ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 20, 2011

2

ಹಾಗೇ ಉಳಿದ ಪ್ರಶ್ನೆ…..

‍ನಿಲುಮೆ ಮೂಲಕ

ವಿಜಯ್ ಹೆರಗು

         ಅವರು ‘ಭಗಿನಿ’ ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ  ಇದ್ರು. ನಾನು ಅವರ ಮಾತನ್ನೇ ಗಮನ ಇಟ್ಟು ಕೇಳ್ತಾ ಇದ್ದೆ. ಅವರು ನಮ್ಮ ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ಅವರ ಜೊತೆ ನಾವು ನಾಲ್ಕೈದು ಮಂದಿ ಕೂತಿದ್ವಿ. ಅವರು ನಿಮಗೆಲ್ಲಾ ಒಂದು ಪ್ರಶ್ನೆ ಕೇಳ್ತೀನಿ ಯೋಚಿಸಿ ಉತ್ತರ ಕೊಡಿ ಅಂದ್ರು.  ಅವರು ಕೇಳಿದ ಪ್ರಶ್ನೆ ಹೀಗಿದೆ.ಒಂದು ಊರು. ಆ ಊರಿನ ರೈಲ್ವೇ ಹಳಿಗಳ ಮೇಲೆ ಐದು ಮಕ್ಕಳು ಆಟ ಆಡ್ತಿದ್ದಾರೆ. ಐದರಲ್ಲಿ ನಾಲ್ಕು ಮಕ್ಕಳು live trackನಲ್ಲಿ ಆಡ್ತಾ ಇದ್ರು, ಒಬ್ಬ ಹುಡುಗ ಮಾತ್ರ dead trackನಲ್ಲಿ ಆಡ್ತಿದ್ದ. ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬರುತ್ತಿದೆ. ರೈಲ್ವೇ ಗಾರ್ಡ್ ಕೊನೇ ಕ್ಷಣದಲ್ಲಿ ಹಳಿಯ ಮೇಲೆ ಆಡ್ತಿರೋ ಮಕ್ಕಳನ್ನು ನೋಡ್ತಾನೆ. ಅವನ ಕೈಯಲ್ಲಿ ಲಿವರ್ ಇದೆ….ಅವನಿಗಿರುವ option ಎರಡು. ಮೊದಲನೆಯದು live trackನಲ್ಲಿ ಆಡ್ತಿರೋ ನಾಲ್ಕು ಮಕ್ಕಳನ್ನು ಬಚಾವು ಮಾಡುವುದು ಅಥವಾ ಎರಡನೆಯದು dead trackನಲ್ಲಿ ಆಡ್ತಿರೋ ಒಬ್ಬಹುಡುಗನನ್ನು ಉಳಿಸುವುದು.

ನೀವು ರೈಲ್ವೇ ಗಾರ್ಡ್ ಆಗಿದ್ದರೆ ನಿಮ್ಮ ನಿರ್ಧಾರ ಏನು!!!???
ನಾವು ಎಲ್ಲರೂ ಹೇಳಿದ ಉತ್ತರ ಮೊದಲನೆಯ option  ಆಗಿತ್ತು. ಯಾಕಂದ್ರೆ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ. ನಾಲ್ಕು ಮಕ್ಕಳ ಜೀವ ಉಳಿಸುವ ಸಲುವಾಗಿ ಒಂದು ಮಗುವಿನ ಜೀವ ಹೋದರೆ ತಪ್ಪೇನಿಲ್ಲ ಹಾಗಾಗಿ ಮೊದಲನೆಯ option ಸೂಕ್ತ ಎನ್ನಿಸಿತು. ಅದನ್ನೇ ನಾವೆಲ್ಲರೂ ಹೇಳಿದ್ವಿ.
                        dead track ನಲ್ಲಿ ಆಡುತ್ತಿದ್ದ ಹುಡುಗ ಅಲ್ಲಿ ರೈಲು ಬರುವುದಿಲ್ಲ ಎಂಬ ನಂಬಿಕೆಯ (!!??) ಮೇಲೆ ಅವನು ಅಲ್ಲಿ ಆಡುತ್ತಿದ್ದ, ಆದರೆ live track ನಲ್ಲಿ ಆಡುತ್ತಿದ್ದ ಹುಡುಗರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾದ ಸ್ಥಳದಲ್ಲಿ ಆಟವಾಡುತ್ತಿದ್ದರು. ಸೈದ್ದಾಂತಿಕವಾಗಿ ಯೋಚಿಸಿದಲ್ಲಿ dead track ನಲ್ಲಿ ಆಡುತ್ತಿದ್ದ ಹುಡುಗನ ಮೇಲೆ ರೈಲು ಹರಿದರೆ ಅದು ತಪ್ಪು.
           ಇದನ್ನು ಪ್ರಜಾಪ್ರಭುತ್ವಕ್ಕೆ, ಬಹುಮತಕ್ಕೆ ಉದಾಹರಣೆಯಾಗಿ ಉಪಯೋಗಿಸಬಹುದು. ಇಲ್ಲಿ ಬಹುಜನರ ಅಭಿಪ್ರಾಯಕ್ಕೆ ಮಾನ್ಯತೆ. ಕೆಲವೊಮ್ಮೆ ಕೆಲವು ತಪ್ಪು ನಿರ್ಧಾರಗಳೂ ಮನ್ನಣೆಗೆ ಒಳಪಡುತ್ತವೆ. ಭ್ರಷ್ಟ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ.  ಕಡು ಭ್ರಷ್ಟ ವ್ಯಕ್ತಿಯೊಬ್ಬ ಪದೇ ಪದೇ ಚುನಾವಣೆಯಲ್ಲಿ ಜಯಿಸಿ ಮಂತ್ರಿಯಾಗುತ್ತಾನೆ. ಯಾರದೋ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿ ಜೈಲು ಸೇರಿದ ನಾಯಕ, ಜನನಾಯಕರ ಬಂಧನ ವಿರೋಧಿಸಿ ದಾಳಿಗಳಾಗುತ್ತವೆ, ಬಂದುಗಳಾಗುತ್ತವೆ….ಆದರೆ ವ್ಯತ್ಯಾಸ ಒಂದೇ ……ಅಲ್ಲಿ ನಾಲ್ವರ ಪ್ರಾಣವಾದರೂ ಉಳಿಯಿತು ಎಂಬ ಸಮಾಧಾನ ಇರುತ್ತದೆ…….ಆದರೆ ಇಲ್ಲಿ !!!!!???? ಪ್ರಶ್ನೆ ಹಾಗೇ ಉಳಿದಿದೆ.
Read more from ಲೇಖನಗಳು
2 ಟಿಪ್ಪಣಿಗಳು Post a comment
  1. ontipremi's avatar
    ಸೆಪ್ಟೆಂ 20 2011

    Super Kathe sir

    ಉತ್ತರ
  2. sriharsha's avatar
    sriharsha
    ಸೆಪ್ಟೆಂ 21 2011

    ಮ್ಯಾನೇಜ್ ಮೆಂಟಿನಲ್ಲಿ ಹೇಳುವ ಬಹಳ ಹಳೆಯ ಕಥೆ. ಉತ್ತಮ ಉದಾಹರಣೆ ರಿಯಾಲಿಟಿ ಶೋ ನ ವಿನ್ನರ್ ಗಳು. ಅಯೋಗ್ಯರೇ ಹೆಚ್ಚು ಗೆಲ್ಲುವಾಗ mejority fails ಎನ್ನಿಸದಿರದು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments