ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 27, 2011

1

ತಾಯಿಯೋ ತಂದೆಯೋ…?

‍ನಿಲುಮೆ ಮೂಲಕ

ಪ್ರವೀಣ್ ಬೆಂಗಳೂರು

  ಕೆಲಸ ಮುಗಿಸಿ ಹೊರಡುವ ಹೊತ್ತಾಯಿತು, ಹೊರ ಬಂದು ನೋಡಿದರೆ ಸಂಜೆಗತ್ತಲು. ಇನ್ನೇನು ಆಗಲೋ ಈಗಲೋ ಭೋರ್ಗರೆವ ಮಳೆಯ ಸೂಚನೆ ಆದರೂ ಲೆಕ್ಕಿಸದೆ ಹೊರಟೆ; ಹತ್ತು ಹೆಜ್ಜೆ ಹಾಕಿ ಮುನ್ನಡೆದೆ, ಮಳೆ ಸುರಿದೇ ಬಿಟ್ಟಿತು. ತಕ್ಷಣವೇ ನನ್ನ ಸೂಟ್‌ಕೇಸ್‌ನಲ್ಲಿದ್ದ ರೈನ್‌ಕೋಟ್ ತೆಗೆದು ಹಾಕಿಕೊಳ್ಳುವ ಹೊತ್ತಿಗೆ ನನೆದು ತೊಪ್ಪೆಯಾಗಿ ಹೋಗಿದ್ದೆ. ಆದರೂ ಧರಿಸಿ ನಡೆಯುತ್ತಲೇ ಹೊರಟೆ. ಮಾರ್ಗ ಮಧ್ಯದಲ್ಲಿ  ಶಾಲೆಯಿಂದ ಹೊರಟ ಮಗು ಮಳೆಯಿಂದ ಅಲ್ಲಿಯೇ ಬಳಿಯಿದ್ದ ಅಂಗಡಿಯ ಮುಂದೆ ಸ್ವಲ್ಪವೇ ನೆನೆಯುತ್ತಾ ನಿಂತಿದ್ದನ್ನು ಕಂಡೆ. ಮಗು ಚಳಿಯಿಂದ ನಡುಗುತ್ತಿತ್ತು. ನಾನು ಮಗುವಿನ ಬಳಿಗೆ ಹೋಗುವಷ್ಟರಲ್ಲಿ ಮಗುವಿನ ತಂದೆ ಬಂದು ಮಗುವನ್ನು ಬಿಗಿದಪ್ಪಿ ಹಿಡಿದು ಭುಜಕ್ಕೆ ಆನಿಸಿಕೊಂಡು ಹೊರಟರು. ಹಿಂದಿನಿಂದ ಮಗು ನನ್ನನ್ನು ನೋಡಿ ಸುಂದರವಾದ ನಗೆಯೊಂದ ಬೀರಿತು. ಆಗಲೇ ನನಗನ್ನಿಸಿತು ತಾಯಿಯ ಬಿಸಿಯಪ್ಪುಗೆಯಷ್ಟೇ ಮನಕ್ಕೆ ಆಹ್ಲಾದ ನೀಡುವುದು ತಂದೆಯ ಎದೆಯಪ್ಪಿಗೆ ಎಂದು. ಎಲ್ಲಿಯೋ ಓದಿದ್ದ ನೆನಪು ತಂದೆಯು ಎದೆಗೆ ಅಪ್ಪಿಕೊಂಡು ಮಗುವನ್ನು ಮಲಗಿಸುವಾಗ ಆ ಮಕ್ಕಳು ಬೇಗೆ ಮಲಗುತ್ತವೆ ಕಾರಣ ತಂದೆಯ ಹೃದಯ ಬಡಿತ ತನ್ನ ಮಗುವಿನ ಹೃದಯ ಮಿಡಿತಕ್ಕೆ ಕೊಂಡಿಯಂತಿರುತ್ತದೆ.
    ತಕ್ಷಣ ನನ್ನ ಮನದಲ್ಲಿ ಅಳುಕು ಕಂಡಿತು ಕಾರಣ ಚಿಕ್ಕಂದಿನಿಂದಲೂ ತಾಯಿಯ ತೆಕ್ಕೆಯಲ್ಲೇ ಬೆಳೆದ ನನಗೆ ಎಂದಿಗೂ ತಂದೆಯ ಕಡೆ ಮನವೊಲಿಯಲಿಲ್ಲ ಹಾಗೆಂದ ಮಾತ್ರಕ್ಕೆ ತಂದೆಯ ಮೇಲೆ ಪ್ರೀತಿಯಿಲ್ಲವೆಂದಲ್ಲ ನನ್ನ ತಂದೆ ಕೆಟ್ಟಾವರು ಎಂದಲ್ಲ ಆದರೂ ನಾನು ತಾಯಿಯನ್ನು ಪ್ರಿತಿಸುತ್ತಿದ್ದಕ್ಕಿಂತ ಕೊಂಚ ಕಡಿಮೆಯೇ. ವಿಧಿಯಾಟ ತಂದೆಯ ಅವಶ್ಯಕತೆ, ಮಹತ್ವ ಅರಿಯುವ ವೇಳೆಗೆ ಆ ಮಾಣಿಕ್ಯವನ್ನು ಕಳೆದುಕೊಂಡಿದ್ದೆ. ಆ ಮುಗ್ದ ಮಗುವಿನ ಸಂತಸದ ತೃಪ್ತಿಯ ಮುಖ ಕಂಡಾಗ ನನಗೆ ನನ್ನ ತಂದೆಯ ನೆನಪಾಯ್ತು. ಕಣ್ಣಿನಿಂದ ನೀರು ಜಾರುವಷ್ಟರಲ್ಲಿ ನನಗೆ ಎಚ್ಚರವಾಯ್ತು. ನನ್ನ ಕಣ್ಣೀರು ನನ್ನ ತಾಯಿಗೆ ನೋವನ್ನುಂಟುಮಾಡಬಹುದೆ? ನನ್ನ ತಂದೆ ಹೋದಾಗಿನಿಂದ ನನ್ನನ್ನು ಎಲ್ಲಿಯು ಜಾರಲು ಬಿಡದೆ, ಮನದಲ್ಲೇ ಪ್ರೀತಿಯಿಟ್ಟು ದಂಡಿಸುತ ತಂದೆಯಿಲ್ಲದ ಮಗು ಎಂಬ ಭಾವ ಮೂಡದಂತೆ ತಂದೆಯೂ-ತಾಯಿಯೂ ಆಗಿ ಬೆಳೆಸಿದ ಆಕೆಗೆ ಇದೇ ನಾನು ಕೊಟ್ಟ ಪ್ರಾಮುಖ್ಯತೆ? ಮನ ಅಳುಕಿತು.

ಕಣ್ಣೊರೆಸಿಕೊಂಡೆ, ಎಲ್ಲರಿಗೂ ತಂದೆ-ತಾಯಿ ಇಬ್ಬರೂ ಇರಬಹುದು ಆದರೆ ತಂದೆಯಾಗಿದ್ದುಕೊಂಡು ಮಕ್ಕಳನ್ನು ಬೆಳೆಸಿ ಸಾಕಿ ಸಲಹುವ ಧೈರ್ಯವಂತ ತಾಯಿಯು ನನಗೆ ತಂದೆಗಿಂತ ಮಿಗಿಲು ಎನಿಸಿತು. ಆದರು ಕೆಲವೊಮ್ಮೆ
ತಂದೆಯಿದ್ದಿದ್ದರೆ. . . . . . .? ಚೆನ್ನಾಗಿತ್ತು ಅನ್ನಿಸುತ್ತದೆ. ಆದರೆ ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಕಾರಣ ತಕ್ಷಣ ನನ್ನ ಜೀವಕ್ಕೆ ಜೀವವಾಗಿ ಉಳಿದ ಆ ನಿಷ್ಕಲ್ಮಶ ಕಣ್ಣುಗಳ ಪ್ರೀತಿ, ವಾತ್ಸಲ್ಯ ಮತ್ತು ಮಮತೆಗಳ ಮೂರ್ತಿಯ ರೂಪ ನನ್ನ ಕಣ್ಣೆದುರಿಗೆ ಮೂಡುತ್ತದೆ.

ನನಗೆ ಈ ಭಾವ ಮೂಡಿದರೆ, ಇನ್ನು ಆ ತಾಯಿಗೆ. . . .? ತನ್ನ ಸರ್ವಸ್ವವನ್ನು ಕಳೆದುಕೊಂಡು ಮಕ್ಕಳನ್ನು ಕೈಬಿಡದೆ ಒಂದು ಹಂತಕ್ಕೆ ತಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಇಲ್ಲಿಗೆ ಮುಗಿಯಿತು ನನ್ನ ಕರ್ತವ್ಯ , ದೈವ ಎಂದಾದರೂ ನನ್ನ ಕರೆಯಬಹುದು ಎಂದಾಗ ನನ್ನ ಬದುಕೇ ಶೂನ್ಯವೆನಿಸಿ ತಾಯಿಯಿಲ್ಲದ ಮುಂದಿನ ಬದುಕಿನ ಬಗೆಗೆ ಕಲ್ಪಿಸಿಕೊಳ್ಳಲು ಸಹ ಭಯವಾಗುತ್ತದೆ.

ನಾ ಕೇಳುವುದೊಂದೆ ನನ್ನ ಆಸೆಗೆ ಆಸೆಯಾದ, ಕಣ್ಣಿಗೆ ಕಣ್ಣಾದ, ಪ್ರಾಣಕ್ಕೆ ಪ್ರಾಣವಾದ ಆ ಮಮತೆಯ ಮೂರ್ತಿಗೆ ನನ್ನೆಲ್ಲಾ ಆಯಸ್ಸನ್ನು ನೀಡಿ ಸಲಹು ನಾನಿರುವರೆಗೆ ಅವಳೊಡನೆ ಇರುವ ಭಾಗ್ಯವ ಕರುಣಿಸು ಎಂದು. ನಿಜವಾಗಿಯೂ
ಮಾತೃ ದೇವೋ ಭವ: ಎಂಬ ಮಾತು ಅಕ್ಷರಶ: ಸತ್ಯ ಅಲ್ಲವೇ.

************

facebook.com

1 ಟಿಪ್ಪಣಿ Post a comment
  1. Shashank Hosahally's avatar
    ಆಕ್ಟೋ 3 2011

    nanna manasaalada mathu nimma blog nali odi, ondu reethi samadana aaythu, ekendare nanathe enobburu kuda tade nenasuthaa iddare endu.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments