟೋ ಸಲ ಕಾರಣಗಳಿಲ್ಲದೇ ಕೋಪಗೊಂಡಿದ್ದೇವೆ.- ಅವರೇ sorry ಅನ್ನಲಿ ಅಂತ. ಅವರೆದುರು ಒಂಟಿಯಾಗುವ ನಾಟಕ ಮಾಡಿದ್ದೇವೆ.- ನಮ್ಮ ಪ್ರೀತಿಯ ಜನರು ‘ನಾನೂ ಬರುತ್ತೇನೆ’ ಅನ್ನಲಿ ಅಂತ. ವಿಪರೀತವಲ್ಲದ ಅನಾವಶ್ಯಕ ಜಗಳ ತೆಗೆದಿದ್ದೇವೆ.- ನಮ್ಮವರು ನಮ್ಮನ್ನು ಸಮಾಧಾನಿಸಲಿ ಅಂತ. ನಾವೂ ಮೌನಿಗಳಾಗಿದ್ದೇವೆ.- ನಮ್ಮ ಪ್ರೀತಿಯ ಜನರು, ಅವರಾಗಿಯೇ ಬಂದು ಮಾತನಾಡಿಸಲಿ ಅಂತ.”
                ಈ ಎಲ್ಲಾ ಘಟನೆಗಳು, ತುಂಬಾ ಒಳ್ಳೆಯ ನೆನಪು ಹಾಗೂ ಅನುಭವ ಕೊಡುತ್ತವೆ.- ನಾವು ಸ್ವಾರ್ಥಿಗಳಲ್ಲದಿದ್ದರೆ ಮಾತ್ರ. ನಮಗೆ ‘ಕ್ಷಮೆ ಕೇಳುವ’ ಹಾಗೂ ‘ಕ್ಷಮಿಸುವ’ ಹೃದಯವಿದ್ದಾಗ ಮಾತ್ರ.
                ಆದರೆ ಕನ್ನಿಕಾ?!!!.. ಕ್ಷಮಿಸುವ ಹೃದಯಿಯು ಅಲ್ಲ. ಕ್ಷಮೆ ಕೇಳುವ ಮನಸ್ಸು ಆಕೆಗೆ ಮೊದಲೇ ಇಲ್ಲ. ಆಕೆ ಎಷ್ಟರ ಮಟ್ಟಿಗೆ ಪರಮೇಶಿಯ  ಪ್ರೀತಿಯನ್ನು ಅಪೇಕ್ಷಿಸಲು ಅರ್ಹಳು? ಇಲ್ಲ, ಆಕೆಗೆ ಆ ಅರ್ಹತೆ ಇಲ್ಲ. ಆದರೂ ಕರುಣಾಮಯಿಗಳಾದ ನಿಮಗಾಗಿ ನಾನು, “ಒಂದು ದಿನ ಕನ್ನಿಕಾ ಕತ್ತಲಲ್ಲಿ ಕುಳಿತಿದ್ದಾಗ, ಬೆಳಕಾಗಿ ಮತ್ತೆ ಪರಮೇಶಿ ಬಂದ. ಆಕೆ ಅತಿಯಾದ ಆನಂದದಿಂದ- ತನ್ನ ಕೈಗಳಲ್ಲಿದ್ದ ಗೊಂಬೆಯನ್ನು ತೊರೆದು- ಓಡೋಡಿ ಪರಮೇಶಿಯನ್ನು ಸೇರುತ್ತಾಳೆ. ಕಿವಿಗಳಿಲ್ಲದ ಪುಟ್ಟ ಗೊಂಬೆ ಮತ್ತೆಂದೂ ಯಾರೊಬ್ಬರ ನೋವನ್ನೂ ಕೇಳಿಸಿಕೊಳ್ಳಲೇ ಇಲ್ಲ. ಶುಭಂ…!!..” ಎನ್ನುತ್ತಾ ಕಥೆ ಮುಗಿಸ ಬಹುದು. Ending ನಿಮಗೆ ಹಿತವಾಗುವಂತೆ ಕಂಡುಕೊಳ್ಳಿ. ವಿಷಯ ಮುಖ್ಯ.. 🙂
*******
1 ಟಿಪ್ಪಣಿ Post a comment
  1. ಸತ್ಯಚರಣ ಎಸ್. ಎಮ್. (Sathya Charana S.M.)'s avatar
    ಸೆಪ್ಟೆಂ 18 2011

    ಶ್ರೀಮುಖ.. ನಿಜ..ನಿಮ್ಮ ಮಾತು..!
    ಮೊನ್ನೆ ತಾನೆ ನಡೆದ ಇದೇ ರೀತಿಯ ಘಟನೆ, (ಪ್ರೇಮಿಗಳ ಮಧ್ಯೆ ಅಲ್ಲ, ಸೋದರ-ಸೋದರಿಯರ ಮಧ್ಯೆ) ನೆನಪಿಗೆ ಬಂತು…!

    ನಿಮ್ಮೊಲವಿನ,

    ಸತ್ಯ.. 🙂

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments