ವಿಷಯದ ವಿವರಗಳಿಗೆ ದಾಟಿರಿ

Archive for

23
ಸೆಪ್ಟೆಂ

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..

ಅಶ್ವಿನ್ ಎಸ್ ಅಮೀನ್

ಕೋಮುವಾದ, ಜಾತಿವಾದ,  ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ – ಪಂಗಡಗಳೆಂಬ ವಿಂಗಡಣಾ ರಾಜಕೀಯ.
ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮತ್ತಷ್ಟು ಓದು »
22
ಸೆಪ್ಟೆಂ

”ಅರುಣರಾಗ”

ರಾಘವೇಂದ್ರ ನಾವಡ ಕೆ ಎಸ್

“ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“…. ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ… ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ.. ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ. ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು. ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು. ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ, ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.

ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು. ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ, ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು.. ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು. ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು. ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು.. ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು. ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ… ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು. ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ. ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ.. ಮೊದ-ಮೊದಲು ನಿಧಾನವಾದರೂ  ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು.. ಆ೦ಟಿ ಅಮ್ಮನಾದಳು. ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ. ಶಾಲೆಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು. ಶಾಲೆಯಿ೦ದ ಬ೦ದವನೇ, ತಾಯಿಯೊ೦ದಿಗೆ, ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು ನನ್ನತ್ತ ಬರುತ್ತಾ ಕೂಗುತ್ತಿದ್ದ “ಅಪ್ಪಾ“ ಎನ್ನುವ ಕೂಗು. ಮತ್ತಷ್ಟು ಓದು »

20
ಸೆಪ್ಟೆಂ

ಹಾಗೇ ಉಳಿದ ಪ್ರಶ್ನೆ…..

ವಿಜಯ್ ಹೆರಗು

         ಅವರು ‘ಭಗಿನಿ’ ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ  ಇದ್ರು. ನಾನು ಅವರ ಮಾತನ್ನೇ ಗಮನ ಇಟ್ಟು ಕೇಳ್ತಾ ಇದ್ದೆ. ಅವರು ನಮ್ಮ ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ಅವರ ಜೊತೆ ನಾವು ನಾಲ್ಕೈದು ಮಂದಿ ಕೂತಿದ್ವಿ. ಅವರು ನಿಮಗೆಲ್ಲಾ ಒಂದು ಪ್ರಶ್ನೆ ಕೇಳ್ತೀನಿ ಯೋಚಿಸಿ ಉತ್ತರ ಕೊಡಿ ಅಂದ್ರು.  ಅವರು ಕೇಳಿದ ಪ್ರಶ್ನೆ ಹೀಗಿದೆ.ಒಂದು ಊರು. ಆ ಊರಿನ ರೈಲ್ವೇ ಹಳಿಗಳ ಮೇಲೆ ಐದು ಮಕ್ಕಳು ಆಟ ಆಡ್ತಿದ್ದಾರೆ. ಐದರಲ್ಲಿ ನಾಲ್ಕು ಮಕ್ಕಳು live trackನಲ್ಲಿ ಆಡ್ತಾ ಇದ್ರು, ಒಬ್ಬ ಹುಡುಗ ಮಾತ್ರ dead trackನಲ್ಲಿ ಆಡ್ತಿದ್ದ. ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬರುತ್ತಿದೆ. ರೈಲ್ವೇ ಗಾರ್ಡ್ ಕೊನೇ ಕ್ಷಣದಲ್ಲಿ ಹಳಿಯ ಮೇಲೆ ಆಡ್ತಿರೋ ಮಕ್ಕಳನ್ನು ನೋಡ್ತಾನೆ. ಅವನ ಕೈಯಲ್ಲಿ ಲಿವರ್ ಇದೆ….ಅವನಿಗಿರುವ option ಎರಡು. ಮೊದಲನೆಯದು live trackನಲ್ಲಿ ಆಡ್ತಿರೋ ನಾಲ್ಕು ಮಕ್ಕಳನ್ನು ಬಚಾವು ಮಾಡುವುದು ಅಥವಾ ಎರಡನೆಯದು dead trackನಲ್ಲಿ ಆಡ್ತಿರೋ ಒಬ್ಬಹುಡುಗನನ್ನು ಉಳಿಸುವುದು.

ನೀವು ರೈಲ್ವೇ ಗಾರ್ಡ್ ಆಗಿದ್ದರೆ ನಿಮ್ಮ ನಿರ್ಧಾರ ಏನು!!!???
ನಾವು ಎಲ್ಲರೂ ಹೇಳಿದ ಉತ್ತರ ಮೊದಲನೆಯ option  ಆಗಿತ್ತು. ಯಾಕಂದ್ರೆ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ. ನಾಲ್ಕು ಮಕ್ಕಳ ಜೀವ ಉಳಿಸುವ ಸಲುವಾಗಿ ಒಂದು ಮಗುವಿನ ಜೀವ ಹೋದರೆ ತಪ್ಪೇನಿಲ್ಲ ಹಾಗಾಗಿ ಮೊದಲನೆಯ option ಸೂಕ್ತ ಎನ್ನಿಸಿತು. ಅದನ್ನೇ ನಾವೆಲ್ಲರೂ ಹೇಳಿದ್ವಿ.
                        dead track ನಲ್ಲಿ ಆಡುತ್ತಿದ್ದ ಹುಡುಗ ಅಲ್ಲಿ ರೈಲು ಬರುವುದಿಲ್ಲ ಎಂಬ ನಂಬಿಕೆಯ (!!??) ಮೇಲೆ ಅವನು ಅಲ್ಲಿ ಆಡುತ್ತಿದ್ದ, ಆದರೆ live track ನಲ್ಲಿ ಆಡುತ್ತಿದ್ದ ಹುಡುಗರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾದ ಸ್ಥಳದಲ್ಲಿ ಆಟವಾಡುತ್ತಿದ್ದರು. ಸೈದ್ದಾಂತಿಕವಾಗಿ ಯೋಚಿಸಿದಲ್ಲಿ dead track ನಲ್ಲಿ ಆಡುತ್ತಿದ್ದ ಹುಡುಗನ ಮೇಲೆ ರೈಲು ಹರಿದರೆ ಅದು ತಪ್ಪು. ಮತ್ತಷ್ಟು ಓದು »
17
ಸೆಪ್ಟೆಂ

ಕತ್ತಲೆಯಲ್ಲಿ ಕನ್ನಿಕಾ…

ಶ್ರೀಮುಖ ಸುಳ್ಯ

ಕತ್ತಲೆಯ ಕೋಣೆಯಲ್ಲಿ ಕನ್ನಿಕಾ ಬಿಕ್ಕಿ-ಬಿಕ್ಕಿ ಅಳುತ್ತಾ ಇದ್ದಾಳೆ. ಅವಳ ಕಣ್ಣೀರು ಕಣ್ಣನ್ನು ತೊರೆಯದಂತೆ ರೆಪ್ಪೆಗಳು ಮಾಡಿದ ಯತ್ನಗಳು ವಿಫಲವಾಗುತ್ತಿವೆ. ಕಣ್ಣಿನ ರೆಪ್ಪೆಯ ಬಂಧವನ್ನು ಕಳೆದು ಕಣ್ಣ ಹನಿಗಳು ಕೆನ್ನೆಯನ್ನು ಒರೆಸಿ, ಸಮಾಧಾನಿಸುವಲ್ಲಿ ಅಸಹಾಯಕರಾಗಿ ಕೆಳಬೀಳುತ್ತಿವೆ. ಮುಚ್ಚಿದ ಕೋಣೆಯ ಬಾಗಿಲು- ಆಕೆಯ ನೋವು ಕತ್ತಲಿನಿಂದ ಬೆಳಕಿನೆಡೆಗೆ ಸರಿಯದಂತೆ ನೋಡಿಕೊಳ್ಳುತ್ತಿವೆ. ತುಂಬಿದ ಮನೆಯ- ಮುಂದಿನ ಕೋಣೆಯ- ಗೋಡೆಗಳ ಬದಿಯಲ್ಲಿ ಆಕೆ ಕುಳಿತು ಅಳುತ್ತಿರುವ ಕಾರಣ ಆದರು ಏನು?!.. ಆಕೆಯ ಬೆಚ್ಚಗಿನ ಮಡಿಲಲ್ಲಿ, ಸೆರಗನ್ನು ಬಳಸಿ ಮಗುವಿನಂತಹ ಚಿಕ್ಕದೊಂದು ಗೊಂಬೆ ಉಸಿರಿಡದೆ ಮಲಗಿದೆ.    

          ಕೋಣೆಯ ಕತ್ತಲಿಗೂ- ಆಕೆ ಮಗುವಿನ ಮನಸ್ಸೊಂದನ್ನು ಕಳಕೊಂಡಿದ್ದಾಳೆ- ಎಂಬುದು ಸ್ಪಷ್ಟವಾಗಿ ತಿಳಿಯುವಂತಿದೆ. 
               ಸರಿಯಾಗಿ 2 ವರ್ಷಗಳ ಹಿಂದೆ, ಪರಮೇಶಿ ಅನ್ನುವ ದೂರದ ಸಂಬಂಧಿ ಕನ್ನಿಕಾಳಿಗೆ ಹತ್ತಿರವಾಗಿರುತ್ತಾನೆ. ಇಬ್ಬರೂ ಸ್ನೇಹಿತರಾಗಿರುತ್ತಾರೆ. ಪರಮೇಶಿ ಸ್ನೇಹವನ್ನು ಪ್ರೀತಿಯಾಗಿ ಬದಲಿಸುವ ಹಂಬಲವನ್ನು ಮುಂದಿಟ್ಟಾಗ,ಬಹಳ ಕಟುವಾಗಿ ತಿರಸ್ಕರಿಸಿದ ಕನ್ನಿಕಾ-ಕೆಲ ತಿಂಗಳುಗಳ ನಂತರ ಒಲುಮೆಗೆ ಒಪ್ಪಿಯೇ ಬಿಡುತ್ತಾಳೆ.  ಮತ್ತಷ್ಟು ಓದು »
16
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಮಗು ಅರ್ಥ ಹೇಳುತ್ತಾನೆ…

ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ‘ನಿಲುಮೆ’ಯಲ್ಲಿ ಪ್ರಕಟವಾಗುತ್ತಿದೆ.
 

ಬಣ್ಣದ ಬದುಕು 2

 ತೀರ್ಥರೂಪರ ಕವಿತೆಗಳಲ್ಲಿ ‘ಕುಕ್ಕುಟಾಪುರ’ವೆನಿಸಿ ಮೆರೆದ ಕೋಳ್ಯೂರು ನಮ್ಮ ಬಯಲಿನಂತಹ ಹತ್ತಾರು ಬಯಲುಗಳಿಗೆ ದೈವ ಕೇಂದ್ರ. ಅಲ್ಲಿನ ‘ಮಂಡಲಪೂಜೆ’ ಎಂದರೆ ಸುತ್ತಿನ ಹತ್ತು ಗ್ರಾಮಗಳಲ್ಲೂ ಪ್ರಸಿದ್ಧವಾಗಿತ್ತು. ಕೆಲವರು ಆಸಕ್ತರಿಂದಾಗಿ ಜಾತ್ರೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ (ಆ ಹೆಸರಿನಿಂದಲ್ಲವಾದರೂ) ಅಲ್ಲಿ ನಡೆಯುವುದಿತ್ತು. ನಮ್ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಪುರಾಣವಾಚನ, ಹರಿಕಥೆ, ತಾಳಮದ್ದಳೆಗಳಿಗೆ ಮಾತ್ರ ಮುಕ್ತಾಯಗೊಳ್ಳುತ್ತಿದ್ದವು. ಆಗಿನ ಕಾಲದಲ್ಲಿ ಹತ್ತು ಸಮಸ್ತರು ಭಾಗವಹಿಸಿದ ಚಟುವಟಿಕೆಗಳೆಲ್ಲ ಅಲ್ಲೇ ನಡೆಯಬೇಕು.

ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ. ಮತ್ತಷ್ಟು ಓದು »

16
ಸೆಪ್ಟೆಂ

ವಿಮಾನಯಾನ: ವಿಷಯಾನ

ಪ್ರಶಸ್ತಿ ಪಿ, ಶಿವಮೊಗ್ಗ

ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು  ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.

ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾದ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ. ಹಂಗಂತಾ ನಾವ್ಯಾವಾಗ್ಲೂ ಸುರಕ್ಷಿತರಲ್ಲ ಸ್ವಾಮಿ. ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ.  ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ. ಮತ್ತಷ್ಟು ಓದು »

13
ಸೆಪ್ಟೆಂ

ಅಶ್ವಮೇಧ ಯಾಗ…

– ವೇದಸುಧೆ

ಅಶ್ವಮೇಧ ಯಾಗ: ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ…….. “ಅಶ್ವಂ ಇತಿ ರಾಷ್ಟ್ರಂ” ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ “ಅಶ್ವಂ ಇತಿ ರಾಷ್ಟ್ರಂ” ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.[“ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು” ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.

ಮತ್ತಷ್ಟು ಓದು »

12
ಸೆಪ್ಟೆಂ

ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦!?

– ಕೆ.ಎಸ್ ರಾಘವೇಂದ್ರ ನಾವಡ

  “ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!

ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್  ಕಾರ್ಯಕರ್ತರ ಹಠಾತ್ ಕಣ್ಮರೆ..

ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ

ಕಾಲ : ೨೦೦೨

ಆ ನರಮೇಧದ ಹಿ೦ದಿನ ರೂವಾರಿಯ  ಹೆಸರು ಸುಶಾ೦ತ್ ಘೋಷ್!!

ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..

 

ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು!   ಒಮ್ಮೆ ಮಮತಾ ದೀದಿ   ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು  ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!

ಮತ್ತಷ್ಟು ಓದು »

12
ಸೆಪ್ಟೆಂ

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

– ಮಹೇಶ.ಎಮ್.ಆರ್

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.!

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ.

ಮತ್ತಷ್ಟು ಓದು »

11
ಸೆಪ್ಟೆಂ

ಮಿಂಚು ಮರೆಯಾದಾಗ…

– ಅಬ್ದುಲ್ ಸತ್ತಾರ್,ಕೊಡಗು

ಅದು ನಿರ್ಜನವಾದ ಒಂಟಿ ಮನೆ. ಸುತ್ತಲೂ ಹಸಿರಲ್ಲದೆ ದೂರದಲ್ಲೊಂದು ಬೆಟ್ಟ, ಮನೆಯ ಬೇಲಿ ದಾಟಿದಾಗ ನೆಟ್ಟಗೆ ಹಾದು ಹೋಗಿರುವ ರೈಲು ಕಂಬಿ. ಮಳೆ ಸುರಿಸೀ ಸುರಿಸೀ ಸುಸ್ತಾಗಿದ್ದ ಮಳೆರಾಯ ಅಂದು ಸುಮ್ಮನಾಗಿದ್ದ. ಮರ – ಗಿಡ – ಬಳ್ಳಿಗಳೆಲ್ಲಾ ಕೊಟ್ಟಿಕ್ಕುತ್ತಾ ಹಾಯಾಗಿದ್ದವು. ತಂಪು ತಂಪು ಗಾಳಿ, ಚಿಲಿ-ಪಿಲಿ ನಾದ. ವಾತಾವರಣ ನೋಡಿ ಸಮಯವೆಷ್ಟೆಂದು ಅಂದಾಜಿಸುವುದು ಅಸಾಧ್ಯ.

ಆ ಮನೆಯಿಂದ ಇಬ್ಬರು ಹೊರಬಂದರು. ಹೆಣ್ಣು-ಗಂಡು ಅಥವಾ ಪ್ರೇಯಸಿ-ಪ್ರಿಯತಮ ಅಥವಾ ಗಂಡಾ-ಹೆಂಡಿರಿರಬಹುದು. ಅವಳಿಗೆ ತಲೆ ತುಂಬಾ, ಮೈ ತುಂಬಾ ಶಾಲು ಹೊದಿಸಲಾಗಿತ್ತು. ಒಂದು ಕಯ್ಯಲ್ಲಿ ಮಡಚಿದ ಕೊಡೆ, ಮತ್ತೊಂದು ಕಯ್ಯಿಂದ ಅವಳ ತೋಳನ್ನ ಬಳಸಿಕೊಂಡಿದ್ದ. ವಿಶಾಲ ಜಗುಲಿ ದಾಟಿ ಗೇಟು ಮುಚ್ಚಿ ರೈಲು ಕಂಬಿಯಲ್ಲಿ ನಡೆಯಲು ಶುರುವಾದರು.

“ಆಗೋಲ್ಲ ಕಣೋ, ತುಂಬಾ ಚಳಿಯಾಗ್ತಿದೆ”, “ಏನೂ ಆಗೋಲ್ಲ ಪುಟ್ಟ, ಇಷ್ಟು ದಿನ ಜ್ವರ ಹಿಡುಕೊಂಡು ಮಲಗಿದ್ದ ನಿನಗೆ ಇದೊಳ್ಳೆ ಬಿಡುವು ಕೊಡುತ್ತೆ, ಇನ್ನು ಸ್ವಲ್ಪೇ ಸ್ವಲ್ಪ ನಡೆಯೋಣ”ಅಂದ. ಗೊರ ಗೊರ ಕೆಮ್ಮಿದಳು. ಪೂರ್ತಿ ನಿಶ್ಯಕ್ತಳಾಗಿದ್ದಳು. ಕೊಡೆಯನ್ನ ಹಳಿಯಲ್ಲಿ ಬಿಟ್ಟು ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡ. ಅವಳು ಅಳುಮುಖದೊಂದಿಗೆ ಅವನನ್ನ ದಿಟ್ಟಿಸಿದಳು. ಕಣ್ಣು ಕೆಂಪಾಗಿತ್ತು. ಅವನ ಕಣ್ಣೂ ಯಾಕೋ ಹನಿಗೂಡಿತು. ಸ್ವಲ್ಪ ಹೊತ್ತು ಹಾಗೇ….,
ಮತ್ತಷ್ಟು ಓದು »